ETV Bharat / lifestyle

ರಾತ್ರಿ ಮಲಗುವ ಮುನ್ನ ಐಸ್ ಕ್ರೀಂ ಸೇವನೆ ಉತ್ತಮವೇ? ಆರೋಗ್ಯದ ಮೇಲಾಗುವ ಪರಿಣಾಮವೇನು?

ಕೆಲವರು ರಾತ್ರಿ ಊಟದ ನಂತರ ಸಿಹಿತಿನಿಸು ಸೇವಿಸುತ್ತಾರೆ. ಮತ್ತೆ ಕೆಲವರು ಐಸ್ ಕ್ರೀಂ ತಿನ್ನುತ್ತಾರೆ. ರಾತ್ರಿ ನಿದ್ರಿಸುವ ಮೊದಲು ಐಸ್ ಕ್ರೀಂ ತಿನ್ನುವುದು ಸರಿಯೇ? ಈ ಅಭ್ಯಾಸದಿಂದ ಆರೋಗ್ಯದ ಮೇಲಾಗುವ ಪರಿಣಾಮವೇನು ಎಂಬುದನ್ನು ತಿಳಿಯೋಣ.

Weight gain  Increase in blood sugar levels  Cough cold are possible problems  ಮಲಗುವ ಮುನ್ನ ಐಸ್ ಕ್ರೀಮ್ ಸೇವನೆ
ರಾತ್ರಿ ಮಲಗುವ ಮೊದಲು ಐಸ್ ಕ್ರೀಮ್ ಸೇವನೆ ಮಾಡುವುದು ಉತ್ತಮವೇ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Lifestyle Team

Published : March 3, 2026 at 11:55 AM IST

3 Min Read
Choose ETV Bharat

ರಾತ್ರಿ ಊಟದ ಬಳಿಕ ಕೆಲವು ಜನರು ಸಿಹಿ ತಿನ್ನುತ್ತಾರೆ. ಮತ್ತೆ ಕೆಲವು ಜನರು ವಿಶೇಷವಾಗಿ ಐಸ್ ಕ್ರೀಂ​ ಸೇವನೆ ಮಾಡಲು ಬಯಸುತ್ತಾರೆ. ಮಲಗುವ ಮುನ್ನ ಐಸ್ ಕ್ರೀಂ ಸೇವಿಸುವುದು ಸರಿಯೇ? ಈ ದೈನಂದಿನ ಅಭ್ಯಾಸವು ಕ್ರಮೇಣ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ರಾತ್ರಿ ನಿದ್ರಿಸುವ ಕೆಲವು ನಿಮಿಷಗಳ ಮೊದಲು ಐಸ್ ಕ್ರೀಂ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ, ನಿದ್ರೆ ಗುಣಮಟ್ಟ ಕುಸಿತ ಹಾಗೂ ತೂಕ ಸಮತೋಲನ ಸೇರಿದಂತೆ ವಿವಿಧ ಆರೋಗ್ಯದ ಸಮಸ್ಯೆಗಳೂ ಕೂಡ ಕಾರಣವಾಗು ಸಾಧ್ಯತೆ ಕೂಡ ಹೆಚ್ಚಿರುತ್ತದೆ.

ರಾತ್ರಿ ಮಲಗುವ ಮುನ್ನ ಐಸ್ ಕ್ರೀಮ್ ಸೇವಿಸಿದರೆ ಏನ್ನಾಗುತ್ತದೆ?

ದೇಹದ ತೂಕ ಏರಿಕೆ: ಕೆಲವು ಜನರಿಗೆ ರಾತ್ರಿ ಮಲಗುವ ಮುನ್ನ ಐಸ್​ ಕ್ರೀಮ್​ ಸೇವನೆ ಮಾಡುವುದು ರೂಢಿಯಾಗಿರುತ್ತದೆ. ಐಸ್ ಕ್ರೀಮ್​ನಲ್ಲಿ ಸಕ್ಕರೆ ಮತ್ತು ಕೊಬ್ಬು ಅಧಿಕವಾಗಿರುತ್ತದೆ. ನೀವು ರಾತ್ರಿಯಲ್ಲಿ ಇದನ್ನು ತಿಂದಾಗ ದೇಹವು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ನಿದ್ರೆಯ ಸಮಯದಲ್ಲಿ ನಮ್ಮ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಹೆಚ್ಚಿನ ಕ್ಯಾಲೋರಿ ಆಹಾರಗಳು ತೂಕ ಹೆಚ್ಚಾಗಲು ಕಾರಣವಾಗಬಹುದು. ಇದು ದೈನಂದಿನ ಅಭ್ಯಾಸವಾದರೆ ಹೊಟ್ಟೆಯ ಕೊಬ್ಬು ಹಾಗೂ ತೂಕ ಹೆಚ್ಚಾಗಲು ಕಾರಣವಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

Weight gain  Increase in blood sugar levels  Cough cold are possible problems  ಮಲಗುವ ಮುನ್ನ ಐಸ್ ಕ್ರೀಮ್ ಸೇವನೆ
ಐಸ್ ಕ್ರೀಮ್ (ETV Bharat)

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ: ಐಸ್ ಕ್ರೀಮ್​ನಲ್ಲಿರುವ ಹೆಚ್ಚಿನ ಸಕ್ಕರೆ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಗೆ ಕೂಡ ಕಾರಣವಾಗುತ್ತದೆ. ಸ್ವಲ್ಪ ಸಮಯದ ನಂತರ ತ್ವರಿತ ಇಳಿಕೆ ಕಂಡುಬರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಳಿತವು ನಿದ್ರೆಯ ಗುಣಮಟ್ಟ ಕುಂಠಿತಗೊಳಿಸಬಹುದು, ಕೆಲವು ಜನರು ಚಡಪಡಿಕೆ, ಬೆವರುವುದು ಅಥವಾ ಆಗಾಗ್ಗೆ ರಾತ್ರಿಯ ಎಚ್ಚರಗೊಳ್ಳುವಿಕೆಯನ್ನು ಅನುಭವಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಕೆಮ್ಮು & ಶೀತವು ಸಮಸ್ಯೆ ಸಾಧ್ಯತೆ: ರಾತ್ರಿಯಲ್ಲಿ ತಣ್ಣನೆಯ ಆಹಾರವನ್ನು ಸೇವಿಸುವುದರಿಂದ ಗಂಟಲು ನೋವು, ಕೆಮ್ಮು ಇಲ್ಲವೇ ಶೀತ ಉಂಟಾಗುತ್ತದೆ. ವಿಶೇಷವಾಗಿ ಸೈನಸ್ ಅಥವಾ ಅಲರ್ಜಿ ಸಮಸ್ಯೆಗಳಿರುವವರಿಗೆ ಮತ್ತಷ್ಟು ತೊಂದರೆ ಉಂಟಾಗುತ್ತದೆ. ಈ ವ್ಯಕ್ತಿಗಳು ರಾತ್ರಿಯಲ್ಲಿ ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸಬೇಕು. ಇದರರ್ಥ ನೀವು ಐಸ್ ಕ್ರೀಮ್ ಅನ್ನು ಎಂದಿಗೂ ತಿನ್ನಬಾರದು ಎಂದಲ್ಲ. ನೀವು ಅದನ್ನು ಸಾಂದರ್ಭಿಕವಾಗಿ ಹಾಗೂ ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಚಿಂತಿಸುವ ಅಗತ್ಯವಿಲ್ಲ.

Weight gain  Increase in blood sugar levels  Cough cold are possible problems  ಮಲಗುವ ಮುನ್ನ ಐಸ್ ಕ್ರೀಮ್ ಸೇವನೆ
ಐಸ್ ಕ್ರೀಮ್ (ETV Bharat)

ಊಟದ ನಂತರ ತಕ್ಷಣವೇ ಐಸ್​ ಕ್ರೀಮ್​ ಅನ್ನು ಸೇವನೆ ಮಾಡದಿರಲು ಪ್ರಯತ್ನಿಸಿ, ಅತಿಯಾದ ಪ್ರಮಾಣದಲ್ಲಿ ತಿನ್ನುವುದನ್ನು ತಪ್ಪಿಸಿ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮಧುಮೇಹ ಹೊಂದಿದ್ದರೆ, ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿದ್ದರೆ ಇಲ್ಲವೇ ಥೈರಾಯ್ಡ್ ಸಮಸ್ಯೆಗಳನ್ನು ಹೊಂದಿದ್ದರೆ ರಾತ್ರಿಯಲ್ಲಿ ಐಸ್ ಕ್ರೀಮ್ ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ.

ಇದರ ಬದಲಿಗೆ ಮೊಸರು, ತಾಜಾ ಹಣ್ಣು ಅಥವಾ ಸ್ವಲ್ಪ ಡಾರ್ಕ್ ಚಾಕೊಲೇಟ್‌ನಂತಹ ಸೌಮ್ಯವಾದ ಪರ್ಯಾಯವನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು. ನಿತ್ಯ ಐಸ್ ಕ್ರೀಮ್ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದರೆ, ಐಸ್​ ಕ್ರೀಮ್​ ಅನ್ನು ರಾತ್ರಿಯಲ್ಲಿ ಸಾಂದರ್ಭಿಕವಾಗಿ ತಿನ್ನಬಹುದು, ರಾತ್ರಿ ಮಲಗುವ ಮುನ್ನ ಐಸ್​ ಕ್ರೀಮ್​ ಅನ್ನು ಸೇವನೆ ಮಾಡುವುದನ್ನು ಆದಷ್ಟು ತಡೆಯುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Weight gain  Increase in blood sugar levels  Cough cold are possible problems  ಮಲಗುವ ಮುನ್ನ ಐಸ್ ಕ್ರೀಮ್ ಸೇವನೆ
ಐಸ್ ಕ್ರೀಮ್ (ETV Bharat)

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಚಂದ್ರಗ್ರಹಣದ ವೇಳೆ ಉಪವಾಸವೇಕೆ? ಆರೋಗ್ಯ ಲಾಭವೇನು? ಆಯುರ್ವೇದ ತಜ್ಞರು ಹೇಳುವುದೇನು?
  2. ಇಂದು ಆಗಸದಲ್ಲಿ ಕೆಂಬಣ್ಣದ ಚಂದ್ರ ದರ್ಶನ! ಸೂತಕ ಅವಧಿ, ಗ್ರಹಣ ಸಮಯದ ಮಾಹಿತಿ
  3. ಹಸುವಿನ ಹಾಲು Vs ಎಮ್ಮೆ ಹಾಲು: ಇವೆರಡರಲ್ಲಿ ಮಗುವಿಗೆ ಯಾವುದು ತುಂಬಾ ಉಪಯುಕ್ತ ಗೊತ್ತೇ?
  4. ಬೇಸಿಗೆಯಲ್ಲಿ ನಿರ್ಜಲೀಕರಣ, ಜೀರ್ಣಕ್ರಿಯೆ ಸಮಸ್ಯೆ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಡೆಯಲು ಈ ಆಹಾರಗಳು ಬೆಸ್ಟ್
  5. ನಿತ್ಯ ಶಿಶುಗಳಿಗೆ ಮಸಾಜ್ ಮಾಡುವುದರಿಂದ ಮೂಳೆಗಳು ಸದೃಢವಾಗುತ್ತವೆಯೇ? ಯಾವೆಲ್ಲಾ ಪ್ರಯೋಜನಗಳಿವೆ?: ವೈದ್ಯರು ತಿಳಿಸುವುದೇನು?