ETV Bharat / lifestyle

ವಧು - ವರರು ಮದುವೆಗೂ ಮುನ್ನ ಈ ತಪ್ಪುಗಳನ್ನು ಮಾಡಿದರೆ ಚರ್ಮಕ್ಕೆ ಹಾನಿಕಾರಕ: ತಜ್ಞರ ಸಲಹೆಗಳಿವು!

ವಧು- ವರರು ತಮ್ಮ ವಿವಾಹಕ್ಕೂ ಮೊದಲು ಮದುವೆಗೆ ಮುನ್ನು ಈ ನಾಲ್ಕು ಕಾರ್ಯಗಳನ್ನು ತಪ್ಪಿಸಬೇಕಾಗುತ್ತದೆ. ನಿರ್ಲಕ್ಷಿಸಿದರೆ ನಿಮ್ಮ ಚರ್ಮಕ್ಕೆ ಗಮನಾರ್ಹ ಹಾನಿ ಉಂಟಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Natural Face Lift and Glow  Wedding skin care tips  ultimate skin care  ಚರ್ಮದ ಆರೈಕೆಗೆ ಟಿಪ್ಸ್
ವಧು-ವರರು ಮದುವೆಗೂ ಮುನ್ನ ತ್ವಚೆಯ ಆರೈಕೆಗಾಗಿ ಟಿಪ್ಸ್- ಸಾಂದರ್ಭಿಕ ಚಿತ್ರ (Getty Images)
author img

By ETV Bharat Lifestyle Team

Published : November 8, 2025 at 6:14 PM IST

2 Min Read
Choose ETV Bharat

ಪ್ರತಿ ವಧು-ವರರಿಗೆ ಮದುವೆಯ ದಿನ ತುಂಬಾ ವಿಶೇಷ ದಿನವಾಗಿದೆ. ಮದುವೆ ಸಿದ್ಧತೆಗಳನ್ನು ತಿಂಗಳುಗಳ ಮುಂಚಿತವಾಗಿ ಆರಂಭವಾಗುತ್ತವೆ. ಪ್ರತಿಯೊಬ್ಬರೂ ಕೂಡ ತಮ್ಮ ಅತ್ಯುತ್ತಮವಾಗಿ ಕಾಣಲು ಹಾಗೂ ಹೊಳೆಯುವ ತ್ವಚೆಯನ್ನು ಹೊಂದಲು ಬಯಸುತ್ತಾರೆ. ಅನೇಕ ವಧು-ವರರು ವಿವಿಧ ಮೇಕಪ್​ಗಳು, ಫೇಶಿಯಲ್‌ಗಳಿಗಾಗಿ ಪಾರ್ಲರ್‌ಗಳು ಹಾಗೂ ಸಲೂನ್‌ಗಳಿಗೆ ತೆರಳುತ್ತಾರೆ.

ಮದುವೆಗೆ ಮೊದಲು ಮಾಡಿದ ಚಿಕ್ಕ ತಪ್ಪುಗಳು ನಿಮ್ಮ ತ್ವಚೆಯ ಚರ್ಮವನ್ನು ಹೆಚ್ಚಿಸುವ ಬದಲು ಹಾನಿಗೊಳಿಸುತ್ತವೆ. ಇದರಿಂದ ಚರ್ಮರೋಗ ತಜ್ಞ ಡಾ.ಜುಶ್ಯಾ ಭಾಟಿಯಾ ಸರೀನ್ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಧು-ವರರು ತಮ್ಮ ಮದುವೆಗೆ ಮೊದಲು ಈ ನಾಲ್ಕು ಕಾರ್ಯಗಳನ್ನು ತಪ್ಪಿಸಬೇಕಾಗುತ್ತದೆ. ನಿರ್ಲಕ್ಷಿಸಿದರೆ ಚರ್ಮಕ್ಕೆ ಗಮನಾರ್ಹ ಹಾನಿ ಉಂಟಾಗಬಹುದು. ನಿಮ್ಮ ಎಲ್ಲಾ ತ್ವಚೆಯ ಆರೈಕೆಯ ಸಿದ್ಧತೆಗಳು ವ್ಯರ್ಥವಾಗಬಹುದು ಎಂದು ಅವರು ಎಚ್ಚರಿಕೆ ನೀಡುತ್ತಾರೆ.

Natural Face Lift and Glow  Wedding skin care tips  ultimate skin care  ಚರ್ಮದ ಆರೈಕೆಗೆ ಟಿಪ್ಸ್
ವಧು-ವರರು ಮದುವೆಗೂ ಮುನ್ನ ತ್ವಚೆಯ ಆರೈಕೆಗಾಗಿ ಟಿಪ್ಸ್- ಸಾಂದರ್ಭಿಕ ಚಿತ್ರ (Getty Images)

ಹೊಸ ಸ್ಕಿನ್ ಕೇರ್: ಹೊಳೆಯುವ ಚರ್ಮ ಪಡೆಯಲು ಬಯಸುವ ಅನೇಕ ಜನರು ತಮ್ಮ ಮದುವೆಗೆ ಮುನ್ನ ಹೊಸ ಸ್ಕಿನ್‌ಕೇರ್ ದಿನಚರಿಗಳನ್ನು ಪ್ರಾರಂಭಿಸುತ್ತಾರೆ. ಇದು ನಿಮ್ಮ ಚರ್ಮದ ಮೇಲೆ ಇನ್ನೂ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ. ಪ್ರತಿಯೊಬ್ಬರ ಚರ್ಮವು ವಿಭಿನ್ನವಾಗಿರುತ್ತದೆ ಹಾಗೂ ಪ್ರತಿಯೊಂದು ಸ್ಕಿನ್‌ಕೇರ್ ವಸ್ತುಗಳು ಚರ್ಮಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹೀಗಿರುವಾಗ ಹೊಸದನ್ನು ಅಳವಡಿಸಿಕೊಳ್ಳುವುದನ್ನು ತಪ್ಪಿಸಿ ಹಾಗೂ ನೀವು ಯಾವಾಗಲೂ ಅನುಸರಿಸುತ್ತಿರುವಂತಹ ದಿನಚರಿಯನ್ನೇ ಅನುಸರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Natural Face Lift and Glow  Wedding skin care tips  ultimate skin care  ಚರ್ಮದ ಆರೈಕೆಗೆ ಟಿಪ್ಸ್
ವಧು-ವರರು ಮದುವೆಗೂ ಮುನ್ನ ತ್ವಚೆಯ ಆರೈಕೆಗಾಗಿ ಟಿಪ್ಸ್- ಸಾಂದರ್ಭಿಕ ಚಿತ್ರ (Getty Images)

ಅಂತಿಮ ಕ್ಷಣದ ಫೇಶಿಯಲ್: ಹೆಚ್ಚಿನ ವಧು - ವರರು ತಮ್ಮ ವಿವಾಹಕ್ಕೂ ಮುನ್ನ ಹೊಸ ಫೇಶಿಯಲ್‌ಗಳನ್ನು ಮಾಡುತ್ತಾರೆ. ಆದರೆ, ಈ ಫೇಶಿಯಲ್‌ಗಳು ನಿಮ್ಮ ಮೈಬಣ್ಣವನ್ನು ಹದಗೆಡಿಸಬಹುದು. ಅತಿಯಾದ ಫೇಶಿಯಲ್ ಮಸಾಜ್ ಒಳಗೊಂಡಿರುವ ಫೇಶಿಯಲ್‌ಗಳು ಚರ್ಮಕ್ಕೆ ಗಮನಾರ್ಹ ಹಾನಿ ಉಂಟುಮಾಡಬಹುದು. ವಿವಾಹಕ್ಕೂ ಮೊದಲು ಈಗಾಗಲೇ ಮಾಡಿಸಿಕೊಂಡಿರುವ ಫೇಶಿಯಲ್‌ಗಳು ಸಾಕಾಗುತ್ತದೆ. ಹೆಚ್ಚು ಬೇಕಾದರೆ ಚರ್ಮರೋಗ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಬ್ಲೀಚ್: ಮದುವೆಗೆ ಮೊದಲು ಬ್ಲೀಚಿಂಗ್ ಮಾಡುವುದನ್ನು ತಪ್ಪಿಸಬೇಕು ಎಂದು ಚರ್ಮರೋಗ ತಜ್ಞರು ಸಲಹೆ ನೀಡುತ್ತಾರೆ. ಚರ್ಮದ ಅಲರ್ಜಿ ಇಲ್ಲವೇ ಕಿರಿಕಿರಿ ಉಂಟುಮಾಡಬಹುದು. ನಿಮ್ಮ ಮದುವೆಗೆ ಹಾಕಿಕೊಳ್ಳುವ ಮೇಕಪ್ ನಿಮ್ಮ ಚರ್ಮದೊಂದಿಗೆ ಪ್ರತಿಕ್ರಿಯಿಸಬಹುದು. ಬ್ಲೀಚಿಂಗ್ ಮಾಡಿಸಿಕೊಳ್ಳದೇ ಇರುವುದು ಬೆಸ್ಟ್ ಎನ್ನುತ್ತಾರೆ ತಜ್ಞರು.

Natural Face Lift and Glow  Wedding skin care tips  ultimate skin care  ಚರ್ಮದ ಆರೈಕೆಗೆ ಟಿಪ್ಸ್
ವಧು-ವರರು ಮದುವೆಗೂ ಮುನ್ನ ತ್ವಚೆಯ ಆರೈಕೆಗಾಗಿ ಟಿಪ್ಸ್- ಸಾಂದರ್ಭಿಕ ಚಿತ್ರ (Getty Images)

ಕ್ರ್ಯಾಶ್ ಡಯಟಿಂಗ್: ಅನೇಕ ಜನರು ತಮ್ಮ ಮದುವೆಗೆ ಚೆನ್ನಾಗಿ ಕಾಣಲು ಕ್ರ್ಯಾಶ್ ಡಯಟಿಂಗ್ ಆರಂಭಿಸುತ್ತಾರೆ. ಸರಳವಾಗಿ ಹೇಳುವುದಾದರೆ ಅವರು ತಮ್ಮ ಆಹಾರದಿಂದ ಕೆಲವು ಆಹಾರಗಳನ್ನು ತೆಗೆದುಹಾಕುತ್ತಾರೆ. ಬಹಳ ಸೀಮಿತ ಪ್ರಮಾಣದ ಆಹಾರವನ್ನು ಮಾತ್ರ ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಬಹಳ ಋಣಾತ್ಮಕ ಪರಿಣಾಮಗಳು ಉಂಟಾಗಬಹುದು. ಮದುವೆಗೆ ಮುನ್ನ ಕ್ರ್ಯಾಶ್ ಡಯಟಿಂಗ್ ಚರ್ಮವು ಮಂದ ಹಾಗೂ ನಿರ್ಜಲೀಕರಣಗೊಳ್ಳಲು ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ: