ETV Bharat / lifestyle

ಪಶ್ಚಿಮ ಬಂಗಾಳದ ಪ್ರಸಿದ್ಧ 'ಝಲ್ಮುರಿ'ಮನೆಯಲ್ಲಿಯೇ ತಯಾರಿಸುವುದು ಹೇಗೆ? ಈ ಜನಪ್ರಿಯ ಸ್ಟ್ರೀಟ್ ಫುಡ್​ಗೆ ಪ್ರಧಾನಿ ಮೋದಿ ಫಿದಾ!

'ಝಲ್ಮುರಿ' (ಚುರುಮುರಿ ಮಸಾಲಾ) ಕೋಲ್ಕತ್ತಾದ ಜನಪ್ರಿಯ ಸ್ಟ್ರೀಟ್​ ಫುಡ್ ಆಗಿದೆ. ಚುರುಮುರಿ, ಸಾಸಿವೆ ಎಣ್ಣೆ, ಖಾರ ಹಾಗೂ ವಿವಿಧ ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಜನಪ್ರಿಯ ಸ್ಟ್ರೀಟ್ ಫುಡ್ ಅಂದ್ರೆ ಪ್ರಧಾನಿ ಮೋದಿ ಕೂಡ ಅಚ್ಚುಮೆಚ್ಚು.

HOW TO MAKE JHALMURI AT HOME  JHALMURI RECIPE  Prime Minister Modi And JHALMURI  ಝಲ್ಮುರಿ ಸವಿದ ಪ್ರಧಾನಿ ನರೇಂದ್ರ ಮೋದಿ
ಝಲ್ಮುರಿ ಸವಿದ ಪ್ರಧಾನಿ ನರೇಂದ್ರ ಮೋದಿ (PTI)
author img

By ETV Bharat Lifestyle Team

Published : April 22, 2026 at 10:28 PM IST

3 Min Read
Choose ETV Bharat

ಇತ್ತೀಚಿನ ದಿನಗಳಲ್ಲಿ ಝಲ್ಮುರಿ ರೆಸಿಪಿ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿ ಅದನ್ನು ರುಚಿ ನೋಡಿದಾಗಿನಿಂದ ತಿಂಡಿಯ ಬಗ್ಗೆ ಸಾರ್ವಜನಿಕ ಆಸಕ್ತಿ ಅಭೂತಪೂರ್ವ ಮಟ್ಟಕ್ಕೆ ಏರಿದೆ. ವಾಸ್ತವವಾಗಿ ಎಪ್ರಿಲ್ 19, 2026ರಂದು ಪ್ರಧಾನಿಯವರು ಝಲ್ಮುರಿ ಸವಿದು ಆನಂದಿಸಿದರು. ನಂತರ 'ಝಲ್ಮುರಿ' ಗಾಗಿ ಗೂಗಲ್​ನಲ್ಲಿ ಕಳೆದ 22 ವರ್ಷಗಳಲ್ಲೇ ಹೆಚ್ಚು ಹುಡುಕಾಟ ನಡೆಸಲಾಗಿದೆ. ಪ್ರಧಾನಿ ಮೋದಿ ಅವರು ಝಲ್ಮುರಿ ತಿನ್ನುವ ಮತ್ತು ಬೀದಿ ವ್ಯಾಪಾರಿಯೊಂದಿಗೆ ಮಾತನಾಡುವ ವಿಡಿಯೋ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ (ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್) ವೇಗವಾಗಿ ವೈರಲ್ ಆಗುತ್ತಿದೆ. ಮೊದಲ 24 ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಪ್ರಧಾನಿ ಮೋದಿಯವರ ಶೈಲಿಯನ್ನು ಜನರು ಬಹಳವಾಗಿ ಮೆಚ್ಚಿಕೊಂಡಿದ್ದಾರೆ.

ಯಾವುದೇ ಅಬ್ಬರವಿಲ್ಲದೆ, ರ್‍ಯಾಲಿ ನಂತರ ರಸ್ತೆಬದಿಯ ಅಂಗಡಿಯ ಬಳಿ ನಿಂತು ಸ್ಥಳೀಯ ರುಚಿಗಳನ್ನು ಸವಿದರು. ಪ್ರಧಾನಿ ಮೋದಿಯವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದಾಖಲೆಗಳನ್ನು ಮುರಿದಿದೆ. ಈ ಪ್ರೀತಿಯ ಬಂಗಾಳಿ ತಿಂಡಿಯ ಜನಪ್ರಿಯತೆ ರಾತ್ರೋರಾತ್ರಿ ಗಗನಕ್ಕೇರಿದೆ. ಇದರ ಪರಿಣಾಮವಾಗಿ ಅನೇಕ ಜನರು ಈಗ ತಮ್ಮ ಮನೆಗಳಲ್ಲಿ ಈ ಖಾರದ ಮತ್ತು ಮಸಾಲೆಯುಕ್ತ ತಿಂಡಿಯನ್ನು ಮರುಸೃಷ್ಟಿಸಲು ಈ ರೆಸಿಪಿಯ ಬಗ್ಗೆ ಹುಡುಕುತ್ತಿದ್ದಾರೆ. ಈ ಲೇಖನವು 'ಝಲ್ಮುರಿ' ರೆಸಿಪಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಝಲ್ಮುರಿ ಭಾರತದಾದ್ಯಂತ ಆನಂದಿಸುವ ಜನಪ್ರಿಯ ಸ್ಟ್ರೀಟ್​ ಫುಡ್​ ಆಗಿದೆ. ಆದರೂ ಇದು ಪಶ್ಚಿಮ ಬಂಗಾಳದಲ್ಲಿ ಹುಟ್ಟಿಕೊಂಡಿತು. 'ಝಲ್' ಎಂದರೆ ಮಸಾಲೆಯುಕ್ತ ಎಂದರ್ಥ, ಆದರೆ 'ಮುರಿ' ಎಂದರೆ ಚುರುಮುರಿ (ಪಫ್ಡ್ ರೈಸ್) ಅನ್ನು ಸೂಚಿಸುತ್ತದೆ. ಝಲ್ಮುರಿ ಎಂಬುದು ಸಾರ್ವತ್ರಿಕವಾಗಿ ಇಷ್ಟಪಡುವ ಮಸಾಲೆಯುಕ್ತ, ಚುರುಮುರಿ ಆಧಾರಿತ ತಿಂಡಿಯಾಗಿದೆ. ಇದನ್ನು ತಯಾರಿಸಲು ಕೇವಲ 15 ನಿಮಿಷಗಳು ಬೇಕಾಗುತ್ತದೆ. ಇದರ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಪಫ್ಡ್ ರೈಸ್, ಹುರಿದ ಕಡಲೆಕಾಯಿಗಳು, ಖಾರದ ನಾಮ್ಕೀನ್ (ಅಥವಾ ಮಿಶ್ರ ಖಾರದ ತಿಂಡಿಗಳು), ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ಟೊಮೆಟೊ, ಈರುಳ್ಳಿ, ಸೌತೆಕಾಯಿ, ತಾಜಾ ಕೊತ್ತಂಬರಿ ಹಾಗೂ ಕೆಲವು ಇತರ ಅಗತ್ಯ ವಸ್ತುಗಳು ಸೇರಿವೆ.

ಪಶ್ಚಿಮ ಬಂಗಾಳ ಶೈಲಿಯ ಝಲ್ಮುರಿ ಮಾಡುವುದು ಹೇಗೆ?:

  1. ಒಂದು ದೊಡ್ಡ ಮಿಕ್ಸಿಂಗ್ ಬೌಲ್ ತೆಗೆದುಕೊಂಡು 1.5 ಕಪ್ ಚುರುಮುರಿ (ಪಫ್ಡ್ ರೈಸ್) ಸೇರಿಸಿ. ನೀವು ಇಷ್ಟಪಡುವ ಯಾವುದೇ ವಿಧದ ಚುರುಮುರುಯನ್ನು ಬಳಸಿ.
  2. 1/2 ಕಪ್ ನಮ್ಕೀನ್ ಅಥವಾ ಮಿಶ್ಚರ್ (ನಿಮ್ಮ ಆಯ್ಕೆಯ ಯಾವುದೇ ವಿಧ) ಸೇರಿಸಿ. ಒಂದು ಸೌತೆಕಾಯಿ, ಒಂದು ಟೊಮೆಟೊ, ಒಂದು ಈರುಳ್ಳಿ ಮತ್ತು ಒಂದು ಬೇಯಿಸಿದ ಆಲೂಗಡ್ಡೆಯನ್ನು ನುಣ್ಣಗೆ ಕತ್ತರಿಸಿ.
  3. 2ರಿಂದ 3 ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ (ನೀವು ಮಸಾಲೆಯುಕ್ತ ಆಹಾರವನ್ನು ಇಷ್ಟಪಡದಿದ್ದರೆ, ನೀವು ಇವುಗಳನ್ನು ಬಿಟ್ಟುಬಿಡಬಹುದು). ಹೆಚ್ಚುವರಿಯಾಗಿ 1/3 ಕಪ್ ಹುರಿದ ಕಡಲೆಕಾಯಿಯನ್ನು ಸೇರಿಸುವುದರಿಂದ ಅದು ನಿಜವಾದ ಸ್ಟ್ರೀಟ್​ ಶೈಲಿಯ ಪರಿಮಳವನ್ನು ನೀಡುತ್ತದೆ.
  4. ಇದೀಗ 2/3 ಟೀಸ್ಪೂನ್ ಉಪ್ಪು (ರುಚಿಗೆ ತಕ್ಕಷ್ಟು) ಸಿಂಪಡಿಸಿ, ನಿಮ್ಮ ಝಲ್ಮುರಿಯಲ್ಲಿ ಕೋಲ್ಕತ್ತಾ ಚಾಟ್​ನ ನಿಜವಾದ ಸಾರವನ್ನು ಸೇರಿಸಬಹುದು. 2 ಟೇಬಲ್ಸ್ಪೂನ್ ಅಲ್ಕೊ ಝಲ್ಮುರಿ ಮಸಾಲಾವನ್ನು ಸೇರಿಸಿ. ಮಿಶ್ರಣಕ್ಕೆ 2 ಟೇಬಲ್ಸ್ಪೂನ್ ಸಾಸಿವೆ ಎಣ್ಣೆಯನ್ನು ಸುರಿಯಿರಿ ಮತ್ತು ಒಂದು ಹಿಡಿ ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  5. 1/3 ಕಪ್ ಸೇವ್ (ಉತ್ತಮ ವಿಧದ ಸೇವ್ ಬಳಸಿ) ಮತ್ತು ಪದಾರ್ಥಗಳ ಮೇಲೆ ಅರ್ಧ ನಿಂಬೆ ರಸವನ್ನು ಹಿಂಡಿ. ಝಲ್ಮುರಿಯಾದ್ಯಂತ ಮಸಾಲೆಗಳು ಸಮವಾಗಿ ಹರಡಬೇಕಾಗುತ್ತದೆ. ಇದಕ್ಕಾಗಿ ಸರಿಯಾಗಿ ಮಿಕ್ಸ್ ಮಾಡಬೇಕಾಗುತ್ತದೆ.
  6. ಮತ್ತೊಮ್ಮೆ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಚುರುಮುರಿ ಮೃದುವಾಗಲು ಪ್ರಾರಂಭಿಸುವ ಮೊದಲು, ತಕ್ಷಣವೇ ಬಡಿಸಿ ಹಾಗೂ ಈ ಸ್ಟ್ರೀಟ್​ ಫುಡ್ ಖಾರದ, ರುಚಿಕರವಾದ ಸುವಾಸನೆಯನ್ನು ನಿಮ್ಮ ಮನೆಯಲ್ಲೇ ಸವಿಯಿರಿ.

ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳು: ಝಲ್ಮುರಿ ಪ್ರಾಥಮಿಕವಾಗಿ ಪಶ್ಚಿಮ ಬಂಗಾಳದೊಂದಿಗೆ ಸಂಬಂಧಿಸಿದ ಪ್ರಸಿದ್ಧ ಬೀದಿ ಆಹಾರವಾಗಿದೆ. ಭಾರತದ ವಿವಿಧ ಭಾಗಗಳಲ್ಲಿ ಇದನ್ನು ಬಹು ಹೆಸರುಗಳಿಂದ ಕರೆಯಲಾಗುತ್ತದೆ. ಸ್ವಲ್ಪ ಪ್ರಾದೇಶಿಕ ವ್ಯತ್ಯಾಸಗಳನ್ನು ಹೊಂದಿದೆ. ಉದಾಹರಣೆಗೆ, ಮಹಾರಾಷ್ಟ್ರ ಹಾಗೂ ದೇಶದ ಹಲವಾರು ಇತರ ಭಾಗಗಳಲ್ಲಿ ಇದನ್ನು 'ಭೇಲ್ಪುರಿ' ಎಂದು ಕರೆಯಲಾಗುತ್ತದೆ. ಇದು ಗಮನಾರ್ಹವಾಗಿ ಹುಣಸೆ ಚಟ್ನಿಯ ಬಳಕೆಯನ್ನು ಒಳಗೊಂಡಿರುವ ಒಂದು ಆವೃತ್ತಿಯಾಗಿದೆ. ಕರ್ನಾಟಕದಲ್ಲಿ ಚುರುಮುರಿ ಗಿರ್ಮಿಟ್ ಎಂಬ ಹೆಸರಿಸಿನಿಂದ ಕರೆಯಲಾಗುತ್ತದೆ.

ಇವುಗಳನ್ನೂ ಓದಿ:

  1. ಮೈ, ಮನ ತಂಪಾಗಿಸುವ ಮ್ಯಾಂಗೋ ಲಸ್ಸಿ: ರುಚಿ ನೋಡಿದರೆ ಮತ್ತೆ ಕುಡಿಯಬೇಕೆನಿಸುತ್ತೆ ನೋಡಿ
  2. ಬೀಟ್‌ರೂಟ್-ನೆಲ್ಲಿಕಾಯಿ ಜ್ಯೂಸ್ ಆರೋಗ್ಯಕ್ಕೆ ಹಿತವೇ? ಕುಡಿಯುವ ಮುನ್ನ ಮುನ್ನೆಚ್ಚರಿಕೆ
  3. ಬಾಯಲ್ಲಿ ನೀರು ತರಿಸುವ 'ಆಮ್ ಪನ್ನಾ': ಬಿಸಿಲಿಗೆ ಹೇಳಿ ಮಾಡಿಸಿದ ಮಾವಿನ ಕಾಯಿಯ ಪೇಯ
  4. ಬಿಸಿಲ ಧಗೆಗೆ ಹೇಳಿ ಮಾಡಿಸಿದ 'ಫುಲ್ಜರ್ ಸೋಡಾ': ತಯಾರಿಸುವುದು ಅತ್ಯಂತ ಸರಳ
  5. ಬೇಸಿಗೆಯಲ್ಲಿ ದೇಹ, ಮನಸ್ಸು ತಂಪಾಗಿಡಲು ಸಾಂಪ್ರದಾಯಿಕ ಪಾನೀಯ: ತಯಾರಿಸುವುದು ತುಂಬಾ ಸುಲಭ ನೀವೂ ಒಮ್ಮೆ ಟ್ರೈ ಮಾಡಿ