ETV Bharat / lifestyle

ದೀಪಾವಳಿಯನ್ನು ಎಷ್ಟು ದಿನಗಳವರೆಗೆ & ಏಕೆ ಆಚರಿಸಲಾಗುತ್ತದೆ?: ಈ ವರ್ಷ ಹಬ್ಬದ ಪೂಜೆಯ ಮುಹೂರ್ತ ಯಾವಾಗ ಗೊತ್ತಾ?

ದೀಪಾವಳಿ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?; ಎಷ್ಟು ದಿನಗಳವರೆಗೆ ಹಬ್ಬ ಆಚರಣೆ ಮಾಡಲಾಗುತ್ತದೆ?; ಈ ವರ್ಷ ದೀಪಾವಳಿ ಹಬ್ಬದ ಮುಹೂರ್ತ ಯಾವಾಗ ಇದೆ ಎಂಬುದನ್ನು ತಿಳಿಯೋಣ.

When is deepawali celebrated  deepawali Festival  ದೀಪಾವಳಿ ಹಬ್ಬ 2025
ಕಳೆದ ವರ್ಷ ಕಾಶಿ ಘಾಟ್​ನಲ್ಲಿ ದೀಪಾವಳಿ ಆಚರಣೆ ಮಾಡಲಾಗಿತ್ತು (IANS)
author img

By ETV Bharat Lifestyle Team

Published : October 17, 2025 at 8:31 PM IST

3 Min Read
Choose ETV Bharat

ದೀಪಾವಳಿಯು ಹಿಂದೂಗಳ ಅತಿದೊಡ್ಡ ಹಬ್ಬಗಳಲ್ಲಿ ವಿಶೇಷ ಹಬ್ಬವಾಗಿದೆ. ಪ್ರಪಂಚದಾದ್ಯಂತ ಹಿಂದೂಗಳು ಆಚರಿಸುವ ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಈ ದಿನ ಭಗವಾನ್ ರಾಮನು ರಾವಣನನ್ನು ವಧಿಸಿದ ಬಳಿಕ 14 ವರ್ಷಗಳ ವನವಾಸ ಮುಗಿಸಿ ತನ್ನ ಪತ್ನಿ ಸೀತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿದ ಸುದಿನ.

ಅಯೋಧ್ಯೆಯ ಜನರು ರಾಮನನ್ನು ಸ್ವಾಗತಿಸಲು ಇಡೀ ನಗರವನ್ನು ದೀಪಗಳಿಂದ ಬೆಳಗಿಸಿದರು. ಇದು ದೀಪಾವಳಿ ಹಬ್ಬಕ್ಕೆ ಕಾರಣವಾಯಿತು. ಈ ಸಂಪ್ರದಾಯವನ್ನು ಅನುಸರಿಸಿ ಇಂದಿಗೂ, ಜನರು ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುತ್ತಾರೆ ಹಾಗೂ ಭಗವಾನ್ ರಾಮನನ್ನು ಸ್ವಾಗತಿಸುತ್ತಾರೆ.

When is deepawali celebrated  deepawali Festival  ದೀಪಾವಳಿ ಹಬ್ಬ 2025
ದೀಪಾವಳಿ ಹಬ್ಬ- ಸಾಂದರ್ಭಿಕ ಚಿತ್ರ (GETTY IMAGES)

ದೀಪಾವಳಿ ಹಬ್ಬದಂದು ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಹಾಗೂ ಮುಂಬರುವ ವರ್ಷದಲ್ಲಿ ಸಂಪತ್ತು, ಸಮೃದ್ಧಿ ಹಾಗೂ ಸಂತೋಷಕ್ಕಾಗಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಲಕ್ಷ್ಮಿ ದೇವಿಯನ್ನು ಸಮಾಧಾನಪಡಿಸಲು ದೀಪಗಳನ್ನು ಬೆಳಗಿಸುತ್ತಾರೆ.

ದೀಪಾವಳಿ ಒಂದು ದಿನದ ಹಬ್ಬವಲ್ಲ. ಇದು ಐದು ದಿನಗಳ ಕಾಲ ನಡೆಯುವ ಭವ್ಯ ಆಚರಣೆಯಾಗಿದೆ. ದೀಪಾವಳಿ ಯಾವಾಗ ಮತ್ತು ಈ ಐದು ದಿನಗಳ ಹಬ್ಬ ಹೇಗೆ ಇರುತ್ತದೆ ಎಂಬುದರ ಬಗ್ಗೆ ತಿಳಿಯೋಣ.

2025ರಲ್ಲಿ ದೀಪಾವಳಿ ಹಬ್ಬ ಯಾವಾಗ?: ಈ ವರ್ಷದ ದೀಪಾವಳಿಯನ್ನು ಅಕ್ಟೋಬರ್ 20, 2025 ರಂದು ಆಚರಿಸಲಾಗುತ್ತದೆ. ದೀಪಾವಳಿ ಲಕ್ಷ್ಮಿ ಪೂಜೆಯ ಪ್ರದೋಷ ಕಾಲ ಮುಹೂರ್ತವು ಸಂಜೆ 7:08 ರಿಂದ ರಾತ್ರಿ 8:18 ರವರೆಗೆ ಹಾಗೂ ನಿಶ್ಚಿತ ಕಾಲ ಮುಹೂರ್ತವು ರಾತ್ರಿ 11:41 ರಿಂದ ಬೆಳಗ್ಗೆ 12:31 ರವರೆಗೆ ಇರುತ್ತದೆ.

ದೀಪಾವಳಿ ಐದು ದಿನಗಳವರೆಗೆ ಆಚರಣೆ: ದೀಪಾವಳಿಯನ್ನು ಐದು ದಿನಗಳವರೆಗೆ ಆಚರಿಸಲಾಗುತ್ತದೆ. ಪ್ರತಿದಿನವೂ ವಿಶೇಷ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮೊದಲನೇ ದಿನ: ಅಕ್ಟೋಬರ್ 18 ರಂದು, ಲಕ್ಷ್ಮಿ ದೇವತೆ ಮತ್ತು ಆರೋಗ್ಯದ ದೇವತೆ ಧನ್ವಂತರಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಹೊಸ ವಸ್ತುಗಳನ್ನು ವಿಶೇಷವಾಗಿ ಚಿನ್ನ, ಬೆಳ್ಳಿ ಇಲ್ಲವೇ ಪಾತ್ರೆಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದು ಖ್ಯಾತಿ ಹಾಗೂ ಅದೃಷ್ಟವನ್ನು ಸಂಕೇತಿಸುತ್ತದೆ. ದೇವತೆಗಳನ್ನು ಸ್ವಾಗತಿಸಲು ಮನೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಹಾಗೂ ಅಲಂಕರಿಸಲಾಗುತ್ತದೆ.

ಎರಡನೇ ದಿನ: ನರಕ ಚತುರ್ದಶಿ ಅಥವಾ ಛೋಟಿ ದೀಪಾವಳಿ ಇದು ಅಕ್ಟೋಬರ್ 19 ರಂದು ಬರುತ್ತದೆ. ಇದನ್ನು ಛೋಟಿ ದೀಪಾವಳಿ ಎಂದೂ ಕರೆಯಲಾಗುತ್ತದೆ. ಈ ದಿನ ನರಕಾಸುರನ ವಧೆಯನ್ನು ಸ್ಮರಿಸುತ್ತದೆ. ಈ ದಿನದಂದು ಸೂರ್ಯೋದಯಕ್ಕೆ ಮುಂಚೆ ಎದ್ದು ಎಣ್ಣೆ ಸ್ನಾನ ಮಾಡುವುದು ಸಾಂಪ್ರದಾಯಿಕ ಪದ್ಧತಿ. ದೇಶದ ಹಲವು ಭಾಗಗಳಲ್ಲಿ ದೀಪಾವಳಿ ಆಚರಣೆಗಳು ಈ ದಿನದಂದು ಪ್ರಾರಂಭವಾಗುತ್ತವೆ. ಅನೇಕರು ಕಾಲುವೆಗಳ ದಡದಲ್ಲಿ ದೀಪಗಳನ್ನು ಬೆಳಗಿಸುತ್ತಾರೆ. ದೀಪಗಳನ್ನು ಬೆಳಗಿಸುವುದರ ಜೊತೆಗೆ ಪಟಾಕಿಗಳನ್ನು ಸಿಡಿಸುವುದು ಸಹ ಈ ದಿನದಂದು ಆರಂಭವಾಗುತ್ತದೆ.

ಮೂರನೇ ದಿನ: ಈ ವರ್ಷ ಅಕ್ಟೋಬರ್ 20 ರಂದು ಬರುವ ಮೂರನೇ ದಿನ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ರಾಮನು ರಾವಣನನ್ನು ಕೊಂದ ಬಳಿಕ ಅಯೋಧ್ಯೆಗೆ ಮರಳಿದನು. ಇದನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ.

ದೀಪಾವಳಿಯ ಸಂಜೆ, ಲಕ್ಷ್ಮಿ ಹಾಗೂ ಗಣೇಶನಿಗೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ದೀಪಗಳನ್ನು ಬೆಳಗಿಸಲಾಗುತ್ತದೆ. ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ನಾಲ್ಕನೇ ದಿನ: ಈ ದಿನ, ಗೋವರ್ಧನ ಪೂಜೆಯನ್ನು ನಡೆಸಲಾಗುತ್ತದೆ. ಈ ವರ್ಷ ಅಕ್ಟೋಬರ್ 22 ರಂದು ಬರುತ್ತದೆ. ಜನರನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿದನು ಎಂದು ನಂಬಲಾಗಿದೆ. ಈ ದಿನದಂದು ಹಸುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

ಐದನೇ ದಿನ: ಈ ವರ್ಷ ಅಕ್ಟೋಬರ್ 23 ರಂದು ಬರುವ ಭಾಯಿ ದೂಜ್ ಎಂದು ಆಚರಿಸಲಾಗುತ್ತದೆ. ಈ ಹಬ್ಬವು ಸಹೋದರ ಸಹೋದರಿಯರ ನಡುವಿನ ಅವಿನಾಭಾವ ಸಂಬಂಧವನ್ನು ಸಂಕೇತಿಸುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಹಣೆಗೆ ತಿಲಕ ಇಟ್ಟು, ಅವರಿಗೆ ಶುಭ ಹಾರೈಸುತ್ತಾರೆ ಹಾಗೂ ಉಡುಗೊರೆಗಳು, ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ದಿನ ದೀಪಾವಳಿ ಆಚರಣೆಯ ಅಂತ್ಯವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಮಲೈಕಾ ಅರೋರಾ ಫಿಟೆನೆಸ್​ ರಹಸ್ಯವೇನು ಗೊತ್ತೇ? ಇಲ್ಲಿದೆ ನೋಡಿ 'ರೆಟಿನಾಲ್ ಜ್ಯೂಸ್': ತಜ್ಞರು ತಿಳಿಸುವುದೇನು?

ದೀಪಾವಳಿ ಹಬ್ಬದ ವಿಶೇಷ: ಮನೆಯಲ್ಲೇ ತಯಾರಿಸಿ ವಿಭಿನ್ನ ರಸಮಲೈ