ಮಕ್ಕಳು ಖುಷಿಯಾಗಿ ಆಹಾರ ಸೇವಿಸಬೇಕೆ?: ತಜ್ಞರು ಸೂಚಿಸುವ ಟಿಪ್ಸ್ ಇಲ್ಲಿವೆ
ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾದ ಆರೋಗ್ಯಕರ ಆಹಾರ ಕ್ರಮಗಳನ್ನು ರೂಢಿಸಲು ತಜ್ಞರು ನೀಡಿರುವ ಸೂಪರ್ ಟಿಪ್ಸ್ ಇಲ್ಲಿವೆ ನೋಡಿ.


Published : October 6, 2026 at 4:31 PM IST
ಮಕ್ಕಳಿಗೆ ಆಹಾರ ತಿನ್ನಿಸುವುದು ಪ್ರತಿಯೊಬ್ಬ ತಾಯಿಗೆ ಒಂದು ಸವಾಲಿನ ಹಾಗೂ ತಾಳ್ಮೆಯ ಪರೀಕ್ಷೆಯ ಕೆಲಸವಾಗಿದೆ. ಮಕ್ಕಳು ಸರಿಯಾಗಿ ಊಟ ಮಾಡದಿದ್ದಾಗ ತಾಯಂದಿರು ತುಂಬಾ ಹೆದರಿಸುತ್ತಾರೆ. ಆಹಾರ ಇಷ್ಟವಿಲ್ಲದಿದ್ದರೂ ಮಕ್ಕಳಿಗೆ ತಿನ್ನಲು ಒತ್ತಾಯ ಮಾಡುತ್ತಾರೆ. ಮಕ್ಕಳು ತಮಗೆ ಇಷ್ಟವಿಲ್ಲದ ಆಹಾರವನ್ನು ಕಂಡಾಗ ಬಾಯಿ ಮುಚ್ಚಿಕೊಳ್ಳುತ್ತಾರೆ. ತಲೆ ತಿರುಗಿಸುವುದು ಇಲ್ಲವೇ ಅಳಲು ಪ್ರಾರಂಭಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಇಲ್ಲವೇ ಟಿವಿ ತೋರಿಸದಿದ್ದರೆ ಊಟ ಮಾಡುವುದಿಲ್ಲ. ಕಷ್ಟಪಟ್ಟು ತಯಾರಿಸಿದ ಆಹಾರವನ್ನು ಮಕ್ಕಳು ಬಾಯಿಯಲ್ಲಿಟ್ಟುಕೊಂಡು ನುಂಗದೇ ಇರುವುದು ಅಥವಾ ನೆಲಕ್ಕೆ ಚೆಲ್ಲಿ ಆಟವಾಡುವುದು. ಕೇವಲ ಕೆಲವೇ ಕೆಲವು ನಿರ್ದಿಷ್ಟ ಆಹಾರಗಳನ್ನು (ಚಾಕೊಲೇಟ್, ನೂಡಲ್ಸ್, ಬಿಸ್ಕೆಟ್) ಮಾತ್ರ ತಿನ್ನಲು ಹಠ ಹಿಡಿಯುವುದು, ಪೌಷ್ಟಿಕ ಆಹಾರವನ್ನು ನಿರಾಕರಿಸುವುದು. ಮಗು ತೂಕ ಕಡಿಮೆಯಾಗುತ್ತಿದೆಯೇ, ಮಕ್ಕಳಿಗೆ ಸರಿಯಾದ ಪೋಷಕಾಂಶ ಲಭಿಸುತ್ತಿಲ್ಲವೆ ಎನ್ನುವ ಆತಂಕ ತಾಯಂದಿರಿಗೆ ಕಾಡುವುದು ಸಾಮಾನ್ಯ. ಕುರಿತು ತಜ್ಞರು ಸೂಚಿಸುವಂತಹ ಕೆಲವು ಸಲಹೆಗಳು ಇಲ್ಲಿವೆ ನೋಡಿ.

ಅಗತ್ಯ ಪೋಷಕಾಂಶಗಳು: ಮಕ್ಕಳು ಬೆಳೆದಂತೆ ಚಯಾಪಚಯ ಮಟ್ಟಗಳು ಬದಲಾಗುತ್ತವೆ. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ವಿಟಮಿನ್, ಖನಿಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ವಿಟಮಿನ್ ಡಿ, ಕ್ಯಾಲ್ಸಿಯಂ, ಸತು, ಮೆಗ್ನೀಸಿಯಮ್ ಹಾಗೂ ಒಮೆಗಾ 3 ಕೊರತೆಯನ್ನು ನೀಗಿಸುವಂತಹ ಆಹಾರಗಳನ್ನು ನೀಡಬೇಕಾಗುತ್ತದೆ.
ಮಕ್ಕಳ ಡಯಟ್ ಪ್ಲಾನ್: ದಿನವಿಡೀ ಏನಾದರೂ ಸಣ್ಣ ಪ್ರಮಾಣದಲ್ಲಿ ತಿನ್ನಿ. ಊಟದ ಜೊತೆಗೆ ಹಣ್ಣುಗಳು, ನಟ್ಸ್, ಡೈರಿ ಉತ್ಪನ್ನಗಳು, ಧಾನ್ಯಗಳನ್ನು ತಿಂಡಿಯಾಗಿ ನೀಡಬಹುದು ಎಂದು ಮಯೋಕ್ಲಿನಿಕ್ ಹೇಳುತ್ತದೆ. ದೇಹದ ತೂಕದ ಪ್ರತಿ ಕೆಜಿಗೆ 1.5 ಗ್ರಾಂ ಪ್ರೋಟೀನ್ ಸಹಿತ ಆಹಾರಗಳನ್ನು ನೀಡಬೇಕು. ಮೂಳೆ ಬೆಳವಣಿಗೆಗೆ ಕ್ಯಾಲ್ಸಿಯಂ, ರಕ್ತ ಕಣಗಳ ಉತ್ಪಾದನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅಗತ್ಯವಿದೆ. ಬೀನ್ಸ್, ಬಟಾಣಿ, ನಟ್ಸ್, ಇತರ ಸಸ್ಯಆಧಾರಿತ ಆರೋಗ್ಯಕರ ಪ್ರೋಟೀನ್ ನೀಡಬಹುದು. ಹಾಗೆಯೇ ಮೀನು, ಮೊಟ್ಟೆಗಳು ಮತ್ತು ಕೋಳಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ನ್ಯೂಟ್ರಿಷನ್ ವರದಿ ಹೇಳುತ್ತದೆ.

ಮಕ್ಕಳ ಮೆದುಳಿನ ಆರೋಗ್ಯ: ಮೆದುಳಿನ ಬೆಳವಣಿಗೆಗೆ ಒಮೆಗಾ- 3 ಸಮೃದ್ಧವಾಗಿರುವ ಆಹಾರ ಅಗತ್ಯವಾಗಿದೆ. ಚಿಯಾ ಸೀಡ್ಸ್, ವಾಲ್‌ನಟ್ಸ್, ಬಾದಾಮಿ, ಆವಕಾಡೊ, ಪಿಸ್ತಾ, ತುಪ್ಪ ಹಾ ಮೀನುಗಳನ್ನು ಆಗಾಗ್ಗೆ ನೀಡಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಮಕ್ಕಳ ಆಹಾರ ಕ್ರಮ: ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ಮಕ್ಕಳಿಗೆ ಆಹಾರ ತಿನ್ನಿಸುವಾಗ ಶಾಂತ ವಾತಾವರಣ ಇರಬೇಕಾಗುತ್ತದೆ. ಇಷ್ಟಪಡುವದರ ಜೊತೆಗೆ ಅವರು ಆಗಾಗ ಹೊಸ ಅಭ್ಯಾಸಗಳನ್ನು ಮಾಡಲು ಬಯಸುತ್ತಾರೆ. ಹೊಸ ವಿಷಯಗಳಿಗೆ ಒಗ್ಗಿಕೊಳ್ಳಲು 15 ದಿನ ಬೇಕು ಎನ್ನುತ್ತಾರೆ. ಸ್ವಲ್ಪ ಸ್ವಲ್ಪವೇ ನೀಡಬೇಕು ಎಂದು ವಿವರಿಸಿದ್ದಾರೆ. ತಿನ್ನುವುದನ್ನು ರುಚಿಯಿಂದಲ್ಲ ಬದಲಿಗೆ ಪೋಷಕಾಂಶಗಳನ್ನು ಪಡೆದುಕೊಳ್ಳಲು ಎಂಬುದನ್ನು ಕಲಿಸಬೇಕು. ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಪರಿಚಯಿಸಿದರೆ ಇವುಗಳಲ್ಲಿ ಆರೋಗ್ಯಕರವಾದವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಮಗುವಿನ ವಯಸ್ಸಿಗೆ ಅನುಗುಣವಾಗಿ ಆಹಾರವು ಮೃದುವಾಗಿರಬೇಕು. ಮಕ್ಕಳು ಯಾವಾಗಲೂ ಅವರು ಇಷ್ಟಪಡುವುದನ್ನು ಆಯ್ಕೆ ಮಾಡುತ್ತಾರೆ. ಕ್ಯಾರೆಟ್ ಅಥವಾ ತರಕಾರಿ, ಹಣ್ಣು ಅಥವಾ ಮೊಸರಿನಂತಹ ಉತ್ತಮವಾದ ವಸ್ತುಗಳಲ್ಲಿ ಒಂದನ್ನು ಆಯ್ಕೆ ಮಾಡುವ ಅಭ್ಯಾಸವನ್ನು ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಆಹಾರದ ಆಕಾರ, ಬಣ್ಣ ಮತ್ತು ಸೇವೆಯಲ್ಲಿ ವೈವಿಧ್ಯತೆ ಇರಬೇಕಾಗುತ್ತದೆ.
ಊಟ ಮಾಡುವಾಗ ಫೋನ್, ಟಿವಿ ಇರಬಾರದು. ಇತರ ವಿಷಯಗಳ ಬಗ್ಗೆ ಮಾತನಾಡುವಾಗ ಆಹಾರ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಆಹಾರ ಪದಾರ್ಥಗಳನ್ನು ಖರೀದಿಸುವುದು, ಸ್ವಚ್ಛಗೊಳಿಸುವುದು ಹಾಗೂ ಕತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಜ್ಞರು ತಿಳಿಸುತ್ತಾರೆ. ಆಹಾರ ತಯಾರಿಕೆಯ ಪ್ರಕ್ರಿಯೆ ಮತ್ತು ಅದರಲ್ಲಿ ತೊಡಗಿರುವ ಶ್ರಮವನ್ನು ತೋರಿಸುತ್ತದೆ. ಇದರಿಂದ ಮಕ್ಕಳು ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆಹಾರ ವ್ಯರ್ಥವಾಗುವುದು ಕಡಿಮೆಯಾಗುತ್ತದೆ. ಅಲ್ಲದೆ, ಹಸಿವಾದಾಗ ಏನಾದರು ಕೇಳುವುದನ್ನು, ಹೊಟ್ಟೆ ತುಂಬಿದೆ ಎಂದು ಹೇಳುವುದನ್ನು ಪೋಷಕರು ಮಕ್ಕಳಿಗೆ ಕಲಿಸಬೇಕಾಗುತ್ತದೆ.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ದಡಾರ ವೈರಸ್: ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
- ಕಬ್ಬಿಣಾಂಶದ ಕೊರತೆಯಾದರೆ ದೇಹದಲ್ಲಿ ಕಾಣಿಸುತ್ತವೆ ಈ ಚಿಹ್ನೆಗಳು: ಐರನ್ ಅಂಶ ಸಮೃದ್ಧವಾಗಿರುವ ಆಹಾರಗಳಿವು
- ಬೆಳಗ್ಗೆ ಎದ್ದ ತಕ್ಷಣ ನಡೆದಾಡಿದರೆ ತೀವ್ರವಾದ ಹಿಮ್ಮಡಿ ನೋವು ಕಾಣಿಸುತ್ತದೆಯೇ?: ವೈದ್ಯರು ಸೂಚಿಸುವ ಪರಿಹಾರ ಕ್ರಮಗಳೇನು?
- ಹೊರಗೆ ಕಾಣುವ ದೊಡ್ಡ ಹೊಟ್ಟೆಗಿಂತ ಒಳಾಂಗಗಳಲ್ಲಿರುವ ಶೇಖರವಾಗುವ ಕೊಬ್ಬು ತುಂಬಾ ಅಪಾಯಕಾರಿ: ವೈದ್ಯರ ಎಚ್ಚರಿಕೆ
- ಪುರುಷರಿಗಿಂತ ಮಹಿಳೆಯರಲ್ಲಿ ಮೆದುಳಿನ ಅನ್ಯೂರಿಜಮ್ ಉಂಟಾಗುವ ಸಾಧ್ಯತೆ ಹೆಚ್ಚು: ಏನಿದು ಆರೋಗ್ಯದ ಸಮಸ್ಯೆ?
- ಡಯಟ್ ಮಾಡುವಾಗ ಬೇಡದ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆಯಾಗುವುದೇಕೆ? ನಿಯಂತ್ರಿಸುವುದು ಹೇಗೆ ಗೊತ್ತೇ?

