ETV Bharat / lifestyle

ನೀವು 'ಚಾರ್ ಧಾಮ್' ಹೋಗಲು ಬಯಸುತ್ತೀರಾ? ಇಲ್ಲಿನ ದೇವಾಲಯಗಳು ಯಾವಾಗ ಓಪನ್​ ಆಗುತ್ತವೆ ಗೊತ್ತೇ?

ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಸ್ಥಳಗಳ ಚಾರ್ ಧಾಮ್ ಯಾತ್ರೆಗಾಗಿ ಅನೇಕ ಭಕ್ತರು ಕಾಯುತ್ತಿದ್ದಾರೆ. ದೇವಾಲಯಗಳ ಬಾಗಿಲು ತೆರೆಯುವ ದಿನಾಂಕಗಳನ್ನು ಬಿಡುಗಡೆಗೊಳಿಸಲಾಗಿದೆ.

CHARDHAM YATRA DATES  CHARDHAM TEMPLES OPENING DATE  HOW TO GO CHARDHAM TEMPLES  CHARDHAM YATRA 2026
ಕೇದಾರನಾಥ (ETV Bharat)
author img

By ETV Bharat Lifestyle Team

Published : February 28, 2026 at 6:09 PM IST

3 Min Read
Choose ETV Bharat

ಅನೇಕರು ಚಾರ್ ಧಾಮ್ ಯಾತ್ರೆಗೆ ಹೋಗಲು ಬಯಸುತ್ತಾರೆ. ಹಿಮಾಲಯದ ಎತ್ತರದ ಹಿಮಭರಿತ ಪರ್ವತ ಪ್ರದೇಶಗಳಲ್ಲಿ ನೆಲೆಗೊಂಡಿರುವ ಈ ದೇವಾಲಯಗಳು ವರ್ಷದಲ್ಲಿ ಕೆಲವೇ ಕೆಲವು ಬಾರಿ ತೆರೆದಿರುತ್ತವೆ. ಪ್ರಸಕ್ತ ವರ್ಷದಲ್ಲಿ ಈ ದೇವಾಲಯಗಳು ಇನ್ನೂ ಕೆಲವು ದಿನಗಳಲ್ಲಿ ತೆರೆಯುವುದರಿಂದ ಭಕ್ತರು ಯಾತ್ರೆಗಾಗಿ ಕಾಯುತ್ತಿದ್ದಾರೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಸ್ಥಳಗಳನ್ನು ಚಾರ್ ಧಾಮ್ (ನಾಲ್ಕು ದೇವಾಲಯಗಳು) ಎಂದು ಕರೆಯಲಾಗುತ್ತದೆ. ಈ ದೇವಾಲಯಗಳಲ್ಲಿ ಯಮುನೋತ್ರಿ, ಗಂಗೋತ್ರಿ, ಮತ್ತು ನಂತರ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು ತೆರೆಯುತ್ತವೆ.

ಏಪ್ರಿಲ್​ನಿಂದ ನವೆಂಬರ್​ವರೆಗೆ ಓಪನ್: ಕಳೆದ ವರ್ಷ ಏಪ್ರಿಲ್ 30ರಂದು ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳನ್ನು ತೆರೆಯುವುದರೊಂದಿಗೆ ಚಾರ್ ಥಾಮ್ ಯಾತ್ರೆ ಪ್ರಾರಂಭವಾಯಿತು. ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಕ್ರಮವಾಗಿ ಮೇ 2 ಮತ್ತು 4 ರಂದು ತೆರೆಯಲಾಗಿತ್ತು. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಅಕ್ಟೋಬರ್ 22 ಮತ್ತು 23 ರಂದು ಮುಚ್ಚಲಾಗಿತ್ತು. ಬಳಿಕ ಒಂದು ತಿಂಗಳ ನಂತರ ಅಕ್ಟೋಬರ್ 23 ಮತ್ತು ನವೆಂಬರ್ 25 ರಂದು ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಮುಚ್ಚಲಾಗಿತ್ತು.

CHARDHAM YATRA DATES  CHARDHAM TEMPLES OPENING DATE  HOW TO GO CHARDHAM TEMPLES  CHARDHAM YATRA 2026
ಬದರಿನಾಥ (ETV Bharat)

ಪ್ರಸಕ್ತ ವರ್ಷದಲ್ಲಿ ಯಾತ್ರೆ ಹೇಗಿರಲಿದೆ? ಚಾರ್ ಥಾಮ್ ದೇವಾಲಯಗಳಲ್ಲಿ ಯಮುನೋತ್ರಿಯ ಬಾಗಿಲುಗಳು ಬೇಗನೆ ತೆರೆಯುತ್ತವೆ. ಯಮುನೋತ್ರಿ ಹಾಗೂ ಗಂಗೋತ್ರಿ ಏಪ್ರಿಲ್ 19ರಂದು, ಕೇದಾರನಾಥ ಏಪ್ರಿಲ್ 22ರಂದು ಮತ್ತು ಬದರಿನಾಥ ಏಪ್ರಿಲ್ 23ರಂದು ತೆರೆಯುತ್ತವೆ. ಭಕ್ತರು ಮೊದಲು ಯಮುನೋತ್ರಿಯನ್ನು ಭೇಟಿ ಮಾಡಿ ನಂತರ ಈ ಕ್ರಮದಲ್ಲಿ ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಬಹುದು. ಯಮುನೋತ್ರಿ ಯಮುನಾ ನದಿಯ ಜನ್ಮಸ್ಥಳವಾಗಿದೆ. ಆದರೆ, ಭಕ್ತರು ಇಲ್ಲಿಗೆ ಕಾಲ್ನಡಿಗೆಯಲ್ಲಿ ತಲುಪುತ್ತಾರೆ. ವೃದ್ಧರು ಮಾತ್ರ ಕುದುರೆಗಳು ಅಥವಾ ಪಲ್ಲಕ್ಕಿಗಳ ಮೇಲೆ ಪ್ರಯಾಣಿಸುತ್ತಾರೆ. ಇದು ಋಷಿಕೇಶದಿಂದ ಸುಮಾರು 210 ಕಿಮೀ ದೂರದಲ್ಲಿದೆ. ಗಂಗೆಯ ಜನ್ಮಸ್ಥಳವಾದ ಗೋಮುಖ ಗಂಗೋತ್ರಿಯಿಂದ 19 ಕಿ.ಮೀ ದೂರದಲ್ಲಿದೆ. ಗೋಮುಖದಲ್ಲಿ ಜನಿಸಿದ ಭಾಗೀರಥಿ, ದೇವಪ್ರಯಾಗ ಬಳಿಯ ಅಲಕನಂದಾದೊಂದಿಗೆ ವಿಲೀನಗೊಂಡು ಗಂಗೆಯಾಗಿ ಹರಿಯುತ್ತದೆ.

CHARDHAM YATRA DATES  CHARDHAM TEMPLES OPENING DATE  HOW TO GO CHARDHAM TEMPLES  CHARDHAM YATRA 2026
ಗಂಗೋತ್ರಿ (ETV Bharat)

ಕೇದಾರನಾಥ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಎತ್ತರವಾಗಿದೆ. ಇಲ್ಲಿಗೆ ತಲುಪಲು ಎತ್ತರದ ಬೆಟ್ಟಗಳ ಮೂಲಕ ಕಾಲ್ನಡಿಗೆಯಲ್ಲಿ 18 ಕಿಮೀ ನಡೆಯಬೇಕು. ನಡೆಯಲು ಸಾಧ್ಯವಾಗದವರಿಗೆ ಪಲ್ಲಕ್ಕಿಗಳು, ಕುದುರೆಗಳು ಮತ್ತು ಹೆಲಿಕಾಪ್ಟರ್ ಸೇವೆಗಳು ಲಭ್ಯ ಇವೆ. ಯಮುನೋತ್ರಿಯ ಸಮೀಪವಿರುವ ಜನಪ್ರಿಯ ಪ್ರವಾಸಿ ಸ್ಥಳಗಳೆಂದರೆ ರೈತಾಲ್, ಬರ್ಸು, ಉತ್ತರಕಾಶಿ, ಹನುಮಾನ್ ಚಟ್ಟಿ, ಜಾನಕಿ ಚಟ್ಟಿ, ಖರ್ಸಾಲಿ, ಬರ್ಕೋಟ್, ಡಿಯಾರಾ ಬುಗ್ಯಾಲ್. ಅದೇ ರೀತಿಯಾಗಿ ಗಂಗೋತ್ರಿ ಬಳಿ ಭಾಗೀರಥಿ ಕೊಂಡ, ದೋಡಿ ತಾಲ್, ಕೇದಾರ್ ತಾಲ್, ಗಂಗೋತ್ರಿ ದೇವಸ್ಥಾನ, ಗಂಗೋತ್ರಿ ರಾಷ್ಟ್ರೀಯ ಉದ್ಯಾನ, ಗೋಮುಖ ತಪೋವನ ಚಾರಣ, ಕೇದಾರ್ ತಾಲ್ ಟ್ರೆಕ್ ಇವೆ. ಕೇದಾರನಾಥ ದೇವಾಲಯದ ಹತ್ತಿರ ಸನ್ ಪ್ರಯಾಗ, ಗೌರಿಕುಂಡ್, ವಾಸುಕಿ ತಾಲ್, ಶಂಕರಾಚಾರ್ಯ ಸಮಾಧಿ, ಭೈರವನಾಥ ದೇವಾಲಯಗಳಿವೆ. ವಸುಧಾರಾ ಜಲಪಾತ, ನಾರದ್ ಕುಂಡ್, ಸಟೋಪಂತ್ ಟ್ರೆಕ್, ಹೇಮಕುಂಡ್ ಸಾಹಿಬ್, ಹೂಗಳ ಕಣಿವೆ ಬದರಿನಾಥದ ಬಳಿ ಭೇಟಿ ನೀಡಬೇಕಾದ ಸ್ಥಳಗಳಿವು.

CHARDHAM YATRA DATES  CHARDHAM TEMPLES OPENING DATE  HOW TO GO CHARDHAM TEMPLES  CHARDHAM YATRA 2026
ಯಮುನೋತ್ರಿ (ETV Bharat)

ನೋಂದಣಿ ಕಡ್ಡಾಯ: ಚಾರ್ ಧಾಮ್ ಯಾತ್ರೆ ಮಾಡಲು ಬಯಸುವ ಆರಂಭಿಕರು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ಆಧಾರ್ ಅಥವಾ ಸರ್ಕಾರ ನೀಡಿದ ಗುರುತಿನ ಚೀಟಿ, ಫೋಟೋಗಳು ಹಾಗೂ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿದೆ. ನೋಂದಣಿಯನ್ನು ಆನ್‌ಲೈನ್ ಇಲ್ಲವೇ ಆಫ್‌ಲೈನ್ ಎರಡರಲ್ಲೂ ಮಾಡಬಹುದು. ಉತ್ತರಾಖಂಡ ಪ್ರವಾಸೋದ್ಯಮ ಅಥವಾ ಚಾರ್‌ಧಾಮ್ ಯಾತ್ರಾ ಪೋರ್ಟಲ್ https://registrationandtouristcare.uk.gov.in/ ಅನ್ನು ಕ್ಲಿಕ್ ಮಾಡಿ ಹಾಗೂ ಮತ್ತು ವಿವರಗಳು, ದಾಖಲೆಗಳನ್ನು ಸಲ್ಲಿಸಿ, ನಿಮ್ಮ ಹೆಸರನ್ನು ನೋಂದಾಯಿಸಿ ಹಾಗೂ ದಿನಾಂಕಗಳನ್ನು ಆಯ್ಕೆ ಮಾಡಿ. ಆಫ್‌ಲೈನ್ ನೋಂದಣಿಗಳಿಗಾಗಿ ಹರಿದ್ವಾರ ಮತ್ತು ಋಷಿಕೇಶದಲ್ಲಿ ಹಾಗೂ ಯಾತ್ರೆಯ ನಾಲ್ಕು ಆರಂಭಿಕ ಹಂತಗಳಲ್ಲಿ ವಿಶೇಷ ಕೌಂಟರ್‌ಗಳಿವೆ.

CHARDHAM YATRA DATES  CHARDHAM TEMPLES OPENING DATE  HOW TO GO CHARDHAM TEMPLES  CHARDHAM YATRA 2026
ಕೇದಾರನಾಥ (ETV Bharat)

ಇವುಗಳನ್ನೂ ಓದಿ:

  1. ನಿತ್ಯ ಶಿಶುಗಳಿಗೆ ಮಸಾಜ್ ಮಾಡುವುದರಿಂದ ಮೂಳೆಗಳು ಸದೃಢವಾಗುತ್ತವೆಯೇ? ಯಾವೆಲ್ಲಾ ಪ್ರಯೋಜನಗಳಿವೆ?: ವೈದ್ಯರು ತಿಳಿಸುವುದೇನು?
  2. ನಾರಿನ ಕೊರತೆಯಿಂದ ಶುಗರ್, ತೂಕ ಹೆಚ್ಚಳ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳು: ದೇಹಕ್ಕೆ ಪೂರಕವಾದ ಫೈಬರ್ ಪಡೆಯುವುದು ಹೇಗೆ?
  3. ಯಾವುದೇ ಚಿಹ್ನೆಗಳು ಕಾಣಿಸದೆ ಇದ್ದರೂ ಕೊಲೆಸ್ಟ್ರಾಲ್ ಮಟ್ಟಗಳು ಏರಿಕೆ: ಕೊಲೆಸ್ಟ್ರಾಲ್ ಲೆವಲ್​ ಗುರುತಿಸುವುದು ಹೇಗೆ?
  4. ನಿಮ್ಮ ತ್ವಚೆ ಚಿಕ್ಕ ವಯಸ್ಸಿನಲ್ಲಿಯೇ ಸುಕ್ಕುಗಟ್ಟುತ್ತಿದೆಯೇ? ಇಲ್ಲಿವೆ ನೈಸರ್ಗಿಕ ಪರಿಹಾರಗಳು
  5. ತಾಪಮಾನ ಏರಿಕೆಯಿಂದ ಭಾರತ, ಆಫ್ರಿಕಾದಲ್ಲಿ ಗಂಡು ಮಕ್ಕಳ ಜನನ ಪ್ರಮಾಣ ಇಳಿಕೆ: ನೂತನ ಅಧ್ಯಯನದಿಂದ ಆಘಾತಕಾರಿ ಮಾಹಿತಿ