ETV Bharat / lifestyle

ಚಂದ್ರಗ್ರಹಣದ ವೇಳೆ ಉಪವಾಸವೇಕೆ? ಆರೋಗ್ಯ ಲಾಭವೇನು? ಆಯುರ್ವೇದ ತಜ್ಞರು ಹೇಳುವುದೇನು?

ಉಪವಾಸದ ಸಂಪ್ರದಾಯ ಧಾರ್ಮಿಕ ನಂಬಿಕೆಗಳು, ಆರೋಗ್ಯ ದೃಷ್ಟಿಕೋನವನ್ನು ಆಧರಿಸಿದೆ. ಚಂದ್ರಗ್ರಹಣದ ಸಮಯದಲ್ಲಿ ಉಪವಾಸ ಏಕೆ ಆಚರಿಸಲಾಗುತ್ತದೆ. ಆರೋಗ್ಯ ಪ್ರಯೋಜನಗಳು ಹಾಗೂ ಅನಾನುಕೂಲಗಳೇನು? ಆಯುರ್ವೇದ ತಜ್ಞರು ತಿಳಿಸುವುದೇನು ಎಂಬುದನ್ನು ಈ ಸ್ಟೋರಿಯಲ್ಲಿ ಅರಿಯೋಣ.

Why Fast During Lunar Eclipse  Health Benefits of Fasting  Disadvantages of Fasting  ಚಂದ್ರಗ್ರಹಣ
ಚಂದ್ರ ಗ್ರಹಣ (NASA)
author img

By ETV Bharat Lifestyle Team

Published : March 3, 2026 at 10:49 AM IST

3 Min Read
Choose ETV Bharat

ಚಂದ್ರಗ್ರಹಣ ಸಂಭವಿಸಿದ ಸಮಯದಲ್ಲಿ ಮನೆಗಳಲ್ಲಿ ವಿಭಿನ್ನ ವಾತಾವರಣವಿರುತ್ತದೆ. ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಜನರು ಮಂತ್ರಗಳನ್ನು ಪಠಿಸುತ್ತಾರೆ ಹಾಗೂ ಬೇರೆಡೆ ಉಪವಾಸಗಳನ್ನು ಆಚರಿಸಲಾಗುತ್ತದೆ. ಅನೇಕ ಜನರು ಯೋಚಿಸದೆ ಸಂಪ್ರದಾಯ ಅನುಸರಿಸುತ್ತಾರೆ. ಗ್ರಹಣ ಸಮಯದಲ್ಲಿ ಊಟ ಮಾಡಬಾರದು ಎಂಬುದು ನಿಜವಾಗಿಯೂ ನಿಜವೇ? ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಏನು ಪರಿಣಾಮ ಬೀರುತ್ತದೆ.

ಈ ವರ್ಷದಲ್ಲಿ ಇಂದು (ಮಾರ್ಚ್ 3ರಂದು) ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ವಾಸ್ತವವಾಗಿ ಚಂದ್ರಗ್ರಹಣವು ಕೇವಲ ಖಗೋಳ ಘಟನೆಯಲ್ಲ. ಆದರೆ, ಇದು ಭಾರತೀಯ ಸಂಸ್ಕೃತಿ ಹಾಗೂ ಆಯುರ್ವೇದದಲ್ಲಿ ವಿಶೇಷ ಮಹತ್ವ ಹೊಂದಿದೆ. ಉಪವಾಸದ ಸಂಪ್ರದಾಯವು ಧಾರ್ಮಿಕ ನಂಬಿಕೆಗಳು ಹಾಗೂ ಆರೋಗ್ಯ ದೃಷ್ಟಿಕೋನವನ್ನು ಆಧರಿಸಿದೆ. ಚಂದ್ರಗ್ರಹಣದ ಸಮಯದಲ್ಲಿ ಉಪವಾಸವನ್ನು ಏಕೆ ಮಾಡಲಾಗುತ್ತದೆ. ಉಪವಾಸದ ಪ್ರಯೋಜನಗಳು ಹಾಗೂ ಅನಾನುಕೂಲಗಳೇನು? ಆಯುರ್ವೇದ ತಜ್ಞರು ತಿಳಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳೋಣ.

ಉಪವಾಸ ಮತ್ತು ಧಾರ್ಮಿಕ ಕಾರಣಗಳು: ಹಿಂದೂ ಧರ್ಮದಲ್ಲಿ ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ ಸಮಯದಲ್ಲಿ ಆಹಾರವನ್ನು ಬೇಯಿಸುವುದು ಹಾಗೂ ಸೇವನೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ತಯಾರಿಸಿದ ಆಹಾರವು ಕಲುಷಿತವಾಗಬಹುದು ಎಂದು ಹಲವು ಜನರು ನಂಬುತ್ತಾರೆ. ಗ್ರಹಣಕ್ಕೆ ಮೊದಲು ಆಹಾರವನ್ನು ಬೇಯಿಸಲಾಗುತ್ತದೆ, ಇದಕ್ಕೆ ತುಳಸಿ ಎಲೆಗಳನ್ನು ಸೇರಿಸಲಾಗುತ್ತದೆ. ತುಳಸಿಯನ್ನು ಶುದ್ಧೀಕರಣದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಯು ಗ್ರಹಣದ ಸಮಯವು ಆಧ್ಯಾತ್ಮಿಕ ಅಭ್ಯಾಸ, ಮಂತ್ರಗಳನ್ನು ಪಠಿಸುವುದು, ಧ್ಯಾನಕ್ಕೆ ಉತ್ತಮವಾಗಿದೆ. ದೇಹವನ್ನು ಹಗುರವಾಗಿಡಲು, ಮನಸ್ಸನ್ನು ಕೇಂದ್ರೀಕರಿಸಲು ಉಪವಾಸ ಆಚರಿಸಲಾಗುತ್ತದೆ ಎಂದು ಆಯುರ್ವೇದ ತಜ್ಞರು ತಿಳಿಸುತ್ತಾರೆ.

ಮಧ್ಯಂತರ ಉಪವಾಸ: ಆಧುನಿಕ ಪರಿಭಾಷೆಯಲ್ಲಿ ತಿಳಿಸುವುದಾದರೆ, ಮಧ್ಯಂತರ ಉಪವಾಸವು ಈ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಯು ನಿರ್ದಿಷ್ಟ ಅವಧಿಗೆ ಆಹಾರವನ್ನು ತ್ಯಜಿಸುತ್ತಾನೆ, ನಂತರ ಸೀಮಿತ ಅವಧಿಯಲ್ಲಿ ಆಹಾರವನ್ನು ಸೇವಿಸುತ್ತಾನೆ. ಚಂದ್ರಗ್ರಹಣದ ಸಮಯದಲ್ಲಿ ಉಪವಾಸವು ಸ್ವಲ್ಪಮಟ್ಟಿಗೆ ಒಳ್ಳೆಯದು. ಕೆಲವು ಗಂಟೆಗಳ ಕಾಲ ಆಹಾರ ಸೇವಿಸದಿರುವುದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಧ್ಯಂತರ ಉಪವಾಸದ ಲಾಭಗಳು:

  1. ಜೀರ್ಣಾಂಗ ವ್ಯವಸ್ಥೆಗೆ ಸ್ವಲ್ಪ ವಿರಾಮ ಲಭಿಸುತ್ತದೆ.
  2. ದೇಹದಲ್ಲಿ ಸಂಗ್ರಹವಾದ ವಿಷವನ್ನು ಹೊರಹಾಕಲು ಸುಲಭವಾಗುತ್ತದೆ.
  3. ಚಯಾಪಚಯ ಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.
  4. ವ್ಯತ್ಯಾಸವೆಂದರೆ ಮಧ್ಯಂತರ ಉಪವಾಸವು ನಿಯಮಿತ ಆರೋಗ್ಯ ಅಭ್ಯಾಸಕ್ಕೆ ಸಹಾಯವಾಗುತ್ತದೆ. ಆದರೆ, ಗ್ರಹಣದ ಸಮಯದಲ್ಲಿ ಉಪವಾಸವು ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದೆ.

ಗ್ರಹಣ ಹಾಗೂ ನಿರ್ವಿಶೀಕರಣ: ಆಯುರ್ವೇದದ ಪ್ರಕಾರ, ಗ್ರಹಣದ ಸಮಯದಲ್ಲಿ ಪ್ರಕೃತಿಯ ಶಕ್ತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಇದರಿಂದ ದೇಹದ ವಾತ, ಪಿತ್ತ ಹಾಗೂ ಕಫ ದೋಷಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಈ ಅವಧಿಯಲ್ಲಿ ಜೀರ್ಣಕ್ರಿಯೆಯನ್ನು ದುರ್ಬಲವೆಂದು ಪರಿಗಣಿಸಲಾಗುತ್ತದೆ. ಭಾರವಾದ, ಎಣ್ಣೆಯುಕ್ತ ಆಹಾರ ತಪ್ಪಿಸಲು ಸಲಹೆ ನೀಡಲಾಗುತ್ತದೆ. ಆಯುರ್ವೇದದಲ್ಲಿ ಉಪವಾಸ ನಿರ್ವಿಷೀಕರಣದ ನೈಸರ್ಗಿಕ ವಿಧಾನವೆಂದು ಪರಿಗಣಿಸಲಾಗುತ್ತದೆ. ನಾವು ಸ್ವಲ್ಪ ಸಮಯದವರೆಗೆ ಆಹಾರ ಸೇವಿಸದಿದ್ದಾಗ ದೇಹವು ಅದರ ಶುದ್ಧೀಕರಣ ಪ್ರಕ್ರಿಯೆ ವೇಗಗೊಳಿಸುತ್ತದೆ.

ಆಯುರ್ವೇದ ತಿಳಿಸುವುದೇನು?:

  1. ಗ್ರಹಣದ ಸಮಯದಲ್ಲಿ ನೀರು ಅಥವಾ ಹಣ್ಣುಗಳನ್ನು ಮಾತ್ರ ಕುಡಿಯಿರಿ.
  2. ಗ್ರಹಣದ ಬಳಿಕ ಸ್ನಾನ ಮಾಡಿ.
  3. ಹಗುರವಾದ, ಸಾತ್ವಿಕ ಆಹಾರವನ್ನು ಸೇವಿಸಿ.
  4. ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
  5. ಈ ನಿಯಮಗಳಿಂದ ದೇಹ, ಮನಸ್ಸು ಎರಡನ್ನೂ ಹಗುರಗೊಳಿಸುತ್ತದೆ.

ಗ್ರಹಣದ ಬಳಿಕ ಯಾವ ಆಹಾರಗಳನ್ನು ಸೇವಿಸುವುದು ಬೆಸ್ಟ್ ಗೊತ್ತೇ?: ಸಾಂಪ್ರದಾಯಿಕವಾಗಿ ಗ್ರಹಣ ಮುಗಿದ ಬಳಿಕ, ಸ್ನಾನ ಮಾಡಿ ಶುದ್ಧ ಆಹಾರ ಸೇವಿಸಬೇಕು. ಇದನ್ನು ಶುಭವೆಂದು ಪರಿಗಣಿಸಲಾದ ಆಹಾರಗಳಲ್ಲಿ ಖಿಚಡಿ, ಹೆಸರುಬೇಳೆ, ಹಣ್ಣುಗಳು ಮತ್ತು ಹೊಸದಾಗಿ ತಯಾರಿಸಿದ ಸಾತ್ವಿಕ ಆಹಾರ ಸೇರಿವೆ. ಭಾರವಾದ, ಹಳೆಯ ಅಥವಾ ಹುರಿದ ಆಹಾರ ತಪ್ಪಿಸಬೇಕು. ಬಹುತೇಕರು ತಮ್ಮ ಮನೆಗಳಲ್ಲಿ ಸ್ವಚ್ಛತಾ ಕಾರ್ಯಕೈಗೊಳ್ಳಲಾಗುತ್ತದೆ. ಗ್ರಹಣದ ನಂತರ ಗಂಗಾ ಜಲ ಸಿಂಪಡಿಸಲಾಗುತ್ತದೆ.

ಉಪವಾಸದ ಪ್ರಯೋಜನಗಳೇನು?:

  1. ಜೀರ್ಣಾಂಗ ವ್ಯವಸ್ಥೆಯನ್ನು ಸಡಿಲಗೊಳಿಸುತ್ತದೆ.
  2. ದೇಹವು ಹಗುರವಾಗಿರುತ್ತದೆ.
  3. ಮಾನಸಿಕ ಏಕಾಗ್ರತೆ ಹೆಚ್ಚಾಗುತ್ತದೆ.
  4. ಸ್ವಯಂ ನಿಯಂತ್ರಣದ ಪ್ರಜ್ಞೆ ಬಲಗೊಳ್ಳುತ್ತದೆ.

ಅನಾನುಕೂಲಗಳೇನು?:

  1. ದುರ್ಬಲ ವ್ಯಕ್ತಿಗಳು ತಲೆತಿರುಗುವಿಕೆ ಅನುಭವಿಸಬಹುದು.
  2. ಮಧುಮೇಹ ಇರುವವರಿಗೆ ದೀರ್ಘಕಾಲದ ಉಪವಾಸ ಅಪಾಯಕಾರಿ.
  3. ಗರ್ಭಿಣಿಯರು ಜಾಗರೂಕರಾಗಿರಬೇಕು.
  4. ನಿಮಗೆ ಯಾವುದೇ ವೈದ್ಯಕೀಯ ಸ್ಥಿತಿ ಇದ್ದರೆ, ವೈದ್ಯರನ್ನು ಸಂಪರ್ಕಿಸದೆ ದೀರ್ಘಕಾಲದ ಉಪವಾಸ ತಪ್ಪಿಸಿ.

ಚಂದ್ರಗ್ರಹಣದ ಸಮಯದಲ್ಲಿ ಉಪವಾಸ ಮಾಡುವುದು ಕೇವಲ ಧಾರ್ಮಿಕ ಸಂಪ್ರದಾಯವಲ್ಲ. ಆದರೆ, ಆರೋಗ್ಯ ಮತ್ತು ಮಾನಸಿಕ ಸಮತೋಲನಕ್ಕೂ ಸಂಬಂಧಿಸಿದೆ. ಆಯುರ್ವೇದ ಪ್ರಕಾರ, ಈ ಸಮಯದಲ್ಲಿ ಉಪವಾಸ ಮಾಡುವುದು ದೇಹವನ್ನು ಶುದ್ಧೀಕರಿಸಲು, ಶಕ್ತಿಯನ್ನು ಸಮತೋಲನಗೊಳಿಸಲು ಒಂದು ಅವಕಾಶವೆಂದು ಪರಿಗಣಿಸುತ್ತದೆ.

ಇವುಗಳನ್ನೂ ಓದಿ:

  1. ಇಂದು ಆಗಸದಲ್ಲಿ ಕೆಂಬಣ್ಣದ ಚಂದ್ರ ದರ್ಶನ! ಸೂತಕ ಅವಧಿ, ಗ್ರಹಣ ಸಮಯದ ಮಾಹಿತಿ
  2. ಹಸುವಿನ ಹಾಲು Vs ಎಮ್ಮೆ ಹಾಲು: ಇವೆರಡರಲ್ಲಿ ಮಗುವಿಗೆ ಯಾವುದು ತುಂಬಾ ಉಪಯುಕ್ತ ಗೊತ್ತೇ?
  3. ಬೇಸಿಗೆಯಲ್ಲಿ ನಿರ್ಜಲೀಕರಣ, ಜೀರ್ಣಕ್ರಿಯೆ ಸಮಸ್ಯೆ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಡೆಯಲು ಈ ಆಹಾರಗಳು ಬೆಸ್ಟ್
  4. ನಿತ್ಯ ಶಿಶುಗಳಿಗೆ ಮಸಾಜ್ ಮಾಡುವುದರಿಂದ ಮೂಳೆಗಳು ಸದೃಢವಾಗುತ್ತವೆಯೇ? ಯಾವೆಲ್ಲಾ ಪ್ರಯೋಜನಗಳಿವೆ?: ವೈದ್ಯರು ತಿಳಿಸುವುದೇನು?
  5. ನಾರಿನ ಕೊರತೆಯಿಂದ ಶುಗರ್, ತೂಕ ಹೆಚ್ಚಳ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳು: ದೇಹಕ್ಕೆ ಪೂರಕವಾದ ಫೈಬರ್ ಪಡೆಯುವುದು ಹೇಗೆ?