ಹೋಳಿ ಹಬ್ಬಕ್ಕೆ ಭರ್ಜರಿ ರುಚಿಯ 'ಪನೀರ್ ಪಾಯಸ': ಬಣ್ಣದಾಟಕ್ಕೆ ಮತ್ತಷ್ಟು ರಂಗೂ ನೀಡುವ ಸ್ಟೀಟ್
ಸಂಭ್ರಮದಿಂದ ಆಚರಿಸಲಾಗುವಂತಹ ಹೋಳಿ ಹಬ್ಬದಲ್ಲಿ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಈ ಬಾರಿ ಬಣ್ಣದಾಟದಲ್ಲಿ ಸಖತ್ ಟೇಸ್ಟಿಯಾದ 'ಪನೀರ್ ಪಾಯಸ' ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.


Published : March 2, 2026 at 11:01 PM IST
ಹೋಳಿ ಹಬ್ಬವನ್ನು ರಾಜ್ಯದ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಲು ಬಹುತೇಕರ ಮನೆಯಲ್ಲಿ ಹೋಳಿಗೆ ಅಥವಾ ಒಬ್ಬಟ್ಟು, ಬರ್ಫಿ, ಲಡ್ಡು ಸೇರಿದಂತೆ ವಿವಿಧ ಪ್ರಕಾರದ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಇದೀಗ ನೂತನ ಶೈಲಿಯ ಪಾಯಸ ಸಿದ್ಧಪಡಿಸಬಹುದು. ಪಾಯಸದ ವಿಷಯಕ್ಕೆ ಬಂದಾಗ ಹೆಚ್ಚಿನ ಜನರು ಇದನ್ನು ಶ್ಯಾವಿಗೆ ಮತ್ತು ಸ್ಟಫ್ಡ್ ರೈಸ್ನಿಂದ ತಯಾರಿಸಲಾಗುತ್ತದೆ ಅಂದುಕೊಳ್ಳುತ್ತಾರೆ.
ಈ ಪಾಯಸವನ್ನು ಪನೀರ್ನಿಂದ ಕೂಡ ಮಾಡಬಹುದು. ಈ ರೀತಿ ತಯಾರಿಸಿದರೆ ತುಂಬಾ ರುಚಿಕರವಾಗಿರುತ್ತದೆ. ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಈ ಪಾಯಸ ಒಮ್ಮೆ ಮಾಡಿದರೆ, ಎರಡು ದಿನಗಳವರೆಗೆ ಸಂತೋಷದಿಂದ ಸೇವಿಸಬಹುದು. ಹೊಸ ಶೈಲಿಯ ಸಿಹಿ ತಿನ್ನಲು ಬಯಸಿದಾಗ ರೆಸಿಪಿಯನ್ನು ಪ್ರಯತ್ನಿಸಬಹುದು. ಸಂಬಂಧಿಕರು ಇಲ್ಲವೇ ಸ್ನೇಹಿತರು ಮನೆಗೆ ಬಂದಾಗ ಈ ಸ್ವೀಟ್ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಅವರು ಕೂಡ ಇದ ರುಚಿಗೆ ಫಿದಾ ಆಗುತ್ತಾರೆ. ಈ ಪಾಯಸವನ್ನು ನೀವು ತಣ್ಣಗೆ ಹಾಗೂ ಬಿಸಿಯಾಗಿದ್ದಾಗ ಸೇವಿಸಿದರೂ ಟೇಸ್ಟ್ ಅದ್ಭುತವಾಗಿರುತ್ತದೆ. ಈಗ ರುಚಿ ರುಚಿಯಾದ ಪನೀರ್ ಪಾಯಸ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಪನೀರ್ ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳೇನು?

- ಪನೀರ್ - 400 ಗ್ರಾಂ
- ಹಾಲು - 2 ಲೀಟರ್
- ಕೇಸರಿ - 2 ಚಿಟಿಕೆ
- ಏಲಕ್ಕಿ ಪುಡಿ - 1 ಟೀಸ್ಪೂನ್
- ಡ್ರೈ ಫ್ರೂಟ್ಸ್ - ಸ್ವಲ್ಪ
- ಸಕ್ಕರೆ - ಒಂದು ಕಪ್

ಪನೀರ್ ಪಾಯಸ ಸಿದ್ಧಪಡಿಸುವ ವಿಧಾನ:
- ಹೋಳಿ ಹಬ್ಬಕ್ಕೆ ಹೇಳಿ ಮಾಡಿಸಿದ ಪನೀರ್ ಪಾಯಸ ತಯಾರಿಸಲು ಮೊದಲಿಗೆ, ಒಂದು ಬಟ್ಟಲಿನಲ್ಲಿ ಎರಡು ಕಪ್ ನೀರು ಸುರಿಯಿರಿ, ಕುದಿಸಿ ಮತ್ತು ಒಲೆ ಆಫ್ ಮಾಡಿ. ಬಿಸಿ ನೀರಿಗೆ 400 ಗ್ರಾಂ ಪನೀರ್ ಅನ್ನು ಸೇರಿಸಿ ಹಾಗೂ 15 ನಿಮಿಷಗಳ ಕಾಲ ನೆನೆಸಿ.
- ಹದಿನೈದು ನಿಮಿಷಗಳ ಬಳಿಕ, ಪನೀರ್ ಅನ್ನು ತೆಗೆದು ತುರಿಯುವ ಮಣೆಯೊಂದಿಗೆ ನುಣ್ಣಗೆ ತುರಿದುಕೊಳ್ಳಬೇಕಾಗುತ್ತದೆ.
- ಮತ್ತೊಂದೆಡೆ, ಒಲೆ ಆನ್ ಮಾಡಿ ಹಾಗೂ ಪ್ಯಾನ್‌ನಲ್ಲಿ ಎರಡು ಲೀಟರ್ ಹಾಲನ್ನು ಸುರಿಯಿರಿ. ಹಾಲು ಕುದಿಯುತ್ತಿರುವಾಗ, ಒಂದು ಕಪ್ ಸಕ್ಕರೆ ಸೇರಿಸಿ ಹಾಗೂ ಕುದಿಸಿ.

- ಹಾಲು ಸ್ವಲ್ಪ ಗಟ್ಟಿಯಾದ ಬಳಿಕ, ಪನೀರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ.
- ಅಲ್ಲದೆ, ಒಂದು ಟೀಸ್ಪೂನ್ ಏಲಕ್ಕಿ ಪುಡಿ, ಎರಡು ಚಿಟಿಕೆ ಕೇಸರಿ, ಸಣ್ಣಗೆ ಕತ್ತರಿಸಿದ ಕೆಲವು ಡ್ರೈಫ್ರೂಟ್ಸ್ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ, 15 ನಿಮಿಷ ಬೇಯಿಸಿ ಬಳಿಕ ಒಲೆ ಆಫ್ ಮಾಡಿ.
- ಇದೀಗ ತುಂಬಾ ರುಚಿಕರವಾದ ಸ್ವೀಟ್ ಪನೀರ್ ಪಾಯಸ ಸವಿಯಲು ಸಿದ್ಧವಾಗಿದೆ.

- ಬಳಿಕ ನೀವು ಪಾಯಸವನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಎರಡು ದಿನಗಳವರೆಗೆ ತಡೆಯುತ್ತದೆ.
- ಈ ನಾವು ತಿಳಿಸುವ ವಿಧಾನ ಅನುಸರಿಸಿ ಮನೆಯಲ್ಲಿಯೇ ಮಾಡಿದರೆ, ಖಂಡಿತವಾಗಿಯೂ ಸೂಪರ್ ಆಗಿ ಬರುತ್ತದೆ.
- ನೀವು ಈ ಪಾಯಸವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಬಯಸಿದರೆ, ಪನೀರ್, ಹಾಲು ಮತ್ತು ಇತರ ಪದಾರ್ಥಗಳ ಪ್ರಮಾಣವನ್ನು ಅಕ್ಕೆ ಅನುಗುಣವಾಗಿ ತಕ್ಕಂತೆ ಹೆಚ್ಚಿಸಬಹುದು.
ಇವುಗಳನ್ನು ಓದಿ:
- ಎಣ್ಣೆ ಹೀರಿಕೊಳ್ಳದ, ಬಲೂನ್ನಂತೆ ಉಬ್ಬುವ ಸೂಪರ್ ಸಾಫ್ಟ್ ಪೂರಿ ತಯಾರಿಸುವುದು ಸಿಂಪಲ್!
- ಬಾಯಲ್ಲಿ ನೀರೂರಿಸುವ ಸೂಪರ್ ರಸಮಲೈ: ಕೆಲವೇ ನಿಮಿಷಗಳಲ್ಲಿ ಸವಿಯಲು ಸಿದ್ಧ!
- ಬೆಣ್ಣೆಯಂತೆ ಕರಗುವ ಕ್ಯಾರೆಟ್ ಬರ್ಫಿ: ಹೆಚ್ಚೇನು ಶ್ರಮಬೇಕಿಲ್ಲ ವೇಗವಾಗಿ ರೆಡಿ ಮಾಡಬಹುದು
- ಸ್ವೀಟ್ ಶಾಪ್ ಶೈಲಿಯ, ಬಾಯಲ್ಲಿಟ್ಟರೆ ಕರಗುವ ಬಾದಾಮಿ ಬರ್ಫಿ ತಯಾರಿಸುವುದು ಹೇಗೆ?: ಇಲ್ಲಿದೆ ಸರಳ ವಿಧಾನ!
- ಗ್ರಾಮೀಣ ಶೈಲಿಯ ರುಚಿಕರ ಮೂಲಂಗಿ ಚಟ್ನಿ: ಆನಂದದ ಭೋಜನಕ್ಕೆ ಹೇಳಿ ಮಾಡಿಸಿದ ರೆಸಿಪಿ

