ETV Bharat / lifestyle

ಏರುತ್ತಿರುವ ಚಳಿಗೆ ಚರ್ಮ, ಕೈ, ಕಾಲುಗಳಲ್ಲಿ ಬಿರುಕು: ಮನೆಯಲ್ಲಿಯೇ ಮಾಯಿಶ್ಚರೈಸರ್ ಕ್ರೀಮ್ ತಯಾರಿಸೋದು ಹೇಗೆ ?: ತಿಳಿಯೋಣ ಬನ್ನಿ!!

ಚಳಗಾಲ ಆರಂಭವಾಗಿರುವುದರಿಂದ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಚರ್ಮ, ಕೈ, ಕಾಲುಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಮನೆಯಲ್ಲಿಯೇ ಮಾಯಿಶ್ಚರೈಸರ್ ಕ್ರೀಮ್ ತಯಾರಿಸೋದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ .

how to make moisturizer cream  moisturizer cream  skin care Tips  ಮಾಯಿಶ್ಚರೈಸರ್ ಕ್ರೀಮ್
ಮಾಯಿಶ್ಚರೈಸರ್ ಕ್ರೀಮ್ ತಯಾರಿಸೋದು ಹೇಗೆ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Lifestyle Team

Published : November 11, 2025 at 4:44 PM IST

3 Min Read
Choose ETV Bharat

ರಾಜ್ಯದಲ್ಲಿ ಈಗಾಗಲೇ ಚಳಗಾಲ ಶುರುವಾಗಿದೆ. ದಿನದಿಂದ ದಿನಕ್ಕೆ ಚಳಿಯು ಏರಿಕೆಯಾಗುತ್ತದೆ. ಇದರ ಹಿನ್ನೆಲೆಯಲ್ಲಿ ಚರ್ಮ, ಕೈ, ಕಾಲುಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದೆ. ಮನೆಯಲ್ಲಿಯೇ ಮಾಯಿಶ್ಚರೈಸರ್ ಕ್ರೀಮ್ ತಯಾರಿಸಬಹುದು. ಈ ಕ್ರೀಮ್ ಒಣ ಮತ್ತು ಬಿರುಕು ಬಿಟ್ಟ ಚರ್ಮವನ್ನು ನಿವಾರಿಸುವುದರ ಜೊತೆಗೆ ಚರ್ಮವನ್ನು ಹೆಚ್ಚು ಕಾಂತಿಯುತ ಹಾಗೂ ಮೃದುವಾಗಿಸುತ್ತದೆ.

ನವೆಂಬರ್ ತಿಂಗಳು ಆರಂಭವಾಗಿದ್ದು ಗಾಳಿಯು ಕ್ರಮೇಣ ತಣ್ಣಗಾಗುತ್ತಿದೆ. ಚಳಿಗಾಲದ ಹವಾಮಾನದ ಪರಿಣಾಮ ಚರ್ಮದ ಮೇಲೆ ಗೋಚರಿಸುತ್ತದೆ. ಶೀತ ಗಾಳಿಯಿಂದಾಗಿ ಕೈ ಮತ್ತು ಪಾದಗಳ ಮೇಲಿನ ಚರ್ಮವು ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಚರ್ಮವು ಮಂದ ಮತ್ತು ಒಣಗಿದಂತೆ ಕಂಡು ಬರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಯಿಶ್ಚರೈಸರ್‌ಗಳು ಹಾಗೂ ಬಾಡಿ ಲೋಷನ್‌ಗಳನ್ನು ಖರೀದಿಸುತ್ತಾರೆ. ಈ ರಾಸಾಯನಿಕ ಆಧಾರಿತ ಉತ್ಪನ್ನಗಳು ಎಲ್ಲರ ಚರ್ಮಕ್ಕೂ ಹೊಂದುವುದಿಲ್ಲ. ಇದೀಗ ಮನೆಯಲ್ಲಿಯೇ ಚಳಿಗಾಲದ ಕ್ರೀಮ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

how to make moisturizer cream  moisturizer cream  skin care Tips  ಮಾಯಿಶ್ಚರೈಸರ್ ಕ್ರೀಮ್
ಅಲೋವೆರಾ ಜೆಲ್ (Getty Images)

ಅಲೋವೆರಾ- ಬಾದಾಮಿ ಎಣ್ಣೆ: ಮನೆಯಲ್ಲಿ ಬಾದಾಮಿ ಎಣ್ಣೆ ಹಾಗೂ ಅಲೋವೆರಾ ಜೆಲ್ ಸುಲಭವಾಗಿ ದೊರೆಯುತ್ತದೆ. ಅರ್ಧ ಕಪ್ ಅಲೋವೆರಾ ಜೆಲ್ ಹಾಗೂ ಕಾಲು ಕಪ್ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಇದೀಗ ಚಳಿಗಾಲದ ಕ್ರೀಮ್ ಸಿದ್ಧವಾಗುತ್ತದೆ. ಈ ಎರಡೂ ಪದಾರ್ಥಗಳು ಉರಿಯೂತ ನಿವಾರಕ ಮತ್ತು ಮಾಯಿಶ್ಚರೈಸಿಂಗ್ ಗುಣಗಳನ್ನು ಹೊಂದಿದೆ. ಈ ಕ್ರೀಮ್ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಹಾಗೂ ಶುಷ್ಕತೆಯನ್ನು ನಿವಾರಿಸುತ್ತದೆ.

how to make moisturizer cream  moisturizer cream  skin care Tips  ಮಾಯಿಶ್ಚರೈಸರ್ ಕ್ರೀಮ್
ಅಲೋವೆರಾ ಜೆಲ್ (Getty Images)

ಅಲೋವೆರಾ ಜೆಲ್, ಗ್ಲಿಸರಿನ್, ರೋಸ್ ವಾಟರ್: ನೈಸರ್ಗಿಕವಾದ ಮಾಯಿಶ್ಚರೈಸರ್ ಕ್ರೀಮ್ ತಯಾರಿಸಲು ಅರ್ಧ ಕಪ್ ರೋಸ್ ವಾಟರ್, ಅರ್ಧ ಕಪ್ ಗ್ಲಿಸರಿನ್ ಹಾಗೂ ಅರ್ಧ ಕಪ್ ಅಲೋವೆರಾ ಜೆಲ್ ಸರಿಯಾಗಿ ಮಿಕ್ಸ್ ಮಾಡಬೇಕಾಗುತ್ತದೆ. ಈ ಕ್ರೀಮ್​ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಇಡಬಹುದು. ಈ ಮಾಯಿಶ್ಚರೈಸರ್ ಕ್ರೀಮ್ ಚಳಿಗಾಲಕ್ಕೆ ತುಂಬಾ ಸೂಕ್ತವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

how to make moisturizer cream  moisturizer cream  skin care Tips  ಮಾಯಿಶ್ಚರೈಸರ್ ಕ್ರೀಮ್
ಜೇನುತುಪ್ಪ (Getty Images)

ನಿಂಬೆ, ಜೇನುತುಪ್ಪ, ಗ್ಲಿಸರಿನ್: ಜೇನುತುಪ್ಪ, ನಿಂಬೆ ಹಾಗೂ ಗ್ಲಿಸರಿನ್ ಮಿಶ್ರಣ ಮಾಡಿ ಕ್ರೀಮ್ ತಯಾರಿಸುವುದು ಅತ್ಯಂತ ಸುಲಭವಾಗಿದೆ. 2 ಟೀಸ್ಪೂನ್ ಗ್ಲಿಸರಿನ್, 1 ಟೀಸ್ಪೂನ್ ಜೇನುತುಪ್ಪ, 1 ಟೀಸ್ಪೂನ್ ನಿಂಬೆ ಹಾಗೂ 2 ಟೀಸ್ಪೂನ್ ಗ್ರೀನ್ ಟೀ ಸಾರ ಮಿಶ್ರಣ ಮಾಡಿದರೆ ಚಳಿಗಾಲದ ಸಮಯದಲ್ಲಿ ಹೇಳಿ ಮಾಡಿಸಿದ ಕ್ರೀಮ್ ರಡೆಯಾಗುತ್ತದೆ. ಗ್ರೀನ್ ಟೀ ಸಾರವಿಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಈ ಕ್ರೀಮ್​ ಅನ್ನು ಗ್ರೀನ್ ಟೀ ಇಲ್ಲದೆಯೇ ಸಿದ್ಧಪಡಿಸಬಹುದು. ಚಳಿಗಾಲದ ತಿಂಗಳಲ್ಲಿ ಪ್ರತಿದಿನ ಈ ನೈಸರ್ಗಿಕ ಕ್ರೀಮ್ ಬಳಸುವ ಮೂಲಕ ಚರ್ಮದ ಶುಷ್ಕತೆ ಹಾಗೂ ಬಿರುಕುಗಳನ್ನು ಬರದಂತೆ ತಡೆಯುತ್ತದೆ.

how to make moisturizer cream  moisturizer cream  skin care Tips  ಮಾಯಿಶ್ಚರೈಸರ್ ಕ್ರೀಮ್
ಬಾದಾಮಿ ಎಣ್ಣೆ (Getty Images)

ಮುಖಕ್ಕಾಗಿ ಕ್ರೀಮ್ ತಯಾರಿಸುವುದು ಹೇಗೆ?: ಚಳಿಗಾಲದಲ್ಲಿ ನಿಮ್ಮ ಮುಖದ ಚರ್ಮವನ್ನು ತಾಜಾ ಹಾಗೂ ಮೃದುವಾಗಿರಿಸಲು ಚಳಿಗಾಲದ ಕ್ರೀಮ್ ಸಹ ತಯಾರಿಸಬಹುದು. ಇದಕ್ಕಾಗಿ 2 ಟೀಸ್ಪೂನ್ ಅಲೋವೆರಾ ಜೆಲ್ ಅನ್ನು 1 ಟೀಸ್ಪೂನ್ ತೆಂಗಿನ ಎಣ್ಣೆಯೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ. ಜೊತೆಗೆ ಇದರೊಳಗೆ ವಿಟಮಿನ್ ಇ ಕ್ಯಾಪ್ಸುಲ್ ಕೂಡ ಸೇರಿಸಬಹುದು. ಈ ಮಿಶ್ರಣವು ಕೆನೆ ಬಣ್ಣದ ಬರುವವರೆಗೆ ಈ ಎಲ್ಲಾ ಪದಾರ್ಥಗಳನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಬೇಕಾಗುತ್ತದೆ. ನಂತರ ಕ್ರೀಮ್ ಅನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಬಳಿಕ ನಿಮಗೆ ಯಾವಾಗ ಬೇಕೋ ಆವಾಗ ಬಳಸಬಹುದು.

how to make moisturizer cream  moisturizer cream  skin care Tips  ಮಾಯಿಶ್ಚರೈಸರ್ ಕ್ರೀಮ್
ಚರ್ಮದ ಆರೈಕೆ- ಸಾಂದರ್ಭಿಕ ಚಿತ್ರ (Getty Images)

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನು ಓದಿ: