ETV Bharat / international

ಉಜ್ಬೇಕಿಸ್ತಾನದ ಜೊತೆ ಭಾರತ ರಕ್ಷಣಾ ಸಹಕಾರ: ಕೇಂದ್ರ ಏಷ್ಯಾ ಕಾರ್ಯತಂತ್ರದಲ್ಲಿ ಉಭಯ ದೇಶಗಳ ಪಾತ್ರ!

ಪ್ರಧಾನಿ ಭೇಟಿ ಉಭಯ ಪಕ್ಷಗಳ ಸಹಕಾರವನ್ನು ಪರಿಶೀಲಿಸಲಿದ್ದು, ರಕ್ಷಣಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಭಾಗಿತ್ವವನ್ನು ಬಲಪಡಿಸಲಿವೆ.

Why Closer Defence Ties With Uzbekistan Matter For Indias Central Asian Strategy
ಮೋದಿ (IANS)
author img

By ETV Bharat Karnataka Team

Published : August 29, 2026 at 1:54 PM IST

3 Min Read
Choose ETV Bharat

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಹಕಾರ ಬಲ ಪಡಿಸುವ ನಿಟ್ಟಿನಲ್ಲಿ ಉಜ್ಬೇಕಿಸ್ತಾನ್​ಗೆ ಭೇಟಿ ನೀಡುತ್ತಿದ್ದು, ತಾಷ್ಕೆಂಟ್‌ನೊಂದಿಗೆ ನಿಕಟ ಮಿಲಿಟರಿ ಸಂಬಂಧಗಳನ್ನು ಬೆಳೆಸಲಿದ್ದಾರೆ.

ಉಜ್ಬೇಕಿಸ್ತಾನ ಪ್ರವಾಸಕ್ಕೆ ಮುನ್ನ ಗುರುವಾಗ ವಿಶೇಷ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಿಬಿ ಜಾರ್ಜ್ ಅವರು, ಉಜ್ಬೇಕಿಸ್ತಾನದೊಂದಿಗೆ ಭಾರತವು ಈಗಾಗಲೇ ರಕ್ಷಣಾ ಸಹಕಾರವನ್ನು ಹೊಂದಿದ್ದು, ಅದು ಮುಂದುವರಿಯುತ್ತಿದೆ ಎಂದು ತಿಳಿಸಿದರು. ಪ್ರಧಾನಿ ಭೇಟಿ ಉಭಯ ಪಕ್ಷಗಳ ಸಹಕಾರವನ್ನು ಪರಿಶೀಲಿಸಲಿದ್ದು, ರಕ್ಷಣಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಭಾಗಿತ್ವವನ್ನು ಬಲಪಡಿಸಲಿವೆ ಎಂದರು.

2019ರಲ್ಲಿ ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಕಾರ್ಯಪಡೆಯ ಸಾಂಸ್ಥಿಕ ಕಾರ್ಯವಿಧಾನ ಸ್ಥಾಪಿಸಿದ್ದು, ಈ ವರ್ಷದ ಆರಂಭದಲ್ಲಿ ನಡೆದ ಸಭೆಯು ರಕ್ಷಣಾ ಕೈಗಾರಿಕಾ ಕ್ಷೇತ್ರದಲ್ಲಿ ಸಹಕಾರದ ಹೊಸ ಸಾಧ್ಯತೆಗಳನ್ನು ಪರಿಶೀಲಿಸಲಿದೆ ಎಂದರು.

ಭಾರತ ಮತ್ತು ಉಜ್ಬೇಕಿಸ್ತಾನ್ ನಿಯಮಿತವಾಗಿ ಡಸ್ತ್ಲಿಕ್ ಎಂಬ ಜಂಟಿ ವಾರ್ಷಿಕ ಸೇನಾ ಕವಾಯತುಗಳಲ್ಲಿ ಭಾಗಿಯಾಗುತ್ತಿದೆ. ಉಜ್ಬೇಕಿಸ್ತಾನದ ರಕ್ಷಣಾ ಉದ್ಯಮ ಸಂಸ್ಥೆಯ ನಿಯೋಗವು 2025ರ ಏರೋ - ಇಂಡಿಯಾ ಪ್ರದರ್ಶನದಲ್ಲಿ ಭಾಗಿಯಾಗುವ ಮೂಲಕ ಉಭಯ ದೇಶಗಳ ನಡುವಣ ರಕ್ಷಣಾ ಸಹಕಾರದ ಅನ್ವಯ ಗಣನೀಯ ಮಟ್ಟದ ಪರಸ್ಪರ ಸಹಭಾಗಿತ್ವ ಕಂಡುಬಂದಿದೆ.

ಮಧ್ಯ ಏಷ್ಯಾದ ಹೆಬ್ಬಾಗಿಲಿನ ದಾರಿ ಸುಲಭ: ಚೀನಾದ ವಿಸ್ತರಣೆ, ಅಫ್ಘಾನಿಸ್ತಾನದ ಬಗೆಹರಿಯದ ಭದ್ರತಾ ಸವಾಲುಗಳು ಹಾಗೂ ಸಂಪರ್ಕ ಮತ್ತು ಕಾರ್ಯತಂತ್ರದ ಪ್ರಭಾವಕ್ಕಾಗಿ ಹೆಚ್ಚುತ್ತಿರುವ ಪೈಪೋಟಿ ನಡುವೆ ಉಜ್ಬೇಕಿಸ್ತಾನ ಭಾರತಕ್ಕೆ ಹೆಚ್ಚು ಮಹತ್ವದ ಪಾಲುದಾರನನ್ನಾಗಿ ಮಾಡಿದೆ.

ನಾಲ್ಕು ಮಧ್ಯ ಏಷ್ಯಾದ ರಾಷ್ಟ್ರಗಳು ಹಾಗೂ ಅಫ್ಘಾನಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಹೀಗಾಗಿ, ಇದರ ಭದ್ರತಾ ಪರಿಸ್ಥಿತಿಯು ಅಫ್ಘಾನಿಸ್ತಾನ ಮತ್ತು ವಿಶಾಲ ಯುರೇಷಿಯನ್ ಪ್ರದೇಶದಲ್ಲಿನ ಬೆಳವಣಿಗೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಭಾರತಕ್ಕೆ, ತಾಷ್ಕೆಂಟ್‌ನೊಂದಿಗಿನ ಬಲವಾದ ರಕ್ಷಣಾ ಸಂಬಂಧ ಹೆಚ್ಚಿನ ಸಂಪರ್ಕ ಮತ್ತು ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡುತ್ತದೆ.

ಈ ಪ್ರದೇಶವು ಭಾರತದ ವಿದೇಶಾಂಗ ಮತ್ತು ಭದ್ರತಾ ನೀತಿಯ ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಿದೆ. ಕಳೆದ ವರ್ಷ ತಾಷ್ಕೆಂಟ್‌ನಲ್ಲಿ ಒಂಬತ್ತನೇ ಜಂಟಿ ಕಾರ್ಯನಿರತ ಗುಂಪಿನ ಸಭೆ ನಡೆಯಿತು. ಅಲ್ಲದೇ, ಭಾರತ ಮತ್ತು ಉಜ್ಬೇಕಿಸ್ತಾನ್ ಮಧ್ಯ ಏಷ್ಯಾ ಸ್ವರೂಪದಡಿ ಸಹಕರಿಸುತ್ತಿದ್ದು, ಇದರ ಮೂಲಕ ಪ್ರಾದೇಶಿಕ ಭದ್ರತಾ ಸವಾಲುಗಳ ಪರಾಮರ್ಶೆ, ಭಯೋತ್ಪಾದನೆ ನಿಗ್ರಹ ಹಾಗೂ ತಾಂತ್ರಿಕ ಸಹಕಾರವನ್ನು ಬಲಪಡಿಸುವುದು ಮತ್ತು 2022ರಲ್ಲಿ ಆರಂಭವಾದ ಸಂವಾದದ ಚೌಕಟ್ಟನ್ನು ಮುಂದುವರಿಸುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಭಾರತಕ್ಕೆ ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ನಿಕಟ ಭದ್ರತಾ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಮತ್ತು ಭಾರತದ ಭದ್ರತಾ ಪರಿಸರದ ಮೇಲೆ ಬೀರಬಹುದಾದ ಸಂಭಾವ್ಯ ಪರಿಣಾಮಗಳ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಒದಗಿಸುತ್ತದೆ.

ನವದೆಹಲಿ ಮತ್ತು ತಾಷ್ಕೆಂಟ್ ಎರಡೂ ರಷ್ಯಾ ಹಾಗೂ ಚೀನಾದೊಂದಿಗೆ ಸಂಬಂಧವನ್ನು ಹೊಂದಿದ್ದು, ತಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವಲ್ಲಿ ಬಲವಾದ ಆಸಕ್ತಿಯನ್ನು ಹೊಂದಿವೆ. ಮಧ್ಯ ಏಷ್ಯಾವನ್ನು ಸುತ್ತುವರೆದಿರುವ ಭೌಗೋಳಿಕ ರಾಜಕೀಯ ಸ್ಪರ್ಧೆಯು ಉಜ್ಬೇಕಿಸ್ತಾನ್‌ನೊಂದಿಗೆ ಭಾರತದ ಆಳವಾದ ಸಂಬಂಧವನ್ನು ಕಾರ್ಯತಂತ್ರದ ದೃಷ್ಟಿಯಿಂದ ಹೆಚ್ಚು ಮೌಲ್ಯಯುತವಾಗಿಸುತ್ತದೆ.

ಈ ಸಂಬಂಧವು ಮಧ್ಯ ಏಷ್ಯಾದೊಂದಿಗೆ ಹೆಚ್ಚು ವಿಶ್ವಾಸಾರ್ಹ ಸಂಪರ್ಕಗಳನ್ನು ಸ್ಥಾಪಿಸುವ ಭಾರತದ ಪ್ರಯತ್ನಗಳಿಗೆ ಪೂರಕವಾಗಬಲ್ಲದು. ಜೊತೆಗೆ, ಪ್ರತಿಸ್ಪರ್ಧಿ ಪ್ರಾದೇಶಿಕ ಶಕ್ತಿಗಳ ನಿಯಂತ್ರಣದಲ್ಲಿರುವ ಅಥವಾ ಪ್ರಭಾವಕ್ಕೊಳಪಟ್ಟಿರುವ ಮಾರ್ಗಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಬಲ್ಲದು.

ರಕ್ಷಣಾ ಸಹಕಾರ: ರಕ್ಷಣಾ ರಾಜತಾಂತ್ರಿಕತೆಯು ಆರ್ಥಿಕ ಮತ್ತು ಸಂಪರ್ಕ ಸಂಬಂಧಿತ ರಾಜತಾಂತ್ರಿಕತೆಯನ್ನು ಬಲಪಡಿಸಬಲ್ಲದು. ನಿಕಟ ರಕ್ಷಣಾ ಸಹಕಾರವು ಒಂದು ಪ್ರಮುಖ ಆರ್ಥಿಕ ಆಯಾಮವನ್ನೂ ಹೊಂದಿದೆ.

ಭಾರತವು ತನ್ನ ರಕ್ಷಣಾ ಉತ್ಪನ್ನಗಳ ರಫ್ತನ್ನು ವಿಸ್ತರಿಸಲು ಹಾಗೂ ಮಿಲಿಟರಿ ಉಪಕರಣಗಳು, ವೇದಿಕೆಗಳು ಮತ್ತು ತಂತ್ರಜ್ಞಾನಗಳ ಪೂರೈಕೆದಾರನಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ತನ್ನದೇ ಆದ ರಕ್ಷಣಾ ಆಧುನೀಕರಣದ ಅಗತ್ಯಗಳನ್ನು ಹೊಂದಿರುವ ಉಜ್ಬೇಕಿಸ್ತಾನ್ ಸಂಭಾವ್ಯ ಮಾರುಕಟ್ಟೆಯಾಗುವುದಲ್ಲದೇ, ಕೈಗಾರಿಕಾ ಸಹಕಾರದ ಪಾಲುದಾರನಾಗಿಯೂ ಹೊರಹೊಮ್ಮಬಲ್ಲದು.

ರಕ್ಷಣಾ ಉದ್ಯಮಗಳ ನಡುವಿನ ಹಾಲಿ ಸಹಭಾಗಿತ್ವವು ಇದಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತದೆ. ಬೆಂಗಳೂರಿನಲ್ಲಿ ರಕ್ಷಣಾ ಸಚಿವಾಲಯವು ಆಯೋಜಿಸುವ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನವಾದ 'ಏರೋ ಇಂಡಿಯಾ 2025'ರಲ್ಲಿ ಉಜ್ಬೇಕಿಸ್ತಾನ್ ಭಾಗವಹಿಸಿರುವುದು, ಭಾರತದ ಬೆಳೆಯುತ್ತಿರುವ ರಕ್ಷಣಾ - ಕೈಗಾರಿಕಾ ಸಾಮರ್ಥ್ಯಗಳ ಬಗ್ಗೆ ಅದಕ್ಕಿರುವ ಆಸಕ್ತಿಯನ್ನು ಪ್ರದರ್ಶಿಸಿತು.

ಸೆಪ್ಟೆಂಬರ್ 1 ರಂದು ಕಿರ್ಗಿಸ್ತಾನದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಮುನ್ನ ಮೋದಿ ಅವರು ಉಜ್ಬೇಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಕೂಡ ಮಹತ್ವದ್ದಾಗಿದೆ. ಭಾರತ ಮತ್ತು ಉಜ್ಬೇಕಿಸ್ತಾನ್ ಎರಡೂ ಈ ಸಂಘಟನೆಯ ಸದಸ್ಯರಾಗಿರುವುದರಿಂದ, ಮಧ್ಯ ಏಷ್ಯಾದ ಭದ್ರತಾ ವಿಷಯಗಳು ವಿಶಾಲವಾದ ಬಹುಪಕ್ಷೀಯ ಚೌಕಟ್ಟಿನ ಭಾಗವಾಗಿವೆ.

ಭಯೋತ್ಪಾದನೆ, ಪ್ರಾದೇಶಿಕ ಭದ್ರತೆ ಮತ್ತು ಸಂಪರ್ಕ ವ್ಯವಸ್ಥೆಯಂತಹ ವಿಷಯಗಳ ಕುರಿತು ಮಧ್ಯ ಏಷ್ಯಾದ ರಾಷ್ಟ್ರಗಳು, ರಷ್ಯಾ ಮತ್ತು ಚೀನಾದೊಂದಿಗೆ ಏಕಕಾಲದಲ್ಲಿ ತೊಡಗಿಸಿಕೊಳ್ಳಲು ಈ ಶೃಂಗಸಭೆ ಭಾರತಕ್ಕೆ ವೇದಿಕೆ ಒದಗಿಸುತ್ತದೆ.

ಈಟಿವಿ ಭಾರತದ ಜೊತೆ ಮಾತನಾಡಿ ಉದಯಪುರ ಮೂಲದ ಉಸಾನಸ್ ಫೌಂಡೇಶನ್ ಥಿಂಕ್​ಟ್ಯಾಂಕ್​ ಸಂಶೋಧನಾ ಸಹಾಯಕಿಯಾದ ರುಚಿಕಾ ಶರ್ಮಾ, ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ರಕ್ಷಣಾ ಸಹಕಾರ ದ್ವಿಪಕ್ಷೀಯ ಸಂಬಂಧದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಭಾರತಕ್ಕೆ, ಉಜ್ಬೇಕಿಸ್ತಾನ್ ಮಧ್ಯ ಏಷ್ಯಾದತ್ತ ಪ್ರಮುಖ ಹೆಬ್ಬಾಗಿಲನ್ನು ಒದಗಿಸುತ್ತದೆ. ಪ್ರಾದೇಶಿಕ ಭದ್ರತೆಯ ವಿಷಯದಲ್ಲಿ, ವಿಶೇಷವಾಗಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಿಂದ ಉದ್ಭವಿಸುವ ಭದ್ರತಾ ಬೆದರಿಕೆಗಳನ್ನು ಎದುರಿಸುವಲ್ಲಿ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ.

ರಕ್ಷಣಾ ಕೈಗಾರಿಕಾ ಸಾಮರ್ಥ್ಯಗಳಿಂದ ಪ್ರಯೋಜನ ಪಡೆಯುವ ಅವಕಾಶವನ್ನು ಉಜ್ಬೇಕಿಸ್ತಾನಕ್ಕೆ ಒದಗಿಸಲಿದೆ. ಈ ಸಹಕಾರವು ಭಾರತವು ಮಧ್ಯ ಏಷ್ಯಾದಲ್ಲಿ ಕಾರ್ಯತಂತ್ರದ ವಿಶ್ವಾಸವನ್ನು ಬೆಳೆಸಿಕೊಳ್ಳಲು ಮತ್ತು ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಳ್ಳಲು ಒಂದು ಸಾಧನವಾಗಿ ಕಾರ್ಯನಿರ್ವಹಿಸಲಿದೆ.

ಇವುಗಳನ್ನೂ ಓದಿ: ನಕ್ಸಲ್​ ಆತಂಕ, ಕಡು ಬಡತನ ಮೆಟ್ಟಿನಿಂತು ಸಾಧನೆ: ಉಜ್ಬೇಕಿಸ್ತಾನದಲ್ಲಿ ಇಂಗ್ಲಿಷ್​ ಶಿಕ್ಷಕನಾದ ಬಿಹಾರದ ಯುವಕ

ಇದು ಅಪರೂಪದ ಖನಿಜಗಳ ರಾಜತಾಂತ್ರಿಕತೆ: ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಮುಖ್ಯ ಈ ಉಜ್ಬೇಕಿಸ್ತಾನ್!