ETV Bharat / international

ಈ ಮಾತುಕತೆಯಿಂದ ನಾವು ನಿಜವಾಗಿಯೂ ಸಂತಸಗೊಂಡಿಲ್ಲ: ಇರಾನ್ ಜೊತೆಗಿನ ಮಾತುಕತೆ ಬಗ್ಗೆ ಟ್ರಂಪ್​ ಅಸಮಾಧಾನ

ಅವರು ಮಾತುಕತೆ ನಡೆಸುತ್ತಿರುವ ವಿಧಾನದಿಂದ ನಾವು ರೋಮಾಂಚನಗೊಂಡಿಲ್ಲ. ಎಲ್ಲವೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ನೋಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ

"We're not exactly happy": Trump on nuclear talks with Iran
ಇರಾನ್ ಜೊತೆಗಿನ ಮಾತುಕತೆ ಬಗ್ಗೆ ಟ್ರಂಪ್​ ಅಸಮಾಧಾನ (ANI)
author img

By ANI

Published : February 28, 2026 at 7:00 AM IST

2 Min Read
Choose ETV Bharat

ವಾಷಿಂಗ್ಟನ್ ಡಿಸಿ, ಅಮೆರಿಕ: ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳನ್ನು ನಿರ್ವಹಿಸಿದ ರೀತಿಯಿಂದ ತಾವು ಸಂತಸಗೊಂಡಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಹೇಳಿದ್ದಾರೆ. ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಟೆಕ್ಸಾಸ್‌ಗೆ ಭೇಟಿ ನೀಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಾವು ಇರಾನ್​ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅವರು ಮಾತುಕತೆ ನಡೆಸುತ್ತಿರುವ ವಿಧಾನದಿಂದ ನಾವು ಸಂಪೂರ್ಣವಾಗಿ ಸಂತಸಗೊಂಡಿಲ್ಲ. ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ. ಅವರು ಮಾತುಕತೆ ನಡೆಸುತ್ತಿರುವ ವಿಧಾನದಿಂದ ನಾವು ರೋಮಾಂಚನಗೊಂಡಿಲ್ಲ. ಎಲ್ಲವೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ನೋಡುತ್ತೇವೆ ಎಂದು ಹೇಳಿದ್ದಾರೆ. ಇಂದು ನಾವು ಕೆಲವು ಹೆಚ್ಚುವರಿ ಮಾತುಕತೆಗಳನ್ನು ನಡೆಸುತ್ತೇವೆ ಎಂದು ಇದೇ ವೇಳೆ ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ.

ಮಿಲಟರಿ ಬಲ ಬಳಸದಿರಲು ಬಯಸುತ್ತಿದ್ದೇವೆ: ಇರಾನ್ ಮತ್ತು ಅಮೆರಿಕ ನಡುವಿನ ಮೂರನೇ ಸುತ್ತಿನ ಮಾತುಕತೆಗಳು ಗುರುವಾರ ಜಿನೀವಾದಲ್ಲಿ ನಡೆದವು ಮತ್ತು ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಇರಾನ್ ವಿರುದ್ಧ ಮಿಲಿಟರಿ ಬಲವನ್ನು ಬಳಸದಿರಲು ಅಮೆರಿಕ ಅಧ್ಯಕ್ಷರು ಬಯಸುವುದಾಗಿ ಒತ್ತಿ ಹೇಳಿದರು. ಆದರೆ, ಅದು ಅಗತ್ಯವಾಗಬಹುದಾದ ಸಂದರ್ಭಗಳಿವೆ ಎಂಬುದನ್ನೂ ಅವರು ಒಪ್ಪಿಕೊಂಡರು. ಉತ್ತಮ ನಂಬಿಕೆ ಮತ್ತು ಆತ್ಮಸಾಕ್ಷಿಯೊಂದಿಗೆ ಮಾತುಕತೆ ನಡೆಸಿದರೆ ಅದ್ಭುತವಾಗಿರುತ್ತದೆ. ಆದರೆ ಅವರು ಅಲ್ಲಿಗೆ ತಲುಪುತ್ತಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದರು.

ಅಮೆರಿಕದ ಮಿಲಿಟರಿ ಕ್ರಮದ ನಂತರ ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಸಾಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೂ ತಿಳಿದಿಲ್ಲ. ಇರಬಹುದು ಮತ್ತು ಇಲ್ಲದಿರಬಹುದು. ನಾವು ಅದನ್ನು ಇಲ್ಲದೇ ಮಾಡಲು ಸಾಧ್ಯವಾದರೆ ಒಳ್ಳೆಯದು, ಆದರೆ ಕೆಲವೊಮ್ಮೆ ನೀವು ಅದನ್ನು ಬಳಸಬೇಕಾಗುತ್ತದೆ. ನಮ್ಮಲ್ಲಿ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸೈನ್ಯವಿದೆ. ನಾನು ಅದನ್ನು ಬಳಸದಿರಲು ಇಷ್ಟಪಡುತ್ತೇನೆ ಎಂದು ಟ್ರಂಪ್​ ಉತ್ತರಿಸಿದರು.

ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದ ಇರಾನ್​ ವಿದೇಶಾಂಗ ಸಚಿವ: ಏತನ್ಮಧ್ಯೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಜಿನೀವಾದಲ್ಲಿ ಯುಎಸ್ ಜೊತೆ ನಡೆದ ಮೂರನೇ ಸುತ್ತಿನ ಮಾತುಕತೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದ್ದಾರೆ. ಟೆಹ್ರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ನಿರ್ಬಂಧಗಳ ಪರಿಹಾರದ ವಿಷಯಗಳ ಕುರಿತು ಎರಡೂ ಕಡೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ಮಾತುಕತೆ ನಡೆದಿದೆ.

ಇದಲ್ಲದೇ ಕ್ಯೂಬಾ ಸರ್ಕಾರವು ಗಂಭೀರ ಆರ್ಥಿಕ ತೊಂದರೆಯಲ್ಲಿದೆ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ನಡುವೆ ಚರ್ಚೆಯಲ್ಲಿದೆ ಎಂದು ಟ್ರಂಪ್ ಹೇಳಿದರು. ಕ್ಯೂಬಾ ಸರ್ಕಾರ ನಮ್ಮೊಂದಿಗೆ ಮಾತನಾಡುತ್ತಿದೆ. ಅವರು ದೊಡ್ಡ ತೊಂದರೆಯಲ್ಲಿದ್ದಾರೆ. ಅವರ ಬಳಿ ಹಣವಿಲ್ಲ. ಅವರ ಬಳಿ ಈಗ ಏನೂ ಇಲ್ಲ. ಆದರೆ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ. ನಾವು ಕ್ಯೂಬಾವನ್ನು ಸ್ನೇಹಪರವಾಗಿ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯಿದೆ ಟ್ರಂಪ್​ ಹೇಳಿದ್ದಾರೆ.
ಇದನ್ನೂ ಓದಿ:

ಡೊನಾಲ್ಡ್​ ಟ್ರಂಪ್​ಗೆ ಭಾರಿ ಹಿನ್ನಡೆ: ಸುಪ್ರೀಂಕೋರ್ಟ್​ ತೀರ್ಪಿನಂತೆ ಶೇ.10 ರಷ್ಟು ಟ್ಯಾರಿಫ್​ ಇಂದಿನಿಂದ ಜಾರಿ

ಇರಾನ್ ದಾಳಿಯ ಅಪಾಯಗಳ ಬಗ್ಗೆ ಅಮೆರಿಕದ ಉನ್ನತ ಅಧಿಕಾರಿ ಎಚ್ಚರಿಕೆ ವಿಚಾರ ನಿರಾಕರಿಸಿದ ಟ್ರಂಪ್​!