ETV Bharat / international

ಇರಾನ್​​ನಿಂದ​ ಡ್ರೋನ್ ದಾಳಿ: ರಾಸ್ ತನೂರಾ ತೈಲ ಸಂಸ್ಕರಣಾಗಾರ ಸ್ಥಗಿತಗೊಳಿಸಿದ ಸೌದಿಯ ಅರಾಮ್ಕೊ

ಸೌದಿಯ ಅರಾಮ್ಕೊ ಸಂಸ್ಥೆ ಇರಾನ್​ ನಡೆಸಿದ ಡ್ರೋನ್‌ ದಾಳಿ ಹಿನ್ನೆಲೆ ಸೋಮವಾರ ದಮ್ಮಾಮ್ ಬಳಿಯ ತನ್ನ ರಾಸ್ ತನುರಾ ತೈಲ ಸಂಸ್ಕರಣಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

SAUDI RAS TANURA REFINERY OIL
ಸಾಂದರ್ಭಿಕ ಚಿತ್ರ (AP)
author img

By ETV Bharat Karnataka Team

Published : March 2, 2026 at 4:50 PM IST

2 Min Read
Choose ETV Bharat

ದುಬೈ: ಇರಾನ್​ ನಡೆಸಿದ ಡ್ರೋನ್‌ ದಾಳಿ ನಂತರ ಸೌದಿಯ ಅರಾಮ್ಕೊ ಸಂಸ್ಥೆ ಸೋಮವಾರ ದಮ್ಮಾಮ್ ಬಳಿಯ ತನ್ನ ರಾಸ್ ತನುರಾ ತೈಲ ಸಂಸ್ಕರಣಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದು ಕಿಂಗ್ಡಮ್‌ನ ಅತಿದೊಡ್ಡ ತೈಲ ಸಂಸ್ಕರಣಾಗಾರವಾಗಿದ್ದು, ದಿನಕ್ಕೆ ಅರ್ಧ ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ದಾಳಿಯ ನಂತರ ದಟ್ಟವಾದ ಕಪ್ಪು ಹೊಗೆ ಆವರಿಸಿರುವುದನ್ನು ಆನ್‌ಲೈನ್ ವಿಡಿಯೋಗಳಲ್ಲಿ ಕಂಡುಬಂದಿದೆ. ಯಶಸ್ವಿಯಾಗಿ ತಡೆಹಿಡಿಯಲಾದ ಡ್ರೋನ್‌ಗಳು ಹಾನಿ ಉಂಟುಮಾಡುವ ಸಾಮರ್ಥ್ಯ ಹೊಂದಿವೆ. ಸೌದಿಯ ಸ್ಥಳೀಯ ಮಾಧ್ಯಮ, ಅಧಿಕೃತ ಮೂಲ ಎಂದು ಉಲ್ಲೇಖಿಸಿ ಈ ವರದಿ ಮಾಡಿದೆ. ದಾಳಿಯಲ್ಲಿ ಯಾವುದೇ ಸಾವು - ನೋವುಗಳು ಸಂಭವಿಸಿಲ್ಲ.

ಮುಂಜಾನೆ ಕುವೈತ್‌ನ ಅಹ್ಮದಿ ತೈಲ ಸಂಸ್ಕರಣಾಗಾರದ ಮೇಲೆ ಅವಶೇಷಗಳು ಬಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡರು ಎಂದು ಸರ್ಕಾರಿ ಸ್ವಾಮ್ಯದ ಕುನಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಡ್ರೋನ್‌ಗಳನ್ನು ಹೊಡೆದುರುಳಿಸಿದ ನಂತರ ಪ್ರಮುಖ ಪ್ರಾದೇಶಿಕ ತೈಲ ಮೂಲಸೌಕರ್ಯಗಳಿಗೆ ತನ್ನ ದಾಳಿಯನ್ನು ವಿಸ್ತರಿಸುವ ಇರಾನ್ ನಿರ್ಧಾರವು ಮಧ್ಯಪ್ರಾಚ್ಯವನ್ನು ಯುದ್ಧ ವಲಯಕ್ಕೆ ಸೇರಿಸುತ್ತದೆ. ಇದು ಪ್ರದೇಶದ ಆರ್ಥಿಕತೆಯ ಜೀವನಾಡಿಯನ್ನು ನೇರವಾಗಿ ಗುರಿಯಾಗಿರಿಸಿಕೊಂಡಿದೆ.

ಸೌದಿ ಅರೇಬಿಯಾದ ರಾಸ್ ತನುರಾ ಸಂಸ್ಕರಣಾಗಾರದ ಮೇಲಿನ ದಾಳಿಯು ಉದ್ವಿಗ್ನತೆಯನ್ನು ಸೂಚಿಸುತ್ತದೆ, ಗಲ್ಫ್ ಇಂಧನ ಮೂಲಸೌಕರ್ಯವು ಈಗ ಇರಾನ್‌ನ ಗುರಿಯಾಗಿದೆ ಎಂದು ವೆರಿಸ್ಕ್ ಮ್ಯಾಪಲ್‌ಕ್ರಾಫ್ಟ್‌ನ ವಿಶ್ಲೇಷಕ ಟೋರ್ಬ್‌ಜಾರ್ನ್ ಸೋಲ್ಟ್ವೆಡ್ಟ್ ತಿಳಿಸಿದ್ದಾರೆ.

ಟ್ಯಾಂಕರ್‌ಗಳು, ಪ್ರಾದೇಶಿಕ ಇಂಧನ ಮೂಲಸೌಕರ್ಯ, ವ್ಯಾಪಾರ ಮಾರ್ಗಗಳು ಮತ್ತು ಅಮೆರಿಕದ ಭದ್ರತಾ ಪಾಲುದಾರರನ್ನು ಅಡ್ಡದಾರಿಯಲ್ಲಿ ಇರಿಸುವ ಮೂಲಕ ಇರಾನ್ ಭಾರೀ ಆರ್ಥಿಕ ವೆಚ್ಚವನ್ನು ಹೇರಲು ಪ್ರಯತ್ನಿಸುತ್ತಿರುವುದರಿಂದ ದೀರ್ಘಾವಧಿ ಅನಿಶ್ಚಿತತೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಈಗಾಗಲೇ, ಇರಾನ್ ಪರ್ಷಿಯನ್ ಕೊಲ್ಲಿಯ ಕಿರಿದಾದ ಮುಖಭಾಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಬೆದರಿಕೆವೊಡ್ಡಿದೆ, ಇದು ಎಲ್ಲಾ ತೈಲ ವಹಿವಾಟಿನ ಐದನೇ ಒಂದು ಭಾಗದ ಜಲ ಮಾರ್ಗವಾಗಿದೆ. ಇಂಧನ ಮೂಲಸೌಕರ್ಯವನ್ನು ನಾಶ ಮಾಡುವ ಇರಾನ್‌ನ ಗುರಿ 'ಜಾಗತಿಕ ಪ್ರತಿಕ್ರಿಯೆಗೆ ಕಾರಣವಾಗಬಹುದು ಮತ್ತು ಅಮೆರಿಕದ ಅಧ್ಯಕ್ಷರ ಮೇಲೆ ವೆಚ್ಚವನ್ನು ಹೇರುವುದು. ಆದಾಗ್ಯೂ, ಇಲ್ಲಿಯವರೆಗೆ ಇರಾನ್ ಆಡಳಿತವು ಬಯಸುತ್ತಿರುವ ನಿರ್ಣಾಯಕ ಮೂಲಸೌಕರ್ಯದ ನಾಶ ಇದಲ್ಲ ಎಂದು ಬಹ್ರೇನ್‌ನ ಅಂತಾರಾಷ್ಟ್ರೀಯ ಕಾರ್ಯತಂತ್ರ ಅಧ್ಯಯನ ಸಂಸ್ಥೆಯ ರಕ್ಷಣಾ ವಿಶ್ಲೇಷಕ ಸಾಶ್ಚಾ ಬ್ರೂಚ್‌ಮನ್ ತಿಳಿಸಿದ್ದಾರೆ.

ಮತ್ತೊಂದೆಡೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಇಂದು ಗಗನಕ್ಕೇರಿದೆ. ಪ್ರತಿ ಬ್ಯಾರೆಲ್‌ ಕಚ್ಚಾ ತೈಲವು ಒಂದೇ ದಿನ 504 ರೂಪಾಯಿ ಹೆಚ್ಚಳವಾಗಿ 6,596 ರೂಪಾಯಿಗೆ ತಲುಪಿದೆ. ಸರಕು ಉತ್ಪನ್ನಗಳ ವಿನಿಮಯ ಕೇಂದ್ರವಾದ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್​) ಏಪ್ರಿಲ್​ ತಿಂಗಳಿಗೆ ಸಂಬಂಧಿಸಿದಂತೆ ನಡೆದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್​ ಕಚ್ಚಾ ತೈಲವು ಶೇ. 8.27ರಷ್ಟು (504 ರೂಪಾಯಿ) ಹೆಚ್ಚಳ ದಾಖಲಿಸಿದೆ.

ಇವುಗಳನ್ನೂ ಓದಿ: