ಇರಾನ್ ಮೇಲೆ ಸೇನಾ ಕಾರ್ಯಾಚರಣೆ ಆರಂಭಿಸಿದ ಅಮೆರಿಕ; ಶಸ್ತ್ರಾಸ್ತ್ರ ಕೆಳಗಿಡುವಂತೆ ಎಚ್ಚರಿಕೆ
ಇರಾನ್ ಆಡಳಿತದಿಂದ ಬೆದರಿಕೆಗಳನ್ನು ಹತ್ತಿಕ್ಕುವ ಮೂಲಕ ಅಮೆರಿಕದ ಜನರನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.


Published : February 28, 2026 at 3:55 PM IST
ನವದೆಹಲಿ: ಇರಾನ್ ಮೇಲೆ ಅಮೆರಿಕದ ಸೇನಾ ಕಾರ್ಯಾಚರಣೆ ಪ್ರಾರಂಭವಾಗಿದೆ. ಇರಾನ್ ಆಡಳಿತದ ಬೆದರಿಕೆ ನಿವಾರಿಸುವ ಮೂಲಕ ಅಮೆರಿಕವನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಸೇನಾ ಕಾರ್ಯಾಚರಣೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಅಮೆರಿಕನ್ನರು ಜೀವ ಕಳೆದುಕೊಳ್ಳಬಹುದು ಎಂದಿದ್ದಾರೆ.
ಈ ಕುರಿತು ಟ್ರೂತ್ನಲ್ಲಿ(ಟ್ರಂಪ್ ಎಕ್ಸ್ ಖಾತೆ) ಪೋಸ್ಟ್ ಮಾಡಿದ್ದು, ಇರಾನ್ ಮೇಲಿನ ದಾಳಿಯನ್ನು ಮಹೋನ್ನತ ಕಾರ್ಯ ಎಂದಿದ್ದಾರೆ. ಪರಮಾಣು ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ವ್ಯವಸ್ಥೆ ಅಮೆರಿಕ ಪಡೆಯಲು ಈ ಯುದ್ಧ ಅಗತ್ಯವಾಗಿದೆ. ಇದೇ ವೇಳೆ ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡಿ ಅಥವಾ ಸಾವನ್ನು ಎದುರಿಸಿ ಎಂದು ಕೂಡ ಇರಾನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನಿಮ್ಮ ಸರ್ಕಾರವನ್ನು ಪಡೆಯಿರಿ. ಅದು ನಿಮ್ಮದು, ಅದನ್ನು ಪಡೆಯಲು ಮುಂದಾಗಿ ಇರಾನ್ ಜನರಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ.
— Donald J. Trump (@realDonaldTrump) February 28, 2026
ಈ ದಾಳಿಯ ಉದ್ದೇಶ ಇರಾನ್ ಆಡಳಿತದಿಂದ ಬೆದರಿಕೆಗಳನ್ನು ಹತ್ತಿಕ್ಕುವ ಮೂಲಕ ಅಮೆರಿಕದ ಜನರನ್ನು ರಕ್ಷಿಸುವುದು ಮುಖ್ಯವಾಗಿದೆ. ಅವರದ್ದು ತುಂಬಾ ಕಠಿಣ, ಭಯಾನಕ ಜನರ ದುಷ್ಟ ಗುಂಪಾಗಿದೆ. ಅವರ ಚಟುವಟಿಕೆಗಳು ಯುನೈಟೆಡ್ ಸ್ಟೇಟ್ಸ್, ನಮ್ಮ ಪಡೆಗಳು, ವಿದೇಶದಲ್ಲಿರುವ ನಮ್ಮ ನೆಲೆಗಳು ಮತ್ತು ಪ್ರಪಂಚದಾದ್ಯಂತದ ನಮ್ಮ ಮಿತ್ರರಾಷ್ಟ್ರಗಳಿಗೆ ನೇರವಾಗಿ ಅಪಾಯವನ್ನುಂಟು ಮಾಡುತ್ತವೆ.
ಇರಾನ್ ಪರಮಾಣು ಅಸ್ತ್ರವನ್ನು ಹೊಂದದಂತೆ ನಾವು ಖಚಿತಗೊಳಿಸುತ್ತೇವೆ. ಇದು ತುಂಬಾ ಸರಳ ಸಂದೇಶ, ಈ ಆಡಳಿತವು ಶೀಘ್ರದಲ್ಲೇ ಬದಲಾಗುತ್ತದೆ. ಅಮೆರಿಕದ ಶಕ್ತಿಗೆ ಯಾರೂ ಸವಾಲು ಹಾಕಿಲ್ಲ ಎಂದರು.
ಇರಾನ್ ದಾಳಿಯ ನಂತರ ಅಮೆರಿಕದಲ್ಲಿ ಸಾವುನೋವುಗಳು ಸಂಭವಿಸಬಹುದು ಎಂದು ಒಪ್ಪಿಕೊಂಡ ಟ್ರಂಪ್, ಯುದ್ಧದಲ್ಲಿ ಅದು ಸಂಭಿಸುತ್ತದೆ. ನಮ್ಮೆಲ್ಲಾ ಹೀರೋಗಳನ್ನು ಅಪಾಯದಿಂದ ರಕ್ಷಿಸುವಂತೆ ನಾವು ಕೇಳಿಕೊಳ್ಳುತ್ತೇವೆ. ದೇವರ ಸಹಾಯದಿಂದ ಸಶಸ್ತ್ರ ಪಡೆಗಳ ಪುರುಷರು ಮತ್ತು ಮಹಿಳೆಯರು ಮೇಲುಗೈ ಸಾಧಿಸುತ್ತಾರೆ ಎಂದು ನಾವು ನಂಬುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
47 ವರ್ಷಗಳಿಂದ, ಇರಾನಿನ ಆಡಳಿತವು ಅಮೆರಿಕಕ್ಕೆ ಸಾವು ಎಂದು ಘೋಷಣೆ ಕೂಗಿದೆ. ಅಮೆರಿಕದ ಸೈನಿಕರು ಮತ್ತು ಅನೇಕ ದೇಶಗಳಲ್ಲಿನ ಮುಗ್ಧ ಜನರನ್ನು ಗುರಿಯಾಗಿಸಿಕೊಂಡು ರಕ್ತಪಾತ ಮತ್ತು ಸಾಮೂಹಿಕ ಹತ್ಯೆಯ ಅಂತ್ಯವಿಲ್ಲದ ಅಭಿಯಾನವನ್ನು ನಡೆಸಿದೆ.
ಇದೀಗ ಅಂತಿಮವಾಗಿ ಇರಾನ್ ಜನರು ಹೆಮ್ಮೆಪಡುವಂತೆ ಆಗಿದೆ. ಅವರ ಕೈಗೆ ಸ್ವಾತಂತ್ರ್ಯ ಸಿಗುತ್ತಿದೆ. ಮನೆಯಿಂದ ಹೊರಬಾರದಂತೆ ಆಶ್ರಯ ಪಡೆಯಿರಿ. ಹೊರಗಡೆ ಅಪಾಯಕಾರಿ ಪರಿಸ್ಥಿತಿ ಇದೆ. ಎಲ್ಲೆಡೆ ಬಾಂಬ್ಗಳು ಬೀಳುತ್ತಿವೆ. ನಾವು ಕಾರ್ಯಾಚರಣೆಯನ್ನು ಯಾವಾಗ ಮುಗಿಸುತ್ತೇವೋ ಆಗ ನಿಮ್ಮ ಸರ್ಕಾರವನ್ನು ಪಡೆಯಿರಿ ಎಂದರು.
ಭಯೋತ್ಪಾದನೆಯನ್ನು ಬೆಂಬಲಿಸುವಲ್ಲಿ ಜಗತ್ತಿನಲ್ಲಿ ನಂಬರ್ 1 ಇರಾನ್ ಆಗಿದೆ. ಇರಾನ್ ಬೆಂಬಲಿತ ಗುಂಪಾದ ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿ, 46 ಅಮೆರಿಕನ್ನರು ಸೇರಿದಂತೆ 1000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. 12 ಜನರನ್ನು ಒತ್ತೆಯಾಳುವಾಗಿಸಿಕೊಂಡರು. ಇದು ಕ್ರೂರತೆಯಾಗಿದ್ದು, ಜಗತ್ತು ಈ ರೀತಿ ಮುಂಚೆ ಕಂಡಿರಲಿಲ್ಲ ಎಂದಿತು.
ಇದನ್ನೂ ಓದಿ: ಈ ಮಾತುಕತೆಯಿಂದ ನಾವು ನಿಜವಾಗಿಯೂ ಸಂತಸಗೊಂಡಿಲ್ಲ: ಇರಾನ್ ಜೊತೆಗಿನ ಮಾತುಕತೆ ಬಗ್ಗೆ ಟ್ರಂಪ್ ಅಸಮಾಧಾನ
ಇರಾನ್ - ಅಮೆರಿಕ ಉದ್ವಿಗ್ನತೆ ನಡುವೆ ಟೆಹ್ರಾನ್ ಮೇಲೆ ಇಸ್ರೇಲ್ ದಾಳಿ: ತುರ್ತು ಪರಿಸ್ಥಿತಿ ಘೋಷಣೆ

