ಇರಾನ್‌ನ ಹಾರ್ಮೋಜ್‌ಗನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 40 ವಿದ್ಯಾರ್ಥಿಗಳು ಸಾವು: ರಾಜ್ಯ ಮಾಧ್ಯಮ
ಅಮೆರಿಕ ಮತ್ತು ಇಸ್ರೇಲ್ನಿಂದ ಇರಾನ್ ಮೇಲೆ ದಾಳಿ ಪ್ರತಿದಾಳಿ ನಡೆದಿವೆ. ಈ ವೇಳೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ 40 ವಿದ್ಯಾರ್ಥಿಗಳು ಸಾವನ್ನಪ್ಪಿರುವುದಾಗಿ ಅಲ್ಲಿನ ರಾಜ್ಯ ಮಾಧ್ಯಮ ವರದಿ ಮಾಡಿದೆ.

Published : February 28, 2026 at 11:04 PM IST
ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿದ ನಂತರ, ದಕ್ಷಿಣ ಇರಾನ್‌ನ ಬಾಲಕಿಯರ ಶಾಲೆಯ ಮೇಲೆ ಶನಿವಾರ ನಡೆದ ದಾಳಿಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ರಾಜ್ಯ ಮಾಧ್ಯಮ ಶನಿವಾರ ತಿಳಿಸಿದೆ ಎಂದು AFP ವರದಿ ಮಾಡಿದೆ.
"ಮಿನಾಬ್ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 40 ಕ್ಕೆ ತಲುಪಿದೆ, ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಇನ್ನೂ 45 ಜನರು ಗಾಯಗೊಂಡಿದ್ದಾರೆ" ಎಂದು ರಾಜ್ಯ ಮಾಧ್ಯಮ ಹೇಳಿದೆ.
ವಿಶ್ವಸಂಸ್ಥೆಯಿಂದ ತುರ್ತು ಕರೆ: ತೀವ್ರಗೊಂಡಿರುವ ಈ ಪರಿಸ್ಥಿತಿಯನ್ನು ತಕ್ಷಣಕ್ಕೆ ಕಡಿಮೆ ಮಾಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕರೆ ನೀಡಿದ್ದಾರೆ. ಯುಎಸ್-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ನಂತರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಕರೆ ನೀಡಿದ್ದಾರೆ.
ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಗುಟೆರೆಸ್, ಈ ದಾಳಿಯನ್ನು ಖಂಡಿಸಿದ್ದಾರೆ. ಜೊತೆಗೆ "ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಬಲಪ್ರಯೋಗ ಮತ್ತು ನಂತರ ಇರಾನ್ ಪ್ರತೀಕಾರವು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಹಾಳುಮಾಡುತ್ತದೆ" ಎಂದು ಹೇಳಿದ್ದಾರೆ.
ಇರಾನ್‌ನ ರಾಜಧಾಣಿ ಟೆಹ್ರಾನ್‌ನ ಮೇಲೂ ದಾಳಿಯಾಗಿದೆ. ಈ ಸಮಯದಲ್ಲಿ 86 ವರ್ಷದ ಖಮೇನಿ ಅವರು ಕಚೇರಿಯಲ್ಲಿದ್ದರೋ ಅಥವಾ ಅವರ ನಿವಾಸಗಳಲ್ಲಿದ್ದರೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ರಾಜಧಾನಿಯಾದ್ಯಂತ ಇತರ ಸ್ಫೋಟಗಳು ಕೇಳಿಬಂದ ಕಾರಣ ಟೆಹ್ರಾನ್‌ನ ಡೌನ್‌ಟೌನ್‌ನಲ್ಲಿರುವ ಖಮೇನಿಯವರ ಕಾಂಪೌಂಡ್‌ಗೆ ಹೋಗುವ ರಸ್ತೆಗಳನ್ನು ಅಧಿಕಾರಿಗಳು ಮುಚ್ಚಿದ್ದರು.
ದಾಳಿಗಳ ನಂತರ, ಇರಾನ್ ತನ್ನ ವಾಯುಪ್ರದೇಶವನ್ನು ಬಂದ್ ಮಾಡಿದೆ. ಜೊತೆಗೆ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
"ಜುರ್ಫ್ ಅಲ್-ನಾಸ್ರ್ ನೆಲೆಯ ಮೇಲೆ ಹೊಸ ದಾಳಿಗಳು ನಡೆದಿವೆ" ಎಂದು ಮಾಜಿ ಅರೆಸೈನಿಕ ಗುಂಪು ಹಶೆದ್ ಅಲ್-ಶಾಬಿಯ ಮೂಲವೊಂದು ತಿಳಿಸಿದೆ. ಇದು ಈಗ ನಿಯಮಿತ ಸೈನ್ಯದ ಹತೋಟಿಯಲ್ಲಿದೆ.
'ಟ್ರಂಪ್ ರಾತ್ರೋರಾತ್ರಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು ಮತ್ತು ನೆತನ್ಯಾಹು ಅವರೊಂದಿಗೆ ಮಾತನಾಡಿದರು' ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಹೇಳಿದ್ದಾರೆ.
'ಸರ್ವೋಚ್ಚ ನಾಯಕ ಖಮೇನಿ ಆರೋಗ್ಯದಿಂದ್ದಾರೆ': ಭಾರತದಲ್ಲಿರುವ ಇರಾನ್ ಪ್ರತಿನಿಧಿ : ಭಾರತದಲ್ಲಿರುವ ಇರಾನ್ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ, "ಸರ್ವೋಚ್ಚ ನಾಯಕ ಆರೋಗ್ಯವಾಗಿದ್ದಾರೆ. ಅಮೆರಿಕ ಅಥವಾ ಬೇರೆಯವರ ಬಗ್ಗೆ ಎಂದಿಗೂ ಭಯವಿಲ್ಲ... ಅವರು ತಮ್ಮ ಘನತೆ ಮತ್ತು ಬುದ್ಧಿವಂತಿಕೆಯಿಂದ ಮುಂದುವರಿಯುತ್ತಾರೆ. ಮತ್ತು ನಾವು ಈ ಯುದ್ಧವನ್ನು ಗೆಲ್ಲುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಅವರ ಸಾವಿನ ಊಹಾಪೋಹಗಳನ್ನು ತಳ್ಳಿಹಾಕಿದರು.
ಅವರು ಇರಾನ್ ಮೇಲಿನ ಯುಎಸ್-ಇಸ್ರೇಲ್ ದಾಳಿಯನ್ನು ಖಂಡಿಸಿದರು. "ನಾವು ರಾಜತಾಂತ್ರಿಕ ತೀರ್ಮಾನವನ್ನು ತಲುಪಲು ಮಾತುಕತೆ ಮತ್ತು ಚರ್ಚೆಯಲ್ಲಿದ್ದೇವೆ. ಆದರೆ ಇಸ್ರೇಲ್ ಮತ್ತೆ ನಮ್ಮ ಮೇಲೆ ದಾಳಿ ನಡೆಸಿದೆ ಎಂದಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿ ರಾಜಧಾನಿ ಟೆಹ್ರಾನ್ ಮತ್ತು ದೇಶದ ಇತರ ನಗರಗಳನ್ನು ಗರಿಯಾಗಿಸಿದ್ದರಿಂದ ಶನಿವಾರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ಇಸ್ರೇಲ್ ಮತ್ತು ಅಮೆರಿಕದ ನೆಲೆಗಳು ಇರುವ ಮಧ್ಯಪ್ರಾಚ್ಯದ ಹಲವಾರು ಇತರ ದೇಶಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಟೆಹ್ರಾನ್ ಪ್ರತೀಕಾರ ತೀರಿಸಿಕೊಂಡಿದೆ.
ಇದನ್ನೂ ಓದಿ: ಅಮೆರಿಕ, ಇಸ್ರೇಲ್ ದಾಳಿ ಬೆನ್ನಲ್ಲೇ ಮಧ್ಯಪ್ರಾಚ್ಯದಾದ್ಯಂತ ಇರಾನ್ ಪ್ರತೀಕಾರ; ಏರ್ ಇಂಡಿಯಾ, ಇಂಡಿಗೋ ವಿಮಾನ ರದ್ದು

