ETV Bharat / international

ಇರಾನ್​ ಮಾತುಕತೆ ಪ್ರಸ್ತಾಪ ತುಂಬಾ ತಡವಾಯ್ತು ಎಂದ ಡೊನಾಲ್ಡ್​ ಟ್ರಂಪ್​: ಅಮೆರಿಕ ಕಾಂಗ್ರೆಸ್​​​ಗೆ ಅಧ್ಯಕ್ಷರ ಪತ್ರ!

ಟ್ರಂಪ್ ಇರಾನ್ ವಿರುದ್ಧದ ಅಮೆರಿಕದ ದಾಳಿಗಳ ಕುರಿತು ಕಾಂಗ್ರೆಸ್‌ಗೆ ಅಧಿಕೃತ ಪತ್ರವನ್ನು ಕಳುಹಿಸಿದ್ದಾರೆ. ಈ ವೇಳೆ ಅವರು ಇರಾನ್​ ವಿರುದ್ಧದ ಮಿಲಿಟರಿ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

Trump says Too Late for Iran to talk as tensions escalate in Middle East region
ಇರಾನ್​ ಮಾತುಕತೆ ಪ್ರಸ್ತಾಪ ತುಂಬಾ ತಡವಾಯ್ತು ಎಂದ ಡೊನಾಲ್ಡ್​ ಟ್ರಂಪ್​ (ANI)
author img

By ANI

Published : March 3, 2026 at 7:52 PM IST

2 Min Read
Choose ETV Bharat

ವಾಷಿಂಗ್ಟನ್, ಅಮೆರಿಕ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇರಾನ್ ಜತೆ ಈಗ ಮಾತುಕತೆ ಪುನರಾರಂಭಿಸಲು ಆಗುವುದಿಲ್ಲ. ಮಾತುಕತೆ ಬಗ್ಗೆ ಬಂದ ಸಂದೇಶ ತುಂಬಾ ತಡವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ. ಈಗಾಗಲೇ ಇರಾನ್ ತನ್ನ ನಾಯಕತ್ವ ಕಳೆದುಕೊಂಡಿದ್ದು, ಅದರ ವಾಯು ಪಡೆ, ನೌಕಾಪಡೆಗಳು ನಾಶವಾಗಿವೆ ಎಂದು ಟ್ರಂಪ್​ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ರೂಥ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ಡೊನಾಲ್ಡ್​ ಟ್ರಂಪ್, ’’ಅವರ ವಾಯು ರಕ್ಷಣಾಪಡೆ, ನೌಕಾಪಡೆ ಮತ್ತು ನಾಯಕತ್ವ ಹೋಗಿದೆ. ಅವರು ಈಗ ಮಾತನಾಡಲು ಬಯಸುತ್ತಿದ್ದಾರೆ. ನಾನು ಅವರಿಗೆ ಹೇಳಲು ಬಯಸುತ್ತೇನೆ ಈಗಾಗಲೇ ತುಂಬಾ ತಡವಾಗಿದೆ‘‘ ಎಂದು ತಮ್ಮ ಪೋಸ್ಟ್​ ನಲ್ಲಿ ಬರೆದುಕೊಂಡಿದ್ದಾರೆ.

ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ANIಗೆ ನೀಡಿದ ಸಂದರ್ಶನದಲ್ಲಿ ಇರಾನ್ ಮಾತುಕತೆಗೆ ಸಿದ್ಧವಾಗಿದೆ. ಆದರೆ, ಅದು ಘನೆತೆಯಿಂದ ಕೂಡಿರಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಪ್ರತಿಕ್ರಿಯೆ ಹೊರ ಬಿದ್ದಿದೆ.

ಏತನ್ಮಧ್ಯೆ ಇರಾನ್‌ನಲ್ಲಿ ಹಿರಿಯ ಕಮಾಂಡರ್‌ನನ್ನು ಗುರಿಯಾಗಿಸಿ ದಾಳಿ ಮಾಡಲಾಗುವುದು ಎಂದು ಇಸ್ರೇಲ್ ಹೇಳಿಕೊಂಡಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಇತ್ತೀಚೆಗೆ ನಡೆಸಲಾದ ಕಾರ್ಯಾಚರಣೆಯ ಫಲಿತಾಂಶದ ಕುರಿತು ಇಸ್ರೇಲ್ ಸೇನೆಯು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ಅಮೆರಿಕ ಸಂಸತ್​ಗೆ ಅಧಿಕೃತ ಪತ್ರ ಬರೆದ ಟ್ರಂಪ್: ಇದಕ್ಕೂ ಮೊದಲು, ಟ್ರಂಪ್ ಇರಾನ್ ವಿರುದ್ಧದ ಅಮೆರಿಕದ ದಾಳಿಗಳ ಕುರಿತು ಕಾಂಗ್ರೆಸ್‌ಗೆ ಅಧಿಕೃತ ಪತ್ರವನ್ನು ಕಳುಹಿಸಿದ್ದಾರೆ. ಈ ವೇಳೆ ಅವರು ಇರಾನ್​ ವಿರುದ್ಧದ ಮಿಲಿಟರಿ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಕಾಂಗ್ರೆಸ್​ಗೆ ಬರೆದ ಪತ್ರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಮ್ಮ ಪತ್ರದಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು, ಹಾರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯದ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಮಿತ್ರರಾಷ್ಟ್ರಗಳು ಸೇರಿದಂತೆ ಪ್ರಾದೇಶಿಕ ಮಿತ್ರರಾಷ್ಟ್ರಗಳ ಸಾಮೂಹಿಕ ಸ್ವರಕ್ಷಣೆಗಾಗಿ ಫೆಬ್ರವರಿ 28 ರಂದು ತಮ್ಮ ನಿರ್ದೇಶನದ ಮೇರೆಗೆ ದಾಳಿಗಳನ್ನು ನಡೆಸಲಾಯಿತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ನನ್ನ ನಿರ್ದೇಶನದ ಮೇರೆಗೆ ಫೆಬ್ರವರಿ 28, 2026 ರಂದು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇರಾನ್‌ನೊಳಗಿನ ಹಲವಾರು ಗುರಿಗಳ ಮೇಲೆ ಅಮೆರಿಕ ಸಂಯುಕ್ತ ಸಂಸ್ಥಾನದ ಪಡೆಗಳು ನಿಖರವಾದ ದಾಳಿಗಳನ್ನು ನಡೆಸಿದವು. ಈ ಪ್ರದೇಶದಲ್ಲಿ ಅಮೆರಿಕದ ಪಡೆಗಳು ತನ್ನ ತಾಯ್ನಾಡನ್ನು ರಕ್ಷಿಸಲು, ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ವಾಣಿಜ್ಯದ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ದೇಶದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುನ್ನಡೆಸಲು ಮತ್ತು ಇಸ್ರೇಲ್ ಸೇರಿದಂತೆ ನಮ್ಮ ಪ್ರಾದೇಶಿಕ ಮಿತ್ರರಾಷ್ಟ್ರಗಳ ಸಾಮೂಹಿಕ ಸ್ವರಕ್ಷಣೆಗಾಗಿ ಈ ದಾಳಿಗಳನ್ನು ಕೈಗೊಳ್ಳಲಾಗಿದೆ ಎಂದು ಟ್ರಂಪ್ ಪತ್ರದಲ್ಲ ವಿವರಿಸಿದ್ದಾರೆ.

ಈ ದಾಳಿಗಳಲ್ಲಿ ಅಮೆರಿಕ ನೆಲದ ಯಾವುದೇ ಪಡೆಗಳನ್ನು ಬಳಸಲಾಗಿಲ್ಲ ಮತ್ತು ನಾಗರಿಕ ಸಾವುನೋವುಗಳನ್ನು ಕಡಿಮೆ ಮಾಡಲು ಭವಿಷ್ಯದ ದಾಳಿಗಳನ್ನು ತಡೆಯಲು ಮತ್ತು ಇರಾನ್‌ನ ದುರುದ್ದೇಶಪೂರಿತ ಚಟುವಟಿಕೆಗಳನ್ನು ತಟಸ್ಥಗೊಳಿಸಲು ಕಾರ್ಯಾಚರಣೆಯನ್ನು ಯೋಜಿಸಿ ಕಾರ್ಯಗತಗೊಳಿಸಲಾಗಿದೆ ಎಂದು ಅವರು ಪತ್ರದಲ್ಲಿ ಕಾಂಗ್ರೆಸ್​​​​​ ಗೆ ವಿವರಣೆ ನೀಡಿದ್ದಾರೆ.

ಇವುಗಳನ್ನು ಓದಿ:

ಎಲ್​ಎನ್​ಜಿ ಉತ್ಪಾದನೆ ಸ್ಥಗಿತಗೊಳಿಸಿದ ಕತಾರ್​ಎನರ್ಜಿ; ಟ್ಯಾಂಕರ್​ ಸಂಚಾರದಲ್ಲಿನ ಅಡಚಣೆಯಿಂದ ಏರಿಕೆ ಕಂಡ ಇಂಧನ ಬೆಲೆ

ವಾಯುದಾಳಿಯಲ್ಲಿ ಕನಿಷ್ಠ 13 ಇರಾನಿನ ಸೈನಿಕರು ಸಾವು: ಮೆಕ್ಕಾ - ಮದೀನಾದಿಂದ ಇರಾನ್​ ಯಾತ್ರಿಕರನ್ನು ಹಿಂದಿರುಗಿಸುವ ಪ್ರಕ್ರಿಯೆ ಆರಂಭ

ಇರಾನ್​ ನಟಾಂಜ್​ ಪರಮಾಣು ಸಂಸ್ಕರಣಾ ಘಟಕದ ಮೇಲೆ ಅಮೆರಿಕ​ - ಇಸ್ರೇಲ್​ ದಾಳಿ ಆರೋಪದ ನಡುವೆ ಉಪಗ್ರಹ ಚಿತ್ರ ಬಿಡುಗಡೆ