ETV Bharat / international

ಭಾರತ - ಪಾಕ್​ ಸಂಘರ್ಷದಲ್ಲಿ 7 ವಿಮಾನ ಪತನ; ಡೊನಾಲ್ಡ್​ ಟ್ರಂಪ್​

ಅಮೆರಿಕದ ಸುಂಕ ಬೆದರಿಕೆಯಿಂದ ಭಾರತ, ಪಾಕಿಸ್ತಾನ ಯುದ್ಧ ನಿಲ್ಲಿಸಿದವು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

trump-once-again-claims-to-resolve-india-pakistan-war-says-seven-planes-were-shot-down
ಡೊನಾಲ್ಡ್​ ಟ್ರಂಪ್​ (AP)
author img

By PTI

Published : October 20, 2025 at 11:58 AM IST

2 Min Read
Choose ETV Bharat

ವಾಷಿಂಗ್ಟನ್​: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ನಿಲ್ಲಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಜೊತೆಗೆ ಈ ಎರಡು ದೇಶಗಳ ಯುದ್ಧದಲ್ಲಿ 7 ಯುದ್ಧ ವಿಮಾನಗಳು ಪತನವಾಗಿವೆ ಎಂದು ಟ್ರಂಪ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ​ಸುಂಕದ ಬೆದರಿಕೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ಯುದ್ಧ ನಿಲ್ಲಿಸಿದೆ. ಸುಂಕಗಳ ಬೆದರಿಕೆ, ಎರಡು ಪರಮಾಣು ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನಗಳನ್ನು ನಡುವೆ ದಾಳಿ ಮಾಡದಂತೆ ತಡೆಯಲಾಯಿತು. ಈ ದಾಳಿ ಸಂದರ್ಭದಲ್ಲಿ ಏಳು ವಿಮಾನಗಳನ್ನು ಹೊಡೆದುರುಳಿಸಲಾಯಿತು. ಅವರು ಸಂಘರ್ಷ ಮುಂದುವರೆಸಿದ್ದರು. ಅದು ಪರಮಾಣು ಯುದ್ಧವಾಗಿರಬಹುದಾಗಿತ್ತು ಎಂದರು.

ಯುದ್ಧ ನಿಲ್ಲಿಸಿ ಲಕ್ಷಾಂತರ ಜೀವಗಳನ್ನು ಉಳಿಸಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ನನ್ನನ್ನು ಹೊಗಳಿದ್ದಾರೆ ಎಂದು ಟ್ರಂಪ್ ತಿಳಿಸಿದರು.

ಭಾರತ ಮತ್ತು ಪಾಕಿಸ್ತಾನದ ಮೇಲೆ ಶೇ 200ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಲಾಯಿತು. ಇದರಿಂದ ಅವರು, ಯುದ್ಧವನ್ನು ನಿಲ್ಲಿಸುವಂತೆ ಆಯಿತು. 24 ಗಂಟೆಯಲ್ಲಿ ನಾನು ಯುದ್ದ ನಿಲ್ಲಿಸಿದೆ ಎಂದರು.

ಮೇ 10 ರಂದು, ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ಸಾಗಿದ ದೀರ್ಘ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸುವಲ್ಲಿ ನಾನು ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲಿಸಿದ್ದು ನಾನು ಎಂದು ಟ್ರಂಪ್​ ಹಲವಾರು ಬಾರಿ ಹೇಳುತ್ತಲೇ ಇದ್ದಾರೆ.

ಭಾರತ-ಪಾಕ್​ ಸಂಘರ್ಷದಲ್ಲಿ ಅಮೆರಿಕ ಮಧ್ಯಸ್ಥಿಕೆಯ ಬಗ್ಗೆ ಟ್ರಂಪ್​ ಹೇಳಿಕೆಯನ್ನು ಈಗಾಗಲೇ ಅಲ್ಲಗಳೆದಿರುವ ಭಾರತ, ಈ ಕುರಿತು ಯುಎಸ್​ ಅಧ್ಯಕ್ಷರಿಗೂ ಸ್ಪಷ್ಟನೆ ನೀಡಿದೆ.

ಭಾರತ, ಪಾಕ್ ಎರಡೂ ದೇಶಗಳ ಮಿಲಿಟರಿ ನಾಯಕರ ನೇರ ಮಾತುಕತೆಯ ಹಿನ್ನೆಲೆಯಲ್ಲಿ ಕದನ ವಿರಾಮ ಏರ್ಪಟ್ಟಿದೆ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಆದರೂ ಕೂಡ, ಟ್ರಂಪ್ ಹಲವು ಕಾರ್ಯಕ್ರಮದಲ್ಲಿ ಇದೇ ವಿಚಾರವನ್ನು ಪುನರುಚ್ಚರಿಸುತ್ತಿದ್ದಾರೆ.​

ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸಂದರ್ಭದಲ್ಲಿ ಒಮ್ಮೆ ಐದು, ಮತ್ತೊಮ್ಮೆ ಆರು ಜೆಟ್​ ಹೊಡದುರುಳಿಸಲಾಗಿತ್ತು ಎಂದಿದ್ದ ಟ್ರಂಪ್​, ಇದೀಗ ಏಳು ವಿಮಾನಗಳು ಯುದ್ದ ಸಂದರ್ಭದಲ್ಲಿ ಹಾನಿಗೊಂಡಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಇದನ್ನು ಭಾರತ ತಿರಸ್ಕರಿಸಿತ್ತು.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಸಂಘರ್ಷದ ವೇಳೆ 5 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ: ಡೊನಾಲ್ಡ್ ಟ್ರಂಪ್

ಇದನ್ನೂ ಓದಿ: ಭಾರತ-ಪಾಕ್​ ಯುದ್ಧ ಮಧ್ಯಸ್ಥಿಕೆ ಬಗ್ಗೆ ಮತ್ತೆ ಟ್ರಂಪ್​ ಹೇಳಿಕೆ; 6 ಜೆಟ್​ ಪತನಗೊಂಡವು ಎಂದ ಅಮೆರಿಕ ಅಧ್ಯಕ್ಷ