ETV Bharat / international

ಇರಾನ್​-ಯುಎಸ್​ ಸಂಘರ್ಷ: ಕದನ ವಿರಾಮ ಅನಿರ್ಧಿಷ್ಟಾವಧಿಗೆ ವಿಸ್ತರಿಸಿದ ಡೊನಾಲ್ಡ್​ ಟ್ರಂಪ್​

ಇರಾನ್​ ಏಕೀಕೃತ ಪ್ರಸ್ತಾಪವನ್ನು ಮಂಡಿಸುವವರೆಗೆ ಅವರು ದಾಳಿಯನ್ನು ನಡೆಸುವುದಿಲ್ಲ. ಆದರೆ, ಇರಾನ್‌ನ ಬಂದರುಗಳ ಮೇಲಿನ ಆರ್ಥಿಕ ದಿಗ್ಬಂಧನವು ಜಾರಿಯಲ್ಲಿರುತ್ತದೆ ಎಂದು ಟ್ರಂಪ್​ ಸ್ಪಷ್ಟಪಡಿಸಿದ್ದಾರೆ.

Trump extends ceasefire with Iran pending unified peace proposal
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ (AP)
author img

By PTI

Published : April 22, 2026 at 10:14 AM IST

2 Min Read
Choose ETV Bharat

ವಾಷಿಂಗ್ಟನ್ (ಅಮೆರಿಕ): ಇರಾನ್​ ಜೊತೆಗಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ. ಎರಡು ದೇಶಗಳ ಯುದ್ಧ ಒಪ್ಪಂದದಲ್ಲಿ ಮಧ್ಯವರ್ತಿಯಾಗಿದ್ದ ಪಾಕಿಸ್ತಾನದ ಕೋರಿಕೆ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇರಾನ್​ ನಾಯಕರು ಏಕೀಕೃತ ಪ್ರಸ್ತಾವನೆಗೆ ಬರುವವರೆಗೆ ಈ ಕದನ ವಿರಾಮ ವಿಸ್ತರಣೆ ಆಗಲಿದೆ ಎಂದಿದ್ದಾರೆ.

ಎಪ್ರಿಲ್​ 8ರಿಂದ ಜಾರಿಗೆ ಬಂದಿದ್ದ ಇರಾನ್​ ಮತ್ತು ಯುಎಸ್​ ನಡುವಿನ ಎರಡು ವಾರದ ಕದನ ವಿರಾಮ ಅಂತ್ಯಗೊಳ್ಳುವ ಎರಡು ಗಂಟೆ ಮುನ್ನ ಈ ಘೋಷಣೆ ಹೊರಬಿದ್ದಿದೆ. ಇರಾನ್​ ಜೊತೆ ಶಾಂತಿ ಮಾತುಕತೆಗಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗದ ಇಸ್ಲಾಮಾಬಾದ್ ಭೇಟಿ ಸಾಧ್ಯವಾಗದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅಮೆರಿಕದ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಮಂಗಳವಾರ ಇಸ್ಲಾಮಾಬಾದ್‌ಗೆ ಶಾಂತಿ ಒಪ್ಪಂದದ ಮಾತುಕತೆಗೆ ತೆರಳಬೇಕಿತ್ತು. ಆದರೆ, ಪಾಕಿಸ್ತಾನ ಪ್ರವಾಸ ಇಂದು ಸಾಧ್ಯವಾಗುತ್ತಿಲ್ಲ ಎಂದು ಶ್ವೇತಭವನ ಪ್ರಕಟಣೆ ಹೊರಡಿಸಿತು.

ಇರಾನ್​ ಸರ್ಕಾರದಲ್ಲಿ ಶಾಂತಿ ಒಪ್ಪಂದ ಕುರಿತು ಗಂಭೀರ ಬಿರುಕು ಏರ್ಪಟ್ಟಿದೆ ಎಂಬ ಅಂಶ ಆಧರಿಸಿ ಮತ್ತು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರ ಕೋರಿಕೆಯ ಮೇರೆಗೆ ಇರಾನ್​ ಏಕೀಕೃತ ಪ್ರಸ್ತಾಪವನ್ನು ಮಂಡಿಸುವವರೆಗೆ ಅವರ ದಾಳಿಯನ್ನು ತಡೆಹಿಡಿಯಲು ನಮ್ಮನ್ನು ಕೇಳಲಾಗಿದೆ. ಅಮೆರಿಕ ಇರಾನ್​ ಮೇಲಿನ ದಾಳಿಯನ್ನು ತಡೆಯುತ್ತದೆ. ಆದರೆ, ಇರಾನ್‌ನ ಬಂದರುಗಳ ಮೇಲಿನ ಆರ್ಥಿಕ ದಿಗ್ಬಂಧನವು ಜಾರಿಯಲ್ಲಿರುತ್ತದೆ ಎಂದು ಟ್ರಂಪ್​ ಸ್ಪಷ್ಟಪಡಿಸಿದ್ದಾರೆ.

ಇರಾನ್​ ಮೇಲೆ ದಿಗ್ಬಂಧನವನ್ನು ಮುಂದುವರಿಸಲು ಮಿಲಿಟರಿಗೆ ನಿರ್ದೇಶನ ನೀಡಿದ್ದೇವೆ ಎಂದು ಕೂಡ ಟ್ರಂಪ್​ ತಿಳಿಸಿದ್ದಾರೆ.

ಅಮೆರಿಕದ ಈ ಕ್ರಮ ಟೀಕಿಸಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಇರಾನ್ ಬಂದರುಗಳ ಮೇಲೆ ದಿಗ್ಬಂಧನ ಮುಂದುವರೆಸಿದ್ದರಿಂದ ಕದನ ವಿರಾಮದ ಉಲ್ಲಂಘನೆಯಾಗಿದೆ. ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿ, ಅದರ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಳ್ಳುವುದು ಇನ್ನೂ ದೊಡ್ಡ ಉಲ್ಲಂಘನೆಯಾಗಿದೆ. ಈ ನಿರ್ಬಂಧಗಳನ್ನು ಹೇಗೆ ತಟಸ್ಥಗೊಳಿಸುವುದು, ತನ್ನ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಮತ್ತು ಬೆದರಿಸುವಿಕೆಯನ್ನು ಹೇಗೆ ವಿರೋಧಿಸುವುದು ಎಂಬುದು ಇರಾನ್‌ಗೆ ತಿಳಿದಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸಿದ್ದಕ್ಕಾಗಿ ಟ್ರಂಪ್ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಧನ್ಯವಾದ ಅರ್ಪಿಸಿದ್ದು, ಸಂಘರ್ಷವನ್ನು ಕೊನೆಗೊಳಿಸಲು ಎರಡೂ ಕಡೆಯವರಿಗೂ ಸಮಗ್ರ ಶಾಂತಿ ಒಪ್ಪಂದವನ್ನು ತೀರ್ಮಾನಿಸಲು ಸಾಧ್ಯವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇವುಗಳನ್ನೂ ಓದಿ: ಅಮೆರಿಕ ಜೊತೆ ಮಾತುಕತೆಗೆ ನಮ್ಮ ಯಾವುದೇ ನಿಯೋಗ ಇಸ್ಲಾಮಾಬಾದ್‌ಗೆ ಭೇಟಿ ನೀಡಿಲ್ಲ: ಇರಾನ್​ ಮಾಧ್ಯಮ

ಇರಾನ್​-ಅಮೆರಿಕ ನಡುವಿನ 'ಅಹಿತಕರ' ಒಪ್ಪಂದದ ಪ್ರಮುಖ ಅಂಶಗಳು