ಖಮೇನಿ ಅಂತ್ಯಕ್ರಿಯೆಗೆ ಇರಾನ್ಗೆ ವಾರದ ರಜೆ ನೀಡಿದ್ದೇವೆ; ಡೊನಾಲ್ಡ್ ಟ್ರಂಪ್
ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿರುವ ಹೊತ್ತಿನಲ್ಲಿ ಟ್ರಂಪ್ ಈ ಹೇಳಿಕೆಗಳನ್ನು ನಿಡಿದ್ದಾರೆ.


By ANI
Published : July 4, 2026 at 1:01 PM IST
ವಾಷಿಂಗ್ಟನ್ (ಅಮೆರಿಕ): ಇರಾನ್ ಸಂತಾಪದಲ್ಲಿರುವ ಹೊತ್ತಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚೋದನಾಕಾರಿ ಟೀಕೆಗಳನ್ನು ನಡೆಸಿದ್ದಾರೆ. ಹತ್ಯೆಗೀಡಾದ ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗಾಗಿ ಇರಾನ್ಗೆ ವಾರದ ರಜೆ ನೀಡಿರುವುದಾಗಿ ಹೇಳಿದ್ದಾರೆ.
ಮೌಂಟ್ ರಶ್ಮೋರ್‌ನಲ್ಲಿ ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಕುರಿತು ಮಾತನಾಡಿದ್ದು, ಅಮೆರಿಕವ ಇರಾನಿನ ನಾಯಕತ್ವದ ಚೈತನ್ಯವನ್ನು ಮುರಿದಿದೆ. ನಾವು ಒಳ್ಳೆಯ ಜನರು ಮಾನವೀಯ ಕಾರಣಗಳಿಗಾಗಿ ಅಮೆರಿಕವು ಯುದ್ಧವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದರು.
ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿರುವ ಹೊತ್ತಿನಲ್ಲಿ ಟ್ರಂಪ್ ಈ ಹೇಳಿಕೆಗಳನ್ನು ನಿಡಿದ್ದಾರೆ.
ಇರಾನ್ಗೆ ನರಕದ ಬಾಗಿಲು ತಟ್ಟಿಸಿದ್ದೇವೆ. ಅವರು ಒಪ್ಪಂದಕ್ಕಾಗಿ ಕಾದು ಕುಳಿತಿದ್ದಾರೆ. ನಾವು ಒಳ್ಳೆಯ ಜನರು ಅಂತ್ಯಕ್ರಿಯೆಗಾಗಿ ನಾವು ಅವರಿಗೆ ವಾರದ ರಜೆ ನೀಡಿದ್ದೇವೆ ಎಂದ ಟ್ರಂಪ್, ವೆನಿಜುವೆಲಾದಲ್ಲಿ ನಾವು ಯಶಸ್ವಿ ಕಾರ್ಯಾಚರಣೆ ನಡೆಸಿದೆವು. ತಮ್ಮ ಆಡಳಿತದ ತ್ವರಿತ ಕ್ರಮಗಳು ಲ್ಯಾಟಿನ್ ಅಮೆರಿಕದ ಆ ದೇಶದಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸಲು ಕಾರಣವಾದವು. ನಾವು ವೆನಿಜುವೆಲಾವನ್ನು ಒಂದು ದಿನದಲ್ಲಿ ಸೋಲಿಸಿದೆವು ಎನ್ನುವ ಮೂಲಕ ಅಮೆರಿಕ ಬಲವಾದ ಮತ್ತು ಶಕ್ತಿಶಾಲಿ ಸೈನ್ಯ ಸೃಷ್ಟಿಸಿದೆ ಎಂದು ಹೇಳಿದರು.
ನಾವು ಅತಿದೊಡ್ಡ ಮತ್ತು ಅತ್ಯಂತ ಕ್ರಿಯಾತ್ಮಕ ಆರ್ಥಿಕತೆಯನ್ನು ನಿರ್ಮಿಸಿದ್ದೇವೆ. ನಮ್ಮ ದೇಶವು ಇಂದು ಹಿಂದೆಂದಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿಂದಿನ ಆಡಳಿತದ ಈ ರೀತಿ ಎಂದಿಗೂ ಮಾಡಿಲ್ಲ. ಕಳೆದ ವಾರದ ವೇಳೆಗೆ ಪ್ರಪಂಚದಾದ್ಯಂತದಿಂದ 19.2 ಟ್ರಿಲಿಯನ್ ಡಾಲರ್ ಅಮೆರಿಕಕ್ಕೆ ಹರಿದು ಬಂದಿದೆ. ದಾಖಲೆ ಹೂಡಿಕೆ ಮಾಡುತ್ತಿದ್ದೇವೆ. ಕಳೆದ ಆಡಳಿತ ಮೂರ್ನಾಲ್ಕು ವರ್ಷಕ್ಕೆ ಇಷ್ಟು ನಡೆಸಿತ್ತು. ಆದರೆ, ನಾವು 12 ತಿಂಗಳಲ್ಲೇ ಈ ಆದಾಯ ತಂದಿದ್ದೇವೆ ಎಂದರು.
ಸುಂಕಗಳು ಮತ್ತು ಅನುಕೂಲಕರ ವ್ಯಾಪಾರ ವಾತಾವರಣವು ಉತ್ಪಾದನಾ ಕ್ಷೇತ್ರದಲ್ಲಿ ಭಾರಿ ಏಳಿಗೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಹೊಸ ಘಟಕಗಳು ಮತ್ತು ಕಾರ್ಖಾನೆಗಳು ಹಿಂದೆಂದೂ ಕಾಣದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದು, ಸದ್ಯ ದೇಶವು ಜಗತ್ತಿನಲ್ಲೇ ಅತ್ಯಂತ ಆಕರ್ಷಕ ತಾಣವಾಗಿದೆ ಎಂದು ಟ್ರಂಪ್ ತಿಳಿಸಿದರು.
ಇದೀಗ ಅಮೆರಿಕದಾದ್ಯಂತ ಕಾರ್ಖಾನೆಗಳು ಮತ್ತು ಉತ್ಪಾದನಾ ಘಟಕಗಳು ಹಿಂದೆಂದೂ ಕಾಣದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿವೆ. ನಾವು ದಾಖಲೆಗಳನ್ನು ದ್ವಿಗುಣ, ತ್ರಿಗುಣ ಮತ್ತು ಚತುರ್ಗುಣ ಪ್ರಮಾಣದಲ್ಲಿ ಮುರಿಯುತ್ತಿದ್ದೇವೆ. ನಾವು ಅತ್ಯಂತ ಬಲಿಷ್ಠ ಮತ್ತು ಪ್ರಬಲವಾದ ಸೇನೆಯನ್ನು ನಿರ್ಮಿಸಿದ್ದೇವೆ. ನಾವು ಎರಡು ವಿಶ್ವಯುದ್ಧಗಳು ಹಾಗೂ ಶೀತಲ ಸಮರದಲ್ಲಿ ಜಯ ಗಳಿಸಿದ್ದೇವೆ. ಅಮೆರಿಕದ ಶತ್ರುಗಳನ್ನು ಇತಿಹಾಸದ ಪುಟದಿಂದ ಕಣ್ಮರೆಯಾಗುವಂತೆ ಮಾಡಿದ್ದೇವೆ ಎಂದರು.
ಇವುಗಳನ್ನೂ ಓದಿ:
ಇರಾನ್ ನಾಯಕ ಖಮೇನಿ ಅಂತ್ಯಕ್ರಿಯೆ ಆರಂಭ: ಹತ್ಯೆಯಾದ ಸ್ಥಳಕ್ಕೆ ಶವಪೆಟ್ಟಿಗೆ ರವಾನೆ
ಅಮೆರಿಕದಲ್ಲಿ ಬಿಸಿಗಾಳಿಯ ಅಬ್ಬರ: 250ನೇ ಸ್ವಾತಂತ್ರ್ಯ ದಿನಾಚರಣೆ ವಿಳಂಬ

