ಇರಾನ್-ಅಮೆರಿಕ ನಡುವಿನ 'ಅಹಿತಕರ' ಒಪ್ಪಂದದ ಪ್ರಮುಖ ಅಂಶಗಳು
ಇರಾನ್ ಮತ್ತು ಅಮೆರಿಕ ನಡುವಿನ ಎರಡು ವಾರದ ಕದನ ವಿರಾಮ ಅಂತ್ಯದತ್ತ ಸಾಗಿದರೂ ಎರಡೂ ದೇಶಗಳ ನಡುವಿನ ಸಂಘರ್ಷ ನಿಲ್ಲುವ ಸೂಚನೆ ಕಾಣುತ್ತಿಲ್ಲ.


By Vivek Mishra
Published : April 21, 2026 at 7:22 PM IST
ಮಧ್ಯ ಪ್ರಾಚ್ಯ ಯುದ್ದ ಕೊನೆಗೊಳಿಸುವ ಕದನ ವಿರಾಮ ಒಪ್ಪಂದ ಇದೀಗ ಮಹತ್ವದ ಹಂತ ತಲುಪಿದೆ. ಯುದ್ಧ ಅಂತ್ಯಕ್ಕೆ ಬೇಕಾಗಿರುವ ತರ್ಕಬದ್ದಗೊಳಿಸುವಿಕೆಯ ಪ್ರಕ್ರಿಯೆ ನಡೆಯುತ್ತಿದೆ. ಇರಾನ್ಗೆ ಏನು ಬೇಕು, ವಾಷಿಂಗ್ಟನ್ಗೆ ಏನು ಬೇಕೆಂಬುದು ಬಯಲಾಗುತ್ತಿದೆ. ಅವುಗಳ ನಡುವಿನ ಅಂತರವೂ ಬಹಿರಂಗವಾಗುತ್ತಿದೆ.
ಇರಾನ್ ದೀರ್ಘಕಾಲದ ದುರ್ಬಲ ಕದನ ವಿರಾಮದ ಹೊರತಾಗಿ ದೀರ್ಘಕಾಲದ ಯುದ್ದ ವಿರಾಮ ಹಾಡಲು ಬಯಸುತ್ತಿದೆ. ಆದರೂ ಕದನ ವಿರಾಮವನ್ನು ಇಷ್ಟವಿಲ್ಲದೆ ಸ್ವೀಕರಿಸಿದೆ. ಶಾಂತಿಗಾಗಿ ಕೊನೆಯ ಅವಕಾಶವನ್ನು ವ್ಯರ್ಥ ಮಾಡಿದ್ದೇ ಆದಲ್ಲಿ ಆಗುವ ಅಪಾಯವನ್ನು ಅದು ಗುರುತಿಸಿದೆ.
ಇದೀಗ ಇಸ್ಲಾಮಿಕ್ ಗಣರಾಜ್ಯ ಮಿಲಿಟರಿ, ಅದರ ಪ್ರಾಕ್ಸಿಗಳು ದುರ್ಬಲಗೊಂಡಿದ್ದಾರೆ. ಆರ್ಥಿಕತೆ ಜರ್ಜರಿತವಾಗಿದೆ. ಉಳಿದ ಬಲದಿಂದ ಮಾತುಕತೆ ನಡೆಸುವ ದಾರಿ ಕಿರಿದಾಗಿರುವುದು ಇರಾನ್ಗೂ ತಿಳಿದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿಕ್ಕ ಅವಕಾಶವನ್ನು ಬಳಸಿ, ಯುದ್ದದಿಂದ ಹೊರ ನಡೆಯುವ ದಾರಿ ಹುಡುಕುತ್ತಿರುವುದು ರಹಸ್ಯವಾಗುಳಿದಿಲ್ಲ. ಹಾರ್ಮುಜ್ ಜಲಸಂಧಿಯನ್ನು ಇರಾನ್ ಜಲಸಂಧಿ ಎಂದು ಘೋಷಿಸಿದ್ದು, ಇರಾನ್ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಿದೆ. ಇದರ ಬೆನ್ನಲ್ಲೇ ಇರಾನ್ ಹಾರ್ಮುಜ್ ಜಲಸಂಧಿ ಮುಕ್ತವಾಗಿದೆ ಎಂದೂ ಘೋಷಿಸಿದೆ. ಇದರಿಂದ ಎರಡೂ ಕಡೆಯವರು ಯುದ್ದದಿಂದ ಹಿಂದೆ ಸರಿಯಲು ಸಿದ್ಧರಾಗಿದ್ದಾರೆ ಎಂಬುದು ತಿಳಿಯುತ್ತಿದೆ. ಕುಸಿಯುತ್ತಿರುವ ಕಚ್ಚಾ ತೈಲ ಬೆಲೆಗಳು ಮತ್ತು ಏಷ್ಯದಾದ್ಯಂತ ತ್ವರಿತ ಮಾರುಕಟ್ಟೆ ಚೇತರಿಕೆ ಇತರೆ ದೇಶಗಳು ಏನನ್ನು ನಿರೀಕ್ಷಿಸುತ್ತಿದ್ದವು ಎಂಬುದು ದೃಢಪಡಿಸಿವೆ.
ಇರಾನ್- ಅಮೆರಿಕ ಕದನ ವಿರಾಮವು ದುರ್ಬಲ ಅಡಿಪಾಯಗಳ ಮೇಲೆ ನಿಂತಿದೆ. ಟ್ರಂಪ್ ಮಧ್ಯಸ್ಥಿಕೆಯಲ್ಲಿ ಇಸ್ರೇಲಿ ಪಡೆಗಳು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ದಾಳಿ ನಡೆಯಿಸಿರುವುದು ನಿರಾಶಾದಾಯಕವಾಗಿದೆ. ಇಡೀ ಪ್ರದೇಶವನ್ನು ವ್ಯಾಪಕ ಸಂಘರ್ಷದ ಕೇಂದ್ರ ಬಿಂದುವಾಗಿ ಮಾಡುತ್ತಿದೆ. ಲೆಬನಾನ್ ಮೇಲೆ ದಾಳಿ ನಿಲ್ಲಿಸಲು ಇಸ್ರೇಲ್ಗೆ ಇಷ್ಟವಿಲ್ಲ. ಈ ಪ್ರದೇಶದಾದ್ಯಂತ ಇರಾನ್‌ನ ಪ್ರಾಕ್ಸಿಗಳ ಜಾಲವನ್ನು ವ್ಯವಸ್ಥಿತವಾಗಿ ಕೆಡವಲು ಇದು ಸದವಕಾಶವೆಂದು ಇಸ್ರೇಲ್ ಪರಿಗಣಿಸಿದೆ.
ಸಂಘರ್ಷದ ವಾಸ್ತವ ಸ್ಥಿತಿಯ ಬಗ್ಗೆ ಗೊಂದಲ ಇನ್ನೂ ಗಣನೀಯ ಪ್ರಮಾಣದಲ್ಲಿ ಉಳಿದಿದೆ. ಕದನ ವಿರಾಮದ ಮೂಲಕ ಎರಡೂ ಕಡೆಯವರು ತಮ್ಮನ್ನು ತಾವು ಅಂಚಿನಲ್ಲಿ ಇರಿಸಿಕೊಂಡಿದ್ದು, ಮತ್ತೆ ಯುದ್ಧ ಪ್ರಾರಂಭವಾಗುವ ಸಾಧ್ಯತೆ ಕಡಿಮೆ ಏನಿಲ್ಲ. ಇರಾನ್- ಅಮೆರಿಕ ನಡುವಿನ ಯುದ್ದಕ್ಕೆ ಏಪ್ರಿಲ್ 8ರಂದು ಕದನ ವಿರಾಮ ಘೋಷಣೆಯಾಗಿದೆ.
ಅಮೆರಿಕ ಸಂಘರ್ಷದಲ್ಲಿ ಗಮನಾರ್ಹವಾಗಿ ಮಂಕಾಗಿದೆ. ನಾಟೋ ಮಿತ್ರರಾಷ್ಟ್ರಗಳು ವಿಶೇಷವಾಗಿ ಟ್ರಂಪ್ ನಾಯಕತ್ವದಲ್ಲಿ, ಜಲಸಂಧಿಯನ್ನು ಮತ್ತೆ ಮುಕ್ತವಾಗಿಸಲು ಅಮೆರಿಕಕ್ಕೆ ಬೆಂಬಲ ಸೂಚಿಸಲಿಲ್ಲ. ಇದರಿಂದ ಟ್ರಂಪ್ ಎಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಉಳಿಸಿಕೊಂಡಿರುವ ಮೈತ್ರಿಕೂಟವನ್ನು ಪದೇ ಪದೇ ಕಾಗದದ ಹುಲಿ ಎಂದು ಹಣೆಪಟ್ಟಿ ಕಟ್ಟುವ ಮೂಲಕ ಅದರ ಸಾಮರ್ಥ್ಯವನ್ನು ಒತ್ತಡಕ್ಕೆ ಒಳಪಡಿಸಿದರು. ಪೋಪ್ ಫ್ರಾನ್ಸಿಸ್ ಮೇಲಿನ ಟ್ರಂಪ್ ಹೇಳಿಕೆಗಳು ಇಟಲಿಯ ಜಾರ್ಜಿಯಾ ಮೆಲೋನಿ ಕುರಿತು ಟೀಕೆಗಳು ಟ್ರಂಪ್ ಅವರನ್ನು ಟೀಕೆಗಳಿಗೆ ಗುರಿಯಾಗುವಂತೆ ಮಾಡಿದೆ. ಪರಿಣಾಮ ಅಟ್ಲಾಂಟಿಕ್ ಸಾಗರ ಸಂಬಂಧ ಹೆಚ್ಚು ಅನಿಶ್ಚಿತವಾಗಿ ಕಾಣುತ್ತಿದೆ.
ಭಾರತಕ್ಕೆ ಸಂಬಂಧಿಸಿದಂತೆ ಈ ಸವಾಲುಗಳು ತಕ್ಷಣದ ಮತ್ತು ಬಹುಹಂತದವುಗಳಾಗಿವೆ. ಇಂಧನ ಭದ್ರತೆ ಹೆಚ್ಚಿನ ಕಾಳಜಿಯ ಅಂಶವಾಗಿದೆ. ಈ ಸಂಘರ್ಷ ಭಾರತದ ಕಡಲ ಮತ್ತು ವಾಣಿಜ್ಯ ಹಿತಾಸಕ್ತಿಗಳ ಮೇಲೆ ಅಹಿತಕರ ವಾತಾವರಣ ಮೂಡಿಸಿದೆ. ಹಾರ್ಮುಜ್ ಜಲಮಾರ್ಗ ಮುಚ್ಚುವಿಕೆಯ ಯಾವುದೇ ಮರು ಹೇರಿಕೆಯು ಗಲ್ಫ್ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಆರ್ಥಿಕತೆಯ ಮೇಲೆ ಆಘಾತ ಮೂಡಿಸಿದೆ. ಆದರೆ ವಿಶಾಲವಾದ ಕಾರ್ಯತಂತ್ರದ ಸವಾಲು ಬಹುಶಃ ಹೆಚ್ಚು ಪರಿಣಾಮಕಾರಿಯಾಗಿದೆ. ಅಮೆರಿಕದೊಂದಿಗೆ ತನ್ನ ತಾಂತ್ರಿಕ ಮತ್ತು ರಕ್ಷಣಾ ಪಾಲುದಾರಿಕೆಯನ್ನು ಮುಂದುವರಿಸುವುದು, ಟ್ರಂಪ್ ಆಡಳಿತದ ಅನಿರೀಕ್ಷಿತತೆಯ ನಿರ್ವಹಣೆ, ಯುಎಸ್-ಪಾಕಿಸ್ತಾನದ ಹೊಂದಾಣಿಕೆ, ಮುಂದಿನ ತಿಂಗಳು ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆಗಳ ಪರಿಣಾಮಗಳಿಗೆ ಸಿದ್ಧತೆಗಳಿಂದ ನವದೆಹಲಿ ವಾಷಿಂಗ್ಟನ್‌ನೊಂದಿಗಿನ ತನ್ನ ಸಂಬಂಧವನ್ನು ಮೌಲ್ಯಮಾಪನ ನಡೆಸಬೇಕಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಇರಾನ್‌ನೊಂದಿಗೆ ಪರಿಣಾಮಕಾರಿ ಸಂವಹನ ಕಾಯ್ದುಕೊಳ್ಳಲು ಭಾರತಕ್ಕೆ ಸಾಧ್ಯವಾಗಿದೆ. ಇದು ಅಂತಾರಾಷ್ಟ್ರೀಯ ಸಂಬಂಧಗಳ ದೃಷ್ಟಿಕೋನದಿಂದ ಮತ್ತು ಹೆಚ್ಚು ನಿರ್ಣಾಯಕವಾಗಿದೆ. ಸ್ವದೇಶದಲ್ಲಿ ಇಂಧನ ಭದ್ರತಾ ದೃಷ್ಟಿಕೋನದಿಂದ ಮುಖ್ಯವಾಗಿದೆ. ಇರಾನ್ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದ್ದರೂ, ಯಾವುದೇ ರೀತಿಯಲ್ಲಿ ಸ್ಪಷ್ಟ ನಿಲುವುಗಳನ್ನು ತೆಗೆದುಕೊಳ್ಳದೆ, ಭಾರತವು ಇರಾನ್ ಜೊತೆ ಸಮತೋಲಿತ ಸಂಬಂಧ ಉಳಿಸಿಕೊಳ್ಳುವ ಸಾಮರ್ಥ್ಯವು, ಹಿಂದೆಂದೂ ಪರೀಕ್ಷಿಸಲ್ಪಟ್ಟಿರದ ಒಂದು ರೀತಿಯ ಕಾರ್ಯತಂತ್ರದ ಸಮತೋಲನ ಪ್ರತಿನಿಧಿಸಿದೆ.
ಇದನ್ನೂ ಓದಿ: ಅಮೆರಿಕ ಜೊತೆ ಮಾತುಕತೆಗೆ ನಮ್ಮ ಯಾವುದೇ ನಿಯೋಗ ಇಸ್ಲಾಮಾಬಾದ್‌ಗೆ ಭೇಟಿ ನೀಡಿಲ್ಲ: ಇರಾನ್ ಮಾಧ್ಯಮ

