ETV Bharat / international

ಇಂದು ಸಂಜೆ ನಿಗದಿಯಾಗಿದ್ದ ಖಮೇನಿ ಅಂತ್ಯಕ್ರಿಯೆ ಮುಂದೂಡಿಕೆ; ಅಮೆರಿಕದೊಂದಿಗೆ ಮಾತುಕತೆ ಇಲ್ಲ, ಕೇವಲ ಯುದ್ಧವಷ್ಟೇ ಎಂದ ಇರಾನ್​

ಅಮೆರಿಕ-ಇಸ್ರೇಲ್​ ದಾಳಿಯಲ್ಲಿ ಹತ್ಯೆಗೀಡಾಗಿರುವ 86ವರ್ಷದ ಖಮೇನಿಯ ಅಂತ್ಯಕ್ರಿಯೆ ದಿಢೀರ್​ ಮುಂದೂಡಿಕೆಯಾಗಿದೆ.

STATE FUNERAL FOR AYATOLLAH KHAMENEI TO BEGIN WEDNESDAY EVENING
ಅಯತೊಲ್ಲಾ ಅಲಿ ಖಮೇನಿ (AP)
author img

By ANI

Published : March 4, 2026 at 4:51 PM IST

|

Updated : March 4, 2026 at 5:34 PM IST

2 Min Read
Choose ETV Bharat

ಟೆಹ್ರಾನ್ (ಇರಾನ್​)​: ಇಂದು ನಿಗದಿಯಾಗಿದ್ದ ಇರಾನ್​ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ಮುಂದೂಡಿಕೆಯಾಗಿದೆ. ಅಮೆರಿಕ ಮತ್ತು ಇಸ್ರೇಲ್​ ದಾಳಿಯಲ್ಲಿ ಸಾವನ್ನಪ್ಪಿದ ಅವರ ಅಂತ್ಯಕ್ರಿಯೆಗೆ ಹೆಚ್ಚಿನ ಜನ ಸೇರುವ ಹಿನ್ನೆಲೆ ಅಂತ್ಯಕ್ರಿಯೆ ಮುಂದೂಡಿಕೆಯಾಗಿದೆ. ನಂತರದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅಲ್ಲಿನ ರಾಜ್ಯ ಟಿವಿ ವರದಿ ಮಾಡಿದೆ.

ಇದಕ್ಕೂ ಮೊದಲು ಮೂರು ದಿನಗಳ ಕಾಲ ಈ ವಿದಾಯ ಕಾರ್ಯ ಸಾಗಲಿದೆ ಎಂದು ಇರಾನ್​ ಅಧಿಕೃತ ಸುದ್ದಿ ಸಂಸ್ಥೆ ಇರ್ನಾ ತಿಳಿಸಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಈ ಕಾರ್ಯವನ್ನು ಮುಂದೂಡಲಾಗಿದೆ ಎಂದು ಇರಾನಿ ರಾಜ್ಯ ಟಿವಿ ವರದಿ ಮಾಡಿದೆ.

ಇರಾನ್​ ಸ್ಥಳೀಯ ಕಾಲಮಾನದ ಅನುಸಾರ ಇಂದು ರಾತ್ರಿ 10 ರಿಂದ ಟೆಹ್ರಾನ್‌ನಲ್ಲಿರುವ ಇಮಾಮ್ ಖಮೇನಿ ಗ್ರ್ಯಾಂಡ್ ಮಸೀದಿಯಲ್ಲಿ ಖಮೇನಿ ಮೃತದೇಹಕ್ಕೆ ಸಾರ್ವಜನಿಕರು ಅಂತಿಮ ಗೌರವ ಸಲ್ಲಿಸಲು ಸಾಧ್ಯವಾಗಲಿದೆ ಎಂದು ಇಸ್ಲಾಮಿಕ್ ಅಭಿವೃದ್ಧಿ ಸಮನ್ವಯ ಮಂಡಳಿಯ ಹೇಳಿಕೆಯನ್ನು ಉಲ್ಲೇಖಿಸಿ ಇರ್ನಾ ತಿಳಿಸಿತ್ತು. ಆದರೆ, ಇದೀಗ ಈ ಅಂತಿಮ ಕ್ರಿಯೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ವರದಿಯಾಗಿದೆ.

ಈ ಮೊದಲು ಪ್ರಾರ್ಥನಾ ಮೈದಾನದಲ್ಲಿಅಯತೊಲ್ಲಾ ಅಲಿ ಖಮೇನಿ ಅವರಿಗೆ ಅಂತಿಮ ವಿದಾಯ ಹೇಳಲಾಗುವುದು. ಈ ಶೋಕ ಸಮಾರಂಭವು ಮೂರು ದಿನಗಳವರೆಗೆ ನಡೆಯಲಿದ್ದು, ಅಂತ್ಯಕ್ರಿಯೆಯ ಮೆರವಣಿಗೆ ಅಂತಿಮಗೊಂಡ ನಂತರ ಘೋಷಿಸಲಾಗುವುದು. ಹತ್ಯೆಗೀಡಾಗಿರುವ 86ವರ್ಷದ ಖಮೇನಿಯ ಮೃತದೇಹವನ್ನು ಅವರ ಹುಟ್ಟೂರಾದ ಈಶಾನ್ಯ ಇರಾನಿನ ಮಶಾದ್​ನಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿತ್ತು.

ಉತ್ತರಾಧಿಕಾರಿ ಆಯ್ಕೆ ಇಲ್ಲ: ಉತ್ತರಾಧಿಕಾರಿ ಆಯ್ಕೆ ಇನ್ನೂ ಆಗಿಲ್ಲ, ಖಮೇನಿ ಸಾವಿನ ಬಳಿಕ ಉತ್ತರಾಧಿಕಾರಿಯಾಗಿ ಅವರ ಮಗ ಮೊಜ್ಬಬಾ ಖಮೇನಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕೆಲ ವರದಿಗಳು ಬಂದಿದ್ದು, ಆದರೆ, ಇದನ್ನು ಇರಾನಿನ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಮುಂಬೈನಲ್ಲಿರುವ ಇರಾನ್​ ಕಾನ್ಸುಲೆಟ್​ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಕೆಲ ಮಾಧ್ಯಮಗಳು ಇರಾನಿನ ನಾಯಕತ್ವದ ಕುರಿತು ವರದಿ ಮಾಡಿವೆ. ಆದರೆ, ಇದು ಅಧಿಕೃತವಲ್ಲ ಎಂದಿದೆ.

ಅಮೆರಿಕದೊಂದಿಗೆ ಮಾತುಕತೆ ಇಲ್ಲ: ಇರಾನ್​ನಲ್ಲಿ ಯುದ್ದ 5ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಇರಾನ್​ ರಾಜ್ಯದ ಟಿವಿಗೆ ಮಾತನಾಡಿರುವ ಸರ್ವೊಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹಿರಿಯ ಆಪ್ತರು, ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸುವ ಇರಾದೆ ತಮಗಿಲ್ಲ. ಯುದ್ಧ ಅಗತ್ಯವಿರುವಷ್ಟು ದಿನಗಳ ಕಾಲ ಮಧ್ಯಪ್ರಾಚ್ಯದಲ್ಲಿ ಮುಂದುವರೆಯಲಿದೆ ಎಂದಿದ್ದಾರೆ.

ಅಮೆರಿಕನ್ನರ ಮೇಲೆ ನಂಬಿಕೆ ಇಲ್ಲ. ಅವರೊಂದಿಗೆ ಯಾವುದೇ ಮಾತುಕತೆಗೆ ನಮಗೆ ಇಲ್ಲ. ನಾವು ಬಯಸಿದಷ್ಟು ಕಾಲ ಯುದ್ಧವನ್ನು ಮುಂದುವರಿಸಬಹುದು ಎಂದಿದ್ದಾರೆ.

ಈ ನಡುವೆ ಅಮೆರಿಕ ಮತ್ತು ಇಸ್ರೇಲ್​ ಗುರಿಗಳ ವಿರುದ್ಧ ಇಸ್ಲಾಮಿಕ್​ ರೆವಲ್ಯೂಷನ್​ ಗಾರ್ಡ್​ ಕಾರ್ಪ್ಸ್​ 17 ಯುದ್ದ ಪ್ರಾರಂಭಿಸಿದೆ ಎಂದು ಇರಾನಿನ ಪ್ರೆಸ್​ ಟಿವಿ ವರದಿ ಮಾಡಿದೆ.

ಇಸ್ರೇಲ್-ಯುಎಸ್ ಜಂಟಿ ದಾಳಿಯ ನಂತರ, ಇಸ್ರೇಲ್​ ಮತ್ತು ಯುಎಸ್ ನೆಲೆಗಳಲ್ಲಿನ ಗುರಿಗಳ ಕಡೆಗೆ 230ಕ್ಕೂ ಹೆಚ್ಚು ಆಕ್ರಮಣ ಡ್ರೋನ್‌ಗಳನ್ನು ಐಆರ್​ಜಿಸಿ ಹಾರಿಸಿದವು ಎಂದು ಐಆರ್‌ಜಿಸಿಯ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಎರ್ಬಿಲ್​, ಕುವೈತ್​ ಸೇರಿದಂತೆ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು, ಉತ್ತರ ಇರಾಕ್​ನ ಅನೇಕ ಭಯೋತ್ಪಾದಕ ಗುಂಪುಗಳ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿದೆ. ಬಹ್ರೇನ್​ನಲ್ಲಿನ ಅಮೆರಿಕ ವಾಯು ನೆಲೆಯನ್ನು ನಾಶ ಮಾಡಲಾಗಿದೆ. ಯುದ್ಧ ಮೊದಲೆರಡು ದಿನಗಳಲ್ಲಿ ವಿವಿಧ ಅಮೆರಿಕ ನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ 680 ಅಮೆರಿಕದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಇವುಗಳನ್ನೂ ಓದಿ:

ಇರಾನ್​ ಮಾತುಕತೆ ಪ್ರಸ್ತಾಪ ತುಂಬಾ ತಡವಾಯ್ತು ಎಂದ ಡೊನಾಲ್ಡ್​ ಟ್ರಂಪ್​: ಅಮೆರಿಕ ಕಾಂಗ್ರೆಸ್​​​ಗೆ ಅಧ್ಯಕ್ಷರ ಪತ್ರ!

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕರಾಗಿ ಆಯ್ಕೆಯಾಗುವವರನ್ನೂ ಹತ್ಯೆ ಮಾಡುತ್ತೇವೆ: ಇಸ್ರೇಲ್

Last Updated : March 4, 2026 at 5:34 PM IST