ETV Bharat / international

ಇರಾನ್​ ನಟಾಂಜ್​ ಪರಮಾಣು ಸಂಸ್ಕರಣಾ ಘಟಕದ ಮೇಲೆ ಅಮೆರಿಕ​ - ಇಸ್ರೇಲ್​ ದಾಳಿ ಆರೋಪದ ನಡುವೆ ಉಪಗ್ರಹ ಚಿತ್ರ ಬಿಡುಗಡೆ

ಮಾರ್ಚ್​ 1 ಮತ್ತು ಮಾರ್ಚ್​ 2 ಹಾನಿಗೆ ಮುನ್ನ ಮತ್ತು ಹಾನಿ ಬಳಿಕದ ಚಿತ್ರವನ್ನು ಎಎಫ್​ಪಿ ಹಂಚಿಕೊಂಡಿದ್ದು, ಪ್ರದೇಶದಲ್ಲಿ ಸಾಕಷ್ಟು ಕಟ್ಟಡಗಳು ಹಾನಿಗೆ ಒಳಗಾಗಿರುವುದನ್ನು ಕಾಣಬಹುದಾಗಿದೆ.

Satellite Images Reveal Damage At Iran's Natanz Nuclear Facility Amid US-Israel Strike Allegations
ಉಪಗ್ರಹ ಚಿತ್ರ (AFP)
author img

By ETV Bharat Karnataka Team

Published : March 3, 2026 at 1:42 PM IST

2 Min Read
Choose ETV Bharat

ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ತನ್ನ ಪರಮಾಣು ಸೌಲಭ್ಯಗಳನ್ನು ಹೊಡೆದುರುಳಿಸಿವೆ ಎಂಬ ಆರೋಪಗಳ ಮಧ್ಯೆ ಇರಾನ್​ನ ಇಸ್ಫಹಾನ್​ ಪ್ರಾಂತ್ಯದಲ್ಲಿನ ನಟಾಂಜ್​ ಪರಮಾಣು ಸೌಲಭ್ಯ (ಶಾಹಿದ್​ ಅಹ್ಮದಿ ರೋಶನ್​) ಮೇಲೆ ಆಗಿರುವ ಹಾನಿಯ ಉಪಗ್ರಹ ಚಿತ್ರ ಹಂಚಿಕೊಳ್ಳಲಾಗಿದೆ.

ಮಾರ್ಚ್​ 1 ಮತ್ತು ಮಾರ್ಚ್​ 2 ಹಾನಿಗೆ ಮುನ್ನ ಮತ್ತು ಹಾನಿ ಬಳಿಕದ ಚಿತ್ರವನ್ನು ಎಎಫ್​ಪಿ ಹಂಚಿಕೊಂಡಿದ್ದು, ಪ್ರದೇಶದಲ್ಲಿ ಸಾಕಷ್ಟು ಕಟ್ಟಡಗಳು ಹಾನಿಗೆ ಒಳಗಾಗಿರುವುದನ್ನು ಕಾಣಬಹುದಾಗಿದೆ. ಜೂನ್​ನಿಂದ ಆರಂಭವಾಗಿರುವ ಮೂರು ದೇಶಗಳ ನಡುವಿನ ಯುದ್ದದಲ್ಲಿನ ಪ್ರಮುಖ ಗುರಿ ಈ ಪರಮಾಣು ಘಟಕಗಳಾಗಿವೆ.

ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಗೆ ಇರಾನ್‌ನ ರಾಯಭಾರಿಯಾಗಿರುವ ರೆಜಾ ನಜಾಫಿ ಸೋಮವಾರ ತಮ್ಮ ದೇಶದಲ್ಲಿರುವ ನಟಾಂಜ್ ಯುರೇನಿಯಂ ಸಂಸ್ಕರಣ ಘಟಕವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳು ನಡೆದಿವೆ ಎಂದು ಆರೋಪಿಸಿದ್ದರು. ಮತ್ತೊಂದು ಕಡೆ ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯ ಮುಖ್ಯಸ್ಥ ರಾಫೆಲ್ ಗ್ರೋಸಿ, ಟೆಹ್ರಾನ್​ ಪರಮಾಣು ಸೌಲಭ್ಯದ ಮೇಲೆ ಹಾನಿ ನಡೆದಿರುವ ಯಾವುದೇ ವರದಿ ಇಲ್ಲ ಎಂದು ತಿಳಿಸಿದ್ದರು.

ನಟಾಂಜ್​ ಪರಮಾಣು ಸೌಲಭ್ಯದ ದೃಶ್ಯಗಳು (AFP)

ಇರಾನ್‌ನಲ್ಲಿ ಶಾಂತಿಯುತವಾಗಿ ರಕ್ಷಿಸಲ್ಪಟ್ಟ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಪ್ರಯತ್ನ ನಡೆದಿದೆ. ಇರಾನ್​ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಮಾಡುತ್ತಿದೆ ಎಂಬುದು ಸುಳ್ಳು ಎಂದು ರೆಜಾ ನಜಾಫಿ ವಿಯೆನ್ನಾದಲ್ಲಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ಇರಾನ್​ನಲ್ಲಿರುವ ಬುಶೆಹ್ರ್ ಪರಮಾಣು ವಿದ್ಯುತ್ ಸ್ಥಾವರ, ಟೆಹ್ರಾನ್ ಸಂಶೋಧನಾ ರಿಯಾಕ್ಟರ್ ಅಥವಾ ಇತರ ಪರಮಾಣು ಇಂಧನ ಚಕ್ರ ಸೌಲಭ್ಯಗಳು ಸೇರಿದಂತೆ ಯಾವ ಪರಮಾಣು ಸ್ಥಾಪನೆಗಳು ಹಾನಿಗೊಳಗಾಗಿವೆ ಅಥವಾ ಹಾನಿಗೊಳಗಾಗಿಲ್ಲ ಎಂಬ ಯಾವುದೇ ಸೂಚನೆಗಳು ಇಲ್ಲ. ತುರ್ತು ಕೇಂದ್ರದ ಮೂಲಕ ಇರಾನಿನ ಪರಮಾಣು ನಿಯಂತ್ರಣ ಅಧಿಕಾರಿಗಳನ್ನು ಸಂಪರ್ಕಿಸಲು ಐಎಇಎ ಪ್ರಯತ್ನಿಸುತ್ತಲೇ ಇದೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರೆಜಾ ನಜಾಫಿ ಹೇಳಿದ್ದಾರೆ.

ಇರಾನ್ ಮತ್ತು ಈ ಪ್ರದೇಶದ ಇತರ ಹಲವು ದೇಶಗಳು ಪರಮಾಣು ವಿದ್ಯುತ್ ಸ್ಥಾವರಗಳು ಮತ್ತು ಪರಮಾಣು ಸಂಶೋಧನಾ ರಿಯಾಕ್ಟರ್‌ಗಳು ಹಾಗೂ ಸಂಬಂಧಿತ ಇಂಧನ ಸಂಗ್ರಹಣಾ ತಾಣಗಳನ್ನು ಹೊಂದಿದ್ದು, ಇದೀಗ ಪರಮಾಣು ಸುರಕ್ಷತೆಗೆ ಬೆದರಿಕೆಯ ಆತಂಕವನ್ನು ಹೆಚ್ಚಿಸಿವೆ. ಆದರೆ, ಇದುವರೆಗೆ ಇರಾನ್‌ನ ಗಡಿಯಲ್ಲಿರುವ ದೇಶಗಳಲ್ಲಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ವಿಕಿರಣಗಳು ಕಂಡು ಬಂದಿಲ್ಲ ಎಂದು ಗ್ರೋಸಿ ತಿಳಿಸಿದ್ದಾರೆ.

ಇವುಗಳನ್ನೂ ಓದಿ: ರಿಯಾದ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋಣ್ ದಾಳಿ; ತಕ್ಷಣ 12 ದೇಶ ಬಿಡುವಂತೆ ತನ್ನ ಪ್ರಜೆಗಳಿಗೆ ಅಮೆರಿಕ ತುರ್ತು ಸೂಚನೆ

ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರ ದಾಸ್ತಾನಿದೆ, ಶಾಶ್ವತವಾಗಿ ಯುದ್ಧ ಮುಂದುವರೆಸಬಹುದು: ಟ್ರಂಪ್ ಎಚ್ಚರಿಕೆ