ಎಲ್ಎನ್ಜಿ ಉತ್ಪಾದನೆ ಸ್ಥಗಿತಗೊಳಿಸಿದ ಕತಾರ್ಎನರ್ಜಿ; ಟ್ಯಾಂಕರ್ ಸಂಚಾರದಲ್ಲಿನ ಅಡಚಣೆಯಿಂದ ಏರಿಕೆ ಕಂಡ ಇಂಧನ ಬೆಲೆ
ತೈಲದ ಪ್ರಮುಖ ಪೂರೈಕೆದಾರರಾಗಿರುವ ಕತಾರ್ಎನರ್ಜಿಯ ಸೌಲಭ್ಯಗಳ ಮೇಲೆ ದಾಳಿ ನಡೆದಿರುವ ಹಿನ್ನೆಲೆ ನೈಸರ್ಗಿಕ ಇಂಧನ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಈ ಪರಿಣಾಮವಾಗಿ ಯುರೋಪ್ನಲ್ಲಿ ಇದರ ಬೆಲೆ ಶೇ 40ರಷ್ಟು ಏರಿಕೆ ಕಂಡು ಬಂದಿದೆ.


Published : March 3, 2026 at 3:38 PM IST
ಫ್ರಾಂಕ್ಫರ್ಟ್ (ಜರ್ಮನಿ): ಹಾರ್ಮುಜ್ ಜಲಸಂಧಿಯಲ್ಲಿನ ಟ್ಯಾಂಕರ್ಗಳ ಸಂಚಾರ ಅಡಚಣೆಯಿಂದಾಗಿ ಇಂಧನಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇರಾನ್ನ ಉತ್ಪಾದನಾ ಸೌಲಭ್ಯಗಳ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳಿಂದಾಗಿ, ಇರಾನ್ ಸಹ ಪ್ರತಿದಾಳಿ ನಡೆಸುತ್ತಿವೆ. ಇದು ವಿಶ್ವ ಆರ್ಥಿಕತೆಗೆ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.
ನೈಸರ್ಗಿಕ ಅನಿಲಗಳ ಬೆಲೆಯಲ್ಲೂ ಏರಿಕೆಯಾಗುತ್ತಿದೆ. ಕಚ್ಚಾ ತೈಲದ ಪ್ರಮುಖ ಪೂರೈಕೆದಾರರಾಗಿರುವ ಕತಾರ್ ಎನರ್ಜಿಯ ಸೌಲಭ್ಯಗಳ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ನೈಸರ್ಗಿಕ ಇಂಧನ ಉತ್ಪಾದನೆ ನಿಂತಿದೆ. ಈ ಪರಿಣಾಮವಾಗಿ ಯುರೋಪ್ನಲ್ಲಿ ಎಲ್ಎನ್ಜಿ ಬೆಲೆಯಲ್ಲಿ ಶೇ 40ರಷ್ಟು ಏರಿಕೆ ಕಂಡು ಬಂದಿದೆ.
ಈ ಪ್ರದೇಶದೆಲ್ಲೆಡೆ ಮೂಲಸೌಲಭ್ಯಗಳು ಅಪಾಯದಲ್ಲಿವೆ. ಉದ್ದೇಶಪೂರ್ವಕ ದಾಳಿಯಿಂದಾಗಿ ಇದು ಅಪಾಯದಲ್ಲಿ ಇಲ್ಲ. ಬದಲಾಗಿ ಆಚಾತುರ್ಯದ ದಾಳಿಗಳಿಂದಾಗಿದೆ ಎಂದು ಕ್ಲೀಯರ್ವೀವ್ ಎನರ್ಜಿ ಪಾರ್ಟನರ್ನ ನಿರ್ವಹಣಾ ನಿರ್ದೇಶ ಕೆವಿನ್ ಬುಕ್ ತಿಳಿಸಿದ್ದಾರೆ. ಸೌಲಭ್ಯಗಳ ಮೇಲೆ ಕ್ಷಿಪಣಿಗಳ ಅವಶೇಷಗಳು ಮತ್ತು ಚೂರುಗಳು ಬಿದ್ದು ಘಟಕಗಳ ನಿರ್ವಹಣೆಯನ್ನು ನಿಷ್ಕ್ರಿಯಗೊಳಿಸಬಹುದು. ಇದರಿಂದಾಗಿ ಇಂಧನ ಉತ್ಪಾದನೆ ಸಾಕಷ್ಟು ಸವಾಲುಗಳನ್ನು ಎದುರಿಸುವ ಸಾಧ್ಯತೆಗಳಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ತೈಲ ಬೆಲೆಯಲ್ಲಿ ಶೇ 6.3ರಷ್ಟು ಏರಿಕೆಯಾಗಿದ್ದು, ಬ್ಯಾರೇಲ್ಗೆ 71.23 ಡಾಲರ್ ಆಗಿದೆ. ಅಂತಾರಾಷ್ಟ್ರೀಯ ಸ್ಟಾಂಡರ್ಟ್ ಬ್ರೆಂಟ್ ಕಚ್ಛಾ ತೈಲದ ಬೆಲೆ ಶೇ 6.7ರಷ್ಟು ಏರಿಕೆ ಕಾಣುವ ಮೂಲಕ ಬ್ಯಾರಲ್ಗೆ 77.74 ಡಾಲರ್ ಗೆ ಹೆಚ್ಚಳವಾಗಿದೆ. ತೈಲ ಬೆಲೆ ಏರಿಕೆಯು ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಈಗಾಗಲೇ ಹಣದುಬ್ಬರದ ಸಂಕಷ್ಟ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಇತರ ಸರಕುಗಳ ಬೆಲೆಯಲ್ಲೂ ಭಾರಿ ಏರಿಕೆ ಕಾಣುವ ಸಾಧ್ಯತೆಗಳಿವೆ.
ಹಾರ್ಮುಜ್ ಜಲಸಂಧಿಯ ಮೂಲಕ ಜಾಗತಿಕವಾಗಿ ಶೇ 20ರಷ್ಟು ತೈಲ ಪೂರೈಕೆ ಆಗುತ್ತಿದೆ. ಉಪಗ್ರಹ ಚಾಲನ ವ್ಯವಸ್ಥೆ ಅಡಚಣೆಯಿಂದಾಗಿ ಟ್ಯಾಂಕರ್ ಸಂಚಾರದಲ್ಲಿ ಅಡಚಣೆ ಉಂಟಾಗಿದೆ ಎಂದು ದತ್ತಾಂಶ ಮತ್ತು ವಿಶ್ಲೇಷಕ ಘಟಕದ ಅನಲಿಸ್ಟ್ ಕಪ್ಲೆರ್ ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಯುಕೆ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರವು ಜಲಸಂಧಿಯ ಎರಡೂ ಬದಿಗಳಲ್ಲಿ ಹಲವಾರು ಹಡಗುಗಳ ಮೇಲೆ ದಾಳಿಗಳಾಗಿವೆ ಎಂದು ವರದಿ ಮಾಡಿದೆ. ಹಡಗುಗಳು ಎಲ್ಲಿವೆ ಎಂಬುದನ್ನು ತೋರಿಸುವ ವ್ಯವಸ್ಥೆಗಳಿಗೆ ಹೆಚ್ಚಿನ ಎಲೆಕ್ಟ್ರಾನಿಕ್ ಹಸ್ತಕ್ಷೇಪದ ಬಗ್ಗೆ ಎಚ್ಚರಿಕೆಯನ್ನೂ ರವಾನಿಸಿದೆ.
ಒಮಾನ್ ಕೊಲ್ಲಿಯಲ್ಲಿ ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ತೈಲ ಟ್ಯಾಂಕರ್‌ಗೆ ಬಾಂಬ್ ಹೊತ್ತೊಯ್ಯುತ್ತಿದ್ದ ದೋಣಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ನಾವಿಕ ಸಾವನ್ನಪ್ಪಿದ್ದಾನೆ ಎಂದು ಒಮಾನ್ ತಿಳಿಸಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಮೀಪಿಸುತ್ತಿರುವ ಹಡಗುಗಳಿಗೆ ಬೆದರಿಕೆ ಹಾಕುತ್ತಿದೆ ಮತ್ತು ಅನೇಕ ದಾಳಿಗಳನ್ನು ನಡೆಸಿದೆ ಎಂಬ ವರದಿಗಳು ಬಂದಿವೆ.
ಅಮೆರಿಕದಲ್ಲಿ ಏರಿಕೆಯಾಗಲಿರುವ ಇಂಧನ ದರ: ಈಗಾಗಲೇ ಇಂಧನ ದರಗಳು ಏರಿಕೆ ಕಾಣುತ್ತಿದ್ದು, ಅಮೆರಿಕದಲ್ಲಿ ಗ್ಯಾಲನ್ ಇಂದನದ ದರ ಶೇ 6ರಷ್ಟು ಏರಿಕೆ ಕಂಡು 2.99ಡಾಲರ್ ಆಗಿದೆ ಎಂದು ಕ್ಲಬ್ ಎಎಎ ವರದಿ ಮಾಡಿದೆ. 20 ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯು ಪಂಪ್ ಬೆಲೆಗಳಲ್ಲಿ ಗಣನೀಯವಾಗಿ ಪ್ರಭಾವ ಬೀರಲಿದೆ ಎಂದು ತಿಳಿದು ಬಂದಿದೆ.
ಇವುಗಳನ್ನೂ ಓದಿ:
ಇರಾನ್ ನಟಾಂಜ್ ಪರಮಾಣು ಸಂಸ್ಕರಣಾ ಘಟಕದ ಮೇಲೆ ಅಮೆರಿಕ - ಇಸ್ರೇಲ್ ದಾಳಿ ಆರೋಪದ ನಡುವೆ ಉಪಗ್ರಹ ಚಿತ್ರ ಬಿಡುಗಡೆ

