ETV Bharat / international

ಇಸ್ರೇಲ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಸ್ರೇಲ್‌ಗೆ ಬಂದಿಳಿದಿದ್ದಾರೆ.

ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಪ್ಪುಗೆ
ಪ್ರಧಾನಿ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಪ್ಪುಗೆ (IANS)
author img

By ETV Bharat Karnataka Team

Published : February 25, 2026 at 9:49 PM IST

1 Min Read
Choose ETV Bharat

ಟೆಲ್‌ ಅವಿವ್: ಪ್ರಧಾನಿ ನರೇಂದ್ರ ಮೋದಿ ಇಂದು ಇಸ್ರೇಲ್‌ಗೆ ಬಂದಿಳಿದಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗು ಪತ್ನಿ ಸಾರಾ ಆತ್ಮೀಯ ಸ್ವಾಗತ ಕೋರಿದರು. ಟೆಲ್ ಅವೀವ್‌ನ ವಿಮಾನ ನಿಲ್ದಾಣದಲ್ಲಿ ಮೋದಿ ಬಂದಿಳಿದರು.

ಇದು ಪ್ರಧಾನಿ ಮೋದಿ ಅವರ ಎರಡನೇ ಇಸ್ರೇಲ್ ಭೇಟಿಯಾಗಿದೆ. ಈ ಕುರಿತು ನೆತನ್ಯಾಹು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲೂ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.

2017ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ್ದ ಮೋದಿ, ಇದೀಗ ಒಂಬತ್ತು ವರ್ಷಗಳ ಬಳಿಕ ಮತ್ತೊಮ್ಮೆ ಯಹೂದಿಗಳ ನಾಡಿಗೆ ಆಗಮಿಸಿದ್ದಾರೆ.

ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಎಲ್.ಕೆ.ಅಡ್ವಾಣಿ ಗೃಹ ಸಚಿವರಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಜಸ್ವಂತ್ ಸಿಂಗ್ ಮತ್ತು ಎಸ್.ಎಂ.ಕೃಷ್ಣ ಅವರು ವಿದೇಶಾಂಗ ಸಚಿವರಾಗಿ ಇಸ್ರೇಲ್‌ ಪ್ರವಾಸ ಕೈಗೊಂಡಿದ್ದರು. ರಾಜನಾಥ್ ಸಿಂಗ್ ಗೃಹ ಸಚಿವರಾಗಿ ಇಸ್ರೇಲ್‌ಗೆ ಭೇಟಿ ನೀಡಿರುವ ನಿದರ್ಶನಗಳಿವೆ.

ಭಾರತ ಮತ್ತು ಇಸ್ರೇಲ್ ಎರಡೂ ಭಯೋತ್ಪಾದನೆಯಿಂದ ಬಳಲುತ್ತಿವೆ. ಹೀಗಾಗಿ ಉಭಯ ದೇಶಗಳ ಸಂಬಂಧ ಮತ್ತಷ್ಟು ಬಲಪಡಿಸಲು ಕಾರಣವಾಗಿದೆ. ಜೊತೆಗೆ, ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಹಕಾರವೂ ಹೆಚ್ಚಾಗಿದೆ.

ಹಲವು ಪ್ರಮುಖ ಸಂದರ್ಭಗಳಲ್ಲಿ ಭಾರತ, ಇಸ್ರೇಲ್ ಅನ್ನು ಬಹಿರಂಗವಾಗಿ ಬೆಂಬಲಿಸಿದೆ. ಗಾಜಾ ಯುದ್ಧದಲ್ಲಿ ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧದ ಮತದಾನದಲ್ಲಿ ತಟಸ್ಥ ನಿಲುವು ತಳೆದಿತ್ತು. ಇದು ಇಸ್ರೇಲ್‌ಗೆ ದೊಡ್ಡ ಬೆಂಬಲವಾಗಿತ್ತು. ವೈಯಕ್ತಿಕವಾಗಿ ಮೋದಿ ಮತ್ತು ನೆತನ್ಯಾಹು ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.

ಇದನ್ನೂ ಓದಿ: 9 ವರ್ಷಗಳ ಬಳಿಕ ಪ್ರಧಾನಿ ಮೋದಿ 2ನೇ ಸಲ ಇಸ್ರೇಲ್​ ಪ್ರವಾಸ: ಈ ಭೇಟಿಗೇಕೆ ಇಷ್ಟೊಂದು ಮಹತ್ವ?: ಯಾವೆಲ್ಲಾ ಒಪ್ಪಂದಗಳಾಗಬಹುದು?