ಮಸ್ಕತ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ದೋಣಿ: ಭಾರತೀಯ ಸಾವು
ಎಂಜಿನ್ ಕೋಣೆಯಲ್ಲಿ ಬೆಂಕಿ ಮತ್ತು ಸ್ಫೋಟ ಸಂಭವಿಸಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಒಮಾನ್‌ನ ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ

By PTI
Published : March 2, 2026 at 6:36 PM IST
ದುಬೈ: ಮಸ್ಕತ್ ಗವರ್ನರೇಟ್ ಕರಾವಳಿಯಲ್ಲಿ ಸೋಮವಾರ ಸ್ಫೋಟಕ ತುಂಬಿದ ಮಾನವರಹಿತ ದೋಣಿ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಸ್ಕತ್ ಗವರ್ನರೇಟ್ ಕರಾವಳಿಯಿಂದ 52 ನಾಟಿಕಲ್ ಮೈಲು ದೂರದಲ್ಲಿ ತೈಲ ಟ್ಯಾಂಕರ್ MKD VYOM ಮೇಲೆ ಮಾನವರಹಿತ ದೋಣಿ ದಾಳಿ ಮಾಡಿದೆ ಎಂದು ಸಮುದ್ರ ಭದ್ರತಾ ಕೇಂದ್ರ ವರದಿ ಮಾಡಿದೆ ಎಂದು ಒಮಾನ್‌ನ ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಯ ಪರಿಣಾಮವಾಗಿ ಎಂಜಿನ್ ಕೋಣೆಯಲ್ಲಿ ಬೆಂಕಿ ಮತ್ತು ಸ್ಫೋಟ ಸಂಭವಿಸಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ. ಉಳಿದ 21 ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಮೃತರ ರಾಷ್ಟ್ರೀಯತೆಯನ್ನು ಸಚಿವಾಲಯ ಇದುವರೆಗೂ ಗುರುತಿಸಿಲ್ಲ. ಆದರೆ, ಸ್ಥಳೀಯ ಮಾಧ್ಯಮಗಳು ಮೃತಪಟ್ಟವರು ಭಾರತೀಯ ಸಿಬ್ಬಂದಿ ಎಂದು ವರದಿ ಮಾಡಿದೆ.
ಸ್ಫೋಟಕ ತುಂಬಿದ ಮಾನವ ರಹಿತ ದೋಣಿಯ ದಾಳಿಯಿಂದಾಗಿ ಮುಖ್ಯ ಎಂಜಿನ್ ಕೋಣೆಯಲ್ಲಿ ಬೆಂಕಿ ಮತ್ತು ಸ್ಫೋಟಕ್ಕೆ ಕಾರಣವಾಯಿತು. ಹೀಗಾಗಿ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಒಮಾನ್ ಅಬ್ಸರ್ವರ್ ವರದಿ ಮಾಡಿದೆ. ಸ್ಥಳಾಂತರಿಸಲಾದ ಸಿಬ್ಬಂದಿಯಲ್ಲಿ 16 ಭಾರತೀಯರು, ನಾಲ್ವರು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಒಬ್ಬ ಉಕ್ರೇನಿಯನ್ ಪ್ರಜೆ ಸೇರಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಂದು ದಿನದ ಹಿಂದೆ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಂದು ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿತ್ತು. ಎಂವಿ ಸ್ಕೈಲೈಟ್ ಮೇಲಿನ ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಓಮನ್ ಸುದ್ದಿ ಸಂಸ್ಥೆ ಸಿಬ್ಬಂದಿ ಭಾರತ ಮತ್ತು ಇರಾನ್‌ಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದೆ.
ಸೋಮವಾರ ಒಮಾನ್‌ನಲ್ಲಿರುವ ಭಾರತೀಯ ಮಿಷನ್, ಎಂವಿ ಸ್ಕೈಲೈಟ್ ಒಳಗೊಂಡ ಘಟನೆಯ ನಂತರ ಕಾಣೆಯಾದ ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದೆ. ಎಂವಿ ಸ್ಕೈಲೈಟ್‌ನಿಂದ ರಕ್ಷಿಸಲ್ಪಟ್ಟ ಸಿಬ್ಬಂದಿಗಳನ್ನು ಸ್ವದೇಶಕ್ಕೆ ಕಳುಹಿಸಲು ನಾವು ಒಮಾನ್‌ನಲ್ಲಿರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ ಎಂದು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ X ಪೋಸ್ಟ್‌ನಲ್ಲಿ ತಿಳಿಸಿದೆ.
ಓಮನ್ ಮತ್ತು ಇರಾನ್ ನಡುವೆ ಈ ಹಾರ್ಮುಜ್ ಜಲಸಂಧಿ ಇದೆ. ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಇದು ವಿಶ್ವದ ಪ್ರಮುಖ ತೈಲ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾಗಿದೆ.
ಇವುಗಳನ್ನು ಓದಿ:
ಇಸ್ರೇಲ್-ಯುಎಸ್ ದಾಳಿ ಎದುರಿಸಲು, ಇರಾನ್ ರಕ್ಷಣೆಗೆ 2ನೇ ಸಭೆ ನಡೆಸಿದ ತಾತ್ಕಾಲಿಕ ನಾಯಕತ್ವ ಮಂಡಳಿ
VIDEO- ಅಮೆರಿಕ - ಇಸ್ರೇಲ್ ಮೇಲೆ ಹಾರಿಸಲು ಸನ್ನದ್ಧವಾಗಿಟ್ಟ ಡ್ರೋನ್, ಕ್ಷಿಪಣಿಗಳ ವಿಡಿಯೋ ಹಂಚಿಕೊಂಡ ಇರಾನ್

