ಮುಗಿಯದ ಯುದ್ಧದಿಂದ ಯುದ್ಧಾಂತ್ಯದ ಕಡೆಗೆ ಸಾಗಬೇಕು; ಪುಟಿನ್ಗೆ ಪ್ರಧಾನಿ ಮೋದಿ ಕರೆ
ಯುದ್ಧ ಮಾನವಕುಲವನ್ನು ಹಿಂದಕ್ಕೆ ತಳ್ಳುತ್ತದೆ. ಗಾಂಧಿ ಮತ್ತು ಬುದ್ಧನ ನಾಡಾದ ಭಾರತವು ಶಾಂತಿಯತ್ತ ಸಾಗುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಮುಂದೆಯೂ ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದರು.


Published : September 1, 2026 at 11:57 AM IST
ನವದೆಹಲಿ: ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಂತ್ಯವಿಲ್ಲದ ಯುದ್ದದಿಂದ ಯುದ್ದದ ಅಂತ್ಯಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವುದು ಮನುಕುಲದ ಸಮಾನ ಆದ್ಯತೆಯಾಗಿದೆ ಎಂದರು.
ಕಿರ್ಗಿಸ್ತಾನ್ ರಾಜಧಾನಿಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ ಪುಟಿನ್ ಅವರೊಂದಿಗಿನ ಸಭೆಯಲ್ಲಿ ಮಾತನಾಡಿದ ಮೋದಿ, ಯುದ್ಧದ ಪ್ರತಿಯೊಂದು ದಿನವೂ ಮಾನವಕುಲವನ್ನು ಹಿಂದಕ್ಕೆ ತಳ್ಳುತ್ತದೆ. ಗಾಂಧಿ ಮತ್ತು ಬುದ್ಧನ ನಾಡಾದ ಭಾರತವು ಶಾಂತಿಯತ್ತ ಸಾಗುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಮುಂದೆಯೂ ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.
Had extensive discussions with President Putin. Discussed the full range of the India-Russia Special and Privileged Strategic Partnership. It is gladdening to see significant progress across various sectors in recent years.
— Narendra Modi (@narendramodi) August 31, 2026
Focus areas for the India-Russia friendship remain… pic.twitter.com/tclMVJ72KS
ಇಬ್ಬರೂ ನಾಯಕರು ವ್ಯಾಪಾರ, ಹೂಡಿಕೆ, ಇಂಧನ, ರಸಗೊಬ್ಬರ ಮತ್ತು ಭದ್ರತೆ ಮುಂತಾದ ಕ್ಷೇತ್ರಗಳಲ್ಲಿನ ನಿರಂತರ ಸಹಕಾರದ ಕುರಿತು ಚರ್ಚಿಸಿದ್ದಾರೆ.
ಉಕ್ರೇನ್ ವಿಷಯದ ಕುರಿತು ಚರ್ಚಿಸಿದ್ದೇವೆ. ಈ ಹಿಂದೆ ಭೇಟಿಯಾದಾಗ ಕೂಡ ಈ ವಿಷಯದ ಎಲ್ಲಾ ಆಯಾಮಗಳ ಈ ಕುರಿತು ಮಾಹಿತಿ ನೀಡಿದ್ದೀರ. ನಿಮಗೆ ತಿಳಿದಿರುವಂತೆ, ಶಾಂತಿಯತ್ತ ಸಾಗುವ ಎಲ್ಲಾ ಪ್ರಯತ್ನಗಳಿಗೂ ಭಾರತ ಬೆಂಬಲ ನೀಡುತ್ತದೆ. ಮುಂದೆಯೂ ಅದನ್ನು ಮುಂದುವರಿಸುತ್ತದೆ ಎಂದರು.
ಯುದ್ಧದ ಪ್ರತಿ ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ. ಆದರೆ ಶಾಂತಿಯ ಕಡೆಗೆ ಇಡುವ ಪ್ರತಿಯೊಂದು ಹೆಜ್ಜೆಯೂ ಮಾನವೀಯತೆಯನ್ನು ಹೊಸ ಭರವಸೆ ಮತ್ತು ಉತ್ಸಾಹದಿಂದ ಇರಿಸುತ್ತದೆ. ನಾವು ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದ ಕಡೆಗೆ ಸಾಗಬೇಕು ಎಂದು ಕರೆ ನೀಡಿದರು.
ಮಾನವೀಯತೆಯ ಯೋಗಕ್ಷೇಮಕ್ಕೆ ಇದು ನಿರ್ಣಾಯಕವಾಗಿದೆ. ಎಲ್ಲಾ ಸಮಸ್ಯೆಗಳಿಗೆ ಆದಷ್ಟು ಬೇಗ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕು. ಗಾಂಧಿ ಮತ್ತು ಬುದ್ಧನ ಭೂಮಿ ಒಂದೇ ಸಂದೇಶವನ್ನು ಹಂಚಿಕೊಳ್ಳುತ್ತದೆ. ಅದು ಶಾಂತಿಯ ಮಾರ್ಗ ಎಂದರು.
ಉಕ್ರೇನ್ ಯುದ್ಧಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪುಟಿನ್ ಅವರ ಮೇಲೆ ಒತ್ತಡ ಹೇರಲು ವಾಷಿಂಗ್ಟನ್ ಪ್ರಯತ್ನಿಸುತ್ತಿರುವ ನಡುವೆಯೇ, ರಷ್ಯಾದೊಂದಿಗಿನ ತನ್ನ ಸಂಬಂಧವನ್ನು ತಗ್ಗಿಸುವಂತೆ ಅಮೆರಿಕವು ಭಾರತದ ಮೇಲೆ ಒತ್ತಡ ಹೇರುತ್ತಿದೆ.
ಪರಿಣಾಮವಾಗಿ, ಭಾರತವು ತನ್ನ ನೀತಿಯ ಭಾಗವಾಗಿ ಅಮೆರಿಕ ಮತ್ತು ರಷ್ಯಾಗಳೊಂದಿಗಿನ ಸಂಬಂಧಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ.
ಈ ಬೆನ್ನಲ್ಲೇ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಈ ಸಂಘರ್ಷವು ಜಾಗತಿಕ ಸಮುದಾಯದ ಮೇಲೆ ಭಾರಿ ಪರಿಣಾಮ ಬೀರುತ್ತಿರುವುದರಿಂದ, ಅದನ್ನು ಅಂತ್ಯದತ್ತ ಕೊಂಡೊಯ್ಯಲು ತಮ್ಮ ಕಡೆಯಿಂದ ಸಾಧ್ಯವಿರುವ ಮತ್ತು ಅಗತ್ಯವಿರುವ ಎಲ್ಲವನ್ನೂ ಮಾಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಅವರು ಅಧ್ಯಕ್ಷ ಪುಟಿನ್ ಎದುರು ಪುನರುಚ್ಚರಿಸಿದರು ಎಂದು ಮಾಹಿತಿ ನೀಡಿದರು.
ಇವುಗಳನ್ನೂ ಓದಿ:
ಜೈಶಂಕರ್ - ಪುಟಿನ್ ಭೇಟಿ: ಇಂಧನ - ರಸಗೊಬ್ಬರ ನಿರಂತರ ಪೂರೈಕೆ ಭರವಸೆ ನೀಡಿದ ರಷ್ಯಾ
ರಷ್ಯಾಕ್ಕೆ ಪ್ರಮುಖ ಪೆಟ್ರೋಲ್ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

