ಮಕ್ಕಾ ಜಂಟಿ ರಕ್ಷಣಾ ಒಪ್ಪಂದ: ಸಚಿವಾಲಯ ಸ್ಥಾಪನೆಗೆ ಸೌದಿ ಅರೇಬಿಯಾ, ಟರ್ಕಿ, ಪಾಕಿಸ್ತಾನ ಸಮ್ಮತಿ
ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳು ತಮ್ಮ ಪ್ರದೇಶದಲ್ಲಿ ಸುಸ್ಥಿರ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ಮಕ್ಕಾ ಒಪ್ಪಂದದ ಚೌಕಟ್ಟಿನೊಳಗೆ ಒಟ್ಟಾಗಿ ಕೆಲಸ ಮಾಡುವ ತಮ್ಮ ದೃಢಸಂಕಲ್ಪವನ್ನು ಪುನರುಚ್ಚರಿಸುತ್ತವೆ.


Published : September 1, 2026 at 2:17 PM IST
ನವದೆಹಲಿ: ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ಜಂಟಿಯಾಗಿ ಮಕ್ಕಾ ಜಂಟಿ ರಕ್ಷಣಾ ಒಪ್ಪಂದ ನಡೆಸಿವೆ. ಈ ರಕ್ಷಣಾ ಮೈತ್ರಿಕೂಟದ ಅಡಿಯಲ್ಲಿ ಸೌದಿ ಅರೇಬಿಯಾದಲ್ಲಿ ಸಚಿವಾಲಯವೊಂದನ್ನು ಸ್ಥಾಪಿಸಲು ಸಮ್ಮತಿ ಸೂಚಿಸಿವೆ.
ಇಸ್ತಾಂಬುಲ್‌ನಲ್ಲಿ ನಡೆದ ಕಾರ್ಯತಂತ್ರದ ರಾಜಕೀಯ ಮತ್ತು ರಕ್ಷಣಾ ಸಮಿತಿಯ ಮೊದಲ ಸಭೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಮಕ್ಕಾ ಒಪ್ಪಂದದ ಚೌಕಟ್ಟಿನೊಳಗಿನ ಕಾರ್ಯಗಳಿಗೆ ಸಚಿವಾಲಯವು ಬೆಂಬಲ ನೀಡಲಿದೆ. ಈ ಸಚಿವಾಲಯದ ನೇತೃತ್ವವನ್ನು ಮೊದಲ ಮೂರು ವರ್ಷಗಳ ಕಾಲ ಪಾಕಿಸ್ತಾನದ ಪ್ರಧಾನ ಕಾರ್ಯದರ್ಶಿಯೊಬ್ಬರು ವಹಿಸಲಿದ್ದಾರೆ ಎಂದು ತಿಳಿಸಿದೆ.
Joint Statement of the Strategic Political and Defence Committee under Makkah Joint Defence Agreement. 🇸🇦🇹🇷🇵🇰 pic.twitter.com/rfEEXyamxO
— Foreign Ministry 🇸🇦 (@KSAmofaEN) August 31, 2026
ಮೂರು ದೇಶಗಳು ಆಗಸ್ಟ್ 7ರಂದು ರಕ್ಷಣಾ ಮೈತ್ರಿಕೂಟ ನಡೆಸಿದ್ದವು. ಇದರನ್ವಯ ಅವುಗಳಲ್ಲಿ ಯಾವುದಾದರೂ ಒಂದು ದೇಶದ ಮೇಲಿನ ದಾಳಿಯನ್ನು ಎಲ್ಲ ದೇಶಗಳ ಮೇಲಿನ ದಾಳಿಯಂತೆಯೇ ಪರಿಗಣಿಸಲಾಗುತ್ತದೆ.
ಟರ್ಕಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರು, ಜಂಟಿ ರಕ್ಷಣೆಗಾಗಿನ ಮಕ್ಕಾ ಒಪ್ಪಂದದ ಅಡಿಯಲ್ಲಿ ಸ್ಥಾಪಿಸಲಾದ ಕಾರ್ಯತಂತ್ರ ರಾಜಕೀಯ ಮತ್ತು ರಕ್ಷಣಾ ಸಮಿತಿ ಸೋಮವಾರ ಇಸ್ತಾಂಬುಲ್‌ನಲ್ಲಿ ಸಭೆ ನಡೆಸಿದೆ.
I was pleased to lead the Kingdom’s delegation in the first Meeting of the Strategic Political Defense Committee. We affirmed our commitment to activating the Makkah Joint Defense Agreement pathways in a way that strengthens integration and advances security and stability. pic.twitter.com/C0hxeEM3wJ
— Khalid bin Salman خالد بن سلمان (@kbsalsaud) August 31, 2026
ಈ ಮೂರು ದೇಶಗಳು ತಮ್ಮ ಪ್ರದೇಶದಲ್ಲಿ ಸುಸ್ಥಿರ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ಮಕ್ಕಾ ಒಪ್ಪಂದದ ಚೌಕಟ್ಟಿನೊಳಗೆ ಒಟ್ಟಾಗಿ ಕೆಲಸ ಮಾಡುವ ತಮ್ಮ ದೃಢಸಂಕಲ್ಪವನ್ನು ಪುನರುಚ್ಚರಿಸಿವೆ.
ಈ ನಿಟ್ಟಿನಲ್ಲಿ ಬಿಕ್ಕಟ್ಟುಗಳ ಶಾಂತಿಯುತ ಪರಿಹಾರವನ್ನು ಉತ್ತೇಜಿಸಲು ಉದ್ವಿಗ್ನತೆಯನ್ನು ತಗ್ಗಿಸುವ ಮತ್ತು ಸಂಯಮ ಪಾಲಿಸುವ ಪ್ರಯತ್ನಗಳಿಗೆ ಬೆಂಬಲವನ್ನು ಮುಂದುವರಿಸಲಿದ್ದಾರೆ.
I was pleased to lead the Kingdom’s delegation in the first Meeting of the Strategic Political Defense Committee. We affirmed our commitment to activating the Makkah Joint Defense Agreement pathways in a way that strengthens integration and advances security and stability. pic.twitter.com/C0hxeEM3wJ
— Khalid bin Salman خالد بن سلمان (@kbsalsaud) August 31, 2026
ಈ ಸಹಕಾರವು ಅವುಗಳ ಒಗ್ಗಟ್ಟನ್ನು ಬಲಪಡಿಸುವ, ಸಾಮೂಹಿಕ ಪ್ರತಿಬಂಧಕ ಶಕ್ತಿ ಹಾಗೂ ರಕ್ಷಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವನ್ನು ಖಾತ್ರಿಪಡಿಸುವ ಹಾಗೂ ನ್ಯಾಯಯುತ, ಎಲ್ಲರನ್ನೂ ಒಳಗೊಂಡ ಮತ್ತು ಶಾಶ್ವತ ಶಾಂತಿಗಾಗಿನ ಪ್ರಾದೇಶಿಕ ಪ್ರಯತ್ನಗಳು ಹಾಗೂ ಸಹಕಾರಯುತ ಭದ್ರತೆಗೆ ಕೊಡುಗೆ ನೀಡುವ ರೀತಿಯಲ್ಲಿ ಇರಲಿದೆ.
ದೃಢವಾದ ರಕ್ಷಣಾ ಕೈಗಾರಿಕಾ ಸಹಕಾರ, ಜಂಟಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉತ್ಪಾದನೆಯಂತಹ ಕ್ರಮಗಳ ಮೂಲಕ ತಮ್ಮ ರಕ್ಷಣಾ ಸಾಮರ್ಥ್ಯ ಹಾಗೂ ಸಶಸ್ತ್ರ ಪಡೆಗಳ ಹೊಂದಾಣಿಕೆಯನ್ನು ಬಲಪಡಿಸಲು ಅವು ಕಾರ್ಯನಿರ್ವಹಿಸಲಿವೆ. ಈ ಮೂರೂ ದೇಶಗಳು ಜಂಟಿ ಚಟುವಟಿಕೆಗಳ ಮೂಲಕ ತಮ್ಮ ರಕ್ಷಣಾ ಸಾಮರ್ಥ್ಯ ಹಾಗೂ ಸಶಸ್ತ್ರ ಪಡೆಗಳ ನಡುವಿನ ಹೊಂದಾಣಿಕೆಯನ್ನು ಬಲಪಡಿಸಲು ಸಹಮತ ವ್ಯಕ್ತಪಡಿಸಿದವು.
ಮಕ್ಕಾ ಒಪ್ಪಂದದ ಮೂಲಕ ಆ ಮೂರು ದೇಶಗಳು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅಗತ್ಯ ಕೊಡುಗೆಗಳನ್ನು ನೀಡಲಿವೆ. ಈ ಮೈತ್ರಿಕೂಟವು ನ್ಯಾಟೋದ 5ನೇ ವಿಧಿಯಂತೆಯೇ ಸಾಮೂಹಿಕ ರಕ್ಷಣೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದ್ದರೂ, ಇದು ಯಾವುದೇ ನಿರ್ದಿಷ್ಟ ಶತ್ರುವಿನ ವಿರುದ್ಧವಾಗಿಲ್ಲ ಎಂದು ಸದಸ್ಯ ರಾಷ್ಟ್ರಗಳು ಒತ್ತಿಹೇಳಿವೆ.
ಇವುಗಳನ್ನೂ ಓದಿ:
ಮಧ್ಯಪ್ರಾಚ್ಯ ಯುದ್ಧ ಆರಂಭದ ಬಳಿಕ ಮೊದಲ ಬಾರಿಗೆ ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಭೇಟಿಯಾದ ಪ್ರಧಾನಿ ಮೋದಿ
ಯುಎಇಯಲ್ಲಿನ ಅಮೆರಿಕ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿದ ಇರಾನ್: ಹೆಲಿಕಾಪ್ಟರ್ ನಾಶ?

