ಪ್ಯಾಲೆಸ್ತೇನಿಯನ್ ನಿರಾಶ್ರಿತರಿಗೆ ಸಹಾಯ ಮಾಡುವ ನೆರವು ಗುಂಪುಗಳಿಗೆ ಇಸ್ರೇಲ್ ಸುಪ್ರೀಂ ಕೋರ್ಟ್ ಅನುಮತಿ
ಇಸ್ರೇಲಿ ಪಡೆಗಳು ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, ಅವರಲ್ಲಿ ನಾಲ್ವರು ಹಮಾಸ್ ನೇತೃತ್ವದ ಪೊಲೀಸ್ ಸಿಬ್ಬಂದಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Published : February 28, 2026 at 10:46 AM IST
ಟೆಲ್ ಅವಿವ್, ಇಸ್ರೇಲ್: ಗಾಜಾ ಪಟ್ಟಿ ಮತ್ತು ಇತರ ಪ್ಯಾಲೆಸ್ತೇನಿಯನ್ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ನೆರವು ಗುಂಪುಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಇಸ್ರೇಲ್‌ನ ಉನ್ನತ ನ್ಯಾಯಾಲಯವು ಅವಕಾಶ ನೀಡಿದೆ. ಇಸ್ರೇಲಿ ದಾಳಿಯಲ್ಲಿ ಯುದ್ಧಪೀಡಿತ ಪ್ರದೇಶದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ ನಂತರ ಈ ಆದೇಶ ಹೊರ ಬಂದಿದೆ.
17 ನೆರವು ಗುಂಪುಗಳ ಅರ್ಜಿ ವಿಚಾರಣೆ ನಡೆಸಿದ ಇಸ್ರೇಲ್ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಹಿಂದೆ ಇಸ್ರೇಲ್ ಹೊಸ ನಿಯಮದಂತೆ ಇಸ್ರೇಲ್ ಸರ್ಕಾರ ನೆರವು ಗುಂಪುಗಳ ಸಹಾಯಕ್ಕೆ ನಿರ್ಧಾರವನ್ನು ಪರಿಣಾಮಕಾರಿಯಾಗಿ ತಡೆಹಿಡಿದಿದೆ.
ಕಳೆದ ವರ್ಷ ಪರಿಚಯಿಸಲಾದ ನಿಯಮಗಳಂತೆ 37 ನೆರವು ಗುಂಪುಗಳಿಗೆ ಮಾರ್ಚ್ 1ರವರೆಗೆ ನಿಷೇಧಿಸಿ ಇಸ್ರೇಲ್ ಘೋಷಿಸಿತು. ನೆರವು ಗುಂಪುಗಳು ಉದ್ಯೋಗಿಗಳ ಹೆಸರುಗಳು ಮತ್ತು ಸಂಪರ್ಕ ಮಾಹಿತಿಯನ್ನು ನೋಂದಾಯಿಸಿಕೊಳ್ಳಬೇಕು. ಅವುಗಳ ಹಣಕಾಸು ಮತ್ತು ಕಾರ್ಯಾಚರಣೆಗಳ ಬಗ್ಗೆ ವಿವರಗಳನ್ನು ನೀಡಬೇಕು.
ಇದಕ್ಕೆ ವಾದಿಸಿದ ಗುಂಪುಗಳು ಈ ಈ ನಿಯಮಗಳನ್ನು ಆಕ್ರಮಣಕಾರಿ ಮತ್ತು ಅನಿಯಂತ್ರಿತವಾಗಿದೆ. ಈ ನಿಷೇಧವು ನಿರ್ಣಾಯಕ ಸಹಾಯಕ್ಕೆ ಅಡ್ಡಿಯಾಗುತ್ತದೆ ಎಂದು ತಿಳಿಸಿತು. ಆದರೆ, ಇಸ್ರೇಲ್ ಮಾನವೀಯ ಸಂಘಟನೆಗಳ ನೆಪದಲ್ಲಿ ಸಶಸ್ತ್ರ ಗುಂಪುಗಳು ನುಸುಳದಂತೆ ಖಚಿತಪಡಿಸಿಕೊಳ್ಳಲು ಹೊಸ ಕ್ರಮಗಳು ಅಗತ್ಯ ಎಂದು ವಾದಿಸಿತು.
ಈ ಆದೇಶವೂ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಇನ್ನೂ ಬಹಳ ದೂರ ಸಾಗಬೇಕಾಗಿದೆ ಎಂದು ಪ್ಯಾಲೆಸ್ತೇನಿಯನ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 100ಕ್ಕೂ ಹೆಚ್ಚು ನೆರವು ಗುಂಪುಗಳನ್ನು ಪ್ರತಿನಿಧಿಸುತ್ತಿರುವ ಸಂಘಟನೆಯಾದ ಎಐಡಿಎ ಕಾರ್ಯ ನಿರ್ವಾಹಕ ನಿರ್ದೇಶಕಿ ಅಥೇನಾ ರೇಬರ್ನ್ ತಿಳಿಸಿದ್ದಾರೆ.
ನಾರ್ವೇಜಿಯನ್ ನಿರಾಶ್ರಿತರ ಮಂಡಳಿಯು ತಡೆಯಾಜ್ಞೆಯನ್ನು ಸ್ವಾಗತಿಸಿದೆ. ಆದರೆ, ಅದು ಭಾಗಶಃ ಪರಿಹಾರವನ್ನು ಮಾತ್ರ ನೀಡುತ್ತದೆ. ಇದು ವೀಸಾಗಳನ್ನು ಪುನಃಸ್ಥಾಪಿಸುವುದಿಲ್ಲ, ಪ್ರವೇಶವನ್ನು ತೆರೆಯುವುದಿಲ್ಲ ಅಥವಾ ನೆರವು ವಿತರಣೆಯ ಮೇಲೆ ಪರಿಣಾಮ ಬೀರುವ ವ್ಯಾಪಕ ನಿರ್ಬಂಧಗಳನ್ನು ಪರಿಹರಿಸುವುದಿಲ್ಲ ಎಂದಿದ್ದಾರೆ.
ರಾತ್ರಿಯಿಡಿ ನಡೆಸಿದ ದಾಳಿಯಲ್ಲಿ ಕನಿಷ್ಠ ಐವರು ಸಾವು: ಈ ನಡುವೆ ಇಸ್ರೇಲ್ ರಾತ್ರಿಯಿಡೀ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ನಾಲ್ವರು ಹಮಾಸ್ ನೇತೃತ್ವದ ಪೊಲೀಸ್ ಸಿಬ್ಬಂದಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ ಇಂತಹ ದಾಳಿಗಳು ಪದೇ ಪದೆ ಕದನ ವಿರಾಮವನ್ನು ಅಡ್ಡಿಪಡಿಸಿವೆ. ಹೆಚ್ಚುತ್ತಿರುವ ಪ್ಯಾಲೆಸ್ತೇನಿಯನ್ ಸಾವಿನ ಸಂಖ್ಯೆಯು ಗಾಜಾದಲ್ಲಿ ಅನೇಕರನ್ನು ಯುದ್ಧ ಎಂದಿಗೂ ಮುಗಿಯಲಿಲ್ಲ ಎಂಬ ಭಾವನೆ ಮೂಡಿಸಿದೆ.
ಅಕ್ಟೋಬರ್‌ನಲ್ಲಿ ಅಮೆರಿಕ ನಡೆಸಿದ ಮಾತುಕತೆಯ ಕದನ ವಿರಾಮವು ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಎರಡು ವರ್ಷಗಳ ಯುದ್ದದಿಂದ ಪ್ರದೇಶಗಳು ಸಾಕಷ್ಟು ನಾಶಗೊಂಡಿದ್ದು, ಗಾಜಾದ 2 ಮಿಲಿಯನ್ ಪ್ಯಾಲೆಸ್ತೇನಿಯನ್ನರಲ್ಲಿ ಹೆಚ್ಚಿನವರು ಅಂತಾರಾಷ್ಟ್ರೀಯ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ. ಇಸ್ರೇಲ್ ಉಗ್ರಗಾಮಿಗಳು ಎಂದು ಹೇಳುವವರ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ, ಆಗಾಗ್ಗೆ ನಾಗರಿಕರನ್ನು ಕೊಲ್ಲುತ್ತದೆ.
ಇದನ್ನೂ ಓದಿ:
ಇಸ್ರೇಲ್ ಪರವಾಗಿ ನಿಂತಿದ್ದಕ್ಕೆ ಧನ್ಯವಾದ ಅರ್ಪಿಸಿದ ನೆತನ್ಯಾಹು: ಮೋದಿ ಸ್ನೇಹಿತನಿಗಿಂತ ಹೆಚ್ಚು ಎಂದು ಬಣ್ಣನೆ
ಹಣ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತ: 15 ಮಂದಿ ಸಾವು, ಹಲವು ಕಾರುಗಳು ನಾಶ

