ETV Bharat / international

ಇಸ್ರೇಲ್​-ಯುಎಸ್​ ದಾಳಿ ಎದುರಿಸಲು, ಇರಾನ್​ ರಕ್ಷಣೆಗೆ 2ನೇ ಸಭೆ ನಡೆಸಿದ ತಾತ್ಕಾಲಿಕ ನಾಯಕತ್ವ ಮಂಡಳಿ

ಇಸ್ರೇಲ್​ ಮತ್ತು ಅಮೆರಿಕದ ದಾಳಿಯನ್ನು ಎದುರಿಸಲು ಮತ್ತು ಇರಾನ್​ ರಕ್ಷಣೆಗೆ ಬೇಕಾದ ಕ್ರಮಗಳ ಕುರಿತು ತಾತ್ಕಾಲಿಕ ನಾಯಕತ್ವ ಮಂಡಳಿಯು ತನ್ನ ಎರಡನೇ ಸಭೆಯನ್ನು ನಡೆಸಿದೆ.

IRANS LEADERSHIP COUNCIL
ಸಭೆಯಲ್ಲಿ ಭಾಗವಹಿಸಿದ್ದ ತಾತ್ಕಾಲಿಕ ನಾಯಕತ್ವ ಮಂಡಳಿ ಸದಸ್ಯರು (IRNA News Agency)
author img

By ANI

Published : March 2, 2026 at 5:52 PM IST

2 Min Read
Choose ETV Bharat

ಟೆಹ್ರಾನ್ (ಇರಾನ್): ಇರಾನ್‌ನ ತಾತ್ಕಾಲಿಕ ನಾಯಕತ್ವ ಮಂಡಳಿಯು ಇರಾನ್ ಅಧ್ಯಕ್ಷ ಮಸೌದ್ ಪೆಜೆಕ್ಷಿಯಾನ್, ನ್ಯಾಯಾಂಗ ಮುಖ್ಯಸ್ಥ ಘೋಲಮ್‌ಹೊಸೇನ್ ಮೊಹ್ಸೆನಿ-ಎಜೆಯಿ ಮತ್ತು ಹಂಗಾಮಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿರೆಜಾ ಅರಾಫಿ ಅವರ ಸಮ್ಮುಖದಲ್ಲಿ ಎರಡನೇ ಸಭೆ ನಡೆಸಿ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.

ಈ ಬಗ್ಗೆ ಇರಾನ್​​ ಸುದ್ದಿ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು ಅಮೆರಿಕದ ಆಪರೇಷನ್ ಎಪಿಕ್ ಫ್ಯೂರಿ, ಇಸ್ರೇಲ್​ನ ರೋರಿಂಗ್ ಲಯನ್‌ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ. ಇದರಲ್ಲಿ ಖಮೇನಿ ಜೊತೆಗೆ 40 ಪ್ರಮುಖ ನಾಯಕರೂ ಹತರಾಗಿದ್ದಾರೆ.

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಮತ್ತು ಉನ್ನತ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ ನಂತರ ತಾತ್ಕಾಲಿಕ ನಾಯಕತ್ವ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಸೇರಿದಂತೆ ಮಧ್ಯಂತರ ಮಂಡಳಿಯು ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ ಈ ಹಂಗಾಮಿ ಮಂಡಳಿಯು ದೇಶದ ಮೇಲ್ವಿಚಾರಣೆ ನಡೆಸಲಿದೆ.

ಗಾರ್ಡಿಯನ್ ಸಮಿತಿ ಸದಸ್ಯ ನಾಯಕನಾಗಿ ಆಯ್ಕೆ: ಹಂಗಾಮಿ ನಾಯಕನಾಗಿ ಆಯ್ಕೆಯಾಗಿರುವ ಅಯತೊಲ್ಲಾ ಅಲಿರೆಜಾ ಅರಾಫಿ 2019 ರಿಂದ ಗಾರ್ಡಿಯನ್ ಕೌನ್ಸಿಲ್‌ನ ಸದಸ್ಯರಾಗಿದ್ದಾರೆ. ಈ ಸಮಿತಿಯಲ್ಲಿನ ಓರ್ವ ಸದಸ್ಯರನ್ನು ಸರ್ವೋಚ್ಚ ನಾಯಕನನ್ನಾಗಿ ನೇಮಕ ಮಾಡಲಾಗುತ್ತದೆ. ಇದು ಇರಾನ್‌ನ ಕಾನೂನುಗಳು ಮತ್ತು ನೀತಿಗಳನ್ನು ಇಸ್ಲಾಮಿಕ್ ತತ್ವಗಳಿಗೆ ಅನುಗುಣವಾಗಿ ನಡೆಯುವಂತೆ ಪರಿಶೀಲಿಸುವ ಸಮಿತಿಯಾಗಿದೆ. ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಗಳನ್ನು ಅನುಮೋದಿಸುವ, ಚುನಾವಣೆಗಳ ಮೇಲ್ವಿಚಾರಣೆ, ಸಂಸತ್ತು ಅಂಗೀಕರಿಸಿದ ಶಾಸನದ ಮೇಲೆ ವಿಟೋ ಅಧಿಕಾರ ಹೊಂದಿದೆ.

ಸಭೆಯಲ್ಲಿ ಭಾಗವಹಿಸಿದ್ದ ಘೋಲಮ್‌ಹೊಸೇನ್ ಮೊಹ್ಸೇನಿ ಎಜೀ ಅವರು ಹಿರಿಯ ಧಾರ್ಮಿಕ ನಾಯಕರಾಗಿದ್ದಾರೆ. ಜುಲೈ 2021 ರಲ್ಲಿ ಖಮೇನಿ ಅವರಿಂದ ಈ ಹುದ್ದೆಗೆ ನೇಮಿಸಿದಾಗಿನಿಂದ ನ್ಯಾಯಾಂಗದ ಮುಖ್ಯಸ್ಥರಾಗಿದ್ದಾರೆ. 2005-2009 ರವರೆಗೆ ಅವರು ಗುಪ್ತಚರ ಸಚಿವರಾಗಿ ಮತ್ತು ನಂತರ ಪ್ರಾಸಿಕ್ಯೂಟರ್ ಜನರಲ್, ಮೊದಲ ಉಪ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ಇರಾನ್​​ನ ಹಲವೆಡೆ 201 ಸಾವು: ಇರಾನ್​​ನ 24 ಪ್ರಾಂತ್ಯಗಳಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 201 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಖಮೇನಿ ಹತ್ಯೆಯ ನಂತರ, ಟ್ರಂಪ್ ಮತ್ತೆ ಇರಾನಿನ ಜನರನ್ನು ದಂಗೆ ಏಳಲು ಪ್ರಚೋದಿಸಿದ್ದಾರೆ. ಅಸ್ತಿತ್ವದಲ್ಲಿರುವ ಸರ್ಕಾರವನ್ನು ಉರುಳಿಸುವಂತೆ ಕರೆ ನೀಡಿದ್ದಾರೆ. 'ಇದು ಬಹುಶಃ ತಲೆಮಾರುಗಳಿಗೆ ಒಮ್ಮೆ ಬರುವ ಏಕೈಕ ಅವಕಾಶವಾಗಿದೆ. ಇದನ್ನು ಬಳಸಿಕೊಂಡು ಸರ್ಕಾರವನ್ನು ಪತನಗೊಳಿಸಿ' ಎಂದಿದ್ದಾರೆ.

ಇವುಗಳನ್ನೂ ಓದಿ: