ETV Bharat / international

ಟೆಹ್ರಾನ್ ನೆತನ್ಯಾಹುರನ್ನ ನರಕಕ್ಕೆ ಕಳುಹಿಸುತ್ತದೆ ಎಂದು ಗುಡುಗಿದ ಇರಾನ್ ಭದ್ರತಾ ಮುಖ್ಯಸ್ಥ: ಯುದ್ಧ ತೀವ್ರಗೊಳಿಸುವ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗನನ್ನು ಹತ್ಯೆ ಮಾಡಲು ಇರಾನ್​ ಸಂಚು ರೂಪಿಸಿದೆ ಎಂದು ನೆತನ್ಯಾಹು ಸುಳ್ಳು ಮಾಹಿತಿಯನ್ನು ಹರಡಿದ್ದಾರೆ ಎಂದು ರೆಝಾಯಿ ಗರಂ ಆಗಿದ್ದಾರೆ.

Iran security chief Rezaei says Tehran will "send Netanyahu to hell"; warns of severe confrontation
ಟೆಹ್ರಾನ್ ನೆತನ್ಯಾಹುರನ್ನ ನರಕಕ್ಕೆ ಕಳುಹಿಸುತ್ತದೆ ಎಂದ ಇರಾನ್ ಭದ್ರತಾ ಮುಖ್ಯಸ್ಥ: (ANI)
author img

By ANI

Published : August 28, 2026 at 9:19 AM IST

2 Min Read
Choose ETV Bharat

ಟೆಹ್ರಾನ್, ಇರಾನ್​: ದಿಗ್ಬಂಧನ ಮುಂದುವರಿದರೆ ಅಮೆರಿಕದೊಂದಿಗೆ ತೀವ್ರ ಘರ್ಷಣೆ ಮುಂದುವರೆಯಲಿದೆ ಎಂದು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೇಜರ್ ಜನರಲ್ ಮೊಹ್ಸೆನ್ ರೆಝಾಯಿ ಎಚ್ಚರಿಸಿದ್ದಾರೆ. ಇಸ್ರೇಲ್‌ನೊಂದಿಗಿನ ಯಾವುದೇ ಹೊಸ ಸಂಘರ್ಷವು ಮುಖಾಮುಖಿಯ ವಿಭಿನ್ನ ಹಂತವನ್ನು ಮುಟ್ಟುತ್ತದೆ ಎಂದು ಅವರು ಇದೇ ವೇಳೆ ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ.

ಇರಾನ್ ಸುದ್ದಿ ಸಂಸ್ಥೆ IRIB ವರದಿ ಮಾಡಿದಂತೆ, ಅಲ್ -ಮನಾರ್‌ಗೆ ನೀಡಿದ ಸಂದರ್ಶನದಲ್ಲಿ ರೆಝಾಯಿ ಅವರು, ಜಿಯೋನಿಸ್ಟ್ ಆಡಳಿತದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟೆಹ್ರಾನ್ ನರಕಕ್ಕೆ ಕಳುಹಿಸುತ್ತದೆ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿಯ ಕ್ರಮಗಳು ಜಿಯೋನಿಸ್ಟ್ ಆಡಳಿತದ ಅಸ್ತಿತ್ವದ ಅಂತ್ಯವನ್ನು ಹತ್ತಿರಕ್ಕೆ ತಂದಿವೆ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗನನ್ನು ಹತ್ಯೆ ಮಾಡಲು ಇರಾನ್​ ಸಂಚು ರೂಪಿಸಿದೆ ಎಂದು ನೆತನ್ಯಾಹು ಸುಳ್ಳು ಮಾಹಿತಿಯನ್ನು ಹರಡಿದ್ದಾರೆ ಎಂದು ಗರಂ ಆಗಿರುವ ರೆಝಾಯಿ, ಈ ವರದಿಗಳು ಟ್ರಂಪ್ ಅವರನ್ನು ಭಯಭೀತಗೊಳಿಸಿವೆ ಎಂದು ಹೇಳಿದ್ದಾರೆ.

ನೆತನ್ಯಾಹು ಟ್ರಂಪ್ ಅವರನ್ನು ಭೀತಿಗೊಳಿಸುವ ಕೆಲಸ ಮಾಡಿದ್ದಾರೆ. ಟ್ರಂಪ್ ಹತ್ಯೆಗೆ ಇರಾನ್​ ಸಂಚು ಎಂಬ ಸುಳ್ಳು ಸುದ್ದಿ ಹರಡುವ ಮೂಲಕ ಅವರ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಅಡ್ಡಿಪಡಿಸಿದ್ದಾರೆ. ಈ ಸುದ್ದಿಗೆ ಹೆದರಿ, ಟ್ರಂಪ್ ಟ್ರಕ್ ಕೆಲಸಗಾರನಂತೆ ತಿರುಗಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಲೆಬನಾನ್ ಜೊತೆಗಿನ ಇಸ್ರೇಲ್ ಸಂಘರ್ಷದ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಭವಿಷ್ಯದ ಯಾವುದೇ ಸಂಘರ್ಷವು ಹಿಂದಿನ ಯುದ್ಧಗಳಿಗಿಂತ ಭಿನ್ನವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಾವು ಪರಿಸ್ಥಿತಿಯನ್ನು ಪೂರ್ಣ ಗಂಭೀರವಾಗಿ ಪರಿಗಣಿಸಿದ್ದೇವೆ. ಲೆಬನಾನ್‌ನಲ್ಲಿರುವ ಆಕ್ರಮಿತ ಪ್ರದೇಶಗಳಿಂದ ಇಸ್ರೇಲ್ ಹಿಂದೆ ಸರಿಯಬೇಕು ಎಂದು ಒತ್ತಾಯಿಸಲಾಗುವುದು. ಸಂಘರ್ಷ ಪುನರಾರಂಭವಾದರೆ, ನಾವು ಹೊಸ ಹಂತಕ್ಕೆ ತೆಗೆದುಕೊಂಡು ಹೋಗಲು ನಾವು ಸಿದ್ದರಾಗುತ್ತಿದ್ದೇವೆ ಎಂದು ರೆಝಾಯಿ ಹೇಳಿದ್ದಾರೆ.

ಆರ್ಥಿಕ ಒತ್ತಡವನ್ನು ಹೆಚ್ಚಿಸುವ ಮೂಲಕ ಅಮೆರಿಕ ತನ್ನ ಮಿಲಿಟರಿ ದಾಳಿಯ ವೈಫಲ್ಯವನ್ನು ತೋರಿಸಿಕೊಳ್ಳುತ್ತಿದೆ ಎಂದು ಎಂದು ರೆಝಾಯಿ ಲೇವಡಿ ಮಾಡಿದ್ದಾರೆ. ಈ ಪ್ರದೇಶದಲ್ಲಿ ಅಮೆರಿಕದ ಆರ್ಥಿಕ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ನಡೆಸುವ ಯಾವುದೇ ಕ್ರಮಗಳಿಗೆ ನಾವು ಪ್ರತಿಕ್ರಿಯಿಸುತ್ತೇವೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇರಾನ್‌ನ ತೈಲ ರಫ್ತಿನ ಕುರಿತು ಮಾತನಾಡಿರುವ ರೆಝಾಯಿ, ಕದನ ವಿರಾಮದ ಅವಧಿಯಲ್ಲಿ ಟೆಹ್ರಾನ್ 70 ಮಿಲಿಯನ್‌ನಿಂದ 80 ಮಿಲಿಯನ್ ಬ್ಯಾರೆಲ್‌ಗಳವರೆಗೆ ತೈಲವನ್ನು ರಫ್ತು ಮಾಡಿದೆ ಎಂದು ಹೇಳಿದ್ದಾರೆ. ಮುತ್ತಿಗೆಯನ್ನು ಮುಂದುವರಿಸುವುದು ಎಂದರೆ ಅಮೆರಿಕದ ಶತ್ರುಗಳೊಂದಿಗಿನ ತೀವ್ರ ಮುಖಾಮುಖಿ ಎಂದರ್ಥ. ಕದನ ವಿರಾಮದ ಅವಧಿಯಲ್ಲಿ ನಾವು 80 ಮಿಲಿಯನ್ ಬ್ಯಾರೆಲ್‌ಗಳ ತೈಲವನ್ನು ರಫ್ತು ಮಾಡಿದ್ದೇವೆ. ದಿಗ್ಬಂಧನ ಮುಂದುವರಿದರೆ, ನಾವು ಅಮೆರಿಕದ ಆರ್ಥಿಕ ಹಿತಾಸಕ್ತಿಗಳನ್ನು 100 ಪ್ರತಿಶತದಷ್ಟು ತೀವ್ರತೆ ಮತ್ತು ಬಲದಿಂದ ಗುರಿಯಾಗಿಸಿಕೊಳ್ಳುತ್ತೇವೆ ಎಂದು ರೆಝಾಯಿ ಸ್ಪಷ್ಟ ಪಡಿಸಿದ್ದಾರೆ.

ಆಗಸ್ಟ್ 24 ರಂದು, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ವಿರುದ್ಧದ ಇತ್ತೀಚಿನ ನಿರ್ಬಂಧಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರನ್ನು ಹೊಗಳಿದ್ದರು. X ಪೋಸ್ಟ್ ಮಾಡಿದ್ದ ನೆತನ್ಯಾಹು, ಇರಾನ್ ಆಡಳಿತದ ವಿರುದ್ಧದ ಇತ್ತೀಚಿನ ನಿರ್ಬಂಧಗಳಿಗೆ ಅಧ್ಯಕ್ಷ @realDonaldTrump ಮತ್ತು ಕಾರ್ಯದರ್ಶಿ @SecScottBessent ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದರು.

ಆಗಸ್ಟ್ 24 ರಂದು ಅಮೆರಿಕವು ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್ ಅಡಿ ಇರಾನ್‌ನ ಮಿಲಿಟರಿ ಚಟುವಟಿಕೆಗಳು, ಖರೀದಿ ಜಾಲಗಳು ಮತ್ತು ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ವ್ಯಾಪಾರಕ್ಕೆ ಸಂಬಂಧಿಸಿದ ಆರೋಪದ ಮೇಲೆ ಸುಮಾರು 60 ಸಂಸ್ಥೆಗಳು, ವ್ಯಕ್ತಿಗಳು ಮತ್ತು ಹಡಗುಗಳನ್ನು ಗುರಿಯಾಗಿಸಿಕೊಂಡು ಹೊಸ ನಿರ್ಬಂಧಗಳನ್ನು ಘೋಷಿಸಿದ ನಂತರ ನೆತನ್ಯಾಹು ಅವರು ಈ ಹೇಳಿಕೆ ನೀಡಿದ್ದರು.

ಇವುಗಳನ್ನೂ ಓದಿ:

ಸೆಪ್ಟೆಂಬರ್​ 11ರ ದಾಳಿ ಸಂಚಿನ ರೂವಾರಿ​​ ಖಾಲಿದ್​ ಶೇಖ್​ ಮೊಹಮ್ಮದ್​ ವಿಚಾರಣೆ 2028ರಿಂದ ಆರಂಭ

ಗಡಿ ವಿವಾದ ಇತ್ಯರ್ಥಕ್ಕೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಭಾರತ ಮತ್ತು ಚೀನಾ ಸಮ್ಮತಿ!