'ಕುವೈತ್‌ನಲ್ಲಿ ಅಮೆರಿಕದ F15 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ': ಫೋಟೋ, ವಿಡಿಯೋ ರಿಲೀಸ್ ಮಾಡಿದ ಇರಾನ್
ಕುವೈತ್ ಸ್ಥಳೀಯ ಕಾಲಮಾನ ಸೋಮವಾರ ಬೆಳಗ್ಗೆ ಅಮೆರಿಕದ ಎಫ್ 15 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದು ಇರಾನ್ ತಿಳಿಸಿದೆ.


Published : March 2, 2026 at 1:21 PM IST
|Updated : March 2, 2026 at 1:27 PM IST
ಟೆಹ್ರಾನ್(ಇರಾನ್): ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸೇರಿ ಹಲವು ಪ್ರಮುಖರು ಹತ್ಯೆಯಾಗಿದ್ದು, ಇದರಿಂದಾಗಿ ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ನೆರೆ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ನಿರಂತರವಾಗಿ ಕ್ಷಿಪಣಿ, ಡ್ರೋಣ್ ದಾಳಿ ನಡೆಸುತ್ತಿದ್ದು, ಇಂದು ಕುವೈತ್ ಮೇಲೆ ನಡೆಸಿದ ದಾಳಿಯಲ್ಲಿ ಅಮೆರಿಕದ ಎಫ್-15 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದಾಗಿ ತಿಳಿಸಿದೆ. ಈ ಕುರಿತು ಇರಾನ್‌ನ ಇಸ್ಲಾಮಿಕ್ ರಿಪಬ್ಲಿಕನ್ ಏಜೆನ್ಸಿ ವರದಿ (ಐಆರ್ಎನ್ಎ) ಮಾಡಿದೆ.
ಕುವೈತ್‌ನಲ್ಲಿ ಅಮೆರಿಕದ ಎಫ್-15 ಫೈಟರ್ ಜೆಟ್ ಹೊಡೆದುರುಳಿಸಿದ್ದಾಗಿ ಐಆರ್ಎನ್ಎ, ಫೋಟೋ, ವಿಡಿಯೋ ಕ್ಲಿಪ್ಗಳನ್ನು ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
US F-15 Fighter Jet Downed in Kuwait
— IRNA News Agency ☫ (@IrnaEnglish) March 2, 2026
According to local sources, a US F-15 fighter jet was shot down in the skies above Kuwait earlier on Monday morning. pic.twitter.com/UIyTkZllEX
ಇದಕ್ಕೆ ಮುನ್ನ ಪೋಸ್ಟ್ ಹಂಚಿಕೊಂಡಿದ್ದ ಅಮೆರಿಕದ ಸೆಂಟ್ರಲ್ ಕಮಾಂಡ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಇರಾನ್ ರಾಯಭಾರಿ, ತಮ್ಮ ಪ್ರತಿಕ್ರಿಯೆಗಳು ಸಂಪೂರ್ಣವಾಗಿ ಅಮೆರಿಕದ ನೆಲೆಗಳು ಮತ್ತು ಸ್ವತ್ತುಗಳ ಮೇಲೆ ನಿರ್ದೇಶಿಸಲ್ಪಟ್ಟಿವೆ ಎಂದಿದ್ದು ಸುಳ್ಳು. ಇರಾನ್ ಸೇನೆ ದುಬೈ, ಕುವೈತ್ ಮತ್ತು ಜಾಯೆದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದುಬೈನ ಎರ್ಬಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇರಾಕ್, ದುಬೈ ಬಂದರು ಮತ್ತು ಇಸ್ರೇಲ್, ಬಹ್ರೇನ್ ಮತ್ತು ಕತಾರ್‌ನಲ್ಲಿರುವ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ.
ಅಲ್ ಜಜೀರಾ ವರದಿಯಂತೆ ಸೋಮವಾರ ಅಬುದಾಭಿ, ದುಬೈ ಮತ್ತು ದೋಹಾದಲ್ಲಿ ಸ್ಪೋಟದ ಸದ್ದುಗಳು ಕೇಳಿಬಂದಿವೆ. ಅರಬ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಕುವೈತ್ ಮತ್ತು ಬಹ್ರೈನ್ನಲ್ಲಿ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆದಿದ್ದು, ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಕುವೈತ್ನ ಅಮೆರಿಕ ರಾಯಭಾರ ಕಚೇರಿಯಲ್ಲಿ ದಟ್ಟ ಹೊಗೆ ಕಂಡುಬಂದಿದೆ.
ಕುವೈತ್ ಸೇನೆಯ ಪ್ರಕಾರ, ಇಂದು ಕುವೈತ್ ವಾಯು ರಕ್ಷಣಾ ಪಡೆ ಹಲವು ವೈಮಾನಿಕ ಗುರಿಗಳನ್ನು ಹೊಡೆದುರುಳಿಸಿದೆ. ದೇಶದ ವಾಯುಪ್ರದೇಶವನ್ನು ರಕ್ಷಿಸಲು ಸಂಪೂರ್ಣ ಸಿದ್ಧತೆ ನಡೆಸಿದ್ದು, ಹಲವು ದಾಳಿಗಳನ್ನು ತಡೆಹಿಡಿದಿದೆ. ಯಾವುದೇ ಸಂಭಾವ್ಯ ಬೆಳವಣಿಗೆಗಳು ದೇಶದ ಭದ್ರತೆ ಮತ್ತು ಸ್ಥಿರತೆಯ ಸಂರಕ್ಷಣೆಯನ್ನು ಖಚಿತಪಡಿಸುತ್ತವೆ ಎಂದು ತಿಳಿಸಿದೆ.
ಅಮೆರಿಕ ರಾಯಭಾರ ಕಚೇರಿ ಕೂಡ ಕುವೈತ್ನಲ್ಲಿರುವ ಅಮೆರಿಕನ್ನರಿಗೆ ರಾಯಭಾರ ಕಚೇರಿಗೆ ಬಾರದಂತೆ ಸೂಚನೆ ನೀಡಿದ್ದು, ಸುರಕ್ಷಿತವಾಗಿರುವಂತೆ ತಿಳಿಸಿದೆ.
ಇವುಗಳನ್ನೂ ಓದಿ:

