ETV Bharat / international

ಅಮೆರಿಕದ ಅಬ್ರಹಾಂ ಲಿಂಕನ್​ ವಿಮಾನವಾಹಕ ಯುದ್ಧ ನೌಕೆ ಹೊಡೆದು ಹಾಕಿದ್ದೇವೆ ಎಂದ ಇರಾನ್​: ಅಮೆರಿಕ ಹೇಳಿದ್ದು ಹೀಗೆ

ಇಸ್ರೇಲ್​- ಅಮೆರಿಕ ಸೇರಿ ನಡೆಸಿದ ಜಂಟಿ ದಾಳಿಗೆ ಇರಾನ್​ ಸೇನೆ ಏಕಾಂಗಿಯಾಗಿ ಟಕ್ಕರ್​ ನೀಡುತ್ತಿದೆ. ಅಮೆರಿಕ ನೆಲೆಗಳ ಮೇಲೆ ಅಲ್ಲದೆ, ಒಂದು ನೌಕೆಯನ್ನೂ ಉಡೀಸ್ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಆದ್ರೆ ಅಮೆರಿಕ ಇದನ್ನು ತಳ್ಳಿಹಾಕಿದೆ.

US ISRAEL ATTACK ON IRAN
ಅಮೆರಿಕದ ನೆಲೆಯ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದ ಎದ್ದ ಹೊಗೆ. (AP)
author img

By ETV Bharat Karnataka Team

Published : March 1, 2026 at 9:06 PM IST

2 Min Read
Choose ETV Bharat

ಟೆಹ್ರಾನ್​: ಇರಾನ್‌ನಲ್ಲಿ ಸಾವಿರಾರು ಜನರು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಶೋಕ ವ್ಯಕ್ತಪಡಿಸುತ್ತಿರುವಾಗ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರತೀಕಾರದ ಮಾತುಗಳು ಕೇಳಿಬರುತ್ತಿವೆ.

ಪ್ರತಿದಾಳಿ ನಡೆಸಿದರೆ, ಹಿಂದೆಂದೂ ಕಂಡಿರದ ಸಂಘರ್ಷವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇತ್ತ ಇರಾನ್​ ಸೇನೆ ಅಮೆರಿಕದ ವಿಮಾನವಾಹಕ ಯುದ್ಧ ನೌಕೆಯಾದ ಅಬ್ರಹಾಂ ಲಿಂಕನ್​​ ಅನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿದೆ.

"ಅಮೆರಿಕದ ವಿಮಾನವಾಹಕ ಅಬ್ರಹಾಂ ಲಿಂಕನ್ ನೌಕೆಯನ್ನು ನಮ್ಮ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಅಪ್ಪಳಿಸಿ ಪುಡಿಪುಡಿ ಮಾಡಿವೆ. ಭೂಮಿ ಮತ್ತು ಸಮುದ್ರವು ಆಕ್ರಮಣಕಾರರ ಸ್ಮಶಾನವಾಗಲಿವೆ" ಎಂದು ಎಚ್ಚರಿಕೆ ನೀಡಿದೆ.

ಆದ್ರೆ ಇರಾನ್​ನ ಈ ಹೇಳಿಕೆಯನ್ನು ಅಮೆರಿಕ ತಳ್ಳಿಹಾಕಿದೆ. ಇಂತಹ ಯಾವುದೇ ಘಟನೆ ನಡೆದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

86 ವರ್ಷದ ಖಮೇನಿಯನ್ನು ಅಮೆರಿಕ-ಇಸ್ರೇಲ್ ಜಂಟಿ​ ಪಡೆಗಳು ದಾಳಿ ನಡೆಸಿ ಹತ್ಯೆ ಮಾಡಿದ ನಂತರ ಉದ್ವಿಗ್ನತೆ ಉಂಟಾಗಿತ್ತು. ಇದಕ್ಕೆ ಪ್ರತಿಯಾಗಿ ಇರಾನ್​ ಪಡೆಗಳು ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ನೆಲೆಗಳ ಮೇಲೆ ದಾಳಿ ಆರಂಭಿಸಿವೆ. ಇದರ ನಡುವೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಇರಾನ್​​ಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ.

ದೋಹಾ (ಕತಾರ್), ಮನಾಮ (ಬಹ್ರೇನ್), ದುಬೈ (ಯುಎಇ) ಮತ್ತು ಎರ್ಬಿಲ್ (ಇರಾಕ್) ನಲ್ಲಿ ಹೊಸ ಸ್ಫೋಟಗಳು ವರದಿಯಾಗಿವೆ. ಶನಿವಾರ, ಇರಾನ್ ಈ ದೇಶಗಳಲ್ಲಿ ಮತ್ತು ಸೌದಿ ಅರೇಬಿಯಾ, ಕುವೈತ್, ಜೋರ್ಡಾನ್ ಮತ್ತು ಇರಾಕ್ ಸೇರಿದಂತೆ ಇತರ ಮಧ್ಯಪ್ರಾಚ್ಯ ದೇಶಗಳಲ್ಲಿನ ಅಮೆರಿಕದ ನೆಲೆಗಳ ಮೇಲೆ ಪ್ರತೀಕಾರದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು.

ಖಮೇನಿ ಹತ್ಯೆಯಾಗಿದೆ ಎಂದು ಟ್ರಂಪ್ ತಮ್ಮ ಟ್ರುಥ್​ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. "ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾದರು" ಎಂದು ಪೋಸ್ಟ್‌ ಮಾಡಿದ್ದರು.

ಇದಾದ ಬಳಿಕ, ಇರಾನ್​ ನಮ್ಮ ಮೇಲೆ ಪ್ರತಿ ದಾಳಿ ಮಾಡಿದರೆ, ಹಿಂದೆಂದೂ ಕಂಡಿರದ ಭೀಕರ ದಾಳಿ ನಡೆಸಲಾಗುವುದು. ನೀವು (ಇರಾನ್​) ಹಾಗೆ ಮಾಡುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಟ್ರಂಪ್​ ಹೇಳಿದ್ದಾರೆ.

ಈ ದಾಳಿಯು ಇರಾನ್‌ನಲ್ಲಿ ಅಮೆರಿಕದ ಹಸ್ತಕ್ಷೇಪದಲ್ಲಿ ಹೊಸ ಅಧ್ಯಾಯವನ್ನು ತೆರೆಯಿತು. ಪ್ರತೀಕಾರದ ಹಿಂಸಾಚಾರ ಮತ್ತು ವ್ಯಾಪಕ ಯುದ್ಧದ ಸಾಮರ್ಥ್ಯವನ್ನು ಹೊಂದಿದೆ. ಅಮೆರಿಕ ಮೊದಲು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದು ಹಲವು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುವ ಅಮೆರಿಕದ ಅಧ್ಯಕ್ಷ ಟ್ರಂಪ್​ ಆಶ್ಚರ್ಯಕರ ರೀತಿಯಲ್ಲಿ ಇರಾನ್​ ಮೇಲೆ ದಾಳಿ ನಡೆಸಿದ್ದಾರೆ. ಕಳೆದ 8 ತಿಂಗಳಲ್ಲಿ ಟ್ರಂಪ್ ಸರ್ಕಾರವು ಇರಾನ್ ಮೇಲೆ ನಡೆಸಿದ ಎರಡನೇ ದಾಳಿ ಇದಾಗಿದೆ.

ಇವುಗಳನ್ನೂ ಓದಿ: