ETV Bharat / international

ಹಾರ್ಮುಜ್ ಜಲಮಾರ್ಗದಲ್ಲಿ ಸಾಗುತ್ತಿದ್ದ ಬ್ರಿಟನ್​ ಕಂಟೇನರ್​ ಹಡಗಿನ ಮೇಲೆ ಇರಾನ್ ಗುಂಡಿನ ದಾಳಿ

ಇರಾನ್​ನ ಕ್ರಾಂತಿಕಾರಿ ಪಡೆಯಾದ ಐಆರ್​ಜಿಸಿ ಬ್ರಿಟನ್​​ನ ಮತ್ತೊಂದು ಹಡಗಿನ ಮೇಲೆ ಗುಂಡಿನ ದಾಳಿ ಮಾಡಿದೆ. ಇದು ವಾರದಲ್ಲಿ ಎರಡನೇ ಸಲ ನೌಕೆಗಳ ಮೇಲೆ ನಡೆದ ದಾಳಿ ಎಂಬುದು ಗಮನಾರ್ಹ.

IRAN FIRES ON CONTAINER SHIP
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : April 22, 2026 at 1:25 PM IST

2 Min Read
Choose ETV Bharat

ದುಬೈ(ಯುಎಇ): ಹಾರ್ಮುಜ್​ ಜಲಮಾರ್ಗದ ಮೇಲೆ ತನ್ನ ಅಧಿಪತ್ಯ ಮುಂದುವರಿಸಿರುವ ಇರಾನ್​ನ ಅರೆಸೈನಿಕ ಪಡೆಯಾದ ಐಆರ್​ಜಿಸಿ, ಬ್ರಿಟನ್​ಗೆ ಸೇರಿದ ಕಂಟೇನರ್​ ಹಡಗಿನ ಮೇಲೆ ಗುಂಡಿನ ದಾಳಿ ಮಾಡಿದೆ. ಕಳೆದೊಂದು ವಾರದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.

ಅಮೆರಿಕ ಮತ್ತು ಇರಾನ್​ ನಡುವೆ ಇಂದು ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆಗೆ ದಿನ ನಿಗದಿ ಮಾಡಲಾಗಿದೆ. ಸಂಧಾನ ನಡೆಯುತ್ತದೋ ಇಲ್ಲವೋ ಎಂಬ ಅನುಮಾನದ ನಡುವೆಯೇ, ನೌಕೆಯ ಮೇಲೆ ಗುಂಡು ಹಾರಿಸುವ ಮೂಲಕ ಹಾರ್ಮುಜ್​ ಮೇಲಿನ ತನ್ನ ಹಿಡಿತ ಸಡಿಲಿಸುವುದಿಲ್ಲ ಎಂಬ ಸಂದೇಶವನ್ನು ಐಆರ್​ಜಿಸಿ ರವಾನಿಸಿದೆ.

ಬ್ರಿಟನ್​ ದೇಶಕ್ಕೆ ಸೇರಿದ ಸರಕು ತುಂಬಿದ್ದ ಕಂಟೇನರ್​ ಹಡಗಿನ ಮೇಲೆ ಬುಧವಾರ ಬೆಳಗ್ಗೆ 7.55ರ ಸುಮಾರಿನಲ್ಲಿ ಐಆರ್​ಜಿಸಿಯ ಗನ್​ ಬೋಟ್​​ ಗುಂಡಿನ ದಾಳಿ ನಡೆಸಿದೆ. ಇದನ್ನು ಬ್ರಿಟನ್​ ಕೂಡ ದೃಢಪಡಿಸಿದೆ.

"ಇಂದು ಬೆಳಿಗ್ಗೆ ಹಾರ್ಮುಜ್​ ಜಲಮಾರ್ಗದಲ್ಲಿ ನಮ್ಮ ಕಂಟೇನರ್​ ಹಡಗಿನ ಮೇಲೆ ಐಆರ್​ಜಿಸಿ ದಾಳಿ ನಡೆದಿದೆ. ಕಂಟೇನರ್ ಹಡಗನ್ನು ಅದು ಗುರಿಯಾಗಿಸಿಕೊಂಡಿದೆ" ಎಂದು ಬ್ರಿಟನ್​ ಸೇನೆಯ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಸೆಂಟರ್ ತಿಳಿಸಿದೆ.

ಗಾರ್ಡ್​ನ ಗನ್ ಬೋಟ್ ಗುಂಡು ಹಾರಿಸುವ ಮೊದಲು ಹಡಗಿನ ಸಂಚಾರಕ್ಕೆ ಅನುಮತಿಸುವುದಿಲ್ಲ ಎಂದಿತು. ದಾಳಿಯಲ್ಲಿ ನೌಕೆಯಲ್ಲಿನ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ. ಹಡಗಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅದು ಹೇಳಿದೆ.

ವಾರದಲ್ಲಿ ಎರಡನೇ ಸಲ ದಾಳಿ: ಬ್ರಿಟನ್​ ಹಡಗಿನ ಮೇಲೆ ನಡೆದ ದಾಳಿಯನ್ನು ಇರಾನ್​ ತಕ್ಷಣಕ್ಕೆ ಒಪ್ಪಿಕೊಂಡಿಲ್ಲ. ಕಳೆದ ಒಂದು ವಾರದಲ್ಲಿ ಎರಡನೇ ಬಾರಿಗೆ ಹಾರ್ಮುಜ್​ ಜಲಮಾರ್ಗದಲ್ಲಿ ಐಆರ್​ಜಿಸಿ ಗುಂಡಿನ ದಾಳಿ ನಡೆಸಿದೆ. ಇದಕ್ಕೂ ಮೊದಲು ಭಾರತ ಒಂದು ಹಡಗು ಮತ್ತು ಬ್ರಿಟನ್​ನ ಎರಡು ಹಡಗುಗಳ ಮೇಲೆ ಇದೇ ಐಆರ್​ಜಿಸಿ ಗುಂಡು ಹಾರಿಸಿತ್ತು.

ನೀವೇ ಅನುಮತಿ ನೀಡಿ ಈಗ ದಾಳಿ ಮಾಡಿದ್ದೇಕೆ ಎಂದು ಭಾರತ ಪ್ರಶ್ನಿಸಿದಾಗ, ಇದು ತಪ್ಪಾಗಿ ತಿಳಿದು ದಾಳಿ ಮಾಡಲಾಗಿದೆ ಎಂದು ಇರಾನ್​ ಒಪ್ಪಿಕೊಂಡಿತ್ತು.

ಪ್ರತೀಕಾರದ ವೇದಿಕೆಯಾದ ಹಾರ್ಮುಜ್​​: ಹಾರ್ಮುಜ್​ ಮತ್ತು ಇರಾನ್​​ನ ಬಂದರುಗಳ ಮೇಲೆ ದಿಗ್ಬಂಧನ ಹೇರಿರುವ ಅಮೆರಿಕ, ಕಳೆದ ವಾರ ಇರಾನ್​​ನ ಕಂಟೇನರ್ ಹಡಗಿನ ಮೇಲೆ ಗುಂಡಿನ ದಾಳಿ ಮಾಡಿತ್ತು. ಬಳಿಕ, ಹಿಂದೂ ಮಹಾಸಾಗರದಲ್ಲಿ ಇರಾನ್‌ನ ತೈಲ ವ್ಯಾಪಾರಕ್ಕೆ ಸಂಬಂಧಿಸಿದ ಟ್ಯಾಂಕರ್ ನೌಕೆಯ ಮೇಲೆ ಗಸ್ತು ಹೆಲಿಕಾಪ್ಟರ್​​ಗಳ ಮೂಲಕ ಸೈನಿಕರನ್ನು ಇಳಿಸಿತ್ತು.

ಇದಕ್ಕೆ ಪ್ರತೀಕಾರವಾಗಿ ಇರಾನ್​, ಇಡೀ ಹಾರ್ಮುಜ್​ ಜಲಮಾರ್ಗವನ್ನು ಬಂದ್​ ಮಾಡುವುದಾಗಿ ಘೋಷಿಸಿದೆ. ಯಾವುದೇ ಹಡಗುಗಳು ಇಲ್ಲಿಂದ ಕದಲಲು ಬಿಡುವುದಿಲ್ಲ. ತನ್ನ ಮೇಲಿನ ನಿರ್ಬಂಧ ತೆರವಾಗಬೇಕು ಎಂದು ಬೇಡಿಕೆ ಇಟ್ಟಿದೆ. ಇದೇ ಕಾರಣಕ್ಕಾಗಿ, ಹಾರ್ಮುಜ್​ ಮಾರ್ಗವಾಗಿ ಹೊರಡುವ ಯಾವುದೇ ದೇಶದ ನೌಕೆಗಳ ಮೇಲೆ ಅದು ದಾಳಿ ಮಾಡುತ್ತಿದೆ.

ಇವುಗಳನ್ನೂ ಓದಿ: