ಸೌದಿ ವಿಮಾನ ನಿಲ್ದಾಣದ ಮೇಲೆ ಮತ್ತೆ ದಾಳಿ: ಹೈದರಾಬಾದ್ ಮೂಲದ ವ್ಯಕ್ತಿ ಸಾವು
ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದವರಲ್ಲಿ ಓರ್ವ ಭಾರತೀಯ ಮೃತಪಟ್ಟಿದ್ದಾನೆ.

By PTI
Published : October 12, 2026 at 7:44 AM IST
ದುಬೈ: ಸೌದಿ ಅರೇಬಿಯಾದ ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಹೌತಿ ಬಂಡೂಕೋರರ ದಾಳಿ ಮುಂದುವರಿದಿದೆ. ಭಾನುವಾರ ನಡೆದ ದಾಳಿಯಲ್ಲಿ ಓರ್ವ ಮೃತಪಟ್ಟು, 11 ಜನ ಗಾಯಗೊಂಡಿದ್ದಾರೆ.
ಹೌತಿ ಬಂಡುಕೋರರು ಶನಿವಾರ ಕೂಡ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ ನಡೆಸಿದ್ದರು. ಈ ವೇಳೆ 12 ಜನ ಮೃತಪಟ್ಟು, 11 ಭಾರತೀಯರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
Embassy of India, Riyadh has been following up on the dastardly attack on Riyadh airport yesterday in which 12 people unfortunately died and more than 300 were injured. It is learnt that 11 Indians are among those injured in the attack. Embassy has been in touch with local authorities to enquire about their well being. Our officials have also reached out to the hospital authorities. We will provide further updates as they become available. @MEAIndia
— India in Saudi Arabia (@IndianEmbRiyadh) October 11, 2026
ದಾಳಿಯಲ್ಲಿ ಗಾಯಗೊಂಡ 11 ಭಾರತೀಯರ ಪೈಕಿ ಒಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಮೂವರು ತೀವ್ರ ನಿಗಾ ಘಟಕದಲ್ಲಿದ್ದರೂ ಅವರ ಆರೋಗ್ಯ ಸ್ಥಿರವಾಗಿದೆ. ಇಬ್ಬರು ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರನ್ನು ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ರಾಯಭಾರ ಕಚೇರಿ ಭಾನುವಾರ ಹೇಳಿದೆ.
ಗಾಯಗೊಂಡ ಭಾರತೀಯ ಪ್ರಜೆಗಳಿಗೆ ಚಿಕಿತ್ಸೆ ನೀಡುತ್ತಿರುವ ಎಲ್ಲ ಆಸ್ಪತ್ರೆಗಳಿಗೆ ತಮ್ಮ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಹೈದರಾಬಾದ್ ಮೂಲದ ಎಂಜಿನಿಯರ್ ಸಾವು:
ಹೈದರಾಬಾದ್‌ನ ಮೆಹದಿಪಟ್ಟಣ ಮೂಲದ ಮೊಹಮ್ಮದ್ ಯೂಸುಫ್ ಅಲಿ (45) ಮೃತಪಟ್ಟವರು. ಹತ್ತು ವರ್ಷಗಳ ಹಿಂದೆ ಸೌದಿ ಅರೇಬಿಯಾಗೆ ತೆರಳಿದ್ದ ಇವರು ಅಲ್ಲಿ ಐಟಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಅವರ ಪತ್ನಿ ಸಮೀರಾ ಮತ್ತು ಮೂವರು ಮಕ್ಕಳು ಕಳೆದ ಎರಡು ವರ್ಷಗಳಿಂದ ಹೈದರಾಬಾದ್‌ನ ಮೆಹದಿಪಟ್ಟಣದಲ್ಲಿ ವಾಸಿಸುತ್ತಿದ್ದರು. ಯೂಸುಫ್ ಅಲಿ 15 ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಹೈದರಾಬಾದ್ಗೆ ಆಗಮಿಸಿ ಅ.2 ರಂದು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ವಾಪಸ್ ತೆರಳಿದ್ದರು. ಶನಿವಾರ ಮದೀನಾಕ್ಕೆ ಪ್ರಯಾಣಿಸಲು ಈ ಕುಟುಂಬವು ರಿಯಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಈ ದಾಳಿ ನಡೆದಿದೆ. ಈ ವೇಳೆ ಯೂಸುಫ್ ಅಲಿ ಗಂಭೀರವಾಗಿ ಗಾಯಗೊಂಡಿದ್ದರು.
UPDATE: It’s been confirmed that Yousuf sahab has passed away in the attack. Innalilahi wa inna ilahir rajioon. His son is undergoing knee surgery, another son is in the hospital and 3 of his toes have been cut off. His daughter and wife are safe. His aunt (chachi) was with them, and suffered injuries to the head but is out of danger. I am in touch with Yousuf’s brother in law in Riyadh and the DCM has assured me that they’re taking care. @DrSJaishankar every possible assistance should be provided to the family. The family is from Mehdipatnam in Hyderabad.
— Asaduddin Owaisi (@asadowaisi) October 11, 2026
ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರ ಎರಡೂ ಕಾಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಿದ್ದರು. ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದಾಗ ಭಾನುವಾರ ಬೆಳಗ್ಗೆ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ರಿಯಾದ್‌ನಲ್ಲಿ ವಾಸಿಸುತ್ತಿರುವ ಯೂಸುಫ್ ಅಲಿ ಅವರ ಸಂಬಂಧಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ ಎಂದು ಎಐಎಂಐಎಂ (MIM) ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಯೂಸುಫ್ ಅಲಿ ಅವರ ಇಬ್ಬರು ಪುತ್ರರು ಮತ್ತು ಸಹೋದರಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಪತ್ನಿ, ಮಗಳು ಸುರಕ್ಷಿತವಾಗಿದ್ದಾರೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರ ಗಮನಕ್ಕೆ ತಂದಿರುವುದಾಗಿ ಓವೈಸಿ ತಿಳಿಸಿದ್ದಾರೆ.
"ದಾಳಿ ವೇಳೆ ಗಾಯಗೊಂಡ ಭಾರತೀಯರಿಗೆ ವೈದ್ಯಕೀಯ ಆರೈಕೆ ಒದಗಿಸಿದ ಸೌದಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇವೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ರಾಯಭಾರ ಕಚೇರಿಯಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡುತ್ತೇವೆ" ಎಂದು ರಾಯಭಾರ ಕಚೇರಿ ತಿಳಿಸಿದೆ.
ಹಾಗೆಯೇ, ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಮೃತದೇಹವನ್ನು ಶೀಘ್ರವಾಗಿ ತಾಯ್ನಾಡಿಗೆ ರವಾನಿಸಲು ಅಗತ್ಯ ಎಲ್ಲ ನೆರವು ನೀಡುವುದಾಗಿ ರಾಯಭಾರ ಕಚೇರಿ ಭರವಸೆ ನೀಡಿದೆ.
ಸಚಿವ ಜೈ ಶಂಕರ್ ಸಂತಾಪ: ದಾಳಿಯಲ್ಲಿ ಓರ್ವ ಭಾರತೀಯ ಮೃತಪಟ್ಟಿರುವ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
"ರಿಯಾದ್ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಭಾರತೀಯ ಮೃತಪಟ್ಟಿರುವುದು ತೀವ್ರ ದುಃಖ ತಂದಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ರಾಯಭಾರ ಕಚೇರಿಯು ಸಾಧ್ಯವಿರುವ ಎಲ್ಲ ನೆರವು ನೀಡಲಿದೆ" ಎಂದು ಕೇಂದ್ರ ಸಚಿವ ಜೈಶಂಕರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ಭಾರತೀಯರಿಗೆ ಸಂಬಂಧಿಸಿದ ಮಾಹಿತಿಗಾಗಿ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಗಳನ್ನು ಕೂಡ ನೀಡಿದೆ. ಸೌದಿ ಅರೇಬಿಯಾದಲ್ಲಿ ಕರೆ ಮಾಡಲು 24/7 ಕಾರ್ಯನಿರ್ವಹಿಸುವ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 8002471234 ಸಂಪರ್ಕಿಸಬಹುದು. ಜೊತೆಗೆ ಸಾರ್ವಜನಿಕರು +966-11-488469 ಸಂಖ್ಯೆಗೆ ಕರೆ ಮಾಡಬಹುದು ಅಥವಾ +966-536216082 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿ ರಾಯಭಾರ ಕಚೇರಿ ಸಂಪರ್ಕಿಸಬಹುದು.
ರಿಯಾದ್‌ಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ಅಕಾಸಾ ಏರ್ (Akasa Air) ಅಕ್ಟೋಬರ್ 13 ರವರೆಗೆ ವಿಸ್ತರಿಸಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ಗಲ್ಫ್ ರಾಷ್ಟ್ರದಲ್ಲಿ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಆಗಾಗ ನಡೆಯುತ್ತಿರುವ ದಾಳಿಗಳು ಸ್ವೀಕಾರಾರ್ಹವಲ್ಲ ಮತ್ತು ತಕ್ಷಣವೇ ಇದು ನಿಲ್ಲಬೇಕು ಎಂದು ಭಾನುವಾರ ಹೇಳಿದೆ.
ಈ ದಾಳಿಗೆ ಯೆಮೆನ್‌ನ ಹೌತಿ ಬಂಡುಕೋರರೇ ಕಾರಣ ಎಂದು ಸೌದಿ ಅರೇಬಿಯಾ ಆರೋಪಿಸಿದೆ.
ಮತ್ತೊಂದು ವಿಮಾನ ನಿಲ್ದಾಣದ ಮೇಲೆ ದಾಳಿ: ಸೌದಿ ಅರೇಬಿಯಾದ ಮತ್ತೊಂದು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿದೆ. ದಮ್ಮಾಮ್‌ನಲ್ಲಿರುವ ಕಿಂಗ್ ಫಹಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ.
ಇದನ್ನೂ ಓದಿ: ಸೌದಿ - ಹೌತಿ ಸಂಘರ್ಷ; ರಿಯಾದ್ ಏರ್ಪೋರ್ಟ್ ಮೇಲಿನ ದಾಳಿಯಲ್ಲಿ 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

