ಹಣ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತ: 15 ಮಂದಿ ಸಾವು, ಹಲವು ಕಾರುಗಳು ನಾಶ
ಲಾ ಪಾಜ್ ವಿಮಾನ ನಿಲ್ದಾಣದ ಬಳಿಯ ಹೆದ್ದಾರಿಯಲ್ಲಿ ಮೃತಪಟ್ಟವರು ವಿಮಾನದಲ್ಲಿದ್ದರೋ ಅಥವಾ ಕಾರುಗಳಲ್ಲಿದ್ದರೋ ಎಂಬುದನ್ನು ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಸ್ಪಷ್ಟಪಡಿಸಿಲ್ಲ.


Published : February 28, 2026 at 8:05 AM IST
|Updated : February 28, 2026 at 8:16 AM IST
ಲಾ ಪಾಜ್, ಬೊಲಿವಿಯಾ: ಬೊಲಿವಿಯಾದ ರಾಜಧಾನಿ ಬಳಿ ಶುಕ್ರವಾರ ಹಣ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತಕ್ಕೀಡಾಗಿದ್ದು 15 ಮಂದಿ ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಸುಮಾರು ಒಂದು ಡಜನ್ ವಾಹನಗಳಿಗೆ ಹಾನಿಯಾಗಿದೆ. ಬಿಲ್‌ಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಾ ಪಾಜ್ ವಿಮಾನ ನಿಲ್ದಾಣದ ಬಳಿಯ ಹೆದ್ದಾರಿಯಲ್ಲಿ ಮೃತಪಟ್ಟವರು ವಿಮಾನದಲ್ಲಿದ್ದರೋ ಅಥವಾ ಕಾರುಗಳಲ್ಲಿದ್ದರೋ ಎಂಬುದನ್ನು ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ಸ್ಪಷ್ಟಪಡಿಸಿಲ್ಲ. ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಚಿತ್ರಗಳ ಪ್ರಕಾರ, ವಿಮಾನವು ಲಾ ಪಾಜ್ ಪಕ್ಕದಲ್ಲಿರುವ ಎಲ್ ಆಲ್ಟೊ ನಗರದಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ಮೈದಾನದಲ್ಲಿ ಬಿದ್ದಿದೆ. ವಿಮಾನ ಅಪಘಾತಕ್ಕೀಡಾಗುವಾಗ ಅದು ಟೇಕಾಫ್ ಆಗುತ್ತಿದೆಯೇ ಅಥವಾ ಅಲ್ಲಿ ಲ್ಯಾಂಡ್ ಆಗುತ್ತಿತ್ತಾ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.
ವಿಮಾನದ ಅವಶೇಷಗಳು ರಸ್ತೆಯಲ್ಲಿ ಹರಡಿಕೊಂಡಿವೆ. ಹಲವು ಶವಗಳು ರಸ್ತೆ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಟೋವರ್ ಪ್ರಕಾರ, ಕನಿಷ್ಠ 15 ವಾಹನಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳದವರು ವಿಮಾನಕ್ಕೆ ಆವರಿಸಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೊಲಿವಿಯನ್ ವಾಯುಪಡೆಗೆ ಸೇರಿದ ಹರ್ಕ್ಯುಲಸ್ ವಿಮಾನ ಇದಾಗಿದ್ದು, ಸೆಂಟ್ರಲ್ ಬ್ಯಾಂಕಿನಿಂದ ಇತರ ನಗರಗಳಿಗೆ ಹೊಸ ನೋಟುಗಳನ್ನು ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಚಿತ್ರಗಳು, ಗಲಭೆ ನಿಗ್ರಹ ದಳದಲ್ಲಿದ್ದ ಪೊಲೀಸರು ಜನರನ್ನು ಚದುರಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತಿವೆ.
ಇವುಗಳನ್ನು ಓದಿ:
150 ಪ್ರಯಾಣಿಕರಿದ್ದ ಸ್ಪೈಸ್‌ಜೆಟ್ ವಿಮಾನದ ಎಂಜಿನ್ನಲ್ಲಿ ದೋಷ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್; ಎಲ್ಲರೂ ಸುರಕ್ಷಿತ
ವಿಮಾನ ಪತನ : ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಏಳು ಜನ ಸಾವು
ಏರ್ ಆಂಬ್ಯುಲೆನ್ಸ್ ಪತನ- ಏಳು ಮಂದಿ ಸಾವು: ಸೋಮವಾರ ಸಂಜೆ ರಾಂಚಿಯಿಂದ ದೆಹಲಿಗೆ ತೆರಳುತ್ತಿ ವಿಮಾನ ಜಾರ್ಖಂಡ್‌ನ ಛತ್ರ ಜಿಲ್ಲೆಯ ಸಿಮಾರಿಯಾ ಬಳಿ ಪತನಗೊಂಡು, ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಎಲ್ಲ ಏಳು ಮಂದಿ ಸಾವನ್ನಪ್ಪಿದ್ದರು. ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ವಿಮಾನವು ರಾಂಚಿ ವಿಮಾನ ನಿಲ್ದಾಣದಿಂದ ಸಂಜೆ 7.11 ಕ್ಕೆ ಹೊರಟ ಸ್ವಲ್ಪ ಸಮಯದ ನಂತರ ಈ ಅಪಘಾತ ಸಂಭವಿಸಿತ್ತು.
ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಎಲ್ಲ ಏಳು ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದರು. ವಿಮಾನವು ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಛತ್ರ ಉಪ ಆಯುಕ್ತ ಕೀರ್ತಿಶ್ರೀ ಜಿ ಮಾಹಿತಿ ಒದಗಿಸಿದ್ದರು. ವಿಮಾನವು ಸಂಜೆ 7.30 ರ ಸುಮಾರಿಗೆ ಕಾಣೆಯಾಗಿದೆ ಎಂದು ಮೊದಲಿಗೆ ಮಾಹಿತಿ ಬಂದಿತ್ತು. ಅದು ಸಿಮಾರಿಯಾದ ಬರಿಯತು ಪಂಚಾಯತ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಕೀರ್ತಿಶ್ರೀ ಮಾಹಿತಿ ನೀಡಿದ್ದರು. ವಿಮಾನ ಪತನಗೊಂಡ ಸ್ಥಳ ದಟ್ಟ ಕಾಡಿನಿಂದ ಕೂಡಿದೆ ಎಂದು ಅವರು ಹೇಳಿದ್ದರು.

