ಇರಾನ್ನಲ್ಲಿ ಖಮೇನಿ ಬೆಳೆದು ಬಂದ ರೀತಿ: ದೇಶವನ್ನು ತಮ್ಮ ಬಿಗಿ ಹಿಡಿತದಲ್ಲಿಟ್ಟುಕೊಂಡಿದ್ದ ಅಯತೊಲ್ಲಾ!
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ 36 ವರ್ಷಗಳ ಆಡಳಿತ ಕೊನೆಗೊಂಡಿದೆ.

By PTI
Published : March 1, 2026 at 1:53 PM IST
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ. 36 ವರ್ಷಗಳ ಇವರ ಆಡಳಿತವು ಕೊನೆಗೊಂಡಿದೆ.
ಇರಾನ್ ಅನ್ನು ದೀರ್ಘಕಾಲ ಆಳಿದ ನಾಯಕರಲ್ಲಿ ಖಮೇನಿ ಕೂಡ ಒಬ್ಬರು. 1979ರಲ್ಲಿ ಇರಾನ್ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿದ ಅಯತೊಲ್ಲಾ ರುಹೊಲ್ಲಾ ಖಮೇನಿ ಅವರಂತೆಯೇ ಅಲಿ ಖಮೇನಿ ಕೂಡ ಪ್ರಭಾವಿ ವ್ಯಕ್ತಿಯಾಗಿದ್ದರು. ಮೂರು ದಶಕಗಳಿಗೂ ಹೆಚ್ಚು ಕಾಲ ಸರ್ವೋಚ್ಚ ನಾಯಕನಾಗಿದ್ದ ಖಮೇನಿ, ದೇಶದ ರಾಜಕೀಯದ ಮೇಲೆ ಬಿಗಿ ಹಿಡಿತ ಹೊಂದಿದ್ದರು.
ಖಮೇನಿಯ ಬೆಳವಣಿಗೆ: ಅಲಿ ಖಮೇನಿ 1939ರಲ್ಲಿ ಈಶಾನ್ಯ ಇರಾನ್‌ನ ಮಾರ್ಷದ್ ನಗರದಲ್ಲಿ ಜನಿಸಿದರು. ನಜಾಫ್ ಮತ್ತು ಕೋಮ್‌ನಲ್ಲಿರುವ ಇಸ್ಲಾಮಿಕ್ ಸೆಮಿನರಿಗಳಲ್ಲಿ ಅಧ್ಯಯನ ಮಾಡುವ ವೇಳೆ ರಾಜಕೀಯ ಮತ್ತು ಧಾರ್ಮಿಕ ದೃಷ್ಟಿಕೋನವನ್ನು ಬೆಳೆಸಿಕೊಂಡರು. 13ನೇ ವಯಸ್ಸಿನಲ್ಲಿಯೇ ಕ್ರಾಂತಿಕಾರಿ ಇಸ್ಲಾಂ ವಿಚಾರಗಳನ್ನು ಅನುಸರಿಸಿದರು. ಷಾ ಮೊಹಮ್ಮದ್ ರೆಜಾ ಪಹ್ಲವಿ ಅವರ ಆಳ್ವಿಕೆಯ ವಿರುದ್ಧ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು.
1958ರಿಂದ ಖಮೇನಿಸಂ ಸಿದ್ಧಾಂತವನ್ನು ಅನುಸರಿಸಿದರು. 1962 ರಿಂದ 1964 ರವರೆಗೆ ಪಹ್ಲವಿ ಖಮೇನಿ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಯನ್ನು ಪ್ರಾರಂಭಿಸಿದರು. 1971ರಲ್ಲಿ ಪೊಲೀಸರು ಇವರನ್ನು ಬಂಧಿಸಿದ್ದರು ಎಂದು ಇವರ ಆತ್ಮಚರಿತ್ರೆಯಲ್ಲಿ ಬರೆಯಲಾಗಿದೆ. 1976ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಪಹ್ಲವಿ ಷಾ ಪದಚ್ಯುತಗೊಂಡ ಬಳಿಕ ಗಡೀಪಾರಾಗಿದ್ದ ಅಲಿ ಖಮೇನಿ ಮತ್ತೆ ದೇಶಕ್ಕೆ ಮರಳಿದರು.
ಕ್ರಾಂತಿಕಾರಿ ಮಂಡಳಿಗೆ ಸೇರಲು ಖಮೇನಿ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಅವರು ಉಪ ರಕ್ಷಣಾ ಸಚಿವರಾದರು ಮತ್ತು ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಅನ್ನು ಸಂಘಟಿಸಿದರು. ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಸರ್ವೋಚ್ಚ ನಾಯಕನನ್ನು ರಕ್ಷಿಸಲು ಆರಂಭದಲ್ಲಿ ರಚಿಸಲಾದ ಈ ಮಿಲಿಟರಿ ಪಡೆಯು ಈಗ ಇರಾನ್‌ನ ಅತ್ಯಂತ ಶಕ್ತಿಶಾಲಿ ಪಡೆಯಾಗಿ ಬದಲಾಗಿದೆ.
1981ರಲ್ಲಿ ಅಲಿ ಖಮೇನಿಯ ಹತ್ಯೆ ಪ್ರಯತ್ನ ನಡೆದಿತ್ತು. ಅದರಲ್ಲಿ ಬದುಕುಳಿದ ನಂತರ 1982ರಲ್ಲಿ ಮತ್ತು 1985ರಲ್ಲಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ಇರಾನ್-ಇರಾಕ್ ಯುದ್ಧದ ಬಹುಪಾಲು ವೇಳೆ ಅವರು ಅಧ್ಯಕ್ಷರಾಗಿದ್ದರು.
ಸರ್ವೋಚ್ಛ ನಾಯಕನಾಗಿ ಅಚ್ಚರಿಯ ಆಯ್ಕೆ: ಅಯತೊಲ್ಲಾ ಖಮೇನಿ 1989ರ ಜೂನ್ನಲ್ಲಿ ಅನಾರೋಗ್ಯದಿಂದ ನಿಧನರಾದರು. ಆದರೆ, ಯಾರನ್ನೂ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿರಲಿಲ್ಲ. ಅಯತೊಲ್ಲಾ ಹೊಸೇನ್ ಅಲಿ ಮೊಂಟಜೆರಿಯನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಯಿತು. ಆದರೆ, ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿ, ಅವರನ್ನು 2009 ರವರೆಗೂ ಗೃಹಬಂಧನದಲ್ಲಿ ಇರಿಸಲಾಯಿತು. ಅಲ್ಲಿಯೇ ಅವರು ಮೃತಪಟ್ಟರು.
ಬಳಿಕ ಅಚ್ಚರಿ ಎಂಬಂತೆ ಅಲಿ ಖಮೇನಿ ದೇಶದ ಸರ್ವೋಚ್ಛ ನಾಯಕನಾಗಿ ಆಯ್ಕೆಯಾದರು. ಅವರ ನೇಮಕವು ದೊಡ್ಡ ವಿವಾದ ಮತ್ತು ಟೀಕೆಗೆ ಗುರಿಯಾಯಿತು. ಕೆಲವು ಇಸ್ಲಾಮಿಕ್ ವಿದ್ವಾಂಸರು ಅಯತೊಲ್ಲಾ ಅವರು ಕ್ಲೆರಿಕಲ್ ಶ್ರೇಣಿಯನ್ನು ಹೊಂದಿಲ್ಲ ಎಂದು ವಿರೋಧಿಸಿದರು. ದೇಶದ ಸಂವಿಧಾನ ಬದಲಾವಣೆಗೆ ಜನಾಭಿಪ್ರಾಯ ಸಂಗ್ರಹಿಸಲಾಯಿತು. ಇದನ್ನೇ ಧರ್ಮಗುರುಗಳು ಅಂಗೀಕರಿಸಿ, ಅಲಿ ಖಮೇನಿಯನ್ನು ಆಯತೊಲ್ಲಾ (ಧರ್ಮಗುರು) ಎಂದು ಒಪ್ಪಿಕೊಂಡರು.
ದೇಶದ ಸರ್ವೋಚ್ಛ ನಾಯಕನಾಗಿ ಖಮೇನಿ ಹಲವು ಅಧ್ಯಕ್ಷರೊಂದಿಗೆ ಕೆಲಸ ಮಾಡಿದರು. ಆಡಳಿತದ ವಿಚಾರದಲ್ಲಿ ಅಧ್ಯಕ್ಷರು ಇವರ ವಿರುದ್ಧ ಸೆಟೆದು ನಿಂತಾಗ ಅವರನ್ನು ನಿಯಂತ್ರಿಸಿ ಆಡಳಿತವನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ಅಧ್ಯಕ್ಷರ ಜೊತೆ ಗುದ್ದಾಟ: 2005ರಿಂದ 2013ರ ವರೆಗೆ ಅಧ್ಯಕ್ಷರಾಗಿದ್ದ ಮಹಮೂದ್ ಅಹ್ಮದಿನೆಜಾದ್ ಅವರ ಆಡಳಿತದ ವೇಳೆ ಖಮೇನಿ ಹಸ್ತಕ್ಷೇಪ ಮಾಡಿದ್ದರು. 2009ರ ವಿವಾದಿತ ಅಧ್ಯಕ್ಷೀಯ ಚುನಾವಣೆಯಲ್ಲಿ ಅಹ್ಮದಿನೆಜಾದ್ ಗೆಲುವು ಸಾಧಿಸಿದ್ದರ ವಿರುದ್ಧ ಕ್ರಾಂತಿ ಸಂಭವಿಸಿತ್ತು. ದೊಡ್ಡ ಪ್ರತಿಭಟನಾ ಚಳುವಳಿಗಳು ನಡೆದವು. ಆದರೆ ಫಲಿತಾಂಶವನ್ನು ಬೆಂಬಲಿಸಿದ ಖಮೇನಿ ಪ್ರತಿಭಟನೆಗಳನ್ನು ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಹ್ಮದಿನೆಜಾದ್ ಅವರನ್ನು 2017ರಲ್ಲಿ ಅಧ್ಯಕ್ಷ ಹುದ್ದೆಗೇರದಂತೆ ತಡೆದರು.
ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯ ಆಡಳಿತದಲ್ಲಿ ಪರಮಾಣು ಒಪ್ಪಂದ ರದ್ದು, ಇರಾನ್‌ನ ಇಂಧನ ಕ್ಷೇತ್ರದ ಮೇಲೆ ಆರ್ಥಿಕ ನಿರ್ಬಂಧ ಹೇರಿದರು. IRGCಯ ಕುಡ್ಸ್ ಪಡೆ ಮುಖ್ಯಸ್ಥ ಖಾಸಿಮ್ ಸೊಲೈಮಾನಿ ಹತ್ಯೆಗೆ ಟ್ರಂಪ್ ಕಾರಣ ಎಂದು ಅಮೆರಿಕದ ವಿರುದ್ಧ ಖಮೇನಿ ಗುಡುಗಿದ್ದರು.
2025ರಲ್ಲಿ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾದ ನಂತರ, ಇರಾನ್ ಅಮೆರಿಕ ನಡುವೆ ಸಂಬಂಧಗಳು ಸಂಪೂರ್ಣ ಹದಗೆಟ್ಟವು. ಪರಮಾಣು ಕಾರ್ಯಕ್ರಮ ಕೈ ಬಿಡುವಂತೆ ಇರಾನ್ ಮೇಲೆ ಅಮೆರಿಕ ಒತ್ತಡ ಹೇರಿತ್ತು. ಈ ಸಂಬಂಧ ಮೂರು ಸುತ್ತುಗಳ ಮಾತುಕತೆ ನಡೆದಿದ್ದವು. ಆದರೆ ಅಮೆರಿಕದ ಒತ್ತಡಕ್ಕೆ ಖಮೇನಿ ಮಣಿದಿರಲಿಲ್ಲ. ಅಂತಿಮವಾಗಿ ಇಸ್ರೇಲ್ - ಅಮೆರಿಕ ಇರಾನ್ ಮೇಲೆ ಜಂಟಿ ದಾಳಿ ನಡೆಸಿದವು.
ಇವುಗಳನ್ನೂ ಓದಿ:

