ETV Bharat / health

ಇದೊಂದು ಚಿಕ್ಕ ಕಾರ್ಯದಿಂದ ಹಲವು ಪ್ರಕಾರದ ಕ್ಯಾನ್ಸರ್ ಅಪಾಯ ತಗ್ಗಿಸಲು ಸಾಧ್ಯ: ಸಂಶೋಧನೆ

ದೀರ್ಘಕಾಲ ಕುಳಿತುಕೊಳ್ಳುವುದರಿಂದ ಮಧುಮೇಹ, ಹೃದ್ರೋಗ, ಕೆಲವು ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೇವಲ ಮೂರು ನಿಮಿಷದ ಉಪಾಯದಿಂದ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ರಕ್ಷಣೆ ನೀಡುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.

SIDE EFFECTS OF SITTING DAILY  Desk jobs EFFECTS  Physical inactivity  ದೀರ್ಘಕಾಲ ಕುಳಿತುಕೊಳ್ಳುವುದರ ಅಪಾಯ
ಕ್ಯಾನ್ಸರ್ ಕೋಶಗಳು- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : October 10, 2026 at 1:50 PM IST

4 Min Read
Choose ETV Bharat

ಕಚೇರಿಗಳಲ್ಲಿ ಡೆಸ್ಕ್ ಕೆಲಸಗಳು, ಮೊಬೈಲ್​ ಫೋನ್ ಅತಿಯಾದ ಬಳಕೆ ಹಾಗೂ ದೈಹಿಕ ಸೋಮಾರಿತನದಿಂದ ಹೆಚ್ಚಿನ ಸಮಯ ಕುರ್ಚಿ ಇಲ್ಲವೇ ಸೋಫಾದಲ್ಲಿ ಕುಳಿತುಕೊಳ್ಳಲಾಗುತ್ತದೆ. ಕುಳಿತುಕೊಳ್ಳುವ ಈ ಅಭ್ಯಾಸವು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಬಿಎಂಸಿ ಮೆಡಿಸಿನ್ ಜರ್ನಲ್​​ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನವು ಗಂಭೀರ ಎಚ್ಚರಿಕೆ ನೀಡಿದೆ. ದೀರ್ಘಕಾಲ ಕುಳಿತುಕೊಳ್ಳುವುದು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸುಮಾರು 60,000 ಜನರ ಆಹಾರ ಹಾಗೂ ದೈಹಿಕ ಚಟುವಟಿಕೆ ಅಧ್ಯಯನ ಮಾಡುವ ಮೂಲಕ ಸಂಶೋಧಕರು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನಮ್ಮ ದೈನಂದಿನ ಅಭ್ಯಾಸಗಳಲ್ಲಿ ಚಿಕ್ಕ, ಸರಳವಾದ ಬದಲಾವಣೆಗಳನ್ನು ಮಾಡುವ ಕ್ಯಾನ್ಸರ್​ ರೀತಿ ಪ್ರಮುಖ ಅಪಾಯವನ್ನು ಸುಲಭವಾಗಿ ತಪ್ಪಿಸಲು ಕೂಡ ಸಹಾಯವಾಗುತ್ತದೆ. ಪ್ರತಿನಿತ್ಯ ಕುಳಿತುಕೊಳ್ಳುವುದರಿಂದ ಅಡ್ಡ ಪರಿಣಾಮಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

ಸಂಶೋಧನೆ ತಿಳಿಸುವುದೇನು? ಸುಮಾರು 60,000 ವ್ಯಕ್ತಿಗಳ ದೈಹಿಕ ಚಟುವಟಿಕೆಯನ್ನು ಗಮನಿಸಿದಾಗ ಸಮಗ್ರವಾದ ಈ ಸಂಶೋಧನೆ ನಡೆದಿದೆ. ನಿಂತಿರುವ, ವಾಕಿಂಗ್ ಹಾಗೂ ಚುರುಕಾದ ಓಟದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ತನ, ಶ್ವಾಸಕೋಶ ಹಾಗೂ ಕರುಳಿನ ಕ್ಯಾನ್ಸರ್​​ ಅನ್ನು ತೀವ್ರ ಸ್ವರೂಪಗಳನ್ನು ಅಭಿವೃದ್ಧಿಪಡಿಸುವ ಅಪಾಯ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

SIDE EFFECTS OF SITTING DAILY  Desk jobs EFFECTS  Physical inactivity  ದೀರ್ಘಕಾಲ ಕುಳಿತುಕೊಳ್ಳುವುದರ ಅಪಾಯ
ಕ್ಯಾನ್ಸರ್ ಕೋಶಗಳು- ಸಾಂದರ್ಭಿಕ ಚಿತ್ರ (Getty Images)

ಹದಿನೈದು ನಿಮಿಷಗಳ ನಡಿಗೆಯ ಪರಿಣಾಮ: ಸಂಶೋಧನೆ ತಿಳಿಸುವ ಪ್ರಕಾರ, ಕೇವಲ 15 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ 30 ನಿಮಿಷಗಳ ಕಾಲ ನಿಂತಿರುವಂತೆಯೇ ಪರಿಣಾಮ ಉಂಟಾಗುತ್ತದೆ. ವೇಗವಾಗಿ ಓಡುವುದು, ಮೆಟ್ಟಿಲು ಹತ್ತುವುದು ಸೇರಿದಂತೆ ಹೆಚ್ಚಿನ ತೀವ್ರತೆಯ ವ್ಯಾಯಾಮವು ರೋಗ ತಡೆಗಟ್ಟುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದು ವಿವರಿಸುತ್ತದೆ.

13 ಪ್ರಕಾರಗಳ ಕ್ಯಾನ್ಸರ್ ಅಪಾಯ ತಗ್ಗುತ್ತದೆ: ಬಿಎಂಸಿ ಮೆಡಿಸಿನ್​ನಲ್ಲಿ ಪ್ರಕಟವಾದ ಸಂಶೋಧನೆ ತಿಳಿಸುವ ಪ್ರಕಾರ, ಪ್ರತಿದಿನಕ್ಕೆ 30 ನಿಮಿಷಗಳವರೆಗೆ ಕೇವಲ ಮೂರು ನಿಮಿಷ ಓಡುವುದರಿಂದ, ಒಂದೇ ನಿಂತಿರುವುದು ಹಾಗೂ ಎಲ್ಲಾ ಸಮಯದಲ್ಲೂ ಕುಳಿತುಕೊಳ್ಳುವುದಕ್ಕೆ ಪರ್ಯಾಯವಾಗಿ 13 ಪ್ರಕಾರದ ಕ್ಯಾನ್ಸರ್​ಗಳ ಅಪಾಯವನ್ನು ನೇರವಾಗಿ ಶೇ.7ರಷ್ಟು ಕಡಿಮೆ ಮಾಡುತ್ತದೆ. 60,000 ಜನರ ವಿಶ್ಲೇಷಣೆಯು ನಿರ್ದಿಷ್ಟವಾಗಿ ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಕರುಳಿನ ಕ್ಯಾನ್ಸರ್ ತೀವ್ರತೆಯನ್ನು ಕಡಿಮೆ ಮಾಡಲು ವಾಕಿಂಗ್ ಅಥವಾ ಚುರುಕಾದ ಓಟದಂತಹ ಚಟುವಟಿಕೆಗಳಿಗೆ ಸಹಾಯ ಮಾಡುತ್ತದೆ ಎಂದು ಸಂಶೋಧನೆ ವಿವರಿಸುತ್ತದೆ.

ಹೃದ್ರೋಗ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ನಿರಂತರವಾಗಿ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ನಿಧಾನವಾಗುತ್ತದೆ. ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡ ಹೆಚ್ಚಿಸುತ್ತದೆ. ಗಂಭೀರ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೊತೆಗೆ ದೈಹಿಕ ಚಟುವಟಿಕೆಯ ಕೊರತೆಯು ದೇಹದಲ್ಲಿನ ಸ್ನಾಯುಗಳು ಇನ್ಸುಲಿನ್ ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗುತ್ತದೆ. ಟೈಪ್-2 ಮಧುಮೇಹದ ಅಪಾಯಕ್ಕೆ ಕಾರಣವಾಗುತ್ತದೆ. ನಿತ್ಯ ಸ್ವಲ್ಪ ಸಮಯದವರೆಗೆ ವ್ಯಾಯಾಮ ಮಾಡುವುದರಿಂದ ದೇಹದಲ್ಲಿನ ಇನ್ಸುಲಿನ್ ಮಟ್ಟ ಸುಧಾರಣೆಯಾಗುವುದರ ಜೊತೆಗೆ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ತುಂಬಾ ಸಹಾಯವಾಗುತ್ತದೆ.

ಚಯಾಪಚಯ, ರೋಗನಿರೋಧಕ ಶಕ್ತಿ ವೃದ್ಧಿ: ಹೆಚ್ಚು ಹೊತ್ತು ಕುಳಿತುಕೊಳ್ಳುವ ಬದಲು ಆಗಾಗ್ಗೆ ನಡಿಗೆ ಇಲ್ಲವೇ ಕೆಲಸದ ಮಧ್ಯೆ ನಿಂತರೆ ದೇಹದ ಚಯಾಪಚಯ ಕ್ರಿಯೆ ವೇಗವಾಗುತ್ತದೆ. ಇದರಿಂದ ದೇಹದಲ್ಲಿನ ಆಂತರಿಕ ಊತ ಇಲ್ಲವೇ ಉರಿಯೂತ ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆ ಸುಧಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದೇಹದಲ್ಲಿನ ನಿರ್ವಿಶೀಕರಣ ಪ್ರಕ್ರಿಯೆ ಸುಗಮಗೊಳಿಸಲು ಜೀವಕೋಶಗಳ ಆರೋಗ್ಯವನ್ನು ಕಾಪಾಡುತ್ತದೆ. ರೋಗಗಳ ವಿರುದ್ಧ ಹೋರಾಡಲು ದೇಹದ ನೈಸರ್ಗಿಕ ಪ್ರತಿರಕ್ಷೆ ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನಕರು ವಿವರಿಸುತ್ತಾರೆ.

ಬೆನ್ನು ನೋವಿನ ಜೊತೆಗೆ ಮಾನಸಿಕ ಒತ್ತಡದಿಂದ ಪರಿಹಾರ: ಗಂಟೆಗಟ್ಟಲೆ ತಪ್ಪಾಗಿ ಕುಳಿತುಕೊಳ್ಳುವುದು ಬೆನ್ನುಮೂಳೆ, ಕಶೇರುಖಂಡಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ದೀರ್ಘಕಾಲದ ಕುತ್ತಿಗೆ ನೋವು, ಬೆನ್ನು ನೋವು, ಭುಜದ ನೋವಿಗೆ ಕಾರಣವಾಗುತ್ತದೆ. ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಮಾನಸಿಕ ಆಯಾಸ, ಆತಂಕ ಹಾಗೂ ಒತ್ತಡ ಹೆಚ್ಚಿಸುತ್ತದೆ. ಕೆಲಸ ಮಾಡುವಾಗ ಇಲ್ಲವೇ ಲೈಟ್ ಸ್ಟ್ರೆಚಿಂಗ್ ಮಾಡುವಾಗ ಪ್ರತಿ 30ರಿಂದ 45 ನಿಮಿಷಗಳಿಗೊಮ್ಮೆ 2 ನಿಮಿಷಗಳ ವಿರಾಮ ತೆಗೆದುಕೊಳ್ಳುವುದರಿಂದ ಸ್ನಾಯುವಿನ ಒತ್ತಡ ನಿವಾರಿಸುತ್ತದೆ, ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಎಂದು ಅಧ್ಯಯನ ತಿಳಿಸುತ್ತದೆ.

ಕಚೇರಿ ಕೆಲಸ ಮಾಡುವವರಿಗೆ ಸರಳ ದೈನಂದಿನ ಟಿಪ್ಸ್: ಕಚೇರಿ ಕೆಲಸಗಾರರು ತಮ್ಮ ಅಭ್ಯಾಸಗಳಲ್ಲಿ ಕೆಲವು ಚಿಕ್ಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಂತಾಗ ಕೆಲಸ ಮಾಡುವ ಸ್ಟ್ಯಾಂಡಿಂಗ್ ಡೆಸ್ಕ್ ಅನ್ನು ಬಳಕೆ ಮಾಡುವುದು, ಫೋನ್‌ನಲ್ಲಿ ಮಾತನಾಡುವಾಗ ಕುಳಿತುಕೊಳ್ಳುವ ಬದಲು ನಡೆಯಿರಿ ಹಾಗೂ ಯಾವಾಗಲೂ ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಕೆ ಮಾಡುವುದು ಒಳ್ಳೆಯದು. ನಿಮ್ಮ ನೀರಿನ ಬಾಟಲಿ ತುಂಬುವ ನೆಪದಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ನಿಮ್ಮ ಕುರ್ಚಿಯಿಂದ ಏಳುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. 30 ನಿಮಿಷಗಳವರೆಗೆ ಒಂದೇ ಕಡೆಯಲ್ಲಿ ನಿಂತರೆ 15 ನಿಮಿಷಗಳವರೆಗೆ ನಡೆಯುವುದರಿಂದ ದೇಹಕ್ಕೆ ಉಪಯುಕ್ತವಾಗಿದೆ.

ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆಗಳನ್ನು ತಪ್ಪಿಸಲು ಹೆಚ್ಚು ವ್ಯಾಯಾಮ ಮಾಡುವ ಅಗತ್ಯವಿಲ್ಲ ಎಂದು ಅಧ್ಯಯನ ತಿಳಿಸಿದೆ. ಪ್ರತಿ 30ರಿಂದ 45 ನಿಮಿಷಗಳಿಗೊಮ್ಮೆ ಎರಡು ನಿಮಿಷಗಳವರೆಗೆ ನಡೆಯುವುದು, ನಿಂತಿರುವಾಗ ಕೆಲಸ ಮಾಡುವುದು, ಮೆಟ್ಟಿಲುಗಳನ್ನು ಬಳಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ಸೇರಿದಂತೆ ಚಿಕ್ಕ ಬದಲಾವಣೆಗಳು ದೇಹದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಪ್ರತಿದಿನ ನಿರಂತರವಾಗಿ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವ ಅಭ್ಯಾಸ ಬಿಡಬೇಕಾಗುತ್ತದೆ. ಇದರ ಬದಲಿಗೆ ದೈಹಿಕವಾಗಿ ಸಕ್ರಿಯರಾಗಿರುವುದು ಆರೋಗ್ಯಕರ ಜೀವನಕ್ಕೆ ತುಂಬಾ ಅವಶ್ಯವಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ.

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಮಧುಮೇಹ ಹಾಗೂ ದೇಹದ ತೂಕ ನಿಯಂತ್ರಿಸಲು ಐದು ನಿಮಿಷಗಳ ಚಿಕ್ಕ ನಡಿಗೆ ಅತ್ಯುತ್ತಮವೇ? ಏನಿದು ಮೈಕ್ರೋ ವಾಕಿಂಗ್?
  2. ಕೆಲವು ದೈನಂದಿನ ಅಭ್ಯಾಸಗಳಿಂದ ಕಣ್ಣಿನ ದೃಷ್ಟಿಗೆ ನಿಧಾನವಾಗಿ ಹಾನಿ: ತಜ್ಞರು ತಿಳಿಸುವುದೇನು?
  3. ನಟಿ ಸಮಂತಾ 'ಪವರ್ ಮಾರ್ನಿಂಗ್ ದಿನಚರಿ': ಸತತ 21 ದಿನಗಳವರೆಗೆ ಪಾಲಿಸಿದರೆ ಅತ್ಯುತ್ತಮ ಫಲಿತಾಂಶ
  4. ಖ್ಯಾತ ನಟ ನಾನಾ ಪಾಟೇಕರ್ ಹೃದಯ ಸ್ತಂಭನದಿಂದ ಸಾವು: ಕಾರ್ಡಿಯಾಕ್ ಅರೆಸ್ಟ್ & ಹಾರ್ಟ್ ಅಟ್ಯಾಕ್ ಮಧ್ಯೆಯಿರುವ ವ್ಯತ್ಯಾಸವೇನು?
  5. ಎಂಡೊಮೆಟ್ರಿಯೊಸಿಸ್​ನಿಂದ ಸದ್ದಿಲ್ಲದೇ ಹೆಚ್ಚಿಸುತ್ತಿರುವ ಟೈಪ್ - 2 ಡಯಾಬಿಟಿಸ್ ಅಪಾಯ: ಏಳು ಮಹಿಳೆಯರಲ್ಲಿ ಒಬ್ಬರಿಗೆ ತೊಂದರೆ
  6. ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣಗಳೇನು? ಚಿಹ್ನೆಗಳನ್ನು ಪತ್ತೆ ಮಾಡುವುದು ಹೇಗೆ?