ಅಡುಗೆಮನೆಯಲ್ಲಿ ಲಭಿಸುವ ಪದಾರ್ಥಗಳಿಂದ ದೇಹದ ತೂಕ ಇಳಿಸಿಕೊಳ್ಳುವುದು ತುಂಬಾ ಸುಲಭ!; ಅದು ಹೇಗೆ?
ಅನೇಕರು ದೇಹದ ಅಧಿಕ ತೂಕದ ಸಮಸ್ಯೆ ಬಳಲುತ್ತಿದ್ದಾರೆ. ಅಡುಗೆಮನೆಯಲ್ಲಿ ಲಭಿಸುವ ಪದಾರ್ಥಗಳಿಂದ ದೇಹದ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಈ ಸ್ಟೋರಿಯಲ್ಲಿ ತಿಳಿಯೋಣ.


Published : January 10, 2026 at 8:26 PM IST
ಬೊಜ್ಜು ಇಂದಿನ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ದೇಶದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತದ ಜನರ ಮೇಲೆ ಪರಿಣಾಮ ಬೀರುತ್ತಿದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ನಿರಂತರವಾಗಿ ಹೆಣಗಾಡುತ್ತಾರೆ. ನಮ್ಮಲ್ಲಿ ಹಲವರು ತೂಕ ಇಳಿಸಿಕೊಳ್ಳಲು ವ್ಯಾಯಾಮ, ನಡಿಗೆ ಅಥವಾ ಯೋಗ ಮಾಡುತ್ತಾರೆ. ಕೆಲವರು ಕಟ್ಟುನಿಟ್ಟಿನ ಡಯಟ್ ಯೋಜನೆಗಳನ್ನುಕೂಡ ಮಾಡುತ್ತಾರೆ. ನಮ್ಮ ಆಹಾರದ ಕ್ರಮದ ಬಗ್ಗೆ ಬಹಳ ಗಮನ ಹರಿಸುತ್ತೇವೆ. ಹೆಚ್ಚಿನ ಸಮಯ ನಾವು ಆಹಾರ ಪಟ್ಟಿಗಳನ್ನು ಅನುಸರಿಸುತ್ತೇವೆ. ಇದರಿಂದ ಪರಿಣಾಮಕಾರಿಯಾದ ಫಲಿತಾಂಶ ಲಭಿಸುವುದಿಲ್ಲ, ಕೆಲವು ಮನೆಮದ್ದುಗಳೊಂದಿಗೆ ನಾವು ಸುಲಭವಾಗಿ ದೇಹದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಹಲವರು ತೂಕ ಇಳಿಸಿಕೊಳ್ಳಲು ನಿರ್ಧರಿಸುತ್ತಾರೆ. ಕೆಲವರು ಯಶಸ್ವಿಯಾಗುತ್ತಾರೆ. ಆದರೆ, ಕೆಲವರು ದಾರಿ ಉದ್ದಕ್ಕೂ ವಿಫಲರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವ್ಯಾಯಾಮದೊಂದಿಗೆ ಮನೆಮದ್ದುಗಳು ದೇಹದ ತೂಕ ಇಳಿಸುವಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ತಜ್ಞರು ಸೂಚಿಸುವ ಐದು ಅತ್ಯುತ್ತಮ ಸೂತ್ರಗಳು ಯಾವುವು ಎಂಬುದನ್ನು ತಿಳಿಯೋಣ.

ಜೇನುತುಪ್ಪದೊಂದಿಗೆ ಬೆರೆಸಿದ ನಿಂಬೆ ರಸ ಆರೋಗ್ಯಕ್ಕೆ ಬೆಸ್ಟ್: ನಿಂಬೆ ರಸವು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಚಯಾಪಚಯವನ್ನು ಸುಧಾರಿಸುತ್ತದೆ, ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ನಿಂಬೆ ನೀರು ಕುಡಿಯುವುದರಿಂದ ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುವುದನ್ನು ತಡೆಯುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೇನುತುಪ್ಪದೊಂದಿಗೆ ನಿಂಬೆ ರಸವನ್ನು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನಗಳಿವೆ ಎಂದು ತಜ್ಞರು ತಿಳಿಸುತ್ತಾರೆ.
ಜೇನುತುಪ್ಪ, ದಾಲ್ಚಿನ್ನಿ: ಅಡುಗೆಮನೆಯಲ್ಲಿ ಲಭಿಸುವಂತಹ ದಾಲ್ಚಿನ್ನಿ ಎಲ್ಲರಿಗೂ ತಿಳಿದಿದೆ. ದಾಲ್ಚಿನ್ನಿ ಪ್ರತಿ ಅಡುಗೆಮನೆಯಲ್ಲಿಯೂ ತುಂಬಾ ಸುಲಭವಾಗಿ ಲಭ್ಯವಿದೆ. ದಾಲ್ಚಿನ್ನಿ ದೇಹದ ತೂಕ ಇಳಿಸುವ ಗುಣಗಳನ್ನು ಹೊಂದಿದೆ. ದಾಲ್ಚಿನ್ನಿ, ಜೇನುತುಪ್ಪದ ಟೀ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆ್ಯಂಟಿಮೈಕ್ರೊಬಿಯಲ್ ಗುಣಗಳಿಂದ ಸಮೃದ್ಧವಾಗಿದೆ. ಆರೋಗ್ಯಕರ ಜೀವನಶೈಲಿ, ವ್ಯಾಯಾಮದ ಜೊತೆಗೆ ದಾಲ್ಚಿನ್ನಿ, ಜೇನುತುಪ್ಪದ ಮಿಶ್ರಣವನ್ನು ಕುಡಿಯುವುದರಿಂದ ಅತ್ಯುತ್ತಮ ಫಲಿತಾಂಶಗಳು ದೊರೆಯುತ್ತವೆ. ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ, ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ ಎಂದು ಅಧ್ಯಯನವು ತಿಳಿಸುತ್ತದೆ.

ವೇಟ್ ಲಾಸ್ಗೆ ಹಸಿ ಬೆಳ್ಳುಳ್ಳಿ: ನಿಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಬೆಳ್ಳುಳ್ಳಿ ಗಮನಾರ್ಹ ತೂಕ ಇಳಿಸುವ ಪ್ರಯೋಜನಗಳನ್ನು ಹೊಂದಿದೆ. ಬೆಳ್ಳುಳ್ಳಿ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುವುದಲ್ಲದೆ, ಪ್ರಯೋಜನಕಾರಿ ಔಷಧವಾಗಿದೆ. ಇದರಿಂದ ಅನೇಕ ಜೀವಸತ್ವಗಳು, ಖನಿಜಗಳು, ಫೈಬರ್, ಪ್ರೋಟೀನ್, ಮ್ಯಾಂಗನೀಸ್ ಹಾಗೂ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಹಸಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಲು ತುಂಬಾ ಸಹಾಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಮೊಸರು: ದೇಹದ ತೂಕ ಇಳಿಸಲು ಮೊಸರು ಅತ್ಯಂತ ಪ್ರಯೋಜನಕಾರಿಯಾಗಿದೆ. ಮೊಸರು ನಿಯಮಿತವಾಗಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಮೊಸರಿನಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್, ಪ್ರೋಟೀನ್, ಪ್ರೋಬಯಾಟಿಕ್ ಹೇರಳವಾಗಿವೆ. ಈ ಪೋಷಕಾಂಶಗಳು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಚಿಯಾ ಬೀಜಗಳು ಅತ್ಯುತ್ತಮ: ಚಿಯಾ ಬೀಜಗಳು ದೇಹದ ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಬೀಜಗಳಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್ ಹಾಗೂ ಪೊಟ್ಯಾಸಿಯಮ್ ಸಮೃದ್ಧವಾಗಿವೆ. ಚಿಯಾ ಬೀಜಗಳು ದೇಹದ ಕಾರ್ಯವನ್ನು ಸುಧಾರಿಸುತ್ತದೆ. ಒಂದು ಔನ್ಸ್ ಚಿಯಾ ಬೀಜಗಳು 39 ಪ್ರತಿಶತದಷ್ಟು ಫೈಬರ್ ಅನ್ನು ಹೊಂದಿರುತ್ತವೆ. ಚಿಯಾ ಬೀಜಗಳಲ್ಲಿರುವ ಫೈಬರ್ ನೀರನ್ನು ಹೀರಿಕೊಳ್ಳುತ್ತದೆ. ಚಿಯಾ ಬೀಜಗಳನ್ನು ಸೇವಿಸುವುದರಿಂದ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಇದು ಹೆಚ್ಚುವರಿ ಆಹಾರಕ್ಕಾಗಿ ಹಂಬಲವನ್ನು ಕಡಿಮೆ ಮಾಡುವುದರಿಂದ ದೇಹದ ತೂಕ ನಷ್ಟ ಸಂಭವಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಇವುಗಳನ್ನೂ ಓದಿ:
- ಬೆಂಗಳೂರಿನಲ್ಲಿ ಮದ್ರಾಸ್ ಐ ಸೋಂಕು ಹೆಚ್ಚಳ; ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಿ ಶಾಲೆಗೆ ಕಳುಹಿಸದಂತೆ ಪೋಷಕರಿಗೆ ವೈದ್ಯರ ಸಲಹೆ
- ಸಂತೋಷ, ದುಃಖ, ಕೋಪ, ಭಯ..: ಭಾವನೆಗಳ ನಿಯಂತ್ರಣ ಹೇಗೆ?
- ಯಾವುದೇ ಆಹಾರ ಸೇವಿಸಿದರೂ ನಿಮಗೆ ಎದೆಯುರಿ ಉಂಟಾಗುತ್ತದೆಯೇ?: ಈ ಸಮಸ್ಯೆ ಪರಿಹರಿಸಲು ವೈದ್ಯರು ಸೂಚಿಸುವ ಪಾನೀಯಗಳು ಯಾವುವು?
- ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬೇಕೇ? ಈ ಹಣ್ಣು, ತರಕಾರಿಗಳ ಸೇವನೆಯಿಂದ ಬೆಸ್ಟ್ ರಿಸಲ್ಟ್
- ನಿಮ್ಮ ಹೃದಯ ಬಲಿಷ್ಠವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ ಗೊತ್ತೇ?; ಹೀಗಿವೆ ವೈದ್ಯರ ಸರಳ ಟಿಪ್ಸ್

