ETV Bharat / health

ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬೇಕೇ? ಈ ಹಣ್ಣು, ತರಕಾರಿಗಳ ಸೇವನೆಯಿಂದ ಬೆಸ್ಟ್ ರಿಸಲ್ಟ್‌

ಕೊಲೆಸ್ಟ್ರಾಲ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೇಹದ ತೂಕ ಹೆಚ್ಚಾಗುವುದರೊಂದಿಗೆ ಹೃದ್ರೋಗಗಳು, ಫ್ಯಾಟಿ ಲಿವರ್ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ.

high cholesterol  These vegetables lower cholesterol  ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು  Protein rich foods
ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವ ಬಗೆ ಹೇಗೆ? (Getty Images)
author img

By ETV Bharat Lifestyle Team

Published : January 9, 2026 at 1:18 PM IST

3 Min Read
Choose ETV Bharat

ನಾವು ಸೇವಿಸುವ ದೈನಂದಿನ ಆಹಾರದಲ್ಲಿ ಪ್ರಮುಖ ಪೋಷಕಾಂಶಗಳಿವೆ. ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಹಾಗೂ ಕೊಬ್ಬುಗಳು ಇರುತ್ತವೆ. ಇವೆಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ಅಗತ್ಯ.

ಆದ್ರೆ, ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದ್ರೋಗಗಳು, ಫ್ಯಾಟಿ ಲಿವರ್ ಸೇರಿದಂತೆ ವಿವಿಧ ಆರೋಗ್ಯದ ಸಮಸ್ಯೆಗಳು ಬರುತ್ತವೆ. ಈ ಕೊಬ್ಬು ಕರಗಿಸಲು ಬಯಸಿದರೆ ಪ್ರತಿನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಇದರೊಂದಿಗೆ ಜಂಕ್ ಫುಡ್ಸ್ ಸೇವಿಸಬಾರದು.

high cholesterol  These vegetables lower cholesterol  ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು  Protein rich foods
ಸಾಂದರ್ಭಿಕ ಚಿತ್ರ (Getty Images)

ದಿನನಿತ್ಯದ ಆರೋಗ್ಯಕರ ಆಹಾರ ಕ್ರಮಗಳನ್ನು ಅವಡಿಸಿಕೊಳ್ಳುವ ಮೂಲಕ ದೇಹದಲ್ಲಿರುವ ಕೊಬ್ಬನ್ನು ನಿಯಂತ್ರಿಸಬಹುದು. ಕೆಲವು ತರಕಾರಿಗಳನ್ನು ಸರಿಯಾಗಿ ಸೇವಿಸಿದರೆ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ. ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುವಂತಹ ಆಹಾರಗಳು ಯಾವುವು ಎಂಬುದನ್ನು ಪೌಷ್ಟಿಕ ತಜ್ಞೆ ಪಾವನಿ ತಿಳಿಸಿದ್ದಾರೆ.

ಕಾರ್ಬೋಹೈಡ್ರೇಟ್ಸ್​: ಕಾರ್ಬೋಹೈಡ್ರೇಟ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವರು ಭಾವಿಸುತ್ತಾರೆ. ಇವು ದೇಹದಲ್ಲಿ ಕ್ಯಾಲೊರಿಗಳನ್ನು ಹೆಚ್ಚಿಸುತ್ತವೆ. ಪ್ರಮುಖವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಕೆಲವು ಆಹಾರಗಳು ದೇಹದಲ್ಲಿ ಕೊಲೆಸ್ಟ್ರಾಲ್ ಕರಗಿಸುತ್ತವೆ.

high cholesterol  These vegetables lower cholesterol  ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು  Protein rich foods
ಹೈಕೊಲೆಸ್ಟ್ರಾಲ್ - ಸಾಂದರ್ಭಿಕ ಚಿತ್ರ (Getty Images)

ಸರಳ ಕಾರ್ಬೋಹೈಡ್ರೇಟ್ಸ್​: ಸರಳ ಕಾರ್ಬೋಹೈಡ್ರೇಟ್ಸ್​ ಬೇಗನೆ ಜೀರ್ಣವಾಗಿ ತಕ್ಷಣದ ಶಕ್ತಿ ನೀಡುತ್ತವೆ. ಇದರಲ್ಲಿ ಹಣ್ಣುಗಳಲ್ಲಿನ ಫ್ರಕ್ಟೋಸ್, ಹಾಲಿನ ಲ್ಯಾಕ್ಟೋಸ್ ಸೇರಿವೆ.

ಸಂಕೀರ್ಣ ಕಾರ್ಬೋಹೈಡ್ರೇಟ್ಸ್: ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ನಿಧಾನವಾಗಿ ಶಕ್ತಿ ಬಿಡುಗಡೆ ಮಾಡುತ್ತವೆ. ಇವು ನಾರುಗಳನ್ನು ಒಳಗೊಂಡಿರುತ್ತವೆ. ಸಂಕೀರ್ಣ ಕಾರ್ಬೋಹೈಡ್ರೇಟ್ಸ್​ನಲ್ಲಿ ಧಾನ್ಯಗಳು, ದ್ವಿದಳ ಧಾನ್ಯಗಳು, ಪಿಷ್ಟ ತರಕಾರಿಗಳು ಬರುತ್ತವೆ.

ನಾರಿನ ಪದಾರ್ಥಗಳು: ನಾರಿ ಪದಾರ್ಥಗಳು ಜೀರ್ಣವಾಗದ ಕಾರ್ಬೋಹೈಡ್ರೇಟ್ ಆಗಿದ್ದು, ಜೀರ್ಣಾಂಗದ ಆರೋಗ್ಯಕ್ಕೆ ಪೂರಕವಾಗಿದೆ.

ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು:

  • ಸೌತೆಕಾಯಿ
  • ಸೋರೆಕಾಯಿ
  • ಹೀರೆಕಾಯಿ
  • ಟೊಮೆಟೊ
  • ಹಸಿರು ಸೊಪ್ಪುಗಳು
  • ಕಲ್ಲಂಗಡಿ ಹಣ್ಣು
  • ಪಪ್ಪಾಯಿ ಹಣ್ಣು

ಇವು ಹೈ ಕೊಲೆಸ್ಟ್ರಾಲ್ ಹೇಗೆ ಕಡಿಮೆ ಮಾಡುತ್ತವೆ?: ಇಲ್ಲಿ ತಿಳಿಸಲಾಗಿರುವ ಈ ತರಕಾರಿ ಹಾಗು ಹಣ್ಣುಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿವೆ. ಆದರೆ, ಇವುಗಳಲ್ಲಿ ಫೈಬರ್ ಹಾಗೂ ನೀರಿನ ಅಂಶವು ಸಮೃದ್ಧವಾಗಿವೆ.

high cholesterol  These vegetables lower cholesterol  ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು  Protein rich foods
ಟೊಮೆಟೊ (Getty Images)

ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಕರಗಲು ಸಾಧ್ಯವಾಗುತ್ತದೆ. ಅಧಿಕ ಆಹಾರವನ್ನು ಸೇವಿಸುವಂತಹ ಹಂಬಲವನ್ನು ಕಡಿಮೆ ಮಾಡುತ್ತದೆ. ತುಂಬಾ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ನಿಯಮಿತವಾಗಿ ಈ ತರಕಾರಿಗಳನ್ನು ಸೇವನೆ ಮಾಡುವ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ದಿನಕ್ಕೆ ಒಂದರಿಂದ ಎರಡು ಬಾರಿಯಾದರೂ ನಿಮ್ಮ ಆಹಾರ ಕ್ರಮದಲ್ಲಿ ಈ ತರಕಾರಿಗಳನ್ನು ಸೇವಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಪ್ರೋಟೀನ್‌ ಭರಿತವಾದ ಆಹಾರಗಳು ಯಾವುವು?: ಪ್ರೋಟೀನ್ ಭರಿತವಾದ ಆಹಾರಗಳು ನಮ್ಮ ದೇಹಕ್ಕೆ ತುಂಬಾ ಮುಖ್ಯವಾಗಿದೆ. ಈ ಕಾರಣದಿಂದ ನಾವು ಸೇವಿಸಿದ ಬಳಿಕ ಹೊಟ್ಟೆ ತುಂಬಿರುತ್ತದೆ. ಇವುಗಳು ಸ್ನಾಯುಗಳಿಗೆ ತುಂಬಾ ಒಳ್ಳೆಯದು. ಪ್ರೋಟೀನ್ ನಮಗೆ ವಯಸ್ಸಾದಂತೆ ಕಳೆದುಕೊಳ್ಳುವ ಸ್ನಾಯುವಿನ ದ್ರವ್ಯರಾಶಿಯನ್ನು ಒದಗಿಸುತ್ತದೆ. ಪ್ರೋಟೀನ್‌ ಭರಿತವಾದ ಆಹಾರದ ಪಟ್ಟಿಯಲ್ಲಿ ಬರುವಂತಹ ಮೊಟ್ಟೆ, ಚಿಕನ್ ಬ್ರೆಸ್ಟ್, ಪನೀರ್, ಟೋಫು, ಸೋಯಾ, ವೇ ಪ್ರೋಟೀನ್ ಹಾಗೂ ಮೊಸರನ್ನು ನಿಮ್ಮ ಡಯಟ್ ಪ್ಲಾನ್​ನಲ್ಲಿ ಸೇರಿಸಬೇಕಾಗುತ್ತದೆ. ಇಲ್ಲಿ ತಿಳಿಸಿರುವ ಆಹಾರಗಳಲ್ಲಿ ಬಹಳಷ್ಟು ಪ್ರೋಟೀನ್ ಇರುತ್ತದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡಕ್ಕೂ ಉತ್ತಮ ಆಯ್ಕೆಯಾಗಿದೆ. ಈ ಆಹಾರಗಳು ಎಲ್ಲರಿಗೂ ದೊರೆಯುತ್ತವೆ. ಪ್ರತಿದಿನ ಇವುಗಳನ್ನೆಲ್ಲ ಒಂದೊಂದಾಗಿ ಸೇವನೆ ಮಾಡಬಹುದು, ಇದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಇವುಗಳನ್ನು ತೆಗೆದುಕೊಳ್ಳುವುದರಿಂದ ದೇಹಕ್ಕೆ ಬಹಳಷ್ಟು ಪ್ರೋಟೀನ್ ಸಿಗುತ್ತದೆ. ಜೊತೆಗೆ ದೇಹದ ಕೊಬ್ಬನ್ನು ಕೂಡ ಕರಗಿಸಬಹುದು ಎಂದು ತಜ್ಞರು ತಿಳಿಸುತ್ತಾರೆ.

high cholesterol  These vegetables lower cholesterol  ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು  Protein rich foods
ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವ ಬಗೆ ಹೇಗೆ? (Getty Images)

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹೇಗೆ?: ಮುಳ್ಳನ್ನು ಮುಳ್ಳಿನಿಂದ ಕತ್ತರಿಸುವ ರೀತಿಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಉತ್ತಮ ಕೊಲೆಸ್ಟ್ರಾಲ್‌ನೊಂದಿಗೆ ಕರಗಿಸಬಹುದು. ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿರುವ ಹಲವು ಆಹಾರಗಳಿವೆ. ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿರುವ ಅಧಿಕವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಬಹುದು. ಇದರಲ್ಲಿ ಇವು ಸೇರಿವೆ.

ಕೆಟ್ಟ ಕೊಲೆಸ್ಟ್ರಾಲ್ ಕರಗಿಸುವ ಆಹಾರಗಳಿವು:

  • ಬಾದಾಮಿ
  • ಶೇಂಗಾ
  • ವಿವಿಧ ಬೀಜಗಳು
  • ತುಪ್ಪ
  • ತೆಂಗಿನ ಎಣ್ಣೆ

ಈ ಆಹಾರಗಳನ್ನು ಸೇವಿಸುವುದರಿಂದ ಲಾಭಗಳೇನು?: ಈ ಮೇಲಿನ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಲು ಸಾಧ್ಯವಾಗುತ್ತದೆ. ಈ ಆಹಾರಗಳು ಉತ್ತಮ ಪೋಷಕಾಂಶಗಳನ್ನು ಒಳಗೊಂಡಿವೆ. ಇವುಗಳ ಸೇವನೆಯಿಂದ ದೇಹದಲ್ಲಿನ ಹಾರ್ಮೋನುಗಳ ಅಸಮತೋಲನವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಕಲುಷಿತ ನೀರು ಸೇವನೆಯಿಂದ ಅತಿಸಾರದ ಜೊತೆಗೆ ಯಾವೆಲ್ಲಾ ರೋಗಗಳು ಬರುತ್ತವೆ?: ವಹಿಸಬೇಕಾದ ಮುನ್ನಚ್ಚರಿಕೆಗಳೇನು?
  2. ಸಿಹಿ ತಿನಿಸುಗಳನ್ನು ಸೇವಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವು: ವೈದ್ಯರ ಸಲಹೆಗಳೇನು?
  3. ಚಿಕ್ಕ ಚಿಕ್ಕ ವಿಷಯ ಮರೆತು ಬಿಡುವುದು ಬುದ್ಧಿಮಾಂದ್ಯತೆ, ಆಲ್ಝೈಮರ್​ ಚಿಹ್ನೆಯೇ? ತಡೆಯುವುದು ಹೇಗೆ ಗೊತ್ತೇ?
  4. ಚಳಿಗಾಲದಲ್ಲಿ ಗಂಟಲು ನೋವು ಹಾಗೂ ಮೂಗು ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆಯಾಗುತ್ತಿದೆಯೇ? ತಜ್ಞರು ಸೂಚಿಸುವ ಮನೆಮದ್ದುಗಳಿವು
  5. ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆಯೇ? ತಜ್ಞರ ಟಿಪ್ಸ್​ ಪಾಲಿಸಿ, ನಿಮ್ಮ ಉಸಿರು ಯಾವಾಗಲೂ ಫ್ರೆಶ್!