ETV Bharat / health

ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆ: ದೇಹದ ಕೆಲವು ಭಾಗಗಳನ್ನು ಪ್ರೆಸ್​ ಮಾಡಿದರೆ ನಿವಾರಣೆ: ತಜ್ಞರ ಸಲಹೆ

ಹೊಟ್ಟೆಯ ಗ್ಯಾಸ್ಟ್ರಿಕ್​ನ ಸಾಮಾನ್ಯ ಲಕ್ಷಣಗಳೆಂದ್ರೆ, ತೇಗುವಿಕೆ, ಉಬ್ಬುವುದು, ನೋವು ಮತ್ತು ಅಸ್ವಸ್ಥತೆ ಕಾಡುತ್ತದೆ. ಈ ಸಮಸ್ಯೆಗೆ ಬೇಗನೇ ಪರಿಹಾರ ಪಡೆಯಲು ದೇಹದ ಕೆಲವು ಭಾಗಗಳನ್ನು ಸ್ವಲ್ಪ ಒತ್ತಿದರೆ ನಿವಾರಣೆಯಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

gastric problems  ಗ್ಯಾಸ್ಟ್ರಿಕ್ ಸಮಸ್ಯೆ  Acupressure Points for Stomach Pain  acupressure points for acidity gas
ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆ- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : November 8, 2025 at 1:10 PM IST

3 Min Read
Choose ETV Bharat

ಹೊಟ್ಟೆಯ ಗ್ಯಾಸ್ಟ್ರಿಕ್ ಸಾಮಾನ್ಯ ಸಮಸ್ಯೆಯಾಗಿದೆ. ಹೊಟ್ಟೆಯ ಗ್ಯಾಸ್ಟ್ರಿಕ್​ಗೆ ಹಲವು ಕಾರಣಗಳಿವೆ. ಇದು ಹೆಚ್ಚಾಗಿ ಕಳಪೆ ಆಹಾರ ಪದ್ಧತಿ, ಕಳಪೆ ಜೀರ್ಣಕ್ರಿಯೆ ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದ ಉಂಟಾಗುತ್ತದೆ. ಜೀರ್ಣಕ್ರಿಯೆಯ ಕೊರತೆಯಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಕೂಡ ಸಮಸ್ಯೆಯಾಗಬಹುದು.

ಹೊಟ್ಟೆಯ ಗ್ಯಾಸ್ಟ್ರಿಕ್​ನ ಸಾಮಾನ್ಯ ಲಕ್ಷಣಗಳೆಂದ್ರೆ, ತೇಗುವಿಕೆ, ಉಬ್ಬುವುದು, ನೋವು ಹಾಗೂ ಅಸ್ವಸ್ಥತೆಯನ್ನು ಒಳಗೊಂಡಿರುತ್ತವೆ. ಜನರು ಹೆಚ್ಚಾಗಿ ಗ್ಯಾಸ್ಟ್ರಿಕ್ ಅನ್ನು ನಿವಾರಿಸಲು ಬಡೆಸೋಂಪು, ಇಂಗು ಹಾಗೂ ಸೆಲರಿಯನ್ನು ಸೇವಿಸುತ್ತಾರೆ. ಹೊಟ್ಟೆಯ ಗ್ಯಾಸ್ಟ್ರಿಕ್​ನಿಂದ ಪರಿಹಾರ ಪಡೆಯಲು ಈ ಪದಾರ್ಥಗಳನ್ನು ಸೇವಿಸದೇ ಕೆಲವು ಪರಿಹಾರಗಳನ್ನು ಪಡೆಯಲು ಸಾಧ್ಯವಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಹೊಟ್ಟೆಯ ಗ್ಯಾಸ್ಟ್ರಿಕ್​ನಿಂದ ತ್ವರಿತ ಪರಿಹಾರ ನೀಡುವ ಕೆಲವು ಆಕ್ಯುಪ್ರೆಶರ್ ಪಾಯಿಂಟ್​ಗಳ ಕುರಿತು ತಿಳಿಯೋಣ.

gastric problems  ಗ್ಯಾಸ್ಟ್ರಿಕ್ ಸಮಸ್ಯೆ  Acupressure Points for Stomach Pain  acupressure points for acidity gas
ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆ- ಸಾಂದರ್ಭಿಕ ಚಿತ್ರ (Getty Images)

ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಪರಿಹಾರಕ್ಕೆ ದೇಹದಲ್ಲಿ ಪ್ರೆಸ್​ ಮಾಡಬೇಕು? ಹೊಟ್ಟೆಯ ಅನಿಲವನ್ನು ನಿವಾರಿಸಲು ದೇಹದ ಮೂರು ಬಿಂದುಗಳನ್ನು ಒತ್ತಬಹುದು. ಹೊಟ್ಟೆಯಲ್ಲಿನ ಅನಿಲವು ನಿಮಗೆ ತೊಂದರೆ ನೀಡಿದಾಗಲೆಲ್ಲಾ, ಹೊಕ್ಕುಳಕ್ಕಿಂತ ಸ್ವಲ್ಪ ಮೇಲಿರುವ Zhongwan acupoint (CV12), ಹೊಕ್ಕುಳಕ್ಕಿಂತ ಸುಮಾರು ಒಂದೂವರೆ ಇಂಚು ಕೆಳಗೆ Conception Vessel 6 (CV6) ಹಾಗೂ ಮಣಿಕಟ್ಟಿನ ಒಳಭಾಗವನ್ನು Pericardium 6 (PC6) ಒತ್ತುವುದರಿಂದ ಪರಿಹಾರ ಸಿಗುತ್ತದೆ. ಹಾಗಾದ್ರೆ ಇವುಗಳನ್ನು ಹೇಗೆ ಪ್ರೆಸ್​ ಮಾಡುವುದು ಎಂಬುದರ ಮಾಹಿತಿ ಇಲ್ಲಿದೆ.

ಹೊಟ್ಟೆಯ ಅನಿಲಕ್ಕೆ ಬೆರಳಿನ ಬಿಂದುಗಳು ಯಾವುವು?

ಹೊಕ್ಕುಳದಿಂದ 4 ಇಂಚು ಮೇಲೆ ಅಥವಾ CV12: ಈ ಬಿಂದುವನ್ನು ಲಘುವಾಗಿ ಒತ್ತಬೇಕು ಹಾಗೂ ಹೊಕ್ಕುಳದಿಂದ ಸುಮಾರು 4 ಇಂಚು ಮೇಲೆ, ಹೊಟ್ಟೆಗೆ ಅನುಗುಣವಾಗಿ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿಕೊಳ್ಳಬೇಕಾಗುತ್ತದೆ.

gastric problems  ಗ್ಯಾಸ್ಟ್ರಿಕ್ ಸಮಸ್ಯೆ  Acupressure Points for Stomach Pain  acupressure points for acidity gas
ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆ- ಸಾಂದರ್ಭಿಕ ಚಿತ್ರ (Getty Images)

ಹೊಕ್ಕುಳದಿಂದ 1.5 ಇಂಚು ಕೆಳಗೆ ಅಥವಾ CV6: ಹೊಕ್ಕುಳದಿಂದ ಸುಮಾರು 1.5 ಇಂಚು ಕೆಳಗೆ ಇರುವ CV6 ಬಿಂದುವನ್ನು 2 ರಿಂದ 3 ಬೆರಳುಗಳನ್ನು ಬಳಸಿ ಸೌಮ್ಯ ಒತ್ತಡದಿಂದ ವೃತ್ತಾಕಾರದ ಚಲನೆ ಮಸಾಜ್ ಮಾಡಬೇಕಾಗುತ್ತದೆ.

ಮಣಿಕಟ್ಟು ಅಥವಾ PC6: ಕೈಯ ಒಳಭಾಗದಲ್ಲಿರುವ PC6 ಬಿಂದುವನ್ನು ಮಣಿಕಟ್ಟಿನಿಂದ ಸುಮಾರು 3 ಬೆರಳುಗಳ ಕೆಳಗೆ ಒತ್ತುವುದರಿಂದ ಸೆಳೆತ ಹಾಗೂ ವಾಕರಿಕೆ ನಿವಾರಣೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಗ್ಯಾಸ್ಟ್ರಿಕ್ ತಕ್ಷಣವೇ ಹೋಗಲಾಡಿವುದು ಹೇಗೆ ಗೊತ್ತೇ? ಅಸ್ವಸ್ಥತೆ ತೀವ್ರವಾಗಿದ್ದರೆ ಮತ್ತು ಹೊಟ್ಟೆಯ ಗ್ಯಾಸ್ಟ್ರಿಕ್​ದಿಂದ ತಕ್ಷಣದ ಪರಿಹಾರವಾಗಬೇಕಾದರೆ ಕೆಲವು ಮನೆಮದ್ದುಗಳಿವೆ. ಸೋಂಪು, ಇಂಗು, ಸೆಲರಿ ಬೀಜಗಳನ್ನು ತಿನ್ನಬಹುದು. ನೀವು ನಿಂಬೆಯೊಂದಿಗೆ ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿದು ನಡೆಯಬಹುದು.

ಶುಂಠಿ ಚಹಾವು ಗ್ಯಾಸ್ಟ್ರಿಕ್​ಗೆ ಉತ್ತಮ ಪರಿಹಾರವಾಗಿದೆ. ಹೆಚ್ಚುವರಿಯಾಗಿ ನಿಮ್ಮ ಪಾದದ ಮೇಲೆ ಸುಮಾರು ಮೂರು ಇಂಚುಗಳಷ್ಟು ಮೇಲಿರುವ Sanyinjiao (SP6) ಬಿಂದುವನ್ನು 2 ರಿಂದ 3 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಬಹುದು.

gastric problems  ಗ್ಯಾಸ್ಟ್ರಿಕ್ ಸಮಸ್ಯೆ  Acupressure Points for Stomach Pain  acupressure points for acidity gas
ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆ- ಸಾಂದರ್ಭಿಕ ಚಿತ್ರ (Getty Images)

ಹೊಟ್ಟೆಯ ಭಾರ ಕಡಿಮೆ ಮಾಡಲು ಯಾವ ಬಿಂದು ಒತ್ತಬೇಕು ಗೊತ್ತೇ? ನಿಮ್ಮ ಹೊಟ್ಟೆ ತುಂಬಾ ಭಾರವಾಗಿದ್ದರೆ ಹಾಗೂ ನೋವು ಅನುಭವಿಸುತ್ತಿದ್ದರೆ, ನಿಮ್ಮ ಹೊಟ್ಟೆಯನ್ನು ಹಗುರಗೊಳಿಸಲು ಈ ಆಕ್ಯುಪ್ರೆಶರ್ ಬಿಂದುಗಳನ್ನು ಒತ್ತಬಹುದು.

ಹೊಟ್ಟೆಯ ಕೆಳಗೆ ಇರುವ ಬಿಂದು ಅಥವಾ CV6: ಹೊಕ್ಕುಳದಿಂದ ಸುಮಾರು 1.5 ಇಂಚು ಕೆಳಗೆ ಇರುವ ಈ ಬಿಂದುವನ್ನು ನಿಮ್ಮ ಹೊಟ್ಟೆಗೆ ಅನುಗುಣವಾಗಿ ಎರಡರಿಂದ ಮೂರು ಬೆರಳುಗಳಿಂದ 2 ರಿಂದ 3 ನಿಮಿಷಗಳ ಕಾಲ ನಿಧಾನವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ.

ಹೊಕ್ಕುಳ ಬಳಿ ಇರುವ ಬಿಂದು ಅಥವಾ ST25: ಹೊಕ್ಕುಳ ಬಲಕ್ಕೆ ಸುಮಾರು ಎರಡು ಬೆರಳುಗಳಿರುವ ಈ ಬಿಂದುವನ್ನು ನಿಮ್ಮ ಹೆಬ್ಬೆರಳು ಅಥವಾ ತೋರುಬೆರಳಿನಿಂದ ನಿಧಾನವಾಗಿ ಒತ್ತಿ ಮಸಾಜ್ ಮಾಡಬೇಕು.

ಹಸ್ತ ಬಿಂದು ಅಥವಾ LI4: ಹೊಟ್ಟೆಯನ್ನು ತೆರವುಗೊಳಿಸಲು, ನಿಮ್ಮ ಹೆಬ್ಬೆರಳು ಹಾಗೂ ತೋರುಬೆರಳಿನ ನಡುವಿನ ಮೃದುವಾದ ಪ್ರದೇಶಕ್ಕೆ ಮೃದುವಾಗಿ ಒತ್ತಬೇಕಾಗುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಕರುಳುಗಳು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು (ಸಂಶೋಧನಾ ವರದಿ)

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ: