ETV Bharat / health

ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟವು ಹೈ ಶುಗರ್​ ಲೆವಲ್​​ಗಿಂತಲೂ ಹೆಚ್ಚು ಅಪಾಯಕಾರಿ, ನಿರ್ಲಕ್ಷಿಸಿದರೆ ಆರೋಗ್ಯಕ್ಕೆ ಮಾರಕ: ತಜ್ಞರ ಎಚ್ಚರಿಕೆ

ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟದ ಸಮಸ್ಯೆ ಬಗ್ಗೆ ಹಲವು ಜನರಿಗೆ ತಿಳಿದಿದೆ. ಅವಧಿಯಲ್ಲಿ ನೀವು ಮಾಡುವಂತಹ ಚಿಕ್ಕ ನಿರ್ಲಕ್ಷ್ಯವು ರೋಗಿಯ ಜೀವಕ್ಕೆ ಅಪಾಯ ಉಂಟುಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

Low blood sugar level  Low blood sugar level side effect  high blood sugar levels  ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟ
ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟದಿಂದ ಆಗುವ ಅಡ್ಡಪರಿಣಾಮಗಳೇನು?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : February 25, 2026 at 5:57 PM IST

3 Min Read
Choose ETV Bharat

ಮಧುಮೇಹಿಗಳು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟದ ಹೆಚ್ಚಾಗಿ ಚರ್ಚಿಸುತ್ತಾರೆ. ಆದ್ರೆ, ರಕ್ತದಲ್ಲಿನ ಕಡಿಮೆ ಸಕ್ಕರೆ ಮಟ್ಟದ ಕುರಿತು ಕೆಲವೇ ಕೆಲವು ಜನರು ಮಾತ್ರ ಮಾತನಾಡುತ್ತಾರೆ. ರಕ್ತದಲ್ಲಿ ಕಡಿಮೆ ಶುಗರ್​ ಲೆವಲ್​ ಅನ್ನು ಹೈಪೊಗ್ಲಿಸಿಮಿಯಾ ಎಂದೂ ಕರೆಯಲ್ಪಡಲಾಗುತ್ತದೆ. ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು ದೇಹದ ಅಂಗಗಳಿಗೆ ಕ್ರಮೇಣ ಹಾನಿ ಉಂಟುಮಾಡುತ್ತದೆ. ಆದರೆ, ರಕ್ತದಲ್ಲಿನ ಕಡಿಮೆ ಸಕ್ಕರೆಯು ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯು ಜೀವವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ದೇಹದಲ್ಲಿನ ಗ್ಲೂಕೋಸ್ ಮಟ್ಟವು 70 mg/dL ಗಿಂತ ಕಡಿಮೆಯಾದಾಗ ಮೆದುಳು ಶಕ್ತಿಯನ್ನು ಪಡೆಯುವುದನ್ನು ನಿಲ್ಲಿಸುತ್ತದೆ. ಇದರಿಂದ ವ್ಯಕ್ತಿಯನ್ನು ಮೂರ್ಛೆ ಹೋಗುವಂತೆ ಇಲ್ಲವೇ ಕೋಮಾಕ್ಕೆ ಹೋಗಲು ಕಾರಣವಾಗಬಹುದು. ಮೈ ನಡುಗುವುದು, ಬೆವರುವುದು ಹಾಗೂ ಹೆದರಿಕೆ ಇತರೆ ದೌರ್ಬಲ್ಯದ ಆರಂಭಿಕ ಚಿಹ್ನೆಗಳನ್ನು ಜನರು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಇದು ನಾವು ಮಾಡುವ ದೊಡ್ಡ ತಪ್ಪು ಆಗಿದೆ. ರೋಗಿಯು ನಿದ್ರಿಸುತ್ತಿರುವಾಗ ಇಲ್ಲವೇ ಒಂಟಿಯಾಗಿ ಪ್ರಯಾಣಿಸುವಾಗ ಈ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿಯಾಗುತ್ತದೆ. ಇದರಿಂದ ಹೈಪೊಗ್ಲಿಸಿಮಿಯಾದ ಕುರಿತು ಅರಿತುಕೊಳ್ಳುವುದು ಹಾಗೂ ಈ ಸ್ಥಿತಿಯನ್ನು ತಕ್ಷಣವೇ ನಿರ್ವಹಣೆ ಮಾಡುವುದು ಪ್ರತಿಯೊಬ್ಬ ಮಧುಮೇಹಿಗಳಿಗೆ ಹಾಗೂ ಅವರ ಕುಟುಂಬಕ್ಕೆ ನಿರ್ಣಾಯಕವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

Low blood sugar level  Low blood sugar level side effect  high blood sugar levels  ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟ
ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟದಿಂದ ಆಗುವ ಅಡ್ಡಪರಿಣಾಮಗಳೇನು?- ಸಾಂದರ್ಭಿಕ ಚಿತ್ರ (Getty Images)

ರಕ್ತದಲ್ಲಿನ ಶುಗರ್​ ಲೆವಲ್ ಇದ್ದಕ್ಕಿದಂತೆ ಇಳಿಕೆಯಾಗುವುದು ಏಕೆ? ರಕ್ತದಲ್ಲಿನ ಶುಗರ್ ಲೆವಲ್ ಅನ್ನು ಕಡಿಮೆಯಾಗಲು ಹಲವು ಕಾರಣಗಳಿರಬಹುದು. ಸಾಮಾನ್ಯ ಕಾರಣವೆಂದರೆ ಇನ್ಸುಲಿನ್ ಅಥವಾ ಔಷಧಿಗಳ ಮಿತಿಮೀರಿದ ಸೇವನೆ ಮಾಡುವುದು. ಇದಲ್ಲದೆ ಸಮಯಕ್ಕೆ ಸರಿಯಾಗಿ ಊಟವನ್ನು ಮಾಡದಿರುವುದು, ಸಾಮಾನ್ಯಕ್ಕಿಂತ ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗುವುದು, ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ರಕ್ತದಲ್ಲಿನ ಶುಗರ್ ಮಟ್ಟವು ವೇಗವಾಗಿ ಇಳಿಯಬಹುದು. ಹಲವು ಬಾರಿ ರೋಗಿಗಳು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ಸಾಕಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದಿಲ್ಲ. ದೇಹದಲ್ಲಿನ ಗ್ಲೂಕೋಸ್ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ ಹಾಗೂ ತುರ್ತು ಸ್ಥಿತಿಗೆ ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಹೈಪೊಗ್ಲಿಸಿಮಿಯಾದ ಚಿಹ್ನೆಗಳನ್ನು ಗುರುತಿಸುವುದು ಹೇಗೆ? ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದಾಗ ದೇಹವು ತಕ್ಷಣವೇ ಸಂಕೇತ ನೀಡಲು ಆರಂಭಿಸುತ್ತದೆ. ನೀವು ಇದ್ದಕ್ಕಿದ್ದಂತೆ ಅತಿಯಾದ ಬೆವರುವಿಕೆ, ನಿಮ್ಮ ಕೈ ಹಾಗೂ ಕಾಲುಗಳಲ್ಲಿ ನಡುಗುವುದು, ತ್ವರಿತ ಹೃದಯ ಬಡಿತ, ದೃಷ್ಟಿ ಮಂದವಾಗುವುದು, ತೀವ್ರ ಹಸಿವು ಅನುಭವಿಸಿದರೆ ತಕ್ಷಣವೇ ಜಾಗರೂಕರಾಗಿರಬೇಕಾಗುತ್ತದೆ. ಕೆಲವು ರೋಗಿಗಳು ಕಿರಿಕಿರಿ, ಗೊಂದಲ ಅಥವಾ ಅಸ್ಪಷ್ಟವಾದ ಮಾತನ್ನು ಸಹ ಅನುಭವಿಸುತ್ತಾರೆ. ಈ ಲಕ್ಷಣಗಳನ್ನು ಗುರುತಿಸಿ ತಕ್ಷಣ ಚಿಕಿತ್ಸೆ ನೀಡದಿದ್ದರೆ ರೋಗಿಯ ಮೆದುಳಿನ ಜೀವಕೋಶಗಳಿಗೆ ಶಾಶ್ವತವಾಗಿ ಹಾನಿಯಾಗಬಹುದು.

Low blood sugar level  Low blood sugar level side effect  high blood sugar levels  ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟ
ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟದಿಂದ ಆಗುವ ಅಡ್ಡಪರಿಣಾಮಗಳೇನು?- ಸಾಂದರ್ಭಿಕ ಚಿತ್ರ (Getty Images)

ಹೈಪೊಗ್ಲಿಸಿಮಿಯಾದ ಕಂಡುಬಂದರೆ ಏನು ಮಾಡಬೇಕು? ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದಂತಹ ಪರಿಸ್ಥಿತಿಯಲ್ಲಿ 15-15 ರೂಲ್ಸ್ ಅನ್ನು ಅನುಸರಿಸಬೇಕಾಗುತ್ತದೆ. ರೋಗಿಯು ಪ್ರಜ್ಞೆಯಿದ್ದರೆ ತಕ್ಷಣವೇ ಮೂರರಿಂದ ನಾಲ್ಕು ಟೀಸ್ಪೂನ್ ಗ್ಲೂಕೋಸ್, ಅರ್ಧ ಕಪ್ ಹಣ್ಣಿನ ರಸ ಹಾಗೂ 4ರಿಂದ 5 ಟಾಫಿಗಳಂತಹ 15 ಗ್ರಾಂ ವೇಗವಾಗಿ ಕಾರ್ಯನಿರ್ವಹಿಸುವ ಕಾರ್ಬೋಹೈಡ್ರೇಟ್‌ಗಳನ್ನು ನೀಡಬಹುದು.

15 ನಿಮಿಷ ಕಾಯಿರಿ ಹಾಗೂ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಮತ್ತೆ ಪರಿಶೀಲಿಸಿ. ನಿಮ್ಮ ರಕ್ತದಲ್ಲಿನ ಸಕ್ಕರೆ ಇನ್ನೂ 70ಕ್ಕಿಂತ ಕಡಿಮೆಯಿದ್ದರೆ, ಪ್ರಕ್ರಿಯೆಯನ್ನು ಪುನರಾವರ್ತಿಸಿ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳಿದ ಬಳಿಕ ಮತ್ತೊಂದು ಕುಸಿತವನ್ನು ತಡೆಗಟ್ಟಲು ರೋಗಿಗೆ ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು (ಬ್ರೆಡ್ ಇಲ್ಲವೇ ಸ್ಯಾಂಡ್‌ವಿಚ್‌ನಂತಹ) ಒಳಗೊಂಡಿರುವ ಊಟವನ್ನು ನೀಡಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಹೈಪೊಗ್ಲಿಸಿಮಿಯಾ ತಡೆಗಟ್ಟುವಿಕೆ ಮುನ್ನೆಚ್ಚರಿಕೆ: ಇನ್ಸುಲಿನ್ ಅವಲಂಬಿತ ಮಧುಮೇಹಿಗಳು ರಕ್ತದಲ್ಲಿ ಕಡಿಮೆ ಶುಗರ್​ ಲೆವಲ್​ನ ಅಪಾಯ ಹೊಂದಿರುತ್ತಾರೆ. ಪ್ರತಿಯೊಬ್ಬ ಮಧುಮೇಹ ರೋಗಿಯು ಯಾವಾಗಲೂ ಸಿಹಿತಿಂಡಿ (ಗ್ಲೂಕೋಸ್ ಅಥವಾ ಕ್ಯಾಂಡಿ) ತಮ್ಮ ಬಳಿಯಲ್ಲಿ ಇಟ್ಟಿಕೊಳ್ಳಬೇಕಾಗುತ್ತದೆ. ತುರ್ತು ಸ್ಥಿತಿಗಳನ್ನು ನಿರ್ವಹಿಸುವುದು ಕಷ್ಟಕರವಾಗಿರುವುದರಿಂದ ಈ ರೀತಿಯ ರೋಗಿಗಳು ಯಾವಾಗಲೂ ಮೇಲ್ವಿಚಾರಣೆಗಾಗಿ ಯಾರಾದರನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು.

ನೀವು ಮಧುಮೇಹ ರೋಗಿಯಾಗಿದ್ದರೆ, ಔಷಧಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದರೆ, ತಿಂಗಳಿಗೆ ಕನಿಷ್ಠ ಎರಡು ಬಾರಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು. ಔಷಧಿಗಳ ಸಮಯ ಹಾಗೂ ಡೋಸೇಜ್ ಅನ್ನು ಬದಲಾಯಿಸಬೇಡಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಮಯವಿದೆ, ಆದರೆ ರಕ್ತದಲ್ಲಿ ಕಡಿಮೆ ಶುಗರ್​ ಲೆವಲ್​ನ ವಿಷಯಕ್ಕೆ ಬಂದಾಗ ಪ್ರತಿ ಸೆಕೆಂಡ್ ಕೂಡ ಅಮೂಲ್ಯವಾಗಿದೆ. ಈ ಸ್ಥಿತಿಯು ಗಂಭೀರವಾಗಿದ್ದರೆ ತಕ್ಷಣವೇ ತಡಮಾಡದೆ ವೈದ್ಯರನ್ನು ಸಂಪರ್ಕಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಪ್ರತಿದಿನ ಮಕ್ಕಳು ಗೊರಕೆ ಹೊಡೆಯುತ್ತಿದ್ದಾರಾ? ಈ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳೇನು? ವೈದ್ಯರ ಸಲಹೆ ಹೀಗಿದೆ
  2. ಯಕೃತ್ತು ಹಾನಿಯಾಗುವುದನ್ನು ತಡೆಯುವ ಆಹಾರಗಳು ಯಾವುವು ಗೊತ್ತೇ ನಿಮಗೆ?
  3. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿಸುವ ಪುರುಷರ ಅಭ್ಯಾಸಗಳು: ಕಾಯಿಲೆಯ ಚಿಹ್ನೆಗಳನ್ನು ಹೀಗೆ ಗುರುತಿಸಿ
  4. ಪ್ರತಿನಿತ್ಯ ಹೀಲ್ಸ್ ಧರಿಸುವುದರಿಂದ ದೇಹದ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತೆ ಗೊತ್ತೇ?
  5. ಲಿವರ್ ಕ್ಯಾನ್ಸರ್ ತಡೆಯುವುದೇ ಕಾಫಿ?: ತಜ್ಞರು ಹೇಳುವುದೇನು?