ನಾರಿನ ಕೊರತೆಯಿಂದ ಶುಗರ್, ತೂಕ ಹೆಚ್ಚಳ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳು: ದೇಹಕ್ಕೆ ಪೂರಕವಾದ ಫೈಬರ್ ಪಡೆಯುವುದು ಹೇಗೆ?
ಜೀರ್ಣಕ್ರಿಯೆ, ಶಕ್ತಿ ಸೇರಿದಂತೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ನಾರಿನಂಶದಿಂದ ಹೇರಳವಾಗಿರುವ ಆಹಾರ ಸೇವಿಸಬೇಕಾಗುತ್ತದೆ. ನಾರಿನ ಅಂಶದ ಕೊರತೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.


Published : February 26, 2026 at 2:46 PM IST
ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಕ್ರಮವನ್ನು ಸುಧಾರಿಸುವುದು ಅತ್ಯಗತ್ಯ. ಪ್ರತಿದಿನ ಸೇವಿಸುವ ಆಹಾರ, ಕುಡಿಯುವ ಪಾನೀಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರೂ ಅಗತ್ಯ ಪೋಷಕಾಂಶಗಳ ದೈನಂದಿನ ಅಗತ್ಯಗಳನ್ನು ಸುಲಭವಾಗಿ ಪೂರೈಸುವಂತಹ ಆಹಾರವನ್ನು ಸೇವಿಸಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಉತ್ತಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜೀವಸತ್ವಗಳು ಹಾಗೂ ಪ್ರೋಟೀನ್ ಮಾತ್ರವಲ್ಲದೆ ನಾರಿನಂಶದಿಂದ ಹೇರಳವಾಗಿರುವ ಆಹಾರವನ್ನು ನಿಯಮಿತವಾಗಿ ಸೇವಿಸುವುದು ನಿರ್ಣಾಯಕವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ನಿಮ್ಮ ಡಯಟ್ನಲ್ಲಿ ನಾರಿನಂಶದ ಆಹಾರಗಳಿವೆಯೇ?: ವಿಶ್ವ ಆರೋಗ್ಯ ಸಂಸ್ಥೆ ತಿಳಿಸುವ ಪ್ರಕಾರ, ಆರೋಗ್ಯವಂತ ವಯಸ್ಕರು ಪ್ರತಿದಿನ ಕನಿಷ್ಠ 25 ಗ್ರಾಂ ನಾರಿನಂಶವನ್ನು ಸೇವಿಸಬೇಕು, ಆದರೆ, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚಿನ ಜನರು ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ. ಆಹಾರದಲ್ಲಿ ನಾರಿನ ಕೊರತೆಯು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೆಚ್ಚಿನ ಭಾರತೀಯರಲ್ಲಿ ನಾರಿನ ಕೊರತೆಯ ಅಪಾಯವು ಹಲವು ತೊಡಕುಗಳಿಗೆ ಕಾರಣವಾಗುತ್ತದೆ.

ತಜ್ಞರು ತಿಳಿಸುವುದೇನು?: ಗ್ಯಾಸ್ಟ್ರೋಎಂಟರಾಲಜಿ ಹಾಗೂ ಹೆಪಟಾಲಜಿಯ ಸಂಶೋಧಕರು ತಿಳಿಸುವ ಪ್ರಕಾರ, ಸುಮಾರು ಶೇಕಡಾ 70ರಷ್ಟು ಭಾರತೀಯರು ಅಥವಾ 10 ರಲ್ಲಿ 7 ಜನರು ತಮ್ಮ ದೈನಂದಿನ ನಾರಿನ ಅಂಶದ ಆಹಾರವನ್ನು ಸೇವಿಸುತ್ತಿಲ್ಲ. ಇದು ಮಲಬದ್ಧತೆ, ಉಬ್ಬುವುದು, ಫ್ಯಾಟಿ ಲಿವರ್, ಮಧುಮೇಹ ಹಾಗೂ ವಿವಿಧ ಚಯಾಪಚಯ ಕಾಯಿಲೆಗಳಿಂದ ಬಳಲಬೇಕಾಗುತ್ತದೆ. ನಾರಿನ ಅಂಶವು ನಮ್ಮ ಆರೋಗ್ಯಕ್ಕೆ ಅನಿವಾರ್ಯವಲ್ಲ. ಕರಗುವ ನಾರಿನ ಅಂಶವು ರಕ್ತದಲ್ಲಿನ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕರಗದ ನಾರು ಕರುಳಿನ ಚಲನೆ ಮತ್ತು ಕರುಳಿನ ಚಲನಶೀಲತೆಯನ್ನು ಸುಧಾರಿಸುತ್ತದೆ. ಈ ಎರಡು ರೀತಿಯ ನಾರು ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ರೋಗಗಳನ್ನು ತಡೆಗಟ್ಟಲು ತುಂಬಾ ಅವಶ್ಯವಾಗಿದೆ.
ತಪ್ಪಾದ ಆಹಾರ ಕ್ರಮಗಳು, ಜಂಕ್ ಫುಡ್ ಹಾಗೂ ಸಂಸ್ಕರಿಸಿದ ಆಹಾರಗಳ ಹೆಚ್ಚುತ್ತಿರುವ ಸೇವನೆಯು ನಾರಿನ ಕೊರತೆಗೆ ಕಾರಣವಾಗುತ್ತಿದೆ. ಸಾಕಷ್ಟು ನಾರಿನ ಅಂಗಳಿರುವ ಆಹಾರ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹಾಗೂ ಸಮತೋಲಿತ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾರಿನ ಅಂಶದ ಕೊರತೆಯು ವಿವಿಧ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸುತ್ತಾರೆ.
ಜೀರ್ಣಕ್ರಿಯೆಯ ಸಮಸ್ಯೆ ಉಲ್ಬಣ: ಆರೋಗ್ಯಕರವಾದ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ನಾರಿನ ಅಂಶವಿರುವ ಆಹಾರಗಳನ್ನು ಸೇವನೆ ಮಾಡುವುದು ಅತ್ಯಗತ್ಯ. ನಾರಿನ ಅಂಶವಿರು ಆಹಾರಗಳನ್ನು ಸೇವನೆ ಮಾಡುವುದರಿಂದ ಮಲ ಮೃದುಗೊಳಿಸುತ್ತದೆ, ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಉತ್ತೇಜಿಸುತ್ತದೆ, ಇದು ಜೀರ್ಣಕ್ರಿಯೆ, ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಸಾಕಷ್ಟು ಫೈಬರ್ವಿರುವ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ, ಮೂಲವ್ಯಾಧಿ ಹಾಗೂ ಅನೇಕ ಕರುಳಿನ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು.

ಹೃದಯ, ಮಧುಮೇಹ ಸಾಧ್ಯತೆ: ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರಕ್ತದಲ್ಲಿನ ಶುಗರ್ ಲೆವಲ್ ಅನ್ನು ನಿಯಂತ್ರಿಸಲು ನಮಗೆ ಪ್ರತಿದಿನ ಫೈಬರ್ ಅಗತ್ಯವಿದೆ. ಫೈಬರ್ ಭರಿತ ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಹೆಚ್ಚಿನ ಫೈಬರ್ ಆಹಾರವು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಫೈಬರ್ ರಕ್ತದಲ್ಲಿನ ಸಕ್ಕರೆಯನ್ನು ನಿಧಾನವಾಗಿ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ, ಇದು ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಶುಗರ್ ಲೆವಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಡಿಮೆ ಫೈಬರ್ ಸೇವಿಸುವ ಜನರು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೊಂದಿರುತ್ತಾರೆ.
ದೇಹಕ್ಕೆ ಅಗತ್ಯವಿರುವ ಫೈಬರ್ ಪಡೆಯುವುದು ಹೇಗೆ?: ನಮ್ಮ ದೈನಂದಿನ ಆಹಾರ ಕ್ರಮವನ್ನು ಸುಧಾರಿಸುವ ಮೂಲಕ ನಾವು ನಮ್ಮ ದೈನಂದಿನ ಫೈಬರ್ ಅಗತ್ಯಗಳನ್ನು ಸುಲಭವಾಗಿ ಪೂರೈಸಬಹುದು. ಓಟ್ಸ್, ಬ್ರೌನ್ ರೈಸ್, ಮಸೂರಗಳಂತಹ ಧಾನ್ಯಗಳು ಹಾಗೂ ಸೇಬು ಮತ್ತು ಬಾಳೆಹಣ್ಣುಗಳಂತಹ ಹಣ್ಣುಗಳಲ್ಲಿ ಫೈಬರ್ ಸಮೃದ್ಧವಾಗಿವೆ. ಬ್ರೊಕೊಲಿ, ಕ್ಯಾರೆಟ್, ಹಸಿರು ತರಕಾರಿಗಳಲ್ಲಿ ಸಹ ಫೈಬರ್‌ನ ಉತ್ತಮ ಮೂಲಗಳಾಗಿವೆ. ಸಮತೋಲಿತ ಆಹಾರದಲ್ಲಿ ಫೈಬರ್ ಭರಿತ ಆಹಾರಗಳನ್ನು ಸೇರಿಸುವುದರಿಂದ ದೇಹವನ್ನು ಆರೋಗ್ಯಕರವಾಗಿ ಮತ್ತು ದೀರ್ಘಕಾಲದವರೆಗೆ ರೋಗಗಳಿಂದ ಮುಕ್ತವಾಗಿಡಲು ತುಂಬಾ ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ನಿಮ್ಮ ತ್ವಚೆ ಚಿಕ್ಕ ವಯಸ್ಸಿನಲ್ಲಿಯೇ ಸುಕ್ಕುಗಟ್ಟುತ್ತಿದೆಯೇ? ಇಲ್ಲಿವೆ ನೈಸರ್ಗಿಕ ಪರಿಹಾರಗಳು
- ತಾಪಮಾನ ಏರಿಕೆಯಿಂದ ಭಾರತ, ಆಫ್ರಿಕಾದಲ್ಲಿ ಗಂಡು ಮಕ್ಕಳ ಜನನ ಪ್ರಮಾಣ ಇಳಿಕೆ: ನೂತನ ಅಧ್ಯಯನದಿಂದ ಆಘಾತಕಾರಿ ಮಾಹಿತಿ
- ಪ್ರತಿದಿನ ಮಕ್ಕಳು ಗೊರಕೆ ಹೊಡೆಯುತ್ತಿದ್ದಾರಾ? ಈ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳೇನು? ವೈದ್ಯರ ಸಲಹೆ ಹೀಗಿದೆ
- ಯಕೃತ್ತು ಹಾನಿಯಾಗುವುದನ್ನು ತಡೆಯುವ ಆಹಾರಗಳು ಯಾವುವು ಗೊತ್ತೇ ನಿಮಗೆ?
- ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿಸುವ ಪುರುಷರ ಅಭ್ಯಾಸಗಳು: ಕಾಯಿಲೆಯ ಚಿಹ್ನೆಗಳನ್ನು ಹೀಗೆ ಗುರುತಿಸಿ

