ಮಧುಮೇಹ ಹಾಗೂ ದೇಹದ ತೂಕ ನಿಯಂತ್ರಿಸಲು ಐದು ನಿಮಿಷಗಳ ಚಿಕ್ಕ ನಡಿಗೆ ಅತ್ಯುತ್ತಮವೇ? ಏನಿದು ಮೈಕ್ರೋ ವಾಕಿಂಗ್?
ಮಧುಮೇಹ, ತೂಕದ ನಿಯಂತ್ರಿಸಲು ದಿನವಿಡೀ ಸಕ್ರಿಯವಾಗಿರಲು ಸತತ ಒಂದು ಗಂಟೆ ನಡೆಯುವುದಕ್ಕಿಂತಲೂ ದಿನವಿಡೀ 5 ರಿಂದ 15 ನಿಮಿಷಗಳ ಸಣ್ಣ ವಾಕಿಂಗ್ ಬ್ಲಡ್ ಶುಗರ್ ಹೆಚ್ಚಾಗುವುದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.


Published : October 10, 2026 at 12:17 PM IST
ಯಾವುದೇ ವಿಶೇಷ ಉಪಕರಣಗಳು ಹಾಗೂ ದುಬಾರಿ ಜಿಮ್ ಸದಸ್ಯತ್ವವಿಲ್ಲದೆ ದೇಹದ ತೂಕ ನಿಯಂತ್ರಿಸಲು, ಆರೋಗ್ಯಕರವಾಗಿರಲು ಸುಲಭ ಹಾಗೂ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ವಾಕಿಂಗ್. ಇತ್ತೀಚಿನ ದಿನಗಳಲ್ಲಿ 'ಮೈಕ್ರೋ ವಾಕಿಂಗ್' ಎಂಬ ನೂತನ ಹೊಸ ಟ್ರೆಂಡ್ ಫಿಟ್‌ನೆಸ್ ಜಗತ್ತಿನಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿದೆ. ಈ ಪರಿಕಲ್ಪನೆಯು ಒಂದು ಸಮಯದಲ್ಲಿ ಒಂದು ಗಂಟೆ ಇಲ್ಲವೇ ಅದಕ್ಕಿಂತ ಹೆಚ್ಚು ಕಾಲ ವ್ಯಾಯಾಮ ಮಾಡುವ ಬದಲು ದಿನವಿಡೀ ಆಗಾಗ್ಗೆ ಚಿಕ್ಕದಾಗಿ ವಾಕಿಂಗ್ ಮಾಡುವುದು ತುಂಬಾ ಉತ್ತಮವಾಗಿದೆ. ಉದಾಹರಣೆಗೆ ದಿನವಿಡೀ 5 ನಿಮಿಷಗಳ 10 ಚಿಕ್ಕ ನಡಿಗೆಗಳನ್ನು ತೆಗೆದುಕೊಳ್ಳುವುದು, ಸುಮಾರು 50 ನಿಮಿಷಗಳವರೆಗೆ ಸೇರಿಸುತ್ತದೆ.
ಈ ಮೈಕ್ರೋ ವಾಕಿಂಗ್ ವಿಧಾನವು ಒಂದು ಸಮಯದಲ್ಲಿ ಒಂದು ಗಂಟೆ ನಡೆಯುವುದಕ್ಕಿಂತ ಹಾಗೂ ವ್ಯಾಯಾಮ ಮಾಡುವುದಕ್ಕಿಂತ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಿದೆಯೇ? ಈ ವಿಧಾನವು ವಿಶೇಷವಾಗಿ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳಬೇಕಾದವರಿಗೆ ಇಲ್ಲವೇ ತುಂಬಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿರುವ ಜನರಿಗೆ ಹೆಚ್ಚು ವರದಾನವಾಗಿದೆ. ಊಟದ ಬಳಿಕ ಒಂದು ಚಿಕ್ಕ ವಾಕಿಂಗ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹೆಚ್ಚು ಸಹಾಯ ಮಾಡುತ್ತದೆ. ನಿರಂತರವಾಗಿ ಒಂದು ಗಂಟೆಯ ವ್ಯಾಯಾಮವು ನಿಷ್ಪ್ರಯೋಜಕವಾಗಿದೆ ಎನ್ನುವುದು ಇದರ ಅರ್ಥವಲ್ಲ. ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವ ಅಭ್ಯಾಸವನ್ನು ಮುರಿಯಲು, ದಿನವಿಡೀ ದೈಹಿಕ ಚಟುವಟಿಕೆ ಹೆಚ್ಚಿಸಲು ಮೈಕ್ರೋ-ವಾಕಿಂಗ್ ಅತ್ಯುತ್ತಮ ಮಾರ್ಗವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಊಟದ ಬಳಿಕ ವಾಕಿಂಗ್ & ಸಕ್ಕರೆ ನಿಯಂತ್ರಣ: ಊಟ ಮಾಡಿದ ಬಳಿಕ 5ರಿಂದ 15 ನಿಮಿಷಗಳ ಚಿಕ್ಕ ವಾಕಿಂಗ್ ಸ್ನಾಯುಗಳಲ್ಲಿ ಗ್ಲೂಕೋಸ್ ಪರಿಚಲನೆಗೆ ಹೆಚ್ಚು ಅನುಕೂಲವಾಗಿದೆ. ಊಟದ ಬಳಿಕ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ ಏರಿಕೆಯಾಗುವುದನ್ನು ತಡೆಯುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸವು ಯಾವಾಗಲೂ ಒಂದೇ ಕುರ್ಚಿಯಲ್ಲಿ ಕುಳಿತುಕೊಳ್ಳುವುದನ್ನು ಒಳಗೊಂಡಿದ್ದರೆ, ಇಂತಹ ಚಿಕ್ಕ ವಾಕಿಂಗ್ ಸಾಲಾಗಿ ಕುಳಿತುಕೊಳ್ಳುವ ಅಪಾಯ ಕಡಿಮೆ ಮಾಡುತ್ತದೆ.

ಬೆಳಗಿನ ಉಪಾಹಾರದ ಬಳಿಕ ಐದು ನಿಮಿಷಗಳವರೆಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ಬಳಿಕ ತಲಾ ಐದು ನಿಮಿಷಗಳು, ಕಚೇರಿ ಕರೆಗಳಲ್ಲಿ ಮಾತನಾಡುವಾಗ ವಾಕಿಂಗ್, ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ ಹಾಗೂ ಹತ್ತಿರದ ಅಂಗಡಿಗೆ ವಾಕಿಂಗ್ ಮಾಡುಂತಹ ಗುರಿಯನ್ನು ಸುಲಭವಾಗಿ ಸಾಧಿಸಬಹುದು ಎಂದು ತಜ್ಞರು ವಿವರಿಸುತ್ತಾರೆ.

ಮೈಕ್ರೋ ವಾಕಿಂಗ್ & ಒಂದು ತಾಸು ವ್ಯಾಯಾಮ: ಮೈಕ್ರೋ ವಾಕಿಂಗ್ ಅನ್ನು ನಿರಂತರ ಒಂದು ಗಂಟೆ ವ್ಯಾಯಾಮ ಮಾಡುವುದಕ್ಕೆ ಹೋಲಿಸಿದರೆ, ಎರಡರ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಸರಿಯಾದ ತೀವ್ರತೆಯಲ್ಲಿ ನಿರಂತರ ಒಂದು ಗಂಟೆಯ ತಾಲೀಮು ನಿಮ್ಮ ಹೃದಯರಕ್ತನಾಳದ ಫಿಟ್‌ನೆಸ್ ಹಾಗೂ ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು ತುಂಬಾ ಒಳ್ಳೆಯದು. ಆದರೆ, ಮೈಕ್ರೋ ವಾಕಿಂಗ್ ದಿನವಿಡೀ ನಿಮ್ಮನ್ನು ಹೆಚ್ಚು ಸಕ್ರಿಯವಾಗಿರಿಸಲು, ಕುಳಿತುಕೊಳ್ಳುವ ಸಮಯ ಕಡಿಮೆ ಮಾಡಲು ಪರ್ಯಾಯ ಮಾರ್ಗವಾಗಿದೆ.

ದೇಹದ ತೂಕ ನಿಯಂತ್ರಣಕ್ಕೆ ಉತ್ತಮ ಮಾರ್ಗ: ನಿಮ್ಮ ಪ್ರಮುಖ ಗುರಿ ದೇಹದ ತೂಕ ತಗ್ಗಿಸುವುದು ಆಗಿದ್ದರೆ, ಎಷ್ಟು ಬಾರಿ ಚಿಕ್ಕ ವಾಕಿಂಗ್ ಮಾಡುತ್ತೀರಿ. ನೀವು ಹೇಗೆ ನಡೆಯುತ್ತೀರಿ ಎಂಬುದು ಪ್ರಮುಖವಾಗಿದೆ. ವೇಗದ ನಡಿಗೆಯು ತುಂಬಾ ನಿಧಾನ ಇಲ್ಲವೇ ಆರಾಮವಾಗಿ ನಡೆಯುವುದಕ್ಕಿಂತ ಹೆಚ್ಚಿನ ಕ್ಯಾಲೋರಿಗಳನ್ನು ದೇಹದಲ್ಲಿ ಕರಗಿಸಲು ತುಂಬಾ ಸಹಾಯವಾಗುತ್ತದೆ. ವಾಕಿಂಗ್ ವೇಗ ಸರಿಯಾಗಿದೆಯೇ ಹಾಗೂ ಇಲ್ಲವೇ ಎಂಬುದನ್ನು ಪರಿಶೀಲಿಸಲು 'ಟಾಕ್ ಟೆಸ್ಟ್' ಅನ್ನು ಬಳಸಿ. ವೇಗವಾಗಿ ನಡೆಯುವಾಗ ನೀವು ಸಂಪೂರ್ಣ ವಾಕ್ಯಗಳಲ್ಲಿ ಸುಲಭವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ವೇಗದ ವಾಕಿಂಗ್ ಮಾಡುವ ಸಮಯದಲ್ಲಿ ಹಾಡುವುದು ಅಸಾಧ್ಯವೆಂದು ಭಾವಿಸಬೇಕು. ಇದರಿಂದ ವಾಕಿಂಗ್ ನಿಧಾನವಾಗಿ ಪ್ರಾರಂಭಿಸಿ ಮತ್ತು ಕ್ರಮೇಣವಾಗಿ ವಾಕಿಂಗ್ ವೇಗ ಹೆಚ್ಚಿಸ ಬೇಕಾಗುತ್ತದೆ.

ವಾಕಿಂಗ್ ಜೊತೆಗೆ ಪೌಷ್ಟಿಕ ಆಹಾರ: ದೈನಂದಿನ ವಾಕಿಂಗ್ ಜೊತೆಗೆ ಸರಿಯಾದ ಪೌಷ್ಟಿಕ ಆಹಾರ, ಸಾಕಷ್ಟು ಮತ್ತು ವಿಶ್ರಾಂತಿ ನಿದ್ರೆ, ಶಕ್ತಿ ತರಬೇತಿ ಹಾಗೂ ಸ್ಥಿರತೆಯ ದೇಹ ತೂಕವನ್ನು ಕಳೆದುಕೊಳ್ಳಲು ಒಟ್ಟಿಗೆ ಅಗತ್ಯವಿದೆ. ನಿಮ್ಮ ಫಿಟ್‌ನೆಸ್ ಸುಧಾರಿಸಿದಂತೆ ನಿಮ್ಮ ನಡಿಗೆಯ ವೇಗವನ್ನು ಹೆಚ್ಚಿಸಬೇಕಾಗುತ್ತದೆ. ದೀರ್ಘವಾದ ಮಾರ್ಗಗಳನ್ನು ಆಯ್ಕೆಮಾಡಿ, ಮೆಟ್ಟಿಲುಗಳನ್ನು ಹತ್ತುವಿಕೆ ಹಾಗೂ ವೇಗದ ನಡಿಗೆ, ನಿಧಾನ ನಡಿಗೆ ಮಿಶ್ರಣವನ್ನು ಮಾಡಬಹದು. ಹೆಚ್ಚುವರಿ ಒತ್ತಡವಿಲ್ಲದೆ ದೇಹಕ್ಕೆ ಸವಾಲನ್ನು ನೀಡುತ್ತದೆ.

ಈ ಅಭ್ಯಾಸ ದೀರ್ಘಕಾಲವರೆಗೆ ಪಾಲಿಸಿ: ಐದು ನಿಮಿಷದ ನಡಿಗೆ 10 ಬಾರಿ ಎಲ್ಲಾ ರೀತಿಯ ವ್ಯಾಯಾಮವನ್ನು ಬದಲಿಸುವುದಿಲ್ಲ. ಇದು ನಿಮ್ಮ ಒಟ್ಟು ದೈಹಿಕ ಚಟುವಟಿಕೆ ಸೇರಿಸುತ್ತದೆ. ಪ್ರಮುಖವಾಗಿ ವ್ಯಾಯಾಮ ಕೆಲಸಕ್ಕಿಂತ ಹೆಚ್ಚಾಗಿ ದೈನಂದಿನ ಅಭ್ಯಾಸವಾಗಿ ಪರಿವರ್ತಿಸುತ್ತದೆ. ದೇಹದ ತೂಕ ಕಳೆದುಕೊಳ್ಳುತ್ತಿರಲಿ ಹಾಗೂ ಆರೋಗ್ಯಕರವಾಗಿರಲಿ, ದಿನವಿಡೀ ನಿರಂತರವಾಗಿ ಸಕ್ರಿಯವಾಗಿರುವುದು ಮುಖ್ಯವಾಗುತ್ತದೆ. ಒಂದು ಗಂಟೆಯ ನಿರಂತರವಾಗಿರುವ ವ್ಯಾಯಾಮವಾಗಲಿ ಅಥವಾ ಮೈಕ್ರೊ ವಾಕಿಂಗ್ ಮಾಡುವುದು ಆಗಿರಲಿ, ಎರಡರ ಸಂಯೋಜನೆಯು ದಿನಚರಿಯಲ್ಲಿ ದೀರ್ಘಕಾಲವರೆಗೆ ಹಾಗೂ ಸ್ಥಿರವಾಗಿ ಪಾಲಿಸುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು (ಸಂಶೋಧನಾ ವರದಿಗಳು):
- https://hsph.harvard.edu/news/micro-walks-can-have-big-health-benefits-expert-says/
- https://pmc.ncbi.nlm.nih.gov/articles/PMC12952039/
ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಕೆಲವು ದೈನಂದಿನ ಅಭ್ಯಾಸಗಳಿಂದ ಕಣ್ಣಿನ ದೃಷ್ಟಿಗೆ ನಿಧಾನವಾಗಿ ಹಾನಿ: ತಜ್ಞರು ತಿಳಿಸುವುದೇನು?
- ನಟಿ ಸಮಂತಾ 'ಪವರ್ ಮಾರ್ನಿಂಗ್ ದಿನಚರಿ': ಸತತ 21 ದಿನಗಳವರೆಗೆ ಪಾಲಿಸಿದರೆ ಅತ್ಯುತ್ತಮ ಫಲಿತಾಂಶ
- ಖ್ಯಾತ ನಟ ನಾನಾ ಪಾಟೇಕರ್ ಹೃದಯ ಸ್ತಂಭನದಿಂದ ಸಾವು: ಕಾರ್ಡಿಯಾಕ್ ಅರೆಸ್ಟ್ & ಹಾರ್ಟ್ ಅಟ್ಯಾಕ್ ಮಧ್ಯೆಯಿರುವ ವ್ಯತ್ಯಾಸವೇನು?
- ಎಂಡೊಮೆಟ್ರಿಯೊಸಿಸ್ನಿಂದ ಸದ್ದಿಲ್ಲದೇ ಹೆಚ್ಚಿಸುತ್ತಿರುವ ಟೈಪ್ - 2 ಡಯಾಬಿಟಿಸ್ ಅಪಾಯ: ಏಳು ಮಹಿಳೆಯರಲ್ಲಿ ಒಬ್ಬರಿಗೆ ತೊಂದರೆ
- ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣಗಳೇನು? ಚಿಹ್ನೆಗಳನ್ನು ಪತ್ತೆ ಮಾಡುವುದು ಹೇಗೆ?

