ETV Bharat / health

ಹೊರಗೆ ಕಾಣುವ ದೊಡ್ಡ ಹೊಟ್ಟೆಗಿಂತ ಒಳಾಂಗಗಳಲ್ಲಿರುವ ಶೇಖರವಾಗುವ ಕೊಬ್ಬು ತುಂಬಾ ಅಪಾಯಕಾರಿ: ವೈದ್ಯರ ಎಚ್ಚರಿಕೆ

ಹೊಟ್ಟೆಯ ಸುತ್ತಲಿನ ಕೊಬ್ಬು ನಿಮ್ಮ ಶತ್ರುವಾಗಿದೆ ನಿಜ. ಇದರೊಂದಿಗೆ ಹೊಟ್ಟೆಯ ಒಳಭಾಗದಲ್ಲಿ ಸಂಗ್ರಹವಾಗುವ ಕೊಬ್ಬು ಹೆಚ್ಚು ಅಪಾಯಕಾರಿಯಾಗಿದೆ. ಒಳಾಂಗಗಳಲ್ಲಿರುವ ಕೊಬ್ಬು ಕಡಿಮೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

BELLY FAT  Visceral Fat  Subcutaneous Fat  ಒಳಾಂಗಗಳ ಕೊಬ್ಬು ಕಡಿಮೆ ಮಾಡುವುದು ಹೇಗೆ
ಒಳಾಂಗಗಳಲ್ಲಿನ ಕೊಬ್ಬು ಕಡಿಮೆ ಮಾಡುವುದು ಹೇಗೆ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : October 5, 2026 at 2:03 PM IST

3 Min Read
Choose ETV Bharat

ಇತ್ತೀಚಿನ ದಿನಗಳಲ್ಲಿ ಉಬ್ಬಿದ ಹೊಟ್ಟೆಯು ಕೇವಲ ನೋಟವನ್ನು ಕೆಡಿಸುವುದು ಮಾತ್ರವಲ್ಲದೆ, ವಿವಿಧ ಕಾಯಿಲೆಗಳಿಗೆ ಮೂಲ ಕಾರಣವಾಗಿ ಬದಲಾಗುತ್ತದೆ. ಹೊಟ್ಟೆಯ ಆಳದಲ್ಲಿ ಶೇಖರವಾಗುವ ಕೊಬ್ಬಿನ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಹೊರಗೆ ಕಾಣುವ ಕೊಬ್ಬಿಗಿಂತ ಇದು ಹೆಚ್ಚು ಅಪಾಯಕಾರಿ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಹೊಟ್ಟೆಯ ಆಂತರಿಕ ಕೊಬ್ಬು ಪ್ರಮುಖ ಅಂಗಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ದೇಹವನ್ನು ಕ್ರಮೇಣ ಅನಾರೋಗ್ಯದತ್ತ ಸಾಗಲು ಕೂಡ ದಾರಿ ಮಾಡಿಕೊಡುತ್ತದೆ. ಈ ಆಂತರಿಕ ಕೊಬ್ಬನ್ನು 'ವಿಸರಲ್ ಫ್ಯಾಟ್' ಎಂದು ಹೇಳಲಾಗುತ್ತದೆ. ಇದು ಚರ್ಮದ ಕೆಳಗೆ ಕಾಣುವ ಕೊಬ್ಬಿಗಿಂತ ಅಧಿಕ ಅಪಾಯ ಉಂಟುಮಾಡುತ್ತದೆ.

BELLY FAT  Visceral Fat  Subcutaneous Fat  ಒಳಾಂಗಗಳ ಕೊಬ್ಬು ಕಡಿಮೆ ಮಾಡುವುದು ಹೇಗೆ
ಒಳಾಂಗಗಳಲ್ಲಿನ ಕೊಬ್ಬು ಕಡಿಮೆ ಮಾಡುವುದು ಹೇಗೆ?- ಸಾಂದರ್ಭಿಕ ಚಿತ್ರ (Getty Images)

ಏನಿದು ಒಳಾಂಗಗಳ ಕೊಬ್ಬು? ಒಳಾಂಗಗಳ ಕೊಬ್ಬು ಎಂದರೆ ನಿಮ್ಮ ಹೊಟ್ಟೆಯ ಆಳದಲ್ಲಿ ಪ್ರಮುಖ ಅಂಗಗಳಾದ ಯಕೃತ್ತು, ಕರುಳು ಹಾಗೂ ಜಠರಗಳ ಸುತ್ತ ಸಂಗ್ರಹವಾಗುವ ಕೊಬ್ಬು ಇದಾಗಿದೆ. ಕಣ್ಣಿಗೆ ಕಾಣುವ ಸಾಮಾನ್ಯ ಹೊಟ್ಟೆಯ ಕೊಬ್ಬಿಗಿಂತ ಭಿನ್ನ ಹಾಗೂ ಹೆಚ್ಚು ಅಪಾಯಕಾರಿಯಾಗಿದೆ. ಇದು ದೇಹದ ಒಟ್ಟು ಕೊಬ್ಬಿನ ಸುಮಾರು ಶೇ.10ರಿಂದ 15ಕ್ಕಿಂತ ಹೆಚ್ಚಿರುತ್ತದೆ.

BELLY FAT  Visceral Fat  Subcutaneous Fat  ಒಳಾಂಗಗಳ ಕೊಬ್ಬು ಕಡಿಮೆ ಮಾಡುವುದು ಹೇಗೆ
ಒಳಾಂಗಗಳಲ್ಲಿನ ಕೊಬ್ಬು ಕಡಿಮೆ ಮಾಡುವುದು ಹೇಗೆ?- ಸಾಂದರ್ಭಿಕ ಚಿತ್ರ (Getty Images)

ಆಂತರಿಕ ಕೊಬ್ಬು ಎಷ್ಟು ಅಪಾಯಕಾರಿ? ವಿಸರಲ್ ಫ್ಯಾಟ್ ಯಕೃತ್ತು, ಮೇದೋಜೀರಕ ಗ್ರಂಥಿ ಹಾಗೂ ಕರುಳುಗಳ ಸುತ್ತಲೂ ಶೇಖರವಾಗುತ್ತದೆ. ಈ ಕೊಬ್ಬು ಹಾರ್ಮೋನ್ಸ್, ಉರಿಯೂತ ಉಂಟುಮಾಡುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಹೊಂದಿರುವ ಜನರು ಅಧಿಕ ರಕ್ತದೊತ್ತಡ, ಮಧುಮೇಹ, ಫ್ಯಾಟಿ ಲಿವರ್ ಹಾಗೂ ಹೃದಯರೋಗ ಮತ್ತು ಪಾರ್ಶ್ವವಾಯುವಿನ ಹೆಚ್ಚಿನ ಅಪಾಯ ಹೊಂದಿರುತ್ತಾರೆ.

BELLY FAT  Visceral Fat  Subcutaneous Fat  ಒಳಾಂಗಗಳ ಕೊಬ್ಬು ಕಡಿಮೆ ಮಾಡುವುದು ಹೇಗೆ
ಒಳಾಂಗಗಳಲ್ಲಿನ ಕೊಬ್ಬು ಕಡಿಮೆ ಮಾಡುವುದು ಹೇಗೆ?- ಸಾಂದರ್ಭಿಕ ಚಿತ್ರ (Getty Images)

ಕಡಿಮೆ ದೇಹದ ತೂಕವಿದ್ದರೂ ಅಪಾಯವಿದೆಯೇ? ಕೆಲವೊಮ್ಮೆ ರೋಗಿಯ ದೇಹದ ತೂಕ ಹೆಚ್ಚಿಲ್ಲದಿದ್ದರೂ ಕೂಡ ಹೊಟ್ಟೆಯ ಒಳಭಾಗದಲ್ಲಿ ಕೊಬ್ಬು ಶೇಖರಣೆಯಾಗುವುದರಿಂದ ಅವರು ಹೆಚ್ಚಿನ ಚಯಾಪಚಯ ಸಂಬಂಧಿತ ಅಪಾಯವನ್ನು ಎದುರಿಸಬಹುದು. ಇದಕ್ಕಾಗಿಯೇ ಕೇವಲ ಒಟ್ಟಾರೆ ದೇಹದ ತೂಕವಲ್ಲದೆ, ಸೊಂಟದ ಅಳತೆಯು ಆರೋಗ್ಯದ ಪ್ರಮುಖ ಸೂಚಕವೆಂದು ಪರಿಗಣಿಸಲಾಗುತ್ತದೆ.

ಜೀವನಶೈಲಿಯ ಬದಲಾವಣೆಯಿಂದ ಫ್ಯಾಟ್​ ಕಡಿಮೆಯಾಗುತ್ತದೆಯೇ?: ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಆಹಾರಕ್ರಮ, ವ್ಯಾಯಾಮ ಅತ್ಯಗತ್ಯವಾಗಿದ್ದರೂ ಇವು ಎಲ್ಲರಿಗೂ ಯಾವಾಗಲೂ ಸಾಕಾಗುವುದಿಲ್ಲ. ಕೆಲವು ವ್ಯಕ್ತಿಗಳಲ್ಲಿ ಹಾರ್ಮೋನ್ ಅಸಮತೋಲನ, ವಯಸ್ಸು, ಅನುವಂಶೀಯತೆ ಹಾಗೂ ದೀರ್ಘಕಾಲದ ಬೊಜ್ಜಿನಂತಹ ಅಂಶಗಳಿಂದ ಹೊಟ್ಟೆಯ ಕೊಬ್ಬು ಕರಗಿಸಲು ಕಷ್ಟಕರವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕೇವಲ ವ್ಯಾಯಾಮ ಹಾಗೂ ಆಹಾರಕ್ರಮ ಅವಲಂಬಿಸುವುದರಿಂದ ಅಪೇಕ್ಷಿತ ಫಲಿತಾಂಶಗಳು ಲಭಿಸಬಹುದು.

ಬೆಲ್ಲಿ ಫ್ಯಾಟ್ ಕಡಿಮೆ ಮಾಡಲು ವೈದ್ಯರ ಸಲಹೆಗಳೇನು?:

BELLY FAT  Visceral Fat  Subcutaneous Fat  ಒಳಾಂಗಗಳ ಕೊಬ್ಬು ಕಡಿಮೆ ಮಾಡುವುದು ಹೇಗೆ
ಒಳಾಂಗಗಳಲ್ಲಿನ ಕೊಬ್ಬು ಕಡಿಮೆ ಮಾಡುವುದು ಹೇಗೆ?- ಸಾಂದರ್ಭಿಕ ಚಿತ್ರ (Getty Images)
  1. ವೈದ್ಯಕೀಯ ಚಿಕಿತ್ಸೆ: ಇನ್ಸುಲಿನ್ ಪ್ರತಿರೋಧ, ಕೊಬ್ಬಿನ ಯಕೃತ್ತನ್ನು ಗುರಿಯಾಗಿಸಿಕೊಂಡು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ರಚಿಸಲಾದ ಆಹಾರ ಯೋಜನೆ ಪಾಲಿಸಬೇಕಾಗುತ್ತದೆ.
  2. ವೈದ್ಯರು ಸೂಚಿಸುವ ಔಷಧ: ಕೆಲವು ರೋಗಿಗಳಿಗೆ ತಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಹಾಗೂ ಹಸಿವನ್ನು ನಿಯಂತ್ರಿಸಲು ವೈದ್ಯರು ಸೂಚಿಸುವಂತಹ ಔಷಧಗಳ ಅಗತ್ಯವಿರುತ್ತದೆ.
  3. ಎಂಡೋಸ್ಕೋಪಿಕ್ ದೇಹದ ತೂಕ ನಷ್ಟ: ಪ್ರಮುಖ ಶಸ್ತ್ರಚಿಕಿತ್ಸೆಯಿಲ್ಲದೆ ಹೊಟ್ಟೆಯ ಸಾಮರ್ಥ್ಯ ಕಡಿಮೆ ಮಾಡುವ ಆಧುನಿಕ ಆಯ್ಕೆ ಅಂದರೆ, ಎಂಡೋಸ್ಕೋಪಿಕ್ ದೇಹದ ತೂಕ ನಷ್ಟ ವಿಧಾನವು ತುಂಬಾ ಉತ್ತಮವಾಗಿದೆ.
  4. ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ: ತೀವ್ರ ಬೊಜ್ಜು ಹಾಗೂ ಸಂಬಂಧಿತ ಆರೋಗ್ಯ ಪರಿಸ್ಥಿತಿಗಳಿಗೆ ಅತ್ಯಂತ ಪರಿಣಾಮಕಾರಿ, ದೀರ್ಘಕಾಲೀನ ಪರಿಹಾರ.

ವೈದ್ಯರು ತಿಳಿಸುವುದೇನು?: ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಕೇವಲ ತೂಕ ನಷ್ಟ ವಿಧಾನವಲ್ಲ, ಇದು ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿತ ಅಪಾಯಗಳನ್ನು ನಿರ್ವಹಿಸಲು ವೈಜ್ಞಾನಿಕವಾಗಿ ಸಾಬೀತಾಗಿರುವ ಚಿಕಿತ್ಸೆಯಾಗಿದೆ. ಹೆಚ್ಚುವರಿ ಹೊಟ್ಟೆಯ ಕೊಬ್ಬನ್ನು ನಿರ್ಲಕ್ಷಿಸುವುದು ದೇಹದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಬೆಳೆಸಲು ಆಹ್ವಾನ ನೀಡುತ್ತದೆ. ಸಕಾಲಿಕ ವೈದ್ಯಕೀಯ ಸಲಹೆ, ಸೂಕ್ತವಾಗಿರುವಂತಹ ವೈಜ್ಞಾನಿಕ ಚಿಕಿತ್ಸೆ ದೇಹದ ತೂಕ, ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಪುರುಷರಿಗಿಂತ ಮಹಿಳೆಯರಲ್ಲಿ ಮೆದುಳಿನ ಅನ್ಯೂರಿಜಮ್ ಉಂಟಾಗುವ ಸಾಧ್ಯತೆ ಹೆಚ್ಚು: ಏನಿದು ಆರೋಗ್ಯದ ಸಮಸ್ಯೆ?
  2. ಡಯಟ್ ಮಾಡುವಾಗ ಬೇಡದ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆಯಾಗುವುದೇಕೆ? ನಿಯಂತ್ರಿಸುವುದು ಹೇಗೆ ಗೊತ್ತೇ?
  3. ನಿಮ್ಮ ಮೂತ್ರದ ಬಣ್ಣದಲ್ಲಿ ಈ ಬದಲಾವಣೆಯಾದರೆ ಎಚ್ಚರಿಕೆ ವಹಿಸಿ: ದುರ್ವಾಸನೆ, ನೊರೆ ಮೂತ್ರವು ಕಿಡ್ನಿ ಸಮಸ್ಯೆಯೇ?
  4. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತದೆಯೇ? ತಜ್ಞರು ತಿಳಿಸುವುದೇನು?