ನಿಮ್ಮ ಹೃದಯ ಬಲಿಷ್ಠವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ ಗೊತ್ತೇ?; ಹೀಗಿವೆ ವೈದ್ಯರ ಸರಳ ಟಿಪ್ಸ್
ಹೃದಯದ ಶಕ್ತಿಯನ್ನು ನಿರ್ಧರಿಸಲು ಹಿರಿಯ ಹೃದ್ರೋಗ ತಜ್ಞ ಡಾ.ಅಲೋಕ್ ಚೋಪ್ರಾ ಅವರು ಸರಳ ಮಾರ್ಗಗಳನ್ನು ವಿವರಿಸಿದ್ದಾರೆ. ನಿಮ್ಮ ಹೃದಯ ಬಲಿಷ್ಠವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ.


Published : January 8, 2026 at 5:31 PM IST
ಮಾನವ ದೇಹದಲ್ಲಿ ಹೃದಯವು ಅತ್ಯಂತ ಪ್ರಮುಖವಾದ ಅಂಗವಾಗಿದೆ. ಇದರ ಪ್ರಾಥಮಿಕ ಕಾರ್ಯ ಎಂದರೆ ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುವುದು. ಜೀವಕೋಶಗಳಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ತಲುಪಿಸುವಲ್ಲಿ, ಇಂಗಾಲದ ಡೈಆಕ್ಸೈಡ್‌ನಂತಹ ತ್ಯಾಜ್ಯ ಉತ್ಪನ್ನಗಳನ್ನು ಶ್ವಾಸಕೋಶಕ್ಕೆ ಹಿಂತಿರುಗಿಸುವಲ್ಲಿ ಹೃದಯವು ಪ್ರಮುಖ ಪಾತ್ರ ವಹಿಸುತ್ತದೆ. ನಿರಂತರವಾಗಿ ಕೆಲಸ ಮಾಡುವ ಅಂಗವಾಗಿದೆ. ಇತ್ತೀಚೆಗೆ ಹೃದ್ರೋಗದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದೆ. ಯುವಜನರಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ನೃತ್ಯ ಮಾಡುವಾಗ, ಹಾಡುವಾಗ ಇಲ್ಲವೇ ನಡೆಯುವಾಗ ಹೀಗೆ ವಿವಿಧ ಕಾರ್ಯಗಳಲ್ಲಿ ತೊಡಗಿರುವ ಸಂದರ್ಭದಲ್ಲಿ ಅನೇಕ ಜನರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅವಶ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹೃದ್ರೋಗ ತಜ್ಞರು ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆಶ್ಲೋಕ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಅಲೋಕ್ ಚೋಪ್ರಾ ಅವರು, ಹೃದಯದ ಆರೋಗ್ಯ ಕಾಪಾಡುವ ಕುರಿತು ಇನಸ್ಟಾಗ್ರಾಮ್ ಖಾತೆಯಲ್ಲಿ ವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮ ಹೃದಯದ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹೃದಯದ ಶಕ್ತಿಯನ್ನು ನಿರ್ಧರಿಸಲು ವೈದ್ಯರು ಸರಳ ಮಾರ್ಗವನ್ನು ವಿವರಿಸಿದ್ದಾರೆ. ಆ ವಿಧಾನ ಏನೆಂದು ಕಂಡು ಹಿಡಿಯೋಣ.
ಹಲವು ಪರೀಕ್ಷೆಗಳ ಮಾಡಿಸಬೇಕಿಲ್ಲ: ಅನೇಕ ಜನರು ತಮ್ಮ ಹೃದಯದ ಆರೋಗ್ಯವನ್ನು ನಿರ್ಣಯಿಸಲು ವಿವಿಧ ಪರೀಕ್ಷೆಗಳಿಗೆ ಒಳಗಾಗುತ್ತಾರೆ. ಕೆಲವರು ತಮ್ಮ ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡವನ್ನು ಪರಿಶೀಲಿಸುತ್ತಾರೆ. ಇತರರು ತಮ್ಮ ಹೃದಯದ ಆರೋಗ್ಯವನ್ನು ನಿರ್ಣಯಿಸಲು ಇಸಿಜಿ, ಟ್ರೆಡ್‌ಮಿಲ್ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಡಾ.ಅಲೋಕ್ ಚೋಪ್ರಾ ಅವರ ಪ್ರಕಾರ, ನಿಮ್ಮ ವಿಶ್ರಾಂತಿ ಹೃದಯ ಬಡಿತವನ್ನು ಪರಿಶೀಲಿಸುವ ಮೂಲಕ ಹೃದಯದ ಆರೋಗ್ಯವನ್ನು ನಿರ್ಧರಿಸಬಹುದು.
ಏನಿದು ವಿಶ್ರಾಂತಿ ಹೃದಯ ಬಡಿತ?: ವಿಶ್ರಾಂತಿ ಹೃದಯ ಬಡಿತ (RHR) ಎಂದರೆ, ನೀವು ವಿಶ್ರಾಂತಿಯಲ್ಲಿರುವಾಗ ನಿಮ್ಮ ಹೃದಯವು ನಿಮಿಷಕ್ಕೆ ಎಷ್ಟು ಬಾರಿ ಬಡಿಯುತ್ತದೆ. ಹೃದಯದ ಆರೋಗ್ಯವನ್ನು ನಿರ್ಧರಿಸಲು ಇದು ಸುಲಭ ಹಾಗೂ ಉತ್ತಮ ಮಾರ್ಗ ಎಂದು ವೈದ್ಯರು ಹೇಳುತ್ತಾರೆ.
ಸುರಕ್ಷಿತ ಹೃದಯ ಬಡಿತ ಎಷ್ಟಿರಬೇಕು?: ಯಾವುದೇ ವಯಸ್ಕರಿಗೆ ಆರೋಗ್ಯಕರ ಹೃದಯ ಬಡಿತವು ಪ್ರತಿ ನಿಮಿಷಕ್ಕೆ 60 - 80 ಬಡಿತ ಇರುತ್ತದೆ ಎಂದು ಡಾ. ಅಲೋಕ್ ಚೋಪ್ರಾ ಹೇಳುತ್ತಾರೆ. ನಿಯಮಿತವಾಗಿ ವ್ಯಾಯಾಮ ಮಾಡುವ ಅಥವಾ ಕ್ರೀಡಾಪಟುಗಳಾಗಿರುವ ಜನರು ನಿಮಿಷಕ್ಕೆ ಸುಮಾರು 40 - 50 ಬಡಿತಗಳನ್ನು ಹೊಂದಿರಬಹುದು. ಸರಳವಾಗಿ ಹೇಳುವುದಾದರೆ, ಒಬ್ಬ ಕುಳಿತುಕೊಳ್ಳುವ ವ್ಯಕ್ತಿಯ ಹೃದಯವು ದೇಹವನ್ನು ಪರಿಚಲನೆ ಮಾಡಲು ಸುಮಾರು 70 ಬಾರಿ ನಿರ್ದಿಷ್ಟ ಪ್ರಮಾಣದ ರಕ್ತವನ್ನು ಪಂಪ್ ಮಾಡುತ್ತದೆ. ವ್ಯಾಯಾಮ ಮಾಡುವವರು, ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರು ಕೇವಲ 40-50 ಬಡಿತಗಳಲ್ಲಿ ಅದೇ ಪ್ರಮಾಣದ ರಕ್ತವನ್ನು ಪಂಪ್ ಆಗುತ್ತದೆ. ಇದರರ್ಥ ಹೃದಯವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ನಮ್ಮ ಹೃದಯದ ಆರೋಗ್ಯ, ಶಕ್ತಿಯನ್ನು ನಿರ್ಣಯಿಸಲು ನಮಗೆ ಸಹಾಯ ಮಾಡುತ್ತದೆ. ಇದರರ್ಥ ನಿಷ್ಕ್ರಿಯರಾಗಿರುವ ಜನರ ಹೃದಯಗಳು ಹೆಚ್ಚು ಶ್ರಮಿಸುತ್ತವೆ. ಫಿಟ್ನೆಸ್ ಪ್ರಜ್ಞೆ ಇರುವ ಜನರ ಹೃದಯಗಳು ಕಡಿಮೆ ಕೆಲಸ ಮಾಡುತ್ತವೆ. ಅದಕ್ಕಾಗಿಯೇ ಅವರ ಹೃದಯಗಳು ಬಲವಾಗಿರುತ್ತವೆ.
ಹೆಚ್ಚಿದ ವಿಶ್ರಾಂತಿ ಹೃದಯ ಬಡಿತದ ಕಾರಣಗಳೇನು?:
- ಹೃದಯ ಬಡಿತವು ಹೆಚ್ಚಾಗಿರಬಾರದು: ಅದು ಹೆಚ್ಚಿದ್ದರೆ ನಿಮ್ಮ ಹೃದಯವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದರ್ಥ. ಡಾ. ಅಲೋಕ್ ಚೋಪ್ರಾ ಅವರು ಹೆಚ್ಚಿನ ವಿಶ್ರಾಂತಿ ಹೃದಯ ಬಡಿತದ ಕಾರಣಗಳನ್ನು ವಿವರಿಸುತ್ತಾರೆ.
- ಕಳಪೆ ನಿದ್ರೆ : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದು ಅನೇಕ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಹೃದಯಕ್ಕೆ ಸಾಕಷ್ಟು ನಿದ್ರೆ ಪಡೆಯುವುದು ನಿರ್ಣಾಯಕವಾಗಿದೆ.
- ನಿರ್ಜಲೀಕರಣ: ಆರೋಗ್ಯಕರ ದೇಹಕ್ಕೆ ನೀರು ಕುಡಿಯುವುದು ತಿನ್ನುವಷ್ಟೇ ಮುಖ್ಯ. ಸಾಕಷ್ಟು ನೀರು ಸಿಗದಿರುವುದು ಹೃದಯ ಹಾನಿ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.
- ದೀರ್ಘಕಾಲದ ಒತ್ತಡ: ಜನರು ತಮ್ಮ ಜೀವನಶೈಲಿಯಿಂದಾಗಿ ಹೆಚ್ಚಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಒತ್ತಡವು ಅವರ ವಿಶ್ರಾಂತಿ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.
- ಹೆಚ್ಚು ಚಹಾ, ಕಾಫಿ ಕುಡಿಯುವುದು: ಕೆಲವು ಜನರು ಹೆಚ್ಚು ಚಹಾ, ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ, ದಿನಕ್ಕೆ ಐದು ಅಥವಾ ಆರು ಬಾರಿ ಕುಡಿಯುತ್ತಾರೆ. ಈ ಜನರಿಗೆ ಹೆಚ್ಚಿನ ವಿಶ್ರಾಂತಿ ಹೃದಯ ಬಡಿತವಿದೆ ಎಂದು ವೈದ್ಯರು ತಿಳಿಸುತ್ತಾರೆ.
- ವಿವಿಧ ಆರೋಗ್ಯ ಸಮಸ್ಯೆಗಳು: ಮಧುಮೇಹ, ಹೈ ಕೊಲೆಸ್ಟ್ರಾಲ್, ಹೈ ರಕ್ತದೊತ್ತಡ ಹಾಗೂ ಹೃದ್ರೋಗ ಹೊಂದಿರುವ ಜನರು ಸಹ ಹೆಚ್ಚಿನ ವಿಶ್ರಾಂತಿ ಹೃದಯ ಬಡಿತವನ್ನು ಹೊಂದಿರುತ್ತಾರೆ.
ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಕಲುಷಿತ ನೀರು ಸೇವನೆಯಿಂದ ಅತಿಸಾರದ ಜೊತೆಗೆ ಯಾವೆಲ್ಲಾ ರೋಗಗಳು ಬರುತ್ತವೆ?: ವಹಿಸಬೇಕಾದ ಮುನ್ನಚ್ಚರಿಕೆಗಳೇನು?
- ಸಿಹಿ ತಿನಿಸುಗಳನ್ನು ಸೇವಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವು: ವೈದ್ಯರ ಸಲಹೆಗಳೇನು?
- ಚಿಕ್ಕ ಚಿಕ್ಕ ವಿಷಯ ಮರೆತು ಬಿಡುವುದು ಬುದ್ಧಿಮಾಂದ್ಯತೆ, ಆಲ್ಝೈಮರ್ ಚಿಹ್ನೆಯೇ? ತಡೆಯುವುದು ಹೇಗೆ ಗೊತ್ತೇ?
- ಚಳಿಗಾಲದಲ್ಲಿ ಗಂಟಲು ನೋವು ಹಾಗೂ ಮೂಗು ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆಯಾಗುತ್ತಿದೆಯೇ? ತಜ್ಞರು ಸೂಚಿಸುವ ಮನೆಮದ್ದುಗಳಿವು
- ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆಯೇ? ತಜ್ಞರ ಟಿಪ್ಸ್ ಪಾಲಿಸಿ, ನಿಮ್ಮ ಉಸಿರು ಯಾವಾಗಲೂ ಫ್ರೆಶ್!

