ETV Bharat / health

ಸಿಹಿ ತಿನಿಸುಗಳನ್ನು ಸೇವಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವು: ವೈದ್ಯರ ಸಲಹೆಗಳೇನು?

ಸಿಹಿತಿಂಡಿಗಳು ಎಂದರೆ ಅನೇಕರು ತುಂಬಾ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಬಹುತೇಕರು ಸಂತೋಷದ ಸಮಯದಲ್ಲಿ ಸಿಹಿತಿಂಡಿಗಳನ್ನು ಸೇವಿಸುತ್ತಾರೆ. ಸ್ವೀಟ್​ ಸೇವಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದರ ಬಗ್ಗೆ ವೈದ್ಯರು ಸಲಹೆಗಳನ್ನು ನೀಡಿದ್ದಾರೆ.

How to eat less sweets  ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ  Low glycemic index sweet  Along with fruits these dry fruits
ಸಿಹಿ ತಿನಿಸುಗಳು - ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : January 5, 2026 at 2:57 PM IST

3 Min Read
Choose ETV Bharat

ದೇಶದ ಯಾವುದೇ ಸಂತೋಷದ ಕ್ಷಣಗಳಲ್ಲಿ ಸಿಹಿತಿಂಡಿಗಳಿಲ್ಲದೇ ಆಚರಣೆ ಮಾಡುವುದಿಲ್ಲ. ಹಬ್ಬವಾಗಲಿ, ಮದುವೆಯಾಗಲಿ ಅಥವಾ ಯಾವುದೇ ಸಂತೋಷದ ಕ್ಷಣಗಳಲ್ಲಿ ಸಿಹಿತಿಂಡಿಗಳನ್ನು ಹಂಚುವುದು ಹಾಗೂ ಸೇವಿಸುವುದು ನಮ್ಮ ಸಂಸ್ಕೃತಿಯಾಗಿದೆ. ಆದರೆ, ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳದೇ ಸಿಹಿ ಸೇವನೆ ಮಾಡಿದರೆ, ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಜೊತೆಗೆ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಸಿಹಿತಿಂಡಿಗಳನ್ನು ಅನಿಯಂತ್ರಿತವಾಗಿ ಸೇವಿಸುವುದರಿಂದ ಮಧುಮೇಹ, ಫ್ಯಾಟಿ ಲಿವರ್, ಅಧಿಕ ಕೊಲೆಸ್ಟ್ರಾಲ್, ಪಿಸಿಒಡಿ ಹಾಗೂ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವು ಹೆಚ್ಚಿಸುತ್ತದೆ. ಇದರರ್ಥ ಸಿಹಿತಿಂಡಿಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದಲ್ಲ. ಬದಲಿಗೆ ನಾವು ಅವುಗಳನ್ನು ಬುದ್ಧಿವಂತಿಕೆಯಿಂದ ಸೇವಿಸಬೇಕಾಗುತ್ತದೆ.

How to eat less sweets  ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ  Low glycemic index sweet  Along with fruits these dry fruits
ಸಿಹಿ ತಿನಿಸು - ಸಾಂದರ್ಭಿಕ ಚಿತ್ರ (Getty Images)

ಸಿಹಿ ತಿನಿಸುಗಳನ್ನು ತಿನ್ನುವಾಗ ನಾವು ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ನಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ತಡೆಯಲು ಸಾಧ್ಯವಾಗುತ್ತದೆ. ನಾವು ಜೀವನದ ಸಿಹಿ ಕ್ಷಣಗಳನ್ನು ಆನಂದಿಸಬಹುದು. ಸರಿಯಾದ ಸಮತೋಲನ ಹಾಗೂ ಸರಿಯಾದ ಆಯ್ಕೆ ಮಾತ್ರ ರೋಗಗಳ ಬಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ಈ ಪ್ರಮುಖ ವಿಷಯದ ಕುರಿತು ಆರೋಗ್ಯ ತಜ್ಞೆ ಡಾ.ಶಾಲಿನಿ ಸಿಂಗ್ ಸೋಲಂಕಿ ಅವರು, ಇನ್​ಸ್ಟಾಗ್ರಾಂ ವಿಡಿಯೋದಲ್ಲಿ ಕೆಲವು ಮಹತ್ವದ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

How to eat less sweets  ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ  Low glycemic index sweet  Along with fruits these dry fruits
ಸಿಹಿ ತಿನಿಸು - ಸಾಂದರ್ಭಿಕ ಚಿತ್ರ (Getty Images)

ಹಣ್ಣುಗಳ ಜೊತೆಗೆ ಈ ಡ್ರೈ ಫ್ರೂಟ್ಸ್ ಸೇರಿಸಿ: ಜನರು ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ (ಫ್ರಕ್ಟೋಸ್) ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಎಂದಿಗೂ ಹಣ್ಣನ್ನು ಮಾತ್ರ ತಿನ್ನಬಾರದು. ಈ ಹಣ್ಣುಗಳ ಜೊತೆಗೆ ಗೋಡಂಬಿ, ಬಾದಾಮಿ ಅಥವಾ ವಾಲ್ನಟ್​​ಗಳಂತಹ ಆರೋಗ್ಯಕರ ಕೊಬ್ಬಿನೊಂದಿಗೆ ಸೇರಿಸಿ ಸೇವಿಸಬೇಕು. ಈ ರೀತಿಯ ಸಂಯೋಜನೆ ಸಕ್ಕರೆಯನ್ನು ಹೀರಿಕೊಳ್ಳುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಜೊತೆಗೆ ದೇಹಕ್ಕೆ ಸ್ಥಿರವಾದ ಶಕ್ತಿ ನೀಡುತ್ತದೆ

ಡಾರ್ಕ್ ಚಾಕೊಲೇಟ್ ಅತ್ಯುತ್ತಮ: ಯಾವುದೇ ಆಚರಣೆಯ ಸಮಯದಲ್ಲಿ ಸಕ್ಕರೆ ಸಹಿತ ಹಾಲನ್ನು ನೀಡಲಾಗುತ್ತದೆ. ಈ ಹಾಲಿನಲ್ಲಿ ಡಾರ್ಕ್ ಚಾಕೊಲೇಟ್ ಸೇರಿಸಬಹುದು. ಡಾರ್ಕ್ ಚಾಕೊಲೇಟ್ ಹೃದಯಕ್ಕೆ ಒಳ್ಳೆಯದಾಗಿದೆ. ಇದರಿಂದ ದೇಹಕ್ಕೆ ಉತ್ಕರ್ಷಣ ನಿರೋಧಕಗಳು ಅಗತ್ಯ ಪ್ರಮಾಣದಲ್ಲಿ ಲಭಿಸಲು ಸಾಧ್ಯವಾಗುತ್ತದೆ. ಊಟದ ನಂತರ ನೀವು ಒಂದು ಅಥವಾ ಎರಡು ತುಂಡು ಡಾರ್ಕ್ ಚಾಕೊಲೇಟ್ ಸೇವಿಸಬಹುದು. ನಿಮ್ಮ ಸಿಹಿ ಹಂಬಲವನ್ನು ಪೂರೈಸುತ್ತದೆ, ದೇಹಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ.

How to eat less sweets  ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ  Low glycemic index sweet  Along with fruits these dry fruits
ಸಿಹಿ ತಿನಿಸು - ಸಾಂದರ್ಭಿಕ ಚಿತ್ರ (Getty Images)

ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಸ್ವೀಟ್​ಗಳನ್ನು ಆಯ್ಕೆ ಮಾಡಿ: ಐಸ್ ಕ್ರೀಮ್ ಅಥವಾ ಕೇಕ್​ನಂತಹ ಆಹಾರಗಳ ಬದಲಿಗೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (GI) ಹೊಂದಿರುವ ಸಿಹಿತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಮನೆಯಲ್ಲಿ ತಯಾರಿಸಿದ ಕಡಲೆ ಹಿಟ್ಟಿನ ಲಡ್ಡುಗಳು, ಚಿಯಾ ಪುಡಿಂಗ್, ಮಖಾನಾ ಲಡ್ಡುಗಳು, ಡ್ರೈ ಫ್ರೂಟ್ಸ್ ಲಡ್ಡುಗಳನ್ನು ಸೇವಿಸುವುದು ಉತ್ತಮ ಎಂದು ಡಾ.ಶಾಲಿನಿ ಸಿಂಗ್ ಸೋಲಂಕಿ ಸಲಹೆ ನೀಡುತ್ತಾರೆ.

ಈ ಸಿಹಿತಿಂಡಿಗಳು ನಿಧಾನವಾಗಿ ಜೀರ್ಣವಾಗುತ್ತವೆ, ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಗೆ ಕಾರಣವಾಗುವುದಿಲ್ಲ. ಸಂಸ್ಕರಿಸಿದ ಸಕ್ಕರೆಯನ್ನು ಸೇವಿಸಬಾರದು, ನೈಸರ್ಗಿಕ ಸಕ್ಕರೆಗೆ ಬಳಕೆ ಮಾಡುವುದು ಉತ್ತಮ. ಬಿಳಿ ಸಕ್ಕರೆ ಇಲ್ಲವೇ ಸಂಸ್ಕರಿಸಿದ ಸಕ್ಕರೆ ಆರೋಗ್ಯಕ್ಕೆ ಪ್ರಮುಖ ಅಪಾಯವಾಗಿದೆ. ಬೆಲ್ಲ, ಜೇನುತುಪ್ಪ, ಖರ್ಜೂರ ಅಥವಾ ಮೊಲಾಸಸ್‌ನಂತಹ ನೈಸರ್ಗಿಕ ಸಿಹಿಕಾರಕಗಳನ್ನು ಪ್ರಯತ್ನಿಸಿ. ಈ ಪರ್ಯಾಯಗಳು ಸಿಹಿಯನ್ನು ಒದಗಿಸುವುದಲ್ಲದೆ, ಕಬ್ಬಿಣ ಮತ್ತು ಇತರ ಖನಿಜಗಳನ್ನು ಸಹ ಒಳಗೊಂಡಿರುತ್ತವೆ. ನೈಸರ್ಗಿಕವಾಗಿದ್ದರೂ ತೂಕ ನಿಯಂತ್ರಣ ಕಾಪಾಡಿಕೊಳ್ಳಲು ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ವೈದ್ಯರು ತಿಳಿಸುತ್ತಾರೆ.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಚಿಕ್ಕ ಚಿಕ್ಕ ವಿಷಯ ಮರೆತು ಬಿಡುವುದು ಬುದ್ಧಿಮಾಂದ್ಯತೆ, ಆಲ್ಝೈಮರ್​ ಚಿಹ್ನೆಯೇ? ತಡೆಯುವುದು ಹೇಗೆ ಗೊತ್ತೇ?
  2. ಚಳಿಗಾಲದಲ್ಲಿ ಗಂಟಲು ನೋವು ಹಾಗೂ ಮೂಗು ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆಯಾಗುತ್ತಿದೆಯೇ? ತಜ್ಞರು ಸೂಚಿಸುವ ಮನೆಮದ್ದುಗಳಿವು
  3. ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆಯೇ? ತಜ್ಞರ ಟಿಪ್ಸ್​ ಪಾಲಿಸಿ, ನಿಮ್ಮ ಉಸಿರು ಯಾವಾಗಲೂ ಫ್ರೆಶ್!
  4. ಫ್ರಿಡ್ಜ್​ನಲ್ಲಿ ಮೊಟ್ಟೆಗಳನ್ನು ಎಷ್ಟು ದಿನಗಳವರೆಗೆ ಇಡಬಹುದು? ಹಾಳಾಗಿದ್ರೆ ತಿಳಿಯುವುದು ಹೇಗೆ?
  5. ವೈವಾಹಿಕ ಜೀವನದಲ್ಲಿ ಮುನಿಸೇಕೆ? ನೆಗೆಟಿವಿಟಿ ಬದಲಿಸಿ ಸಂಬಂಧ ಬಲಪಡಿಸುವುದು ಹೇಗೆ ಗೊತ್ತೇ?