ETV Bharat / health

ಕಬ್ಬಿಣಾಂಶದ ಕೊರತೆಯಾದರೆ ದೇಹದಲ್ಲಿ ಕಾಣಿಸುತ್ತವೆ ಈ ಚಿಹ್ನೆಗಳು: ಐರನ್ ಅಂಶ ಸಮೃದ್ಧವಾಗಿರುವ ಆಹಾರಗಳಿವು

ಕಬ್ಬಿಣಾಂಶದ ಕೊರತೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾಡುತ್ತವೆ. ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ಕಬ್ಬಿಣಾಂಶದ ಕೊರತೆ ನಿವಾರಿಸಲು ದೈನಂದಿನ ಆಹಾರ ಕ್ರಮದಲ್ಲಿ ಯಾವೆಲ್ಲಾ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯೋಣ.

IRON DEFICIENCY  iron foods rich  How to prevent iron deficiency  ಕಬ್ಬಿಣಾಂಶದ ಕೊರತೆ ತಡೆಯುವುದು ಹೇಗೆ
ಕಬ್ಬಿಣಾಂಶದ ಕೊರತೆ ತಡೆಯುವುದು ಹೇಗೆ?- ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : October 5, 2026 at 6:14 PM IST

3 Min Read
Choose ETV Bharat

ಕಬ್ಬಿಣಾಂಶವು ನಮ್ಮ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ಕಬ್ಬಿಣಾಂಶದ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ಇದರಿಂದ ದೇಹದ ಅಂಗಾಂಗಗಳಿಗೆ ಸಾಕಷ್ಟು ಆಮ್ಲಜನಕ ಸಿಗದೇ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗಲು ಕಾರಣವೇನು ಎಂಬುದು ಹಲವರಿಗೆ ಕಾಡುವ ಪ್ರಶ್ನೆಯಿದು. ವಿವಿಧ ವಯಸ್ಸಿನವರಿಗೆ ಎಷ್ಟು ಪ್ರಮಾಣದ ಕಬ್ಬಿಣದ ಅಗತ್ಯವಿರುತ್ತದೆ? ಯಾವ ಆಹಾರಗಳು ಕಬ್ಬಿಣದ ಉತ್ತಮ ಮೂಲಗಳಾಗಿವೆ ಎಂಬುದರ ಕುರಿತು ತಜ್ಞರು ತಿಳಿಸುವ ಮಾಹಿತಿ ಇಲ್ಲಿದೆ ನೋಡಿ.

ಕಬ್ಬಿಣವು ನಮ್ಮ ದೇಹಕ್ಕೆ ಅತ್ಯಂತ ಪ್ರಮುಖವಾದ ಖನಿಜಗಳಲ್ಲಿ ಒಂದಾಗಿದೆ. ಹಿಮೋಗ್ಲೋಬಿನ್ ಹಾಗೂ ಮೈಯೋಗ್ಲೋಬಿನ್ ಎಂಬ ಎರಡು ರೀತಿಯ ಪ್ರೋಟೀನ್‌ಗಳನ್ನು ಉತ್ಪಾದಿಸಲು ನಮ್ಮ ದೇಹವು ಕಬ್ಬಿಣಾಂಶವನ್ನು ಬಳಸುತ್ತದೆ. ಶ್ವಾಸಕೋಶದಿಂದ ದೇಹದ ಇತರ ಭಾಗಗಳಿಗೆ ಆಮ್ಲಜನಕ ಸಾಗಿಸಲು ಕೆಂಪು ರಕ್ತ ಕಣಗಳಿಗೆ ಹಿಮೋಗ್ಲೋಬಿನ್ ಅತ್ಯಗತ್ಯವಾಗಿದ್ದರೆ, ಮೈಯೋಗ್ಲೋಬಿನ್ ಸ್ನಾಯುಗಳಿಗೆ ಆಮ್ಲಜನಕ ತಲುಪಿಸುತ್ತದೆ. ಹಾರ್ಮೋನ್‌ಗಳು, ಅಸ್ಥಿರಜ್ಜುಗಳು ಹಾಗೂ ಸ್ನಾಯುಬಂಧಕಗಳು ಸೇರಿದಂತೆ ವಿವಿಧ ಸಂಯೋಜಕ ಅಂಗಾಂಶಗಳನ್ನು ರೂಪಿಸಲು ಕೂಡ ನಮ್ಮ ದೇಹಕ್ಕೆ ಸಾಕಷ್ಟು ಕಬ್ಬಿಣಾಂಶದ ಅಗತ್ಯ ತುಂಬಾ ಇದೆ.

IRON DEFICIENCY  iron foods rich  How to prevent iron deficiency  ಕಬ್ಬಿಣಾಂಶದ ಕೊರತೆ ತಡೆಯುವುದು ಹೇಗೆ
ಕಬ್ಬಿಣಾಂಶದ ಕೊರತೆ ತಡೆಯುವುದು ಹೇಗೆ?- ಸಾಂದರ್ಭಿಕ ಚಿತ್ರ (Getty Images)

ಕಬ್ಬಿಣಾಂಶ ಕೊರತೆಯ ಲಕ್ಷಣಗಳೇನು?: ದೇಹದಲ್ಲಿ ಕಬ್ಬಿಣದ ಕೊರತೆಯ ಲಕ್ಷಣಗಳು ತಕ್ಷಣವೇ ಗೋಚರಿಸುವುದಿಲ್ಲ. ಏಕೆಂದರೆ, ಕಬ್ಬಿಣದ ಮಟ್ಟ ಕಡಿಮೆಯಾದಾಗ ದೇಹವು ಸ್ನಾಯುಗಳು, ಮೂಳೆಗಳು, ಯಕೃತ್ತು ಹಾಗೂ ಇತರ ಅಂಗಗಳಲ್ಲಿ ಸಂಗ್ರಹವಾಗಿರುವ ಕಬ್ಬಿಣವನ್ನು ಬಳಸಿಕೊಳ್ಳುತ್ತದೆ. ಈ ಸಂಗ್ರಹವಾದ ಕಬ್ಬಿಣದ ದಾಸ್ತಾನು ಖಾಲಿಯಾದಾಗ ಕೆಂಪು ರಕ್ತ ಕಣಗಳ ಗಾತ್ರ ಹಾಗೂ ಹಿಮೋಗ್ಲೋಬಿನ್ ಮಟ್ಟಗಳು ಕಡಿಮೆಯಾಗುತ್ತವೆ. ಇದರ ಪರಿಣಾಮವಾಗಿ ದೇಹಕ್ಕೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ. ಈ ಸ್ಥಿತಿಯನ್ನು 'ಪರ್ನಿಷಿಯಸ್ ಅನಿಮಿಯಾ' ಎಂದು ಕರೆಯಲಾಗುತ್ತದೆ.

ಈ ಸಮಸ್ಯೆಯಿಂದ ಬಳಲುತ್ತಿರುವವರು ತೀವ್ರ ಆಯಾಸ, ದೌರ್ಬಲ್ಯ, ತಲೆನೋವು ಹಾಗೂ ಜೀರ್ಣಕಾರಿ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ರೀತಿಯ ರಕ್ತಹೀನತೆಯು ಪ್ರಮುಖವಾಗಿ ಆಹಾರದಲ್ಲಿನ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಗರ್ಭಿಣಿಯರು ಹಾಗೂ ವೃದ್ಧರಲ್ಲಿಯೂ ಕಬ್ಬಿಣಾಂಶದ ಕೊರತೆ ಸಾಮಾನ್ಯವಾಗಿ ಕಂಡುಬರುತ್ತದೆ. ಕಬ್ಬಿಣದ ಕೊರತೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಖ್ಯಾತ ಪೌಷ್ಟಿಕತಜ್ಞೆ ಡಾ.ಶ್ರೀಲತಾ ಪ್ರತಿಕ್ರಿಯಿಸಿ, 'ಕಬ್ಬಿಣದ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಬೇಕಾಗುತ್ತದೆ. ಈ ಕೊರತೆಯನ್ನು ಪತ್ತೆಹಚ್ಚದೆ ಬಿಟ್ಟರೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕ್ರಮೇಣ ಹೃದಯ ರೋಗಕ್ಕೆ ಕಾರಣವಾಗಬಹುದು, ಜೀವಕ್ಕೆ ಅಪಾಯ ಉಂಟುಮಾಡಬಹುದು. ಕಬ್ಬಿಣದ ಕೊರತೆ ಇರುವವರು ಸಾಮಾನ್ಯವಾಗಿ ಮಸುಕಾದ ಇಲ್ಲವೇ ಬಣ್ಣಗೆಟ್ಟ ಚರ್ಮವನ್ನು ಹೊಂದಿರುತ್ತಾರೆ ಹಾಗೂ ಉಸಿರಾಟದಲ್ಲಿ ತೀವ್ರ ತೊಂದರೆ ಅನುಭವಿಸುತ್ತಾರೆ. ಕಬ್ಬಿಣಾಂಶದ ಆಹಾರಗಳು ನಮ್ಮ ದೈನಂದಿನ ಆಹಾರ ಕ್ರಮದ ಭಾಗವಾಗಿರಬೇಕು. ಮೊಟ್ಟೆ, ಕೋಳಿ ಮಾಂಸ, ಮೀನು ಹಾಗೂ ಕೆಂಪು ಮಾಂಸ ಕೂಡ ಕಬ್ಬಿಣದ ಉತ್ತಮ ಮೂಲಗಳಾಗಿವೆ.

ವಿವಿಧ ವಯಸ್ಸಿನವರಿಗೆ ಎಷ್ಟು ಪ್ರಮಾಣದ ಕಬ್ಬಿಣಾಂಶದ ಅಗತ್ಯವಿದೆ?:

  1. ಪುರುಷರಿಗೆ ಪ್ರತಿದಿನ 8 ಮಿಲಿಗ್ರಾಂ ಕಬ್ಬಿಣದ ಅಗತ್ಯವಿರುತ್ತದೆ.
  2. 19ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರತಿದಿನ 18 ಮಿಲಿಗ್ರಾಂ ಕಬ್ಬಿಣದ ಅಗತ್ಯವಿರುತ್ತದೆ.
  3. ಗರ್ಭಿಣಿಯರಿಗೆ 27 ಮಿಲಿಗ್ರಾಂ ಕಬ್ಬಿಣದ ಅಗತ್ಯವಿರುತ್ತದೆ.
  4. ಹಾಲುಣಿಸುವ ತಾಯಂದಿರಿಗೆ 10 ಮಿಲಿಗ್ರಾಂ ಅಗತ್ಯವಿರುತ್ತದೆ.

ಯಾವ ಆಹಾರಗಳು ಕಬ್ಬಿಣಾಂಶದ ಅತ್ಯುತ್ತಮ ಮೂಲಗಳಾಗಿವೆ?: ನಮ್ಮ ದೇಹವು ಮಾಂಸದಿಂದ ಕಬ್ಬಿಣಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಮೀನು, ಕೋಳಿ ಮಾಂಸ ಹಾಗೂ ಇತರ ಬಗೆಯ ಮಾಂಸದಂತಹ ಆಹಾರಗಳಿಂದ ನಾವು ಗಮನಾರ್ಹ ಪ್ರಮಾಣದ ಕಬ್ಬಿಣವನ್ನು ಪಡೆಯಬಹುದು. ಮಾಂಸಾಹಾರಿಗಳಿಗೆ ಹೋಲಿಸಿದರೆ, ಸಸ್ಯಾಹಾರಿಗಳಿಗೆ ಕಬ್ಬಿಣದ ಅಗತ್ಯ ಪೂರೈಸುವುದು ಸಾಮಾನ್ಯವಾಗಿ ಹೆಚ್ಚು ಸವಾಲಿನ ವಿಷಯವಾಗಿರುತ್ತದೆ.

ಸಸ್ಯಾಹಾರಿಗಳು ಕಿತ್ತಳೆ, ಕೆಂಪು ಕ್ಯಾಪ್ಸಿಕಂ (ಬೆಲ್ ಪೆಪ್ಪರ್), ಸ್ಟ್ರಾಬೆರಿ, ಬ್ರೊಕೊಲಿಯಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳಿಂದ ಕಬ್ಬಿಣವನ್ನು ಪಡೆಯಬಹುದು. ಬಿಳಿ ಬೀನ್ಸ್, ಬೇಳೆಕಾಳುಗಳು, ಪಾಲಕ್ ಸೊಪ್ಪು, ಸಮುದ್ರಾಹಾರ ಹಾಗೂ ಕೋಳಿ ಮಾಂಸವನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ಕಬ್ಬಿಣಾಂಶದ ಕೊರತೆ ತಡೆಯಲು ಸಹಾಯವಾಗುತ್ತದೆ. ಡ್ರೈಫ್ರೂಟ್ಸ್, ನಟ್ಸ್, ಪೂರ್ಣ ಧಾನ್ಯಗಳು, ಹಸಿರು ತರಕಾರಿಗಳಲ್ಲಿ ಕೂಡ ಉತ್ತಮ ಪ್ರಮಾಣದ ಕಬ್ಬಿಣವಿರುತ್ತದೆ. ಕಬ್ಬಿಣ ಹೆಚ್ಚುವರಿಯಾಗಿ ಸೇರಿಸಲಾದ ಧಾನ್ಯಗಳಿಂದ ತಯಾರಿಸಿದ ಬ್ರೆಡ್ ಅನ್ನು ಸಹ ನೀವು ಸೇವಿಸಬಹುದು.

ದೇಹದಲ್ಲಿ ಕಬ್ಬಿಣದ ಮಟ್ಟವು ಅತಿಯಾದರೆ ಹೊಟ್ಟೆ ನೋವು, ಮಲಬದ್ಧತೆ, ವಾಕರಿಕೆ, ಅತಿಸಾರ, ತಲೆತಿರುಗುವಿಕೆಯಂತಹ ಸಮಸ್ಯೆಗಳು ಉಂಟಾಗಬಹುದು. ಈ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಬೆಳಗ್ಗೆ ಎದ್ದ ತಕ್ಷಣ ನಡೆದಾಡಿದರೆ ತೀವ್ರವಾದ ಹಿಮ್ಮಡಿ ನೋವು ಕಾಣಿಸುತ್ತದೆಯೇ?: ವೈದ್ಯರು ಸೂಚಿಸುವ ಪರಿಹಾರ ಕ್ರಮಗಳೇನು?
  2. ಹೊರಗೆ ಕಾಣುವ ದೊಡ್ಡ ಹೊಟ್ಟೆಗಿಂತ ಒಳಾಂಗಗಳಲ್ಲಿರುವ ಶೇಖರವಾಗುವ ಕೊಬ್ಬು ತುಂಬಾ ಅಪಾಯಕಾರಿ: ವೈದ್ಯರ ಎಚ್ಚರಿಕೆ
  3. ಪುರುಷರಿಗಿಂತ ಮಹಿಳೆಯರಲ್ಲಿ ಮೆದುಳಿನ ಅನ್ಯೂರಿಜಮ್ ಉಂಟಾಗುವ ಸಾಧ್ಯತೆ ಹೆಚ್ಚು: ಏನಿದು ಆರೋಗ್ಯದ ಸಮಸ್ಯೆ?
  4. ಡಯಟ್ ಮಾಡುವಾಗ ಬೇಡದ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆಯಾಗುವುದೇಕೆ? ನಿಯಂತ್ರಿಸುವುದು ಹೇಗೆ ಗೊತ್ತೇ?
  5. ನಿಮ್ಮ ಮೂತ್ರದ ಬಣ್ಣದಲ್ಲಿ ಈ ಬದಲಾವಣೆಯಾದರೆ ಎಚ್ಚರಿಕೆ ವಹಿಸಿ: ದುರ್ವಾಸನೆ, ನೊರೆ ಮೂತ್ರವು ಕಿಡ್ನಿ ಸಮಸ್ಯೆಯೇ?
  6. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತದೆಯೇ? ತಜ್ಞರು ತಿಳಿಸುವುದೇನು?