ನಿಮಗೆ ಮಲಗಿದ ತಕ್ಷಣ ನಿದ್ರೆ ಬರುತ್ತಿಲ್ಲವೇ? ಫಟಾಫಟ್ ಗಾಢ ನಿದ್ರೆಗೆ ಜಾರುವುದು ಹೇಗೆ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದ ಈ ಭಾಗಗಳನ್ನು ಸ್ವಲ್ಪ ಒತ್ತಿದರೆ ಸಾಕು, ಹಾಸಿಗೆಯ ಮಲಗಿದ ತಕ್ಷಣವೇ ನಿದ್ರೆಗೆ ಜಾರುತ್ತೀರಿ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.


Published : November 9, 2025 at 9:10 AM IST
ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಜನರ ದೇಹವು ದಿನವಿಡೀ ದಣಿದರೂ ಕೂಡ ಸರಿಯಾಗಿ ನಿದ್ರೆ ಬರುವುದಿಲ್ಲ. ಇದರ ಪರಿಣಾಮ ಅವರಿಗೆ ಅಕಾಲಿಕ ವಯಸ್ಸಾಗಲು ಕಾರಣವಾಗುತ್ತದೆ. ಹೀಗೆ ನಿದ್ರಾಹೀನತೆ ಮುಂದುವರಿದರೆ ಅನೇಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬದಲಾದ ಕಾರ್ಯನಿರತ ಜೀವನಶೈಲಿಯಲ್ಲಿ ಬದುಕುತ್ತಿರುವ ಜನರ ತುಂಬಾ ಆಯಾಸದ ಬಳಿಕವೂ ಚೆನ್ನಾಗಿ ನಿದ್ರಿಸಲು ಸಾಧ್ಯವಾಗುತ್ತಿಲ್ಲ. ಈ ಜನರು ರಾತ್ರಿ ಸಮಯದಲ್ಲಿ ತುಂಬಾ ಚಡಪಡಿಕೆ ಬಳಿಕವೂ ಆಳವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ.
ಮನುಷ್ಯ ಆರೋಗ್ಯಕರವಾಗಿರಬೇಕಾದರೆ, ಪ್ರತಿದಿನ ಕನಿಷ್ಠ 7ರಿಂದ 8 ಗಂಟೆಗಳ ನಿದ್ರೆ ಮಾಡುವುದು ಮುಖ್ಯವಾಗಿದೆ. ನೀವು ಯಾರಾದರೂ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಹಾಗೂ ರಾತ್ರಿಯಿಡೀ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರೆ, ಒಮ್ಮೆ ನಿಮ್ಮ ಕಣ್ಣುಗಳು ಮುಚ್ಚಿ ಈ ದೇಹದ ಭಾಗಗಳನ್ನು ಸ್ವಲ್ಪ ಪ್ರೆಸ್ ಮಾಡಬೇಕಾಗುತ್ತದೆ.
ಈ ದೇಹ ಭಾಗಗಳನ್ನು ಪ್ರೆಸ್ ಮಾಡಿದರೆ ಉತ್ತಮ ನಿದ್ರೆ ಪಡೆಯಲು ಸಾಧ್ಯ?: ಹಾಸಿಗೆ ಮೇಲೆ ಮಲಗಿದ ತಕ್ಷಣವೇ ನಿದ್ರೆ ಬರಬೇಕಾದರೆ, ಈ ದೇಹದ ಭಾಗಗಳನ್ನು ಒತ್ತುವ ಪ್ರಕ್ರಿಯೆಯನ್ನು ಆಕ್ಯುಪ್ರೆಶರ್ ಎಂದು ಹೇಳಲಾಗುತ್ತದೆ. ಇದು ಪ್ರಮುಖವಾಗಿ ಚೀನಾದ ವೈದ್ಯಕೀಯ ಚಿಕಿತ್ಸೆಯಾಗಿದೆ. ದೇಹದ ಕೆಲವು ಪ್ರದೇಶಗಳನ್ನು ಸ್ವಲ್ಪ ಪ್ರೆಸ್ ಮಾಡುವುದರಿಂದ ಚೆನ್ನಾಗಿ ನಿದ್ರೆ ಬರಲು ಸಹಾಯವಾಗುತ್ತದೆ. ನಿಮಗೆ ನಿದ್ರೆ ಮಾಡಲು ತುಂಬಾ ಸಹಾಯವಾಗುವ ಈ ದೇಹದ ನಾಲ್ಕು ಭಾಗಗಳು ಯಾವುದು ಎಂಬುದನ್ನು ತಿಳಿಯೋಣ. ವೈದ್ಯರನ್ನು ಭೇಟಿ ಮಾಡಿದ ಬಳಿಕವೇ, ಅವರ ಮಾರ್ಗದರ್ಶನದ ಮೇರೆಗೆ ಪ್ರಯತ್ನಿಸಬೇಕು.
ಕಿವಿಯ ಹಿಂದೆ ಪ್ರೆಸ್ ಮಾಡಿ: ಆತಂಕ ಹಾಗೂ ತಲೆನೋವುನಿಂದ ನಿದ್ರಾ ಭಂಗಕ್ಕೆ ಕಾರಣವಾದರೆ, ನಿಮ್ಮ ಕಿವಿಯ ಹಿಂಭಾಗದ ಪ್ರದೇಶವನ್ನು ಕಿವಿಯ ಲೋಬ್‌ನ ಹಿಂದೆ ನಿಧಾನವಾಗಿ ಒತ್ತುವುದರಿಂದ ತಕ್ಷಣವೇ ಚೆನ್ನಾಗಿ ನಿದ್ರೆ ಮಾಡಲು ಸಹಾಯವಾಗುತ್ತದೆ. ಈ ಭಾಗವನ್ನು ಕನಿಷ್ಠ 10 ರಿಂದ 20 ಬಾರಿ ನಿಧಾನವಾಗಿ ಒತ್ತಬೇಕು. ಇದರಿಂದ ಉತ್ತಮ ನಿದ್ರೆ ಬರಲು ಹೆಚ್ಚು ಸಹಾಯಕವಾಗುತ್ತದೆ.
ಹುಬ್ಬುಗಳ ಮಧ್ಯೆ ಪ್ರೆಸ್: ಕೆಲವೊಂದು ಬಾರಿ ಅಧಿಕ ರಕ್ತದೊತ್ತಡ ಹಾಗೂ ಮಾನಸಿಕ ಒತ್ತಡದಿಂದ ನಿದ್ರಾಹೀನತೆಗೆ ಕಾರಣವಾಗಬಹುದು. ಈ ಸಮಯದಲ್ಲಿ ಹುಬ್ಬುಗಳು ಮತ್ತು ತಲೆಯ ನಡುವಿನ ಬಿಂದುವನ್ನು ನಿಧಾನವಾಗಿ ಒತ್ತಬೇಕಾಗುತ್ತದೆ. ಮಾನಸಿಕ ಹೆಚ್ಚು ಸಮಾಧಾನ ಲಭಿಸುತ್ತದೆ ಹಾಗೂ ಉತ್ತಮ ನಿದ್ರೆ ಮಾಡಲು ಸಹಾಯವಾಗುತ್ತದೆ.
ಕುತ್ತಿಗೆಯ ಕೆಳಗೆ ಒತ್ತಿ: ಕುತ್ತಿಗೆಯನ್ನು ಮಸಾಜ್ ಮಾಡಿದಾಗ ತುಂಬಾ ಗಾಢವಾದ ನಿದ್ರೆ ಬರಲು ಸಾಧ್ಯವಾಗುತ್ತದೆ. ಏಕೆಂದರೆ, ಕುತ್ತಿಗೆಯ ಮೇಲ್ಭಾಗದಲ್ಲಿ ಒಂದು ನಿರ್ದಿಷ್ಟ ಬಿಂದುವಿದ್ದು, ಹೆಬ್ಬೆರಳಿನಿಂದ ಒತ್ತಿದಾಗ ತಕ್ಷಣವೇ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಕಣ್ಣುಗಳು ಮಿಟುಕಿಸದಂತೆ ಉತ್ತಮ ನಿದ್ರೆ ಬರಲು ಸಹಾಯವಾಗುತ್ತದೆ. ಈ ದೇಹದ ಭಾಗವನ್ನು ವಿಶ್ರಾಂತಿ ಬಿಂದು ಎಂದು ಕರೆಯಲಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಕೈಗಳ ಮೇಲೆ ಪ್ರೆಸ್ ಮಾಡಿ: ಕೈಗಳ ಬೆರಳುಗಳು ನಿದ್ರೆಯ ಬಿಂದುಗಳನ್ನು ಹೊಂದಿವೆ. ಅಂಗೈಯಿಂದ ಮಣಿಕಟ್ಟಿನವರೆಗೆ ಬೆರಳುಗಳನ್ನು ವಿಸ್ತರಿಸಿ, ಅಲ್ಲಿ ನಿಧಾನವಾಗಿ ಒತ್ತಬೇಕಾಗುತ್ತದೆ. ಈ ಬಿಂದುಗಳು ನರಮಂಡಲವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ ಹಾಗೂ ಗಾಢ ನಿದ್ರೆಗೆ ಬರಲು ಸಾಧ್ಯವಾಗುತ್ತದೆ ಎಂದು ಆರೋಗ್ಯದ ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು (ಸಂಶೋಧನಾ ವರದಿ)
- https://www.sciencedirect.com/science/article/abs/pii/S2352721815000157
- https://www.sciencedirect.com/science/article/abs/pii/S0020748909003952
- https://journals.lww.com/menopausejournal/Abstract/2011/06000/The_relationship_of_subjective_sleep_quality_and.10.aspx
ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

