ಜಾಗತಿಕ ಮಾನಸಿಕ ಆರೋಗ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಷ್ಟು ಗೊತ್ತೇ?: ಈ ವರದಿಯಲ್ಲಿ ಏನಿದೆ ನೀವೇ ನೋಡಿ
ಜಾಗತಿಕ ಮನಸ್ಸಿನ ಆರೋಗ್ಯ ಸೂಚ್ಯಂಕ ವರದಿ ಬಿಡುಗಡೆಯಾಗಿದೆ. ಭಾರತವು 60ನೇ ಸ್ಥಾನದಲ್ಲಿದ್ದು, ಮಾನಸಿಕ ಆರೋಗ್ಯ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಗಮನ, ಒತ್ತಡ ನಿರ್ವಹಣೆಯಲ್ಲಿ ಆತಂಕಕಾರಿ ಕುಸಿತವಾಗಿದೆ ಎಂಬುದನ್ನು ತಿಳಿಸಿದೆ. ವರದಿಯಲ್ಲಿ ಮತ್ತೇನಿದೆ ಎಂಬುದನ್ನು ತಿಳಿಯೋಣ.


Published : March 2, 2026 at 8:15 PM IST
ಮಾನಸಿಕ ಆರೋಗ್ಯ ಸಮಸ್ಯೆಗಳು ವಿಶ್ವಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ವೃದ್ಧರಿಂದ ಹಿಡಿದು ಮಕ್ಕಳವರೆಗೆ ಎಲ್ಲರ ಮೇಲೆ ಪರಿಣಾಮ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯ ಪ್ರಕಾರ, ವಿಶ್ವಾದ್ಯಂತ ಸುಮಾರು 8 ಜನರಲ್ಲಿ ಒಬ್ಬರು ಯಾವುದಾದರೂ ಒಂದು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಅಂಕಿ ಅಂಶವು 1 ಬಿಲಿಯನ್ ಮೀರಬಹುದು. ಮಾನಸಿಕ ಆರೋಗ್ಯ ಸಮಸ್ಯೆಗಳು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಬೊಜ್ಜು, ಹೃದ್ರೋಗ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯ ಕೂಡ ಹೆಚ್ಚಾಗುತ್ತದೆ. ಭಾರತೀಯರಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯದ ಸಮಸ್ಯೆಗಳು ಆತಂಕಕಾರಿ ಸಂಗತಿಯಾಗಿವೆ.
ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಮನಸ್ಸಿನ ಆರೋಗ್ಯ ಸೂಚ್ಯಂಕ ವರದಿಯು ಮತ್ತಷ್ಟು ಕಳವಳಕಾರಿಯಾಗಿದೆ. ಈ ವರದಿಯು ಭಾರತೀಯ ಯುವಕರ ಮಾನಸಿಕ ಆರೋಗ್ಯವನ್ನು 60ನೇ ಸ್ಥಾನದಲ್ಲಿ ಇರಿಸಿದೆ. ದೇಶದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ ಎಂದು ತೋರಿಸಿದೆ. ಮಾನಸಿಕ ಕಾಯಿಲೆಗಳ ಕುರಿತು ಜನರಲ್ಲಿ ಅರಿವಿನ ಕೊರತೆಯು ಅಪಾಯಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಭಾರತೀಯ ಯುವಕರ ಮಾನಸಿಕ ಆರೋಗ್ಯ ಕ್ಷೀಣ: ಜಾಗತಿಕ ಮಾನಸಿಕ ಆರೋಗ್ಯ ಸೂಚ್ಯಂಕ ವರದಿ ಹಾಗೂ ಅದರ ಸವಾಲುಗಳನ್ನು ಪರಿಶೀಲಿಸುವ ಮೊದಲು ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು ದೇಶದ ಉತ್ಪಾದಕತೆ, ಆರ್ಥಿಕತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ಗಮನಿಸಬೇಕಾದ ಸಂಗತಿ. ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು ಉತ್ಪಾದಕತೆಯ ನಷ್ಟಕ್ಕೆ ಕಾರಣವಾಗುತ್ತವೆ ಎಂದು WHO ತಿಳಿಸುತ್ತದೆ. ಜಾಗತಿಕ ಆರ್ಥಿಕತೆಗೆ ವಾರ್ಷಿಕವಾಗಿ ಸುಮಾರು 1 ಟ್ರಿಲಿಯನ್ ಡಾಲರ್ ನಷ್ಟ ಉಂಟುಮಾಡುತ್ತದೆ. ಮಾನಸಿಕ ಆರೋಗ್ಯದ ಕುರಿತಾದ ಆಘಾತಕಾರಿ ಹೊಸ ಜಾಗತಿಕ ವರದಿಯು ಭಾರತೀಯ ಯುವಕರಿಗೆ ಎಚ್ಚರಿಕೆ ನೀಡಿದೆ.
ಅಮೆರಿಕದ ಸೇಪಿಯನ್ ಲ್ಯಾಬ್ಸ್‌ನ ಗ್ಲೋಬಲ್ ಮೈಂಡ್ ಹೆಲ್ತ್ 2025ವರದಿಯ ಪ್ರಕಾರ, ಭಾರತದಲ್ಲಿ 18ರಿಂದ 34 ವರ್ಷ ವಯಸ್ಸಿನವರ ಮೈಂಡ್ ಹೆಲ್ತ್ ಕ್ವಾಟಿಯೆಂಟ್ (ಎಂಎಸ್ಕ್ಯೂ) ಸ್ಕೋರ್ ಕೇವಲ 33 ಆಗಿತ್ತು. ಒಟ್ಟಾರೆ ಮಾನಸಿಕ ಯೋಗಕ್ಷೇಮದಲ್ಲಿ ಇದು 84 ದೇಶಗಳಲ್ಲಿ 60ನೇ ಸ್ಥಾನದಲ್ಲಿದೆ. ಮೈಂಡ್ ಹೆಲ್ತ್ ಕ್ವಾಟಿಯೆಂಟ್ ಮಾನಸಿಕ ಆರೋಗ್ಯ ಮತ್ತು ಬೌದ್ಧಿಕ ಕಾರ್ಯವನ್ನು ನಿರ್ಣಯಿಸುತ್ತದೆ.

ಗ್ಲೋಬಲ್ ಮೈಂಡ್ ಹೆಲ್ತ್ ವರದಿಯಲ್ಲಿನ ಪ್ರಮುಖ ಅಂಶಗಳು:
- ಗ್ಲೋಬಲ್ ಮೈಂಡ್ ಹೆಲ್ತ್ 2025ರ ವರದಿಯು 84 ದೇಶಗಳಲ್ಲಿ ಮಾನಸಿಕ ಆರೋಗ್ಯವನ್ನು ನಿರ್ಣಯಿಸಿದ ಮಹತ್ವದ ಜಾಗತಿಕ ಅಧ್ಯಯನವಾಗಿದೆ.
- ಭಾರತದಲ್ಲಿ 18ರಿಂದ 34 ವರ್ಷ ವಯಸ್ಸಿನವರಲ್ಲಿ ಕಡಿಮೆ ಮೈಂಡ್ ಹೆಲ್ತ್ ಕ್ವಾಟಿಯೆಂಟ್ ದೇಶದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚುತ್ತಿರುವ ಹರಡುವಿಕೆಯನ್ನು ಪ್ರತಿಬಿಂಬಿಸುತ್ತದೆ.
- ಇದಕ್ಕೆ ವ್ಯತಿರಿಕ್ತವಾಗಿ ವಯಸ್ಸಾದ ಜನರು (55 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಎಂಎಚ್ಕ್ಯೂನಲ್ಲಿ 96 ಅಂಕಗಳನ್ನು ಗಳಿಸಿ, 49 ನೇ ಸ್ಥಾನದಲ್ಲಿದ್ದಾರೆ.
- ಎಂಎಚ್ಕ್ಯೂ ಜೀವನ, ಕೆಲಸ ಹಾಗೂ ಸಂಬಂಧಗಳನ್ನು ನಿರ್ವಹಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ವ್ಯಾಪಕ ಶ್ರೇಣಿಯ ಅರಿವಿನ, ಭಾವನಾತ್ಮಕ, ಸಾಮಾಜಿಕ ಹಾಗೂ ದೈಹಿಕ ಸಾಮರ್ಥ್ಯಗಳನ್ನು ಅಳೆಯಲು ವಿನ್ಯಾಸಗೊಳಿಸಲಾಗಿದೆ.
- ಭಾರತೀಯ ಯುವಕರಲ್ಲಿ ಈ ಆತಂಕಕಾರಿ ಪ್ರವೃತ್ತಿ ಕೇವಲ ಆತಂಕ ಅಥವಾ ಖಿನ್ನತೆಯ ಪ್ರಕರಣಗಳನ್ನು ಮೀರಿದೆ. ಇದು ಭಾವನಾತ್ಮಕ ಯೋಗಕ್ಷೇಮ, ಗಮನ, ಸ್ಥಿತಿಸ್ಥಾಪಕತ್ವ ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆಯಂತಹ ಮೂಲಭೂತ ಮಾನಸಿಕ ಆರೋಗ್ಯ ಗುಣಗಳಲ್ಲಿನ ಕುಸಿತವನ್ನು ಸಹ ಪ್ರತಿಬಿಂಬಿಸುತ್ತದೆ.
- ಜೀವನಶೈಲಿಯ ಬದಲಾವಣೆಗಳು, ಚಿಕ್ಕ ವಯಸ್ಸಿನಲ್ಲಿಯೇ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಪರದೆಗಳಿಗೆ ಹೆಚ್ಚಿದ ಒಡ್ಡಿಕೊಳ್ಳುವಿಕೆ, ಕಳಪೆ ಆಹಾರ ಪದ್ಧತಿ ಹಾಗೂ ಕುಟುಂಬ ಸದಸ್ಯರಿಂದ ಭಾವನಾತ್ಮಕ ಬೆಂಬಲದ ಕೊರತೆಯಿಂದಾಗಿ ಈ ಸಮಸ್ಯೆ ಹೆಚ್ಚುತ್ತಿದೆ.
- ತಜ್ಞರ ಪ್ರಕಾರ, ಕೋವಿಡ್ ನಂತರದ ಯುಗದಲ್ಲಿ ವಿಶೇಷವಾಗಿ ಆತಂಕದ ಅಸ್ವಸ್ಥತೆಗಳು, ಖಿನ್ನತೆಯ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ದೂರುಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ.
- ಭಾರತೀಯ ಯುವಕರಲ್ಲಿ ನಿದ್ರಾಹೀನತೆ, ಸಾಮಾಜಿಕ ಪ್ರತ್ಯೇಕತೆ ಹಾಗೂ ಬರ್ನ್ಔಟ್ ಸಿಂಡ್ರೋಮ್‌ನಂತಹ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ವರದಿ ತೋರಿಸುತ್ತದೆ.
- ಈ ಸಮಸ್ಯೆಯನ್ನು ಪರಿಹರಿಸಲು ಸಕಾಲಿಕ ಸಮಾಲೋಚನೆ, ಜೀವನಶೈಲಿ ಮಾರ್ಪಾಡುಗಳು, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಹಾಗೂ ಸಾಮಾಜಿಕ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸುವುದು ಅತ್ಯಗತ್ಯ ಎಂದು ತಜ್ಞರು ತಿಳಿಸುತ್ತಾರೆ.
- ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಇವು ರಾಷ್ಟ್ರದ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ.
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಹಸುವಿನ ಹಾಲು Vs ಎಮ್ಮೆ ಹಾಲು: ಇವೆರಡರಲ್ಲಿ ಮಗುವಿಗೆ ಯಾವುದು ತುಂಬಾ ಉಪಯುಕ್ತ ಗೊತ್ತೇ?
- ಬೇಸಿಗೆಯಲ್ಲಿ ನಿರ್ಜಲೀಕರಣ, ಜೀರ್ಣಕ್ರಿಯೆ ಸಮಸ್ಯೆ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಡೆಯಲು ಈ ಆಹಾರಗಳು ಬೆಸ್ಟ್
- ನಿತ್ಯ ಶಿಶುಗಳಿಗೆ ಮಸಾಜ್ ಮಾಡುವುದರಿಂದ ಮೂಳೆಗಳು ಸದೃಢವಾಗುತ್ತವೆಯೇ? ಯಾವೆಲ್ಲಾ ಪ್ರಯೋಜನಗಳಿವೆ?: ವೈದ್ಯರು ತಿಳಿಸುವುದೇನು?
- ನಾರಿನ ಕೊರತೆಯಿಂದ ಶುಗರ್, ತೂಕ ಹೆಚ್ಚಳ ಸೇರಿ ವಿವಿಧ ಆರೋಗ್ಯದ ಸಮಸ್ಯೆಗಳು: ದೇಹಕ್ಕೆ ಪೂರಕವಾದ ಫೈಬರ್ ಪಡೆಯುವುದು ಹೇಗೆ?
- ಯಾವುದೇ ಚಿಹ್ನೆಗಳು ಕಾಣಿಸದೆ ಇದ್ದರೂ ಕೊಲೆಸ್ಟ್ರಾಲ್ ಮಟ್ಟಗಳು ಏರಿಕೆ: ಕೊಲೆಸ್ಟ್ರಾಲ್ ಲೆವಲ್ ಗುರುತಿಸುವುದು ಹೇಗೆ?

