ETV Bharat / health

ದೇಹದಲ್ಲಿ ಯೂರಿಕ್ ಆ್ಯಸಿಡ್ ಮಟ್ಟವು ಹೆಚ್ಚಾದರೆ ಏನಾಗುತ್ತದೆ ಗೊತ್ತೇ?: ತಜ್ಞರು ತಿಳಿಸುವುದೇನು?

ರಾತ್ರಿಯಲ್ಲಿ ಕೈ ಹಾಗೂ ಪಾದಗಳಲ್ಲಿ ಉರಿಯುವ ಸಂವೇದನೆಯಾಗುತ್ತಿದ್ದರೆ, ಅಧಿಕ ಯೂರಿಕ್ ಆ್ಯಸಿಡ್​ ಮೂಲ ಲಕ್ಷಣವಾಗಿರಬಹುದು. ಇದರೊಂದಿಗೆ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ.

WARNING SYMPTOMS OF URIC ACID  URIC ACID  URIC ACID LEVELS IN GOUT  ಯೂರಿಕ್ ಆ್ಯಸಿಡ್
ಯೂರಿಕ್ ಆ್ಯಸಿಡ್ (Getty Images)
author img

By ETV Bharat Health Team

Published : January 7, 2026 at 5:44 PM IST

3 Min Read
Choose ETV Bharat

ಯೂರಿಕ್ ಆ್ಯಸಿಡ್ ದೇಹದ ತ್ಯಾಜ್ಯ ಉತ್ಪನ್ನವಾಗಿದೆ. ದೇಹವು ನಮ್ಮ ಆಹಾರದಲ್ಲಿ ಕಂಡುಬರುವ ಪ್ಯೂರಿನ್‌ಗಳು ಎಂಬ ರಾಸಾಯನಿಕಗಳನ್ನು ಒಡೆಯುವಾಗ ಇದು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ ಯೂರಿಕ್ ಆ್ಯಸಿಡ್​ವು ರಕ್ತದಲ್ಲಿ ಕರಗುತ್ತದೆ, ಮೂತ್ರಪಿಂಡಗಳಿಂದ ಫಿಲ್ಟರ್ ಆಗುತ್ತದೆ, ನಂತರ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಯೂರಿಕ್ ಆ್ಯಸಿಡ್​ ಮಟ್ಟ ತುಂಬಾ ಹೆಚ್ಚಾದಾಗ ಅಥವಾ ಮೂತ್ರಪಿಂಡಗಳು ಅದನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿಲ್ಲ. ಇದರಿಂದ ಯೂರಿಕ್ ಆ್ಯಸಿಡ್​ ದೇಹದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ನಂತರ ಕೀಲುಗಳು, ಅಂಗಾಂಶಗಳ ಸುತ್ತಲೂ ಸೂಜಿಯಂತಹ ಹರಳುಗಳನ್ನು ರೂಪಿಸುತ್ತದೆ, ಇದು ಊತ, ನೋವು ಹಾಗೂ ಗೌಟ್‌ನಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಹೆಚ್ಚಿನ ಯೂರಿಕ್ ಆ್ಯಸಿಡ್​ ಮಟ್ಟದಿಂದ ಕೈಗಳು, ಪಾದಗಳು ಮತ್ತು ದೇಹದ ಇತರ ಭಾಗಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯೋಣ.

ಕೀಲು ನೋವು, ಊತ: ಹೆಚ್ಚಿನ ಯೂರಿಕ್ ಆ್ಯಸಿಡ್​ ಮಟ್ಟಗಳ (ಹೈಪರ್ಯುರಿಸೆಮಿಯಾ) ಪ್ರಮುಖ ಲಕ್ಷಣವೆಂದರೆ ಹಠಾತ್, ತೀವ್ರವಾದ ಕೀಲು ನೋವು, ವಿಶೇಷವಾಗಿ ಹೆಬ್ಬೆರಳಿನಲ್ಲಿ ಕಾಣಿಸುತ್ತದೆ. ಇದನ್ನು ಗೌಟ್ ಎಂದು ಕರೆಯಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಸ್ಥಿತಿಯು ಮೊಣಕಾಲುಗಳು, ಮೊಣಕೈಗಳು, ಮಣಿಕಟ್ಟುಗಳು ಮತ್ತು ಇತರ ಬೆರಳಿನ ಕೀಲುಗಳಲ್ಲಿಯೂ ಸಹ ಸಂಭವಿಸಬಹುದು. ಈ ನೋವು ಹೆಚ್ಚಾಗಿ ಬೆಳಗ್ಗೆ ಅಥವಾ ವಿಶ್ರಾಂತಿಯ ನಂತರ ಉಲ್ಬಣಗೊಳ್ಳುತ್ತದೆ. ಇತರ ಲಕ್ಷಣಗಳಲ್ಲಿ ಊತ, ಕೆಂಪು, ಉಷ್ಣತೆ ಮತ್ತು ಕೀಲುಗಳಲ್ಲಿ ಬಿಗಿತ ಸೇರಿವೆ. ಇದು ಮೂತ್ರಪಿಂಡದ ಕಲ್ಲುಗಳು, ಆಯಾಸಕ್ಕೂ ಕಾರಣವಾಗುತ್ತದೆ. ವೈದ್ಯರ ಸಲಹೆಗಳ ಜೊತೆಗೆ ಜೀವನಶೈಲಿಯ ಬದಲಾವಣೆಗಳು ಅತ್ಯಗತ್ಯವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಮರಗಟ್ಟುವಿಕೆ ಇಲ್ಲವೇ ಜುಮ್ಮೆನಿಸುವಿಕೆ: ಹೆಚ್ಚಿನ ಯೂರಿಕ್ ಆ್ಯಸಿಡ್​ ಮಟ್ಟವು ಕೀಲು ನೋವನ್ನು ಉಂಟು ಮಾಡುವುದಲ್ಲದೇ, ಮರಗಟ್ಟುವಿಕೆ ಇಲ್ಲವೇ ಜುಮ್ಮೆನಿಸುವಿಕೆಗೆ ಕಾರಣವಾಗಬಹುದು. ಏಕೆಂದರೆ ಯೂರಿಕ್ ಆ್ಯಸಿಡ್​ನ ಹರಳುಗಳು ನರಗಳಲ್ಲಿ ಸಂಗ್ರಹವಾಗಬಹುದು ಮತ್ತು ಅವುಗಳನ್ನು ಹಾನಿಗೊಳಿಸಬಹುದು. ಇದು ಹೆಚ್ಚಾಗಿ ಕೈಗಳು, ಪಾದಗಳಲ್ಲಿ ಕಂಡು ಬರುತ್ತದೆ. ಕೆಲವೊಮ್ಮೆ ನರರೋಗ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಇದು ಗೌಟ್ ಹಾಗೂ ಮೂತ್ರಪಿಂಡದ ಕಲ್ಲುಗಳಂತಹ ಹೆಚ್ಚು ಗಂಭೀರ ಸಮಸ್ಯೆಗಳ ಸಂಕೇತವೂ ಆಗಿರಬಹುದು. ತಡಮಾಡದೇ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಚರ್ಮದ ಕೆಳಗೆ ಗಡ್ಡೆಗಳು: ದೀರ್ಘಕಾಲದ ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವು ಕೆಲವು ಜನರಲ್ಲಿ ಟೋಫಿ ಎಂಬ ಗಟ್ಟಿಯಾದ ಗಡ್ಡೆಗಳನ್ನು ಉಂಟುಮಾಡಬಹುದು. ಇದು ಕೀಲುಗಳಲ್ಲಿ, ವಿಶೇಷವಾಗಿ ಹೆಬ್ಬೆರಳಿನಲ್ಲಿ ನೋವು, ಊತ ಮತ್ತು ಕೆಂಪು ಬಣ್ಣಕ್ಕೆ ಕಾರಣವಾಗಬಹುದು. ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ಅಧ್ಯಯನದ ಪ್ರಕಾರ, ಟೋಫಿ ಸೂಜಿಯಂತಹ ಸ್ಫಟಿಕ ನಿಕ್ಷೇಪಗಳಾಗಿದ್ದು, ಅವು ಚರ್ಮದ ಕೆಳಗೆ, ಕೀಲುಗಳಲ್ಲಿ ಮತ್ತು ಇತರ ಅಂಗಗಳಲ್ಲಿ ಗಟ್ಟಿಯಾದ ಗಡ್ಡೆಗಳನ್ನು ರೂಪಿಸುತ್ತವೆ. ಈ ಟೋಫಿ ದೊಡ್ಡದಾಗಿ ಬೆಳೆದರೆ, ಇವುಗಳಿಂದ ಅಸ್ವಸ್ಥತೆ, ನೋವು ಮತ್ತು ಕೀಲು ವಿರೂಪತೆಗೆ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸುತ್ತದೆ.

ಪಾದಗಳು ಇಲ್ಲವೇ ಅಂಗೈಗಳಲ್ಲಿ ಉರಿ: ಹೆಚ್ಚಿನ ಯೂರಿಕ್ ಆಮ್ಲದ ಮಟ್ಟ ಇರುವ ಜನರು ಪಾದಗಳ ಅಡಿಭಾಗ ಇಲ್ಲವೇ ಅಂಗೈಗಳಲ್ಲಿಯೂ ಸಹ ಲಕ್ಷಣಗಳನ್ನು ಅನುಭವಿಸಬಹುದು. ಪಾದಗಳು ಅಥವಾ ಕೈಗಳಲ್ಲಿ ಉರಿಯುವುದು, ನಿರಂತರ ನೋವು, ಊತ, ಕೆಂಪು ಬಣ್ಣವು ಹೆಚ್ಚಿನ ಯೂರಿಕ್ ಆ್ಯಸಿಡ್​ ಮಟ್ಟದ ಸಾಮಾನ್ಯ ಲಕ್ಷಣಗಳಾಗಿವೆ. ಕೀಲುಗಳಲ್ಲಿ (ಗೌಟ್) ಯೂರಿಕ್ ಆಮ್ಲದ ಸ್ಫಟಿಕ ನಿಕ್ಷೇಪಗಳು, ಚರ್ಮದ ಕೆಳಗಿರುವ ರಕ್ತನಾಳಗಳ ಉರಿಯೂತ, ವಿಶೇಷವಾಗಿ ಹೆಬ್ಬೆರಳು ಹಾಗೂ ಕಣಕಾಲುಗಳಲ್ಲಿ ಇದು ಸಂಭವಿಸಬಹುದು. ಈ ಸ್ಥಿತಿಯನ್ನು ನಿರ್ವಹಿಸಲು ವೈದ್ಯರನ್ನು ಸಂಪರ್ಕಿಸಿ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ತಜ್ಞರ ಸಲಹೆ ನೀಡುತ್ತಾರೆ.

ಮೂತ್ರಪಿಂಡದ ಸ್ಟೋನ್​: ಕ್ಲೀವ್‌ಲ್ಯಾಂಡ್ ಕ್ಲಿನಿಕ್ ನಡೆಸಿದ ಅಧ್ಯಯನದ ಪ್ರಕಾರ, ಹೆಚ್ಚಿನ ಯೂರಿಕ್ ಆ್ಯಸಿಡ್​ ಮೂತ್ರಪಿಂಡಗಳಲ್ಲಿ ಸ್ಫಟಿಕೀಕರಣಗೊಂಡು ಕಲ್ಲುಗಳನ್ನು ರೂಪಿಸುತ್ತದೆ. ಈ ಸ್ಟೋನ್​ಸ್ ತೀವ್ರವಾದ ಕೆಳ ಬೆನ್ನು ನೋವನ್ನು ಉಂಟು ಮಾಡಬಹುದು, ಜೊತೆಗೆ ಮೂತ್ರ ವಿಸರ್ಜಿಸುವಾಗ ಉರಿ ಇಲ್ಲವೇ ನೋವನ್ನು ಉಂಟುಮಾಡಬಹುದು. ಈ ಸ್ಥಿತಿಯನ್ನು ನಿರ್ವಹಿಸಲು ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಿ: (ಸಂಶೋಧನಾ ವರದಿ)

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ಕಲುಷಿತ ನೀರು ಸೇವನೆಯಿಂದ ಅತಿಸಾರದ ಜೊತೆಗೆ ಯಾವೆಲ್ಲಾ ರೋಗಗಳು ಬರುತ್ತವೆ?: ವಹಿಸಬೇಕಾದ ಮುನ್ನಚ್ಚರಿಕೆಗಳೇನು?
  2. ಸಿಹಿ ತಿನಿಸುಗಳನ್ನು ಸೇವಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವು: ವೈದ್ಯರ ಸಲಹೆಗಳೇನು?
  3. ಚಿಕ್ಕ ಚಿಕ್ಕ ವಿಷಯ ಮರೆತು ಬಿಡುವುದು ಬುದ್ಧಿಮಾಂದ್ಯತೆ, ಆಲ್ಝೈಮರ್​ ಚಿಹ್ನೆಯೇ? ತಡೆಯುವುದು ಹೇಗೆ ಗೊತ್ತೇ?
  4. ಚಳಿಗಾಲದಲ್ಲಿ ಗಂಟಲು ನೋವು ಹಾಗೂ ಮೂಗು ಕಟ್ಟಿಕೊಂಡು ಉಸಿರಾಟಕ್ಕೆ ತೊಂದರೆಯಾಗುತ್ತಿದೆಯೇ? ತಜ್ಞರು ಸೂಚಿಸುವ ಮನೆಮದ್ದುಗಳಿವು
  5. ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆಯೇ? ತಜ್ಞರ ಟಿಪ್ಸ್​ ಪಾಲಿಸಿ, ನಿಮ್ಮ ಉಸಿರು ಯಾವಾಗಲೂ ಫ್ರೆಶ್!