ETV Bharat / health

ಅರಿಶಿನ ನೀರನ್ನು ಕುಡಿದರೆ ಯಾವೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಗೊತ್ತೇ? ತಜ್ಞರು ಹೇಳುವುದೇನು?

ಚಳಿಗಾಲದಲ್ಲಿ ಪ್ರತಿದಿನ ಬೆಳಗ್ಗೆ ಅರಿಶಿನ ನೀರನ್ನು ಕುಡಿದರೆ ಅನೇಕ ಆರೋಗ್ಯದ ಪ್ರಯೋಜನಗಳು ಲಭಿಸುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಯಾರು ಅರಿಶಿನ ನೀರನ್ನು ಕುಡಿಯಬೇಕು ಹಾಗೂ ಕುಡಿಯಬಾರದು ಎಂಬುದರ ಬಗ್ಗೆ ತಿಳಿಯೋಣ.

HEALTH BENEFITS OF TURMERIC WATER   TURMERIC WATER   TURMERIC HEALTH BENEFITS   ಅರಿಶಿನ ನೀರಿನ ಲಾಭಗಳು
ಅರಿಶಿನ ನೀರು (Getty Images)
author img

By ETV Bharat Health Team

Published : November 5, 2025 at 6:52 AM IST

3 Min Read
Choose ETV Bharat

ಆಯುರ್ವೇದದಲ್ಲಿ ಅರಿಶಿನವು ಅದರ ಔಷಧೀಯ ಗುಣಗಳಿಂದ ಪ್ರಸಿದ್ಧವಾಗಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯಕವಾಗಿದೆ. ಅಡುಗೆಯಲ್ಲಿ ಅರಿಶಿನಕ್ಕೆ ವಿಶೇಷ ಸ್ಥಾನವಿದೆ. ಅನೇಕರು ಅರಿಶಿನ ಹಾಲು ಅಥವಾ ಅರಿಶಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.

ಅರಿಶಿನವು ಸತು, ಮ್ಯಾಂಗನೀಸ್, ಕರ್ಕ್ಯುಮಿನ್, ಉತ್ಕರ್ಷಣ ನಿರೋಧಕ, ಉರಿಯೂತದ, ಆಂಟಿಮೈಕ್ರೊಬಿಯಲ್ ಗುಣಗಳನ್ನು ಒಳಗೊಂಡಿದೆ. ಅರಿಶಿನ ನೀರಿನಿಂದ ಅನೇಕ ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭಿಸುತ್ತವೆ. ಅರಿಶಿನವು ಮುಖದ ಸೌಂದರ್ಯಕ್ಕೂ ಅತ್ಯುತ್ತಮವಾಗಿದೆ. ಅರಿಶಿನ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೆಮ್ಮು ಹಾಗೂ ಶೀತವನ್ನು ತಡೆಯುತ್ತದೆ. ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತದೆ ಎಂದು ಆಯುರ್ವೇದದ ತಜ್ಞರು ತಿಳಿಸುತ್ತಾರೆ.

HEALTH BENEFITS OF TURMERIC WATER   TURMERIC WATER   TURMERIC HEALTH BENEFITS   ಅರಿಶಿನ ನೀರಿನ ಲಾಭಗಳು
ಅರಿಶಿನ (Getty Images)

ರೋಗನಿರೋಧಕ ಶಕ್ತಿ ವೃದ್ಧಿ: ಅರಿಶಿನದಲ್ಲಿರುವ ಕರ್ಕ್ಯೂಮಿನ್ ಶಕ್ತಿಯುತ ಆ್ಯಂಟಿಆಕ್ಸಿಡೆಂಟ್ ಆಗಿದೆ. ದೇಹದ ಉರಿಯೂತ ಕಡಿಮೆ ಮಾಡುತ್ತದೆ ಹಾಗೂ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ರಕ್ಷಣೆ ನೀಡುತ್ತದೆ. ನಿತ್ಯ ಬೆಳಗ್ಗೆ ಅರಿಶಿನ ನೀರನ್ನು ಕುಡಿಯುವುದರಿಂದ ಚಳಿಗಾಲದ ಸಮಯದಲ್ಲಿಯೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಜೀರ್ಣಕ್ರಿಯೆ ಸಹಾಯಕಾರಿ: ಅರಿಶಿನದಲ್ಲಿ ಉತ್ತಮ ಕೋಶಗಳ ಉತ್ಪತ್ತಿಯನ್ನು ಉತ್ತೇಜಿಸುವ ಗುಣವನ್ನು ಹೊಂದಿದೆ. ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಲು ಹೆಚ್ಚು ಸಹಾಯ ಮಾಡುತ್ತದೆ. ಹೊಟ್ಟೆಯ ಉಬ್ಬರವನ್ನು ಕಡಿಮೆ ಮಾಡಲು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವನೆ ಮಾಡಬಹುದು. ದೇಹದ ವಿಷಕಾರಕಗಳನ್ನು ಹೊರಹಾಕುತ್ತದೆ ಹಾಗೂ ಯಕೃತ್ತು ಶುದ್ಧಗೊಳಿಸಿ, ಅದರ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ನಿತ್ಯ ಈ ಅರಿಶಿನದ ನೀರನ್ನು ಕುಡಿಯುವುದರಿಂದ ದೇಹವು ಶುದ್ಧವಾಗುತ್ತದೆ.

ಚರ್ಮದ ಆರೋಗ್ಯಕ್ಕೆ ಉತ್ತಮ: ಅರಿಶಿನ ಉರಿಯೂತ ನಿವಾರಕ ಗುಣ ಹೊಂದಿದೆ. ಮೊಡವೆ ಹಾಗೂ ಚರ್ಮದ ಅಲರ್ಜಿಗಳನ್ನು ಕಡಿಮೆ ಮಾಡುತ್ತದೆ. ಮೆಟಾಬಾಲಿಸಂ ಹೆಚ್ಚಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಅರಿಶಿನ ಕೊಬ್ಬು ಸಂಗ್ರಹ ಕಡಿಮೆ ಮಾಡಿ ಶಕ್ತಿಯನ್ನು ವೃದ್ಧಿಸುತ್ತದೆ. ಬೆಳಗ್ಗೆ ಈ ನೀರನ್ನು ಕುಡಿಯುವುದರಿಂದ ಮೆಟಾಬಾಲಿಸಂ ವೃದ್ಧಿಸಲು ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ತಜ್ಞರು ಹೇಳುವುದೇನು? ಅರಿಶಿನ ನೀರನ್ನು ಎಷ್ಟು ಪ್ರಮಾಣದಲ್ಲಿ ಹಾಗೂ ಹೇಗೆ ಕುಡಿಯಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಅಗತ್ಯತೆಯನ್ನು ಅವಲಂಬಿಸಿರುತ್ತದೆ. ಎಲ್ಲರಿಗೂ ಅರಿಶಿನ ನೀರು ಹಿಡಿಸುವುದಿಲ್ಲ, ಇದರಿಂದ ತಜ್ಞರ ಸಲಹೆಯ ಪ್ರಕಾರ ಮಾತ್ರ ಇದನ್ನು ಕುಡಿಯಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

HEALTH BENEFITS OF TURMERIC WATER   TURMERIC WATER   TURMERIC HEALTH BENEFITS   ಅರಿಶಿನ ನೀರಿನ ಲಾಭಗಳು
ಅರಿಶಿನ (Getty Images)

ಸಾಮಾನ್ಯವಾಗಿ ಅಡುಗೆಯಲ್ಲಿ ಅರಿಶಿನವನ್ನು ಬಳಸುವವರು ಅರಿಶಿನ ನೀರನ್ನು ಸೇವಿಸುವ ಅಗತ್ಯವಿಲ್ಲ. ಆದರೆ, ತಜ್ಞರು ಇದನ್ನು ಕುಡಿಯಲು ಸೂಚಿಸಿದರೆ, ಅಂತವರು ಮಸಾಲೆಯುಕ್ತ ಹಾಗೂ ಎಣ್ಣೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಅಡುಗೆಯಲ್ಲಿ ಅರಿಶಿನ ಬಳಸದವರು ಇದನ್ನು ಮಾತ್ರ ಕುಡಿಯಬಹುದು. ಅರಿಶಿನವನ್ನು ನೀರಿನಲ್ಲಿ ಕುದಿಸಿ ಬಹಳ ಕಡಿಮೆ ಪ್ರಮಾಣದಲ್ಲಿ ಕುಡಿಯಬೇಕು ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.

ಅರಿಶಿನ ನೀರನ್ನು ತಯಾರಿಸುವುದು ಹೇಗೆ?

  • ಅರ್ಧ ಟೀಸ್ಪೂನ್ ತಾಜಾ ಅರಿಶಿನ ಇಲ್ಲವೇ ಕಾಲು ಟೀಸ್ಪೂನ್ ಅರಿಶಿನ ಪುಡಿ
  • ಅರ್ಧ ನಿಂಬೆ ರಸ
  • 1 ಗ್ಲಾಸ್​ ಬಿಸಿನೀರು
  • ಚಿಟಿಕೆ ಕರಿಮೆಣಸು ಪುಡಿ (ನಿಮ್ಮ ಆಯ್ಕೆಗೆ ಬಿಟ್ಟಿದ್ದು)

ಅರಿಶಿನ ನೀರು ಸಿದ್ಧಪಡಿಸುವ ವಿಧಾನ ಹೀಗೆ ನೋಡಿ:

  • ಮೊದಲಿಗೆ 1 ಗ್ಲಾಸ್ ಬಿಸಿ ನೀರಿನೊಳಗೆ ಅರಿಶಿನ ಪುಡಿ ಸೇರಿಸಿ.
  • ಅದಕ್ಕೆ ನಿಂಬೆ ರಸ ಹಾಕಿ, ಅದನ್ನು ಚೆನ್ನಾಗಿ ಕಲಸಿಕೊಳ್ಳಬೇಕಾಗುತ್ತದೆ.
  • ಅರಿಶಿನ ಪುಡಿಯಲ್ಲಿರುವ ಕರ್ಕ್ಯೂಮಿನ್ ಜೀರ್ಣಗೊಳ್ಳಲು ಚಿಟಿಕೆ ಕರಿಮೆಣಸು ಸೇರಿಸಬೇಕಾಗುತ್ತದೆ.
  • ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಬೆಸ್ಟ್ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ: